20.2 C
Bengaluru
Thursday, December 19, 2024

ಅನುಬಂಧ-II ಪ್ರಮಾಣ ಪತ್ರ ಎಂದರೇನು? ಅದರಲ್ಲಿ ಏನೆಂದು ಪ್ರಮಾಣೀಕರಿಸಿರುತ್ತದೆ?

ಬೆಂಗಳೂರು ಜುಲೈ 02: ನಾವು ಸಾಮಾನ್ಯವಾಗಿ ಯಾವುದೇ ದಸ್ತಾವೇಜುಗಳ ವರ್ಗಾವಣೆ ಅಥವಾ ನೋಂದಣಿಯ ಸಮಯದಲ್ಲಿ ಅನುಬಂಧ-II ಪ್ರಮಾಣ ಪತ್ರ(Annexure-II Certificate) ಇದ್ದೇ ಇರುತ್ತದೆ, ಇರಲೇಬೇಕು. ಇದು ಏನನ್ನು ಒಳಗೊಂಡಿದೆ ನೋಡೋಣ ಬನ್ನಿ.

ಪಾರ್ಟಿಗಳ ವಿವರ:-
1.ಒಂದನೇ ಪಾರ್ಟಿ (ಖರೀದಿದಾರರು).
2.ಎರಡನೇ ಪಾರ್ಟಿ (ಮಾರಾಟಗಾರರು) (ಪಕ್ಷಗಾರರ/ ಪ್ರಮಾಣಕರ್ತರ ಪೂರ್ಣ ಹೆಸರು ಮತ್ತು ವಿಳಾಸವನ್ನು ನೀಡಬೇಕು).

ನಾವು ಈ ಕೆಳಗಿನಂತೆ ಪ್ರಮಾಣೀಕರಿಸುತ್ತೇವೆ:
1. ಸ್ವತ್ತಿನ ಸರಿಯಾದ ವಿವರಣೆ ಮತ್ತು ಮ್ಯಾಪ್ ಅಥವಾ ಪ್ಲಾನ್ (ನಕ್ಷೆ) ನೀಡುವಲ್ಲಿ ನೋಂದಣಿ ಕಾಯ್ದೆ, 1908, ಕಲಂ 21(1) ಮತ್ತು ಕಲಂ 21(4)ನ್ನು ಉಲ್ಲಂಘಿಸಿರುವುದಿಲ್ಲ.

2. ಕರ್ನಾಟಕ ಮುದ್ರಾಂಕ ಕಾಯ್ದೆ, 1957, ಕಲಂ 28, ಕಲಂ 34 ಮತ್ತು ಕಲಂ 45-ಎ ಇದರಡಿ ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು, 1977, ನಿಯಮ 3ನ್ನು ಉಲ್ಲಂಘಿಸಿರುವುದಿಲ್ಲ ಹಾಗೂ ಸ್ವತ್ತನ್ನು ಅಪಮೌಲ್ಯಗೊಳಿಸಿರುವುದಿಲ್ಲ.

3. ಜಮೀನಿನ ಸರ್ವೆ ಸ್ಕೆಚ್ ನಮೂನೆ 11-ಇ ನೀಡುವಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆ, 1964, ಕಲಂ 13(ಸಿ) ಮತ್ತು ಇದರಡಿ ರಚಿಸಿರುವ ನಿಯಮ 46-ಎಚ್‌ನ್ನು ಉಲ್ಲಂಘಿಸಿರುವುದಿಲ್ಲ.

4. ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961, ಕಲಂ 8I-ಎ ರನ್ವಯ ಹೆಚ್ಚುವರಿ ಜಮೀನು ಹೊಂದಿರುವುದಿಲ್ಲ ಮತ್ತು ವ್ಯವಸಾಯೇತರ ವಾರ್ಷಿಕ ಆದಾಯ ರೂ. ಎರಡು ಲಕ್ಷ ಮೀರಿರುವುದಿಲ್ಲ ಹಾಗೂ ವ್ಯವಸಾಯದ ಜಮೀನು ಹೊಂದಲು ಅರ್ಹನಾಗಿರುತ್ತೇನೆ/ಅರ್ಹರಾಗಿರುತ್ತೇವೆ.

