ಬೆಂಗಳೂರು ಜುಲೈ 3: ಆರೋಗ್ಯವಂತೆ ದೇಶ ಕಟ್ಟ ಬೇಕಾದರೆ, ಮೊದಲು ನಾವು ಆರೋಗ್ಯವಂತ ನಾಗರಿಕರು ಅತ್ಯವಶ್ಯಕ. ಆದರಿಂದ ಅಂತಹ ನಾಗರೀಕರ ಸೃಷ್ಟಿಸಲು ಮತ್ತು ಕಾಪಾಡಲು ಭಾರತ ಸರ್ಕಾರವು ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇನ್ನು ಈ ಹಿಂದೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ISI ಕಾಯ್ದೆಯನ್ನು ಜಾರಿಗೆ ತಂದು ಜನ ಬಳಕೆಯ ಎಲ್ಲಾ ವಸ್ತುಗಳ ಗುಣಮಟ್ಟದ ಪರಿಶೀಲನೆ ಮಾಡುವುದರ ಮೂಲಕ, ಉತ್ತಮ ಆರೋಗ್ಯಕರ ಪದಾರ್ಥಗಳ ಬಳಕೆ ಮಾಡಲು ಅನವು ಮಾಡಿಕೊಡಲಾಗಿತ್ತು. ಅದಕ್ಕೆ 2016ರಲ್ಲಿ ಕೆಲವು ಮಾರ್ಪಾಡುಗಳ ಮೂಲಕ ಮತ್ತಷ್ಟು ಕಠಿಣತೆಯನ್ನು ಸಾಧಿಸಲು, ಹೊಸದಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ (BIS) ಅನ್ನು ಅನುಷ್ಠಾನಕ್ಕೆ ತರಲಾಗಿದೆ.
ಗುಣಮಟ್ಟದ, ಆಹಾರ, ಅಯಿಲ್, ಬಟ್ಟೆ, ದಿನಬಳಕೆಯ ಎಲ್ಲಾ ರೀತಿಯ ವಸ್ತುಗಳು, ಕಟ್ಟಡ ನಿರ್ಮಾಣದ ವಸ್ತುಗಳು ಸೇರಿದಂತೆ ಒಟ್ಟಾರೆ ಜನ ಬಳಕೆಗೆ ಬರುವ ಎಲ್ಲಾ ವಸ್ತುಗಳು ಕೂಡ ಅತ್ಯಂತ ಗುಣಮಟ್ಟದಿಂದ ಕೂಡಿರ ಬೇಕು ಎಂಬುದು ಈ ಕಾಯ್ದೆಯ ಮುಖ್ಯ ಧ್ಯೇಯವಾಗಿದೆ. ಇದರ ಮುಂದುವರಿದ ಭಾಗವಾಗಿ ಬಿಎಸ್ಐ, ಕಟ್ಟಡ, ಮನೆ, ಡೆವಲಪ್ಮೆಂಟ್ ಇತ್ಯಾದಿಗಳ ಬಗ್ಗೆಯು ವಿಶೇಷವಾದ ಕಾಳಜಿಯನ್ನು ವಹಿಸಿದೆ.
ನ್ಯಾಷನಲ್ ಬಿಲ್ಡಿಂಗ್ ಕೋಡ್ ಆಫ್ ಇಂಡಿಯಾ 2016
ಅದಕ್ಕಾಗಿಯೇ ಹೊಸದಾಗಿ ಗೈಡ್ ಫಾರ್ ನ್ಯಾಷನಲ್ ಬಿಲ್ಡಿಂಗ್ ಕೋಡ್ ಆಫ್ ಇಂಡಿಯಾ 2016 ಅನ್ನು ಜಾರಿಗೆ ತರಲಾಗಿದೆ, ಅದಕ್ಕಾಗಿಯೇ NBC ಗೈಡಲ್ ಲೈನ್ ಸಹ ಬಿಡುಗಡೆ ಮಾಡಲಾಗಿದೆ. ಇದರ ಪ್ರಮುಖ ಉದ್ದೇಶ ಏನೆಂದರೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವುದು, ಮಾತ್ರವಲ್ಲದೆ ಹೊಸತನವನ್ನು ಉತ್ತೇಜನ ಮಾಡುವುದಾಗಿದೆ. ಬಹಳ ಮುಖ್ಯವಾಗಿ ಅತೀವವಾಗಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದ ಮತ್ತುಷ್ಟು ಅಭಿವೃದ್ಧಿ ಸಾಧಿಸಲು ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಅದರಲ್ಲಿ ಬಹಳಮುಖ್ಯವಾದದ್ದು ಕಟ್ಟಡಗಳು, ಅದು ಮನೆಯಾಗಲಿ, ಅಪಾರ್ಟ್ಮೆಂಟ್ ಆಗಲಿ, ಸ್ವಂತ, ಅಥವಾ ಬಾಡಿಗೆಗೆ ಪಡೆಯುವಂತಹ ಕಟ್ಟಡಗಳಾಲಿ ಅವುಗಳ ನಿರ್ಮಾಣ ನಿರ್ವಹಣೆಯ ಮೇಲೆ ಗಮನವಿಡುವ, ಮತ್ತು ಅವುಗಳ ನಿರ್ಮಾಣ, ನಿರ್ವಹಣೆ, ಸಂರಕ್ಷಣೆ ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು
ಕೇಂದ್ರ ಸರ್ಕಾರವು ಗೈಡ್ ಫಾರ್ ನ್ಯಾಷನಲ್ ಬಿಲ್ಡಿಂಗ್ ಕೋಡ್ ಆಫ್ ಇಂಡಿಯಾ 2016 ಅನ್ನು ಜಾರಿಗೆ ತಂದಿದೆ.
