20.5 C
Bengaluru
Tuesday, July 9, 2024

ಸಿಬಿಲ್ ಸ್ಕೋರ್ ಎಂದರೇನು, CIBIL ಸ್ಕೋರ್ ಅನ್ನು ಹೇಗೆ ಪರಿಶೀಲಿಸುವುದು ಹೇಗೆ, CIBIL ಸ್ಸ್ಕೋರ್ ಉತ್ತಮಪಡಿಸುವ ಮಾರ್ಗಗಳು

ಬೆಂಗಳೂರು, ಜ. 23 :ವೈಯಕ್ತಿಕ ಸಾಲವಾಗಲಿ, ವಾಹನ, ಮನೆ ಖರೀದಿಗೆ ಸಾಲ ಪಡೆಯಬೇಕಾದರೆ ಬ್ಯಾಂಕಿನವರು ಮೊದಲು ನೋಡುವುದು ನಿಮ್ಮ ಸಿಬಿಲ್ ಸ್ಕೋರ್. ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನಿಮಗೆ ಸಾಲ ಕೊಡುತ್ತಾರೆ. ಇಲ್ಲದಿದ್ದರೆ ನಿಮಗೆ ಸಾಲ ಕೊಡಲು ಮುಂದೆ ಬರುವುದುಲ್ಲ. ಕ್ರೆಡಿಟ್‌ ಸ್ಕೋರ್ ಎಂಬುದು ಮೂರು-ಅಂಕಿಯ ಸಂಖ್ಯೆಯಾಗಿದ್ದು, ಅದು ಗ್ರಾಹಕರ ಕ್ರೆಡಿಟ್ ಕಾರ್ಡ್ ಹಿಸ್ಟರಿ ಅನ್ನು ಸಾರಾಂಶಗೊಳಿಸುತ್ತದೆ. ಕ್ರೆಡಿಟ್‌ ಸ್ಕೋರ್ ಹೆಚ್ಚಿನ ಅಂಕದಲ್ಲಿದ್ದರೆ, ಅದು ಉತ್ತಮ ಎಂಬುದನ್ನು ಸೂಚಿಸುತ್ತದೆ. ಗ್ರಾಹಕರು ಸಾಲ ಪಡೆದ್ದಿದ್ದು, ಆ ಸಾಲವನ್ನು ನಿಗದಿಯಂತೆ ಸರಿಯಾದ ಸಮಯಕ್ಕೆ ಮರುಪಾವತಿಸಿದ್ದರೆ, ಉತ್ತಮ ಅಂಕ ಇರುತ್ತದೆ. ಹಾಗಾದರೆ ಸಿಬಿಲ್ ಸ್ಕೋರ್ ಎಂದರೇನು, ಸಿಬಿಲ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು. ಯಾವ ಬ್ಯಾಂಕಿನಲ್ಲಿ ಎಷ್ಟು ಎಲ್ಲೆಲ್ಲಿ ಸಾಲ ಪಡೆದಿದ್ದೀರೆಂಬುದು ಚೆಕ್ ಮಾಡಬೇಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ಕ್ರೆಡಿಟ್ ಅರ್ಹತೆಯನ್ನು ಸೂಚಿಸುವ ಸಂಖ್ಯೆಯಾಗಿದೆ. ಈ ಸಿಬಿಲ್ ಸ್ಕೋರ್ ಆಧಾರದ ಮೇಲೆ ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ ಯಾವ ವರ್ಷದಲ್ಲಿ ಸಾಲ ಪಡೆಯಲಾಗಿದೆ. ಮರುಪಾವತಿ ಮಾಡಲಾಗಿದೆಯೇ ಎಂಬುದರ ಆಧಾರ ಮೇಲೆ ಕ್ರೆಡಿಟ್ ಸ್ಕೋರ್ ನಿರ್ಧರಿಸಲಾಗುವುದು. ಕ್ರೆಡಿಟ್ ಸ್ಕೋರ್ 0 ರಿಂದ 900 ವರೆಗೆ ಇರುತ್ತದೆ.