5. ಕರ್ನಾಟಕ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ, 1978ರ ಕಲಂ 6ರಂತೆ ಪರಭಾರೆ/ನೋಂದಣಿ ನಿಷೇಧಕ್ಕೆ ಒಳಪಡದ ಜಮೀನಾಗಿರುತ್ತದೆ.

6. ಕರ್ನಾಟಕ ಭೂ (ಪರಭಾರೆ ನಿರ್ಬಂಧ) ಕಾಯ್ದೆ, 1991ರ ಕಲಂ 8ರಂತೆ ಪರಭಾರೆ/ನೋಂದಣಿ ನಿಷೇಧಕ್ಕೆ ಒಳಪಡದ ಜಮೀನಾಗಿರುತ್ತದೆ (ನಗರಾಭಿವೃದ್ಧಿ ಪ್ರಾಧಿಕಾರಿಗಳಿಂದ ಸ್ವಾಧೀನ ಪ್ರಕ್ರಿಯೆಗೆ ಒಳಪಡದ ಜಮೀನಾಗಿರುತ್ತದೆ).

7. ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2007ರ ಕಲಂ 192-ಎ, ಕಲಂ 192-ಬಿ ಮತ್ತು ಕಲಂ 192-ಸಿ ರನ್ವಯ ಸರ್ಕಾರಿ ಜಮೀನಾಗಿರುವುದಿಲ್ಲ.ಹಾಗೂ ವ್ಯವಸಾಯಕ್ಕೆ ಒಳಪಟ್ಟಿರುವ ಅಥವಾ ವ್ಯವಸಾಯದ ಜಮೀನನ್ನುವ್ಯವಸಾಯೇತರ ಉದ್ದೇಶಕ್ಕೆ ಅನಧಿಕೃತವಾಗಿ ಪರಭಾರೆ ಮಾಡಿರುವುದಿಲ್ಲ.

8. ಕ್ರಯದಂತೆ ಹಸ್ತಾಂತರವಾಗುತ್ತಿರುವ ಸ್ವತ್ತಿನ ಮೌಲ್ಯ ರೂ. 5 ಲಕ್ಷಗಳು ಅಥವಾ ಹೆಚ್ಚಾಗಿದ್ದಲ್ಲಿ, ಆದಾಯ ತೆರಿಗೆ ನಿಯಮಗಳು, 1962ರ ನಿಯಮ 4(ಸಿ), ಉಪ-ನಿಯಮ (2)ರ ಕಂಡಿಕೆ (ಎ) ಮತ್ತು (ಎಚ್) ರನ್ವಯ ಶಾಶ್ವತ ಅಕೌಂಟ್ ಸಂಖ್ಯೆ (Permanent Account No.) ಅಥವಾ ನಮೂನೆ 60 ಅಥವಾ 1ರಂತೆ ಘೋಷಣೆ ನೀಡಿರುವುದು ಸರಿ ಇರುತ್ತದೆ.

ಈ ಪ್ರಮಾಣ ಪತ್ರದಲ್ಲಿನ ಹೇಳಿಕೆಗಳು ಪಕ್ಷಕಾರರ/ಪ್ರಮಾಣಕರ್ತರ ತಿಳುವಳಿಕೆಯಂತೆ ಮತ್ತು ನಂಬಿರುವಂತೆ ಸರಿ ಇರುತ್ತದೆ. ಗುರುತಿಸುವವರು ಹಾಗೂ ಪಕ್ಷಕಾರರ/ಪ್ರಮಾಣಕರ್ತರ ಸಹಿಯು ಈ ಮೇಲ್ಕಂಡ ನಿಮ್ಮ ಪ್ರಮಾಣಿಕರಿಸುವ ಕ್ರಿಯೆಗೆ ಸಾಕ್ಷಿಯಾಗಿರುತ್ತದೆ.

Related News

spot_img

Revenue Alerts

spot_img

News

spot_img