NBCಯಲ್ಲಿನ ಪ್ರಮುಖ ಉಲ್ಲೇಖಿತ ಹಾಗೂ ಪಾಲನೆ ಮಾಡಲೇಬೇಕಾಗಿ ತಿಳಿಸಿರುವ ಅಂಶಗಳು
*ಯಾವುದೇ ಕಟ್ಟಡ ಕಟ್ಟಲು ಡೆವಲಪರ್, ಅಥವಾ ಸ್ವಂತ ಮನೆ ನಿರ್ಮಾಣ ಮಾಡವವರು ಯಾವ ರೀತಿಯಲ್ಲಿ ಯಾವೆಲ್ಲ ಅನುಮತಿ ಅಥವಾ ಪರವಾನಗಿ ಪಡೆಯಬೇಕು ಅದರ ಪ್ರಾಮುಖ್ಯತೆ ಏನು ಎಂದು ತಿಳಿಸಿಕೊಡುತ್ತದೆ.
*ಸ್ವಂತ ಮನೆಯ ನಿರ್ಮಾಣವು ಯಾವ ರೀತಿಯಲ್ಲಿರಬೇಕು ಅದರ ನಿರ್ಮಾಣ ಕಾರ್ಯ ಹೇಗಿರಬೇಕು
* ಡೆವಲಪರ್ ಗಳ ಬಳಿ ಕಟ್ಟಡ, ಮನೆ, ಅಪಾರ್ಟ್ಮೆಂಟ್ ಕೊಂಡು ಕೊಳ್ಳುವ ಬಗ್ಗೆ ಯಾವ ರೀತಿಯಲ್ಲಿ ಕಾನೂನು ಪಾಲಿಸಬೇಕು, ಯಾವ ಯಾವ ಹಂತದಲ್ಲಿ ನಾವು ದಾಖಲೆಗಳು ಸಂಗ್ರಹ ಮಾಡಬೇಕು ಮತ್ತು ಸಲ್ಲಿಕೆ ಮಾಡಬೇಕು ಎಂದು ಸೂಚಿಸುತ್ತದೆ.
ಇನ್ನೂ NBC ವಿಶೇಷವಾಗಿ ಕಟ್ಟಡಗಳ ನಿರ್ಮಾಣ ನಿರ್ವಹಣೆ ಹಾಗೂ ಅವುಗಳ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಒಂದು NBCಯನ್ನು ಸಮಾನ್ಯರು ಅನುಸರಣೆ ಮಾಡುವುದರಿಂದ ಆಗುವ ಉಪಯೋಗಗಳು ಏನು, ಇದರಡಿಯಲ್ಲಿ ಸಂತ ಮನೆ, ಅಪಾರ್ಟ್ಮೆಂಟ್, ಇನ್ನಿತರ ಖಾಸಗಿ , ಸರ್ಕಾರಿ ಕಟ್ಟಡ ಕಟ್ಟಲು ಅನುಸರಿಸಲೇಬೇಕಾಗಿರುವ ಅಂಶಗಳು ಯಾವು, ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ, ಎಷ್ಟು ಉಪವಿಭಾಗಗಳು ಇವೆ ಅವುಗಳ್ಲಿನ ಮಾಹಿ ಎನು ಅದರ ಉಪಯೋಗ ಎಷ್ಟು ಎಂದು ಮುಂದಿನ ರೆವಿನ್ಯೂ ಫ್ಯಾಕ್ಟ್ ನ್ಯೂಸ್ ತಿಳಿಸಿಕೊಡಲಿದೆ.