20.4 C
Bengaluru
Saturday, November 23, 2024

Budget 2023: ಆಯವ್ಯಯ (ಬಜೆಟ್‌) ಎಂದರೇನು?ಕೇಂದ್ರ ಬಜೆಟ್‌ನಲ್ಲಿ ಎಷ್ಟು ವಿಧ

ಬೆಂಗಳೂರು, ಜ. 31 :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಹಣಕಾಸು ವರ್ಷ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಎಲ್ಲ ವಲಯಗಳು ಈ ಬಜೆಟ್ ಮೇಲೆ ಅತೀ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ.ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾದ ಕಾರಣ ಜನರ ನಿರೀಕ್ಷೆಗಳು ಅಧಿಕವಿದೆ.ಈ ಬಜೆಟ್ ಉದ್ಯಮಿಗಳಿಂದ ಹಿಡಿದು ರೈತಾಪಿ ವರ್ಗ ಜನರವರೆಗೆ ಭಾರೀ ಕುತೂಹಲ ಮೂಡಿಸಿದೆ. ಕೇಂದ್ರ ಸರಕಾರವು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡನೆ ಮಾಡಲಿದೆ.ಹಾಗಾದರೆ ಆಯವ್ಯಯ (ಬಜೆಟ್‌) ಎಂದರೇನು,ಬಜೆಟ್‌ ಮಂಡಿಸುತ್ತಾರೆ,ಮತ್ತುಕೇಂದ್ರ ಬಜೆಟ್‌ನಲ್ಲಿ ಎಷ್ಟು ವಿಧ ಎಂಬುದನನ್ನು ತಿಳಿದುಕೊಳ್ಳೋಣ.

ಆಯವ್ಯಯ (ಬಜೆಟ್‌) ಎಂದರೇನು?

ಮುಂಬರುವ ಆರ್ಥಿಕ ವರ್ಷದ (ಕೇಂದ್ರ/ ರಾಜ್ಯ) ಸರಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಮುಂಗಡ ಪತ್ರ (ಬಜೆಟ್‌) ಎಂದು ಕರೆಯುತ್ತೇವೆ.ಮುಂಗಡ ಪತ್ರವು ಸರಕಾರದ ವಾರ್ಷಿಕ ಆಯ-ವ್ಯಯವಾಗಿದ್ದು, ಸರಕಾರದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಸರಕಾರವು ವಿವಿಧ ಮೂಲಗಳಿಂದ (ಕಂದಾಯ ಹಾಗೂ ತೆರಿಗೆ ಆದಾಯ) ಗಳಿಸುವ ವರಮಾನವನ್ನು ಸಾರ್ವಜನಿಕ ಆದಾಯ ಎಂದು ಕರೆಯಲಾಗುತ್ತದೆ

ಯಾರು ಮಂಡಿಸುತ್ತಾರೆ?

ಭಾರತದಲ್ಲಿ ಕೇಂದ್ರ ಹಣಕಾಸು ಸಚಿವರು ಹಣಕಾಸು ಇಲಾಖೆಯ ಸಹಕಾರದೊಂದಿಗೆ ಮುಂಗಡಪತ್ರವನ್ನು ಸಿದ್ಧಪಡಿಸುತ್ತಾರೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಲೋಕಸಭೆಯಲ್ಲಿ ಮಂಡಿಸಿ ಮಾರ್ಚ್‌ 31ರೊಳಗೆ ಸಂಸತ್ತಿನ ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆಯಲಾಗುತ್ತದೆ. ಅದೇ ರೀತಿ ರಾಜ್ಯಗಳಲ್ಲಿ ಆ ರಾಜ್ಯದ ಹಣಕಾಸು ಸಚಿವರು ಬಜೆಟ್‌ ಮಂಡಿಸುತ್ತಾರೆ. ಆದರೆ ಈ ಬಾರಿ ಚುನಾವಣೆ ಇದ್ದುದ್ದರಿಂದ ನೂತನ ಸರಕಾರದ ಮೊದಲ ಬಜೆಟ್‌ ಅನ್ನು ಈಗ ಮಂಡಿಸಲಾಗವದು,

ಏನಿರುತ್ತದೆ ಬಜೆಟ್‌ನಲ್ಲಿ?

ಹಿಂದಿನ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಆದಾಯ ವೆಚ್ಚಗಳು, ಮುಂಬರುವ ವರ್ಷದ ಮುಂಗಡ ಅಂದಾಜು ಆದಾಯ ವೆಚ್ಚಗಳು ಎಂಬ ನಾಲ್ಕು ಭಾಗಗಳನ್ನು ಮುಂಗಡ ಪತ್ರವು ಒಳಗೊಂಡಿರುತ್ತದೆ. ಬಜೆಟ್‌ನಲ್ಲಿ ಆದಾಯ, ವೆಚ್ಚ, ಆದಾಯ ಮತ್ತು ವೆಚ್ಚದ ನಡುವಣ ವ್ಯತ್ಯಾಸವನ್ನೂ ನಮೂದಿಸಲಾಗಿರುತ್ತದೆ.

