22.6 C
Bengaluru
Saturday, July 27, 2024

ಪರಿಸರ ಮಾಲಿನ್ಯ: ಅಪ್ಪಳಿಸುತ್ತಿದೆ “ಆಸಿಡ್‌ ಮಳೆ” : ಅವಸಾನದತ್ತ ಇಳೆ!

#Acid rain #Environment #Global warming

ಬೆಂಗಳೂರು, ಅ. 19: ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲಿನ ಮಾನವ ದಾಳಿ ನಿರಂತರ ಮುಂದುವರೆದಿದೆ. ಇದರಿಂದ ವಾತಾವರಣದಲ್ಲಿನ ಬದಲಾವಣೆಗಳಿಂದ ಜಗತ್ತಿನಲ್ಲಿ ಹಲವು ರಾಷ್ಟ್ರಗಳು ಆಸಿಡ್ ದಾಳಿಗೆ ತುತ್ತಾಗುತ್ತಿವೆ. ಏನಿದು ಆಸಿಡ್ ಮಳೆ, ಇದರಿಂದ ಎದುರಾಗುವ ಅಪಾಯಗಳೇನು ? ಈ ಆಸಿಡ್ ರೈನ್ ಗೆ ತುತ್ತಾಗಿರುವ ರಾಷ್ಟ್ರಗಳು ಈ ಕುರಿತ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.

ಏನಿದು Acid Rain ?: ನೈಟ್ರಿಕ್ ಮತ್ತು ಸಲ್ಪರಿಕ್ ಆಸಿಡ್ ನ್ನೇ ಆಸಿಡ್ ರೈನ್ ಎಂದು ಕರೆಯುತ್ತೇವೆ. ಇದು ಮಂಜು ಅಥವಾ ಸಹಜ ಮಳೆಯಲ್ಲಿ ಸೇರಿ ಭೂಮಿ ಮೇಲೆ ಸುರಿಯುತ್ತದೆ. ಇದರಿಂದ ಆಗುವ ಅನಾಹುತಗಳು ಒಂದೆರಡು ಅಲ್ಲ.ಜ್ವಾಲಾಮುಖಿ ಸ್ಫೋಟದಿಂದ ಬಿಡುಗಡೆ ಅಗುವ ಕೆಲವು ರಾಸಾಯನಿಕಗಳು ಆಸಿಡ್‌ ರೈಗೆ ಕಾರಣವಾಗುತ್ತವೆ. ಇದರ ಜತೆಗೆ ಅಭಿವೃದ್ಧಿ ಹೆಸರಿನಲ್ಲಿ ಮಾನವರು ಕೈಗೊಂಡಿರುವ ಚಟುವಟಿಕೆಗಳು ಮೂಲ ಕಾರಣವಾಗಿದೆ. ಕಲ್ಲಿದ್ದಲು ಸುಡುವ ಪವರ್ ಪ್ಲಾಟ್‌ ಗಳು, ಕೈಗಾರಿಕೆಗಳು ಅಗೂ ಆಟೋ ಮೊಬೈಲ್ ಕ್ಷೇತ್ರದ ಕಂಪನಿಗಳು ಆಸಿಡ್‌ ರೈನ್ ಗೆ ಮೂಲ ಕಾರಣವಾಗಿವೆ.

ಆಸಿಡ್ ರೈನ್ ನಿಂದ ಆಗುವ ಅಪಾಯ: ಸಲ್ಪರ್ ಡೈಯಾಕ್ಸೈಡ್ ಹಾಗೂ ನೈಟ್ರೋಜನ್ ಆಕ್ಸೈಡ್ ಗಾಳಿಯಲ್ಲಿ ಸೇರುವ ಕಾರಣದಿಂದ ಜನರಿಗೆ ಉಸಿರಾಟದ ತೊಂದರೆ ಕಾಣುತ್ತದೆ. ಅಸ್ತಮಾ, ಉಸಿರಾಟದ ತೊಂದರೆಗೆ ಇದು ಕಾರಣವಾಗುತ್ತದೆ. ಆಸಿಡ್ ರೈನ್ ನಿಂದಾಗಿ ಗಾಳಿಯಲ್ಲಿ ನ ಸಣ್ಣ ಕಣಗಳು ಮಾನವರ ದೇಹ ಸೇರಿ ನಾನಾ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಆಸಿಡ್ ರೈನ್ ನಿಂದಾಗಿ ಜನರ ಶ್ವಾಶಕೋಶ ಸಂಪೂರ್ಣ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ.