CIBIL ಸ್ಕೋರ್ ಎಂದರೇನು,ಸಾಲ ಪಡೆಯಲು ಕ್ರೇಡಿಟ್ ಸ್ಕೋರ್ ಎಷ್ಟಿರಬೇಕು?

ಸಿಬಿಲ್ (CIBIL) ಎಂಬುದು ಒಂದು ಸಂಸ್ಥೆಯಾಗಿದೆ. ಕ್ರೇಡಿಟ್ ಇನ್ಫಾರ್ಮೇಷನ್ ಬ್ಯೂರೋ ಇಂಡಿಯಾ ಲಿಮೆಟೆಡ್ ಸಂಸ್ಥೆಯು ಬ್ಯಾಂಕುಗಳಿಂದ ಪ್ರತ್ಯೇಕವಾದ ಕಂಪನಿಯಾಗಿದೆ.ಎCIBIL ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಪ್ರತಿನಿಧಿಸುವ ಮೂರು-ಅಂಕಿಯ ಸಂಖ್ಯೆ. ಇದು 300 ರಿಂದ 900 ರ ವರೆಗೆ ಇರುತ್ತದೆ ಮತ್ತು ನಿಮ್ಮ ಪಾವತಿ ಇತಿಹಾಸ ಮತ್ತು CIBIL ನಿರ್ವಹಿಸುವ ಇತರ ಕ್ರೆಡಿಟ್ ವಿವರಗಳನ್ನು ಅಳೆಯುವ ಮೂಲಕ ಪಡೆಯಲಾಗಿದೆ. ಸಾಮಾನ್ಯವಾಗಿ, 700 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಮತ್ತು, ಅದನ್ನೇ ನೀವು ಗುರಿಪಡಿಸಬೇಕು.

ಸಿಬಿಲ್ ಸ್ಕೋರ್ ನೋಡುವುದು ಹೇಗೆ? (How to check CIBIL Score)
*ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ತಿಂಗಳು, ವರ್ಷ ಆಯ್ಕೆ ಮಾಡಿಕೊಳ್ಳಬೇಕು.

*ಅಡ್ರೇಸ್ ಕಾಲಂನಲ್ಲಿ ರೆಸಿಡೆಂಟ್ ಅಥವಾ ಪರ್ಮನೆಂಟ್ ಅಡ್ರೆಸ್ ಭರ್ತಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ವಿಳಾಸ ತುಂಬಬೇಕು.ರಾಜ್ಯ, ನಗರ ಆಯ್ಕೆ ಮಾಡಿಕೊಂಡು ಪಿನ್ ಕೋಡ್ ನಮೂದಿಸಬೇಕು.

*ಐಡೆಂಟಿ ಡಿಟೇಲ್ ನಲ್ಲಿ ಪ್ಯಾನ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಪ್ಯಾನ್ ಕಾರ್ಡ್ ನಮೂದಿಸಬೇಕು.

*ಕಾಂಟ್ಯಾಕ್ಟ್ ಡಿಟೇಲ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮೇಲ್ ಐಡಿ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಬೇಕು. ಆಗ ಸಿಬಿಲ್ ಸ್ಕೋರ್ ಪಿಡಿಎಫ್ ಫೈಲ್ ಓಪನ್ ಮಾಡಲು ಪಾಸ್ವರ್ಡ್ ನಿಮ್ಮ ಮೊಬೈಲಿಗೆ ಬರುತ್ತದೆ. ಅದನ್ನು ನಮೂದಿಸಿದರೆ ಸಾಕು, ಸಿಬಿಲ್ ಸ್ಕೋರ್ ಪೇಜ್ ಓಪನ್ ಆಗುತ್ತದೆ. ನೀವು ಎಲ್ಲೆಲ್ಲಿ ಸಾಲ ಪಡೆದಿದ್ದೀರೋ ಎಲ್ಲಾ ಮಾಹಿತಿಯು ಕಾಣುತ್ತದೆ.

ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?
ಜನರು ತಮ್ಮ ಸಿಬಿಲ್ ಸ್ಕೋರ್ ನ್ನು ಮೊಬೈಲ್ ನಲ್ಲೇ ಉಚಿತವಾಗಿ ಚೆಕ್ ಮಾಡಬಹುದು.https://homeloans.sbi/getcibil

ಕ್ರೆಡಿಟ್ ಸ್ಕೋರ್ ಉತ್ತಮಪಡಿಸುವ ಮಾರ್ಗಗಳು
1.ನೀವು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಬಹಳ ಜಾಗ್ರತೆಯಿಂದ ಬಳಸಿರಿ. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ನಿಗದಿ ಮಾಡಿರುವ ಗರಿಷ್ಠ ಮಿತಿಗಿಂತ ಹೆಚ್ಚು ಹಣ ವ್ಯಯಿಸಲು ಹೋಗದಿರಿ. ಕ್ರೆಡಿಟ್ ಕಾರ್ಡ್‌ನ ಬಿಲ್ ಸರಿಯಾದ ಸಮಯದೊಳಗೆ ಪಾವತಿಸುವುದನ್ನು ಮರೆಯದಿರಿ. ತೀರಾ ಅಗತ್ಯ ಬಿದ್ದರಷ್ಟೇ ಕ್ರೆಡಿಟ್ ಕಾರ್ಡ್ ಮೂಲಕ ಟ್ರಾನ್ಸಾಕ್ಷನ್ ಮಾಡಿ.

2.ನೀವು ಸಾಲ ತೆಗೆದುಕೊಳ್ಳುವಾಗ ಕಿರು ಅವಧಿಗಿಂತ ದೀರ್ಘಾವಧಿಗೆ ಕಂತುಗಳನ್ನು ಕಟ್ಟುವ ರೀತಿಯಲ್ಲಿ ಸಾಲ ಪಡೆಯುವುದು ಉತ್ತಮ. ಇದರಿಂದ ನಿಮಗೆ ಇಎಂಐ ಮೊತ್ತ ಕಡಿಮೆಯಾಗುತ್ತದೆ.

3.ನಿಮಗೆ ಹೆಚ್ಚು ಮೊತ್ತದ ಇಎಂಐ ಕಟ್ಟುವಷ್ಟು ಹಣಕಾಸು ಸ್ಥಿತಿ ಉತ್ತಮವಾಗಿದ್ದರೆ ಕಿರು ಅವಧಿಯ ಸಾಲಕ್ಕೆ ಹೋಗಬಹುದು. ಒಟ್ಟಿನಲ್ಲಿ ನೀವು ಸರಿಯಾದ ಸಮಯಕ್ಕೆ ಸಾಲದ ಕಂತುಗಳನ್ನು ಪಾವತಿಸುತ್ತೀರಾ ಎಂಬುದು ಮುಖ್ಯ.

4. ಮೊದಲು ನೀವು ನಿಮ್ಮ ಕ್ರೆಡಿಟ್ ಸ್ಕೊರು ಎಷ್ಟಿದೆ ಎಂದು ಪರಿಶೀಲಿಸಿ. ಅದಕ್ಕೆ ಸಿಬಿಲ್ ಇತ್ಯಾದಿ ಏಜೆನ್ಸಿಯಿಂದ ಉಚಿತವಾಗಿಯೂ ಪಡೆಯಬಹುದು. ನಿಮ್ಮ ಪ್ಯಾನ್ ನಂಬರ್ ಕೊಟ್ಟರೆ ಸಾಕು ನಿಮಗೆ ಕ್ರೆಡಿಟ್ ರೇಟಿಂಗ್ ಸಿಗುತ್ತದೆ.

5.ಒಂದೇ ಸಮಯದಲ್ಲಿ ಬಹು ಕ್ರೆಡಿಟ್ ಕಾರ್ಡ್‌ಗಳು ಮತ್ತು ಸಾಲಗಳಿಗೆ ಅರ್ಜಿ ಸಲ್ಲಿಸಬೇಡಿ.

Related News

spot_img

Revenue Alerts

spot_img

News

spot_img