ಕೇಂದ್ರ ಬಜೆಟ್‌ ವಿಧಗಳು

1.ಹೆಚ್ಚುವರಿ ಬಜೆಟ್‌ ;ನಿರ್ದಿಷ್ಟ ಹಣಕಾಸು ವರ್ಷದಲ್ಲಿ ನಿರೀಕ್ಷಿತ ಸರ್ಕಾರದ ಆದಾಯ, ಅಂದಾಜು ಸರ್ಕಾರದ ವೆಚ್ಚವನ್ನು ಮೀರಿದರೆ ಅದನ್ನು ಹೆಚ್ಚುವರಿ ಬಜೆಟ್ ಎಂದು ಹೇಳಲಾಗುತ್ತದೆ. ಇದರರ್ಥ ಸಾರ್ವಜನಿಕರ ಕಲ್ಯಾಣಕ್ಕಾಗಿ ಸರ್ಕಾರವು ಖರ್ಚು ಮಾಡುವ ಮೊತ್ತಕ್ಕಿಂತ ಹೆಚ್ಚಿನ ತೆರಿಗೆಯನ್ನು ಸರ್ಕಾರದಿಂದ ಗಳಿಸಲಾಗುತ್ತದೆ. ಹೆಚ್ಚುವರಿ ಬಜೆಟ್ ಒಂದು ದೇಶದ ಆರ್ಥಿಕ ಸಮೃದ್ಧಿಯನ್ನು ಸೂಚಿಸುತ್ತದೆ. ಒಟ್ಟಾರೆ ಬೇಡಿಕೆಯನ್ನು ಕಡಿಮೆ ಮಾಡಲು ಹಣದುಬ್ಬರದ ಸಮಯದಲ್ಲಿ ಇಂತಹ ಬಜೆಟ್‌ನ್ನು ಕಾರ್ಯಗತಗೊಳಿಸಬಹುದು.

2.ಸಮತೋಲಿತ ಬಜೆಟ್ ಎಂದರೇನು?

ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಅಂದಾಜು ಮಾಡಿದ ಸರ್ಕಾರದ ಖರ್ಚು, ಸರ್ಕಾರದ ಆದಾಯಕ್ಕೆ ಸಮನಾಗಿದ್ದರೆ ಅದನ್ನು ಸಮತೋಲಿತ ಬಜೆಟ್ ಎಂದು ಹೇಳಲಾಗುತ್ತದೆ. ಸರ್ಕಾರದ ಖರ್ಚು ತಮ್ಮ ಆದಾಯವನ್ನು ಮೀರಬಾರದು ಎಂಬ ಮೂಲ ಸಿದ್ಧಾಂತವೇ ಈ ಬಜೆಟ್‌ನ ಜೀವಾಳ. ತೆರಿಗೆಯಿಂದ ಬಂದ ಆದಾಯವು ಸರ್ಕಾರದ ವೆಚ್ಚಕ್ಕೆ ಸರಿಸಮವಾಗಿದ್ದಾಗ ಅಥವಾ ಆದಾಯವು ಹೆಚ್ಚಾಗಿದ್ದಾಗ ಈ ಸಮತೋಲಿತ ಬಜೆಟ್ ಅನ್ನು ಲೆಕ್ಕಾಚಾರ ಮಾಡಲಾಗುತ್ತದೆ.

3.ಕೊರತೆಯ ಬಜೆಟ್
ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಅಂದಾಜು ಮಾಡಿದ ಸರ್ಕಾರದ ಖರ್ಚು, ನಿರೀಕ್ಷಿತ ಸರ್ಕಾರಿ ಆದಾಯವನ್ನು ಮೀರಿದರೆ ಅದನ್ನು ಕೊರತೆಯ ಬಜೆಟ್ ಎಂದು ಹೇಳಲಾಗುತ್ತದೆ. ಈ ರೀತಿಯ ಬಜೆಟ್ ಭಾರತದಂತಹ ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಸೂಕ್ತವಾಗಿರುತ್ತದೆ. ಆರ್ಥಿಕ ಹಿಂಜರಿತದ ಸಮಯದಲ್ಲಿ ವಿಶೇಷವಾಗಿ ಸಹಾಯಕವಾಗುತ್ತದೆ. ಕೊರತೆಯ ಬಜೆಟ್ ಹೆಚ್ಚುವರಿ ಬೇಡಿಕೆಯನ್ನು ಉತ್ಪಾದಿಸಲು ಮತ್ತು ಆರ್ಥಿಕ ಬೆಳವಣಿಗೆಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

Related News

spot_img

Revenue Alerts

spot_img

News

spot_img