ಆಸಿಡ್ ರೈನ್ ನಿಂದಾಗಿ ಅರಣ್ಯಗಳು ನಾಶವಾಗುತ್ತವೆ. ಆಸಿಡ್ ರೇನ್ ದಾಳಿಗೆ ತುತ್ತಾಗುವ ಅರಣ್ಯಗಳು ತಾನಾಗಿ ಸುಟ್ಟು ಮರಳುಗಾಡು ಅಗುತ್ತವೆ. ಯಾಕೆಂದರೆ, ಆಸಿಡ್ ರೈನ್ ಬಿದ್ದ ಕೂಡಲೇ ಮರ ಗಿಡಗಳಿಗೆ ಬೇಕಾಗುವ ಮೆಗ್ನೀಷಿಯಮ್ ಮತ್ತು ಕ್ಯಾಲ್ಸಿಯಂ ಸೇರಿದಂತೆ ಅಗತ್ಯ ನ್ಯೂಟ್ರೀಷನ್‌ ಗಳು ಸಿಗಲ್ಲ. ಅಲ್ಲದೇ ನೀರನ್ನು ಇಂಗಿ ಕೊಳ್ಳುವ ಶಕ್ತಿಯನ್ನು ಮರಗಳು ಕಳೆದುಕೊಳ್ಳುತ್ತವೆ. ಅದರಲ್ಲೂ ಆಸಿಡ್‌ ರೇನ್ ಬೀಳುವುದೇ ಮೊದಲು ಮರಗಳ ಮೇಲೆ. ಹೀಗಾಗಿ ಮರಗಳು ಬೆಂಕಿಗೆ ಒಳಗಾಗುತ್ತವೆ. ಮರಗಳ ಎಲೆಗಳ ಮೇಲೆ ಆಸಿಡ್‌ ರೈನ್ ಬಿದ್ದ ಕೂಡಲೇ ಅವು ಜೀವತ್ವ ಕಳೆದುಕೊಳ್ಳುತ್ತವೆ. ಕೀಟಗಳ ಬಾದೆ ಶುರುವಾಗಿ ಅರಣ್ಯಗಳು ಸಂಪೂರ್ಣ ನಾಶವಾಗುತ್ತವೆ.
ಆಸಿಡ್‌ ರೈನ್ ನಿಂದ ಕೆರಗಳು ನೀರಿನ ಮೂಲಗಳು ಕೂಡ ಕಲುಷಿತವಾಗುತ್ತವೆ. ಆಸಿಡ್ ರೈನ್ ನಿಂದ ಕಲುಷಿತವಾದ ನೀರನ್ನು ಕುಡಿಯುವ ವನ್ಯ ಜೀವಿಗಳು ನಾಶವಾಗುತ್ತವೆ. ಇದಲ್ಲದೇ ಕಟ್ಟಡಗಳ ಮೇಲೂ ಸಹ ಆಸಿಡ್ ರೈನ್ ಪರಿಣಾಮ ಬೀರುತ್ತದೆ. ಕಟ್ಟಡಗಳು, ಪ್ರತಿಮೆಗಳು, ಹಾಗೂ ಶಿಖರಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತವೆ.

ಆಸಿಡ್ ರೈನ್ ಭೂಮಿ ಮೇಲಿನ ನೀರಿಗೆ ಸೇರಿದಲ್ಲಿ ಭೂಮಿ ಕೂಡ ವಿಷವಾಗಲಿದೆ. ಆಸಿಡ್ ರೈನ್ ನಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗಿ ಇದರಿಂದ ಹವಾಮಾನದಲ್ಲಿ ವೈಪರೀತ್ಯವಾಗಲಿದೆ. ಸಲ್ಪರಿಕ್ ಆಸಿಡ್‌ ಅಸಿಡ್‌ ರೈನ್ ನಲ್ಲಿ ಇರುವ ಕಾರಣದಿಂದ ಭೂಮಿಯ ವಾತಾವರಣವನ್ನೇ ಕೆಡಿಸುತ್ತದೆ. ಮಿಗಿಲಾಗಿ ಆಸಿಡ್ ಮಳೆಯಲ್ಲಿರುವ ನೈಟ್ರೋಜನ್ ಅಕ್ಸೈಡ್ ನಿಂದಾಗಿ ತಳಭಾಗದ ಓಜೋನ್ ಪದರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಮಾನವ ಜೀವಿಸುವ ಪರಿಸರವನ್ನೇ ನಾಶ ಮಾಡುತ್ತದೆ. ಅಸಿಡ್ ರೈನ್ ನಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತದೆ.

ಆಸಿಡ್ ರೈನ್ ನಿಂದಾಗಿ ಬಹುಮುಖ್ಯವಾಗಿ ಕೆರೆಗಳು, ಕಾಲುವೆಗಳು, ಭೂಮಿ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ನೀರು ವಿಷಕಾರಿಯಾಗಲಿದೆ. ಭೂಮಿಯಲ್ಲಿ ಅಲ್ಯೂಮಿನಿಯಂ ಪ್ರಮಾಣ ಹೆಚ್ಚಳಗೊಳಿಸಿ ನೀರು ವಿಷಕಾರಿಯಾಗಲು ಕಾರಣವಾಗುತ್ತದೆ.ಮಂಜಿನ ರೀತಿಯಲ್ಲಿ ಸುರಿಯುವ ಆಸಿಡ್ ದಾಳಿಯಿಂದಾಗಿ ಪರಿಸರದಲ್ಲಿನ ಮರ ಗಿಡಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಶೀತ ವಾತಾವರಣದಿಂದಾಗಿ ಮರಗಳ ಎಲೆಗಳು ರೋಗಕ್ಕೆ ತುತ್ತಾಗಿ ಅಂತಿಮವಾಗಿ ಕಾಯಿಲೆಗಳಿಗೆ ತುತ್ತಾಗಿ ಅಂತಿಮವಾಗಿ ಅವಸಾನ ಹೊಂದುತ್ತವೆ.
ಎಲ್ಲೆಲ್ಲಿ ಆಸಿಡ್ ರೈನ್ ಬೀಳುತ್ತದೆ :

