ಯಾವುದೇ ಜಮೀನಿನ ಅಂತಿಮ ವಿಸ್ತೀರ್ಣ ಇರುವ ದಾಖಲೆಯೇ ಅಕಾರಬಂದ್. ಇದರಲ್ಲಿ ಒಟ್ಟಾರೆ 29 ಕಾಲಂಗಳಿವೆ. ಅದರಲ್ಲಿ ಪ್ರಮುಖವಾಗಿನೋಡಿದಾಗ ಒಂದು ಮತ್ತು ಎರಡನೇ ಕಲಂಗಳಲ್ಲಿ ಜಮೀನಿನ ಸರ್ವೆ ಸಂಖ್ಯೆ ಇರುತ್ತದೆ. ಮೂರನೇ ಕಲಂನಲ್ಲಿ ಹಿಸ್ಸಾ ನಂಬರ್, ನಾಲ್ಕನೇ ಕಲಂನಲ್ಲಿ ಜಮೀನಿನ ಒಟ್ಟು ವಿಸ್ತೀರ್ಣ, ಐದನೇ ಕಲಂನಲ್ಲಿ ಜಮೀನಿನಲ್ಲಿ ಇರುವ ಖರಾಬು ಬಗ್ಗೆ ತಿಳಿಸುತ್ತದೆ. ಆರನೇ ಕಲಂ ಸಾಗುವಳಿ ಭೂಮಿ ಮತ್ತು ವಿಸ್ತೀರ್ಣದ ಬಗ್ಗೆ ಇರಲಿದ್ದು ಉಳಿದ ಕಾಲಂಗಳಲ್ಲಿ ಇತರೆ ವಿಚಾರಗಳನ್ನು ಒಳಗೊಂಡಿರುತ್ತದೆ.
ನಿಮ್ಮ ಜಮೀನು ನೋಂದಣಿ ಮಾಡುವಾಗ ಪಹಣಿಯೊಂದಿಗೆ ಆಕಾರಬಂದ್ ಸಹ ಕೇಳುತ್ತಾರೆ. ಪಹಣಿಗಿಂತ ಆಕಾರಬಂದ್ ಹೆಚ್ಚು ಮಹತ್ವವಿದೆ. ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು. ಹೌದು, ರೈತರು ತಮ್ಮ ಬಳಿಯಿರುವ ಫೋನ್ ನಲ್ಲೇ ಆಕಾರಬಂದ್ ಚೆಕ್ ಮಾಡಬಹುದು.
ಜಮೀನಿನ ಆಕಾರಬಂದ್ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಬಳಿಯಿರುವ ಫೋನ್ ನಲ್ಲೇ ಜಮೀನಿನ ಆಕಾರಬಂದ್ ನ್ನು ಚೆಕ್ ಮಾಡಲು https://bhoomojini.karnataka.gov.in/service39/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಕಾರಬಂದ್ ಚೆಕ್ ದಾಖಲೆ ಡೌನ್ಲೋಡ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಂಡು, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಸರ್ನೋಕ್ ನಲ್ಲಿ ಸ್ಟಾರ್ ನಮೂದಿಸಿ ನಂತರ ಹಿಸ್ಸಾ ನಂಬರ್ ಗೊತ್ತಿದ್ದರೆ ನಮೂದಿಸಿ ಇಲ್ಲದಿದ್ದರೆ ಸ್ಟಾರ್ ಹಾಕಿ View Akarband ಮೇಲೆ ಕ್ಲಿಕ್ ಮಾಡಿ. ಆಗ ಆಕಾರ ಬಂದ್ ದಾಖಲೆ ತೆರೆದುಕೊಳ್ಳುತ್ತದೆ.
ಯಾವುದೇ ಜಮೀನಿನ ನೋಂದಣಿ ಅಥವಾ ದಾನ ಮುಂತಾದವುಗಳಿಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದಾಗ ಆಕಾರಬಂದ್ ಕೇಳುತ್ತಾರೆ. ನಿಮ್ಮ ಬಳಿ ಆರ್‌ಟಿಸಿ ಜೊತೆಗೆ ಆಕಾರಬಂದ್ ಸಹ ಇಟ್ಟುಕೊಳ್ಳಬೇಕು. ಹಾಗಾದರೆ, ಆಕಾರಬಂದ್ ಯಾಕೆ ಬೇಕು, ಅದರ ಮಹತ್ವವೇನು, ಎಲ್ಲಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.
ಅರ್ಜಿ ನೀಡಿದ ನಂತರ ಸರ್ವೆಯರ್ ಸ್ಥಳ ಪರಿಶೀಲನೆ ಮಾಡಿ ನಿಜವಾದ ಜಮೀನಿನ ವಿಸ್ತೀರ್ಣವನ್ನ ಅಕಾರಬಂದ್‌ವಿನಲ್ಲಿ ತಿದ್ದುಪಡಿ ಮಾಡಿ ಜಿಲ್ಲಾ ಭೂದಾಖಲೆಗಳ ಮುಖ್ಯಸ್ಥರಿಂದ ಅನುಮತಿ ಪಡೆದು ಅಕಾರಬಂದ್‌ವನ್ನು ಅಪ್‌ಡೇಟ್ ಮಾಡುತ್ತಾರೆ.
ಯಾವುದೇ ಕೃಷಿ ಜಮೀನು ಪಡೆಯಬೇಕಾದರೆ ಅಕಾರಬಂದ್‌ವನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಅಕಾರಬಂದ್‌ವನ್ನು ಪಡೆಯಬೇಕಾದರೆ ಅಥವಾ ಸರಿಪಡಿಸಬೇಕಾದರೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಕೊಡಬೇಕು. ಅರ್ಜಿಯೊಡನೆ ಆಧಾರ್, ಆರ್‌ಟಿಸಿ ನೀಡಬೇಕು. ತದನಂತರ ಅವರು ‘ಸಕಾಲ’ ಯೋಜನೆಯಡಿ ಸೇರಿಸಿಕೊಂಡು 7ರಿಂದ 15 ದಿನಗಳ ಒಳಗಾಗಿ ಅಕಾರಬಂದ್ ಪ್ರತಿಯನ್ನು ನೀಡಬೇಕಿರುತ್ತದೆ.