ಅಮೆರಿಕಾ, ಪಿನ್ ಲ್ಯಾಂಡ್, ಕೆನಡಾ, ದಕ್ಷಿಣ ಚೀನಾ ಆಸಿಡ್ ರೈನ್ ದಾಳಿಗೆ ತುತ್ತಾವೆ. ಭಾರತದಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಕೊಸ್ಟಲ್ ಕರ್ನಾಟಕ ಮತ್ತು ಕೇರಳದಲ್ಲಿ ಆಸಿಡ್ ರೈನ್ ಬಿದ್ದಿರುವುದು ಕಂಡು ಬಂದಿದೆ. ಆಸಿಡ್ ರೈನ್ ಮೊದಲು 1852 ರಲ್ಲಿ ಇಂಗ್ಲೆಂಡ್ ಹಾಗೂ ಸ್ಕಾಟ್ಲಾಂಡ್‌ ನಲ್ಲಿ ಬಿದ್ದಿತ್ತು ಎಂಬುದು ಗಮನಾರ್ಹ. ಇದನ್ನು ವಿಜ್ಞಾನಿ ರಾಬಾರ್ಟ್‌ ಅಂಗುಸ್ ಸ್ಮಿತ್ ಸಂಶೋಧನೆ ಮಾಡಿ ಅಸಿಡ್‌ ರೈನ್ ಬಗ್ಗೆ ಉಲ್ಲೇಖಿಸಿದ್ದರು.
ಅಭಿವೃದ್ಧಿ ಹೆಸರಿನಲ್ಲಿ ಮಾನವ ಪರಿಸರದ ಮೇಲೆ ಮಾರಣಾಂತಿಕ ಕೃತ್ಯಗಳನ್ನು ಮಾಡುತ್ತಿದ್ದಾನೆ. ಕಲ್ಲಿದ್ದಲು ಆಧಾರಿತ ಪವರ್ ಪ್ಲಾಂಟ್, ಅಟೋ ಮೊಬೈಲ್ , ಕಾರ್ಖಾನೆಗಳನ್ನು ನಿರ್ಮಿಸುತ್ತಿದ್ದಾನೆ. ಇದರಿಂದ ಜೀವ ಸಂಕುಲ ಕಾಪಾಡುವ ಪರಿಸರವನ್ನು ಸರ್ವ ನಾಶ ಮಾಡುತ್ತಿದ್ದಾನೆ. ಜಗತ್ತೇ ಇಂದು ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ.

ಇಷ್ಟಾಗಿಯೂ ಪರಿಸರದ ಮೇಲೆ ಜನರು ಕಾಳಜಿ ವಹಿಸುತ್ತಿಲ್ಲ. ಪರಿಸರ ನಾಶದಿಂದಾಗಿ ಆಸಿಡ್ ರೈನ್ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗುತ್ತಲೇ ಇವೆ. ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವಿಶ್ವ ಮಟ್ಟದಲ್ಲಿ ನಾನಾ ಸಮ್ಮೇಳನಗಳು, ಒಪ್ಪಂದಗಳು ನಡೆದರೂ ಉದ್ದೇಶಿತ ಮಟ್ಟದಲ್ಲಿ ಪರಿಸರವನ್ನು ರಕ್ಷಿಸುತ್ತಿಲ್ಲ. ಹೀಗಾಗಿ ಪರಿಸರ ಮಾತೆ ಮಲಿನಗೊಂಡು ಆಸಿಡ್ ರೈನ್ ನಂತಹ ಅಪಾಯ ಉಡುಗೊರೆಯಾಗಿ ನೀಡಿದೆ. ಜನ ಈಗಲಾದರೂ ತಮ್ಮ ಮಟ್ಟಿಗೆ ಪರಿಸರ ಬಗ್ಗೆ ಕಾಳಜಿ ವಹಿಸಬೇಕು. ಪರಿಸರ ಹಾನಿಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಗೊಳ್ಳಬೇಕು. ಮುಂದಿನ ಪೀಳಿಗೆ ಈ ಭೂಮಿ ಮೇಲೆ ವಾಸಿಸುವಂತಹ ವಾತಾವರಣ ಉಳಿಯಬೇಕಾದರೆ ಪರಿಸರವನ್ನು ರಕ್ಷಿಸುವ ತುರ್ತು ಹೊಣೆಗಾರಿಕೆ ಎಲ್ಲರೂ ಹೊತ್ತುಕೊಳ್ಳಬೇಕಿದೆ.

 

 

 

 

 

 

 

 

Related News

spot_img

Revenue Alerts

spot_img

News

spot_img