ದೊಡ್ಡ ದೊಡ್ಡ ನಗರಗಳಲ್ಲಿ ಎಲ್ಲವೂ ಚೆನ್ನಾಗಿರುವ ರೀತಿಯಲ್ಲಿ ಮನೆ ಅಥವಾ ನಿವೇಶನಗಳು ದೊರೆಯುವುದು ಅದೃಷ್ಟವೇ ಸರಿ. ವಾಸ್ತು ಪ್ರಕಾರ ಮನೆ ಕಟ್ಟಡಬೇಕು ಎಂದರೆ ಹಲವಾರು ಅಡ್ಡಿಗಳು ಬಂದರೂ ಸಹ ಆದಷ್ಟು ನಿಯಮಗಳನ್ನು ವಾಸ್ತು ಪಾಲಿಸಿಯೇ ನಿರ್ಮಾಣ ಕಾರ್ಯ ಕೈಗೊಂಡರೆ ಒದಗಬಹುದಾದ ಅಪಾಯಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.
ಟಿ- ಆಕಾರದ ರಸ್ತೆಯಲ್ಲಿ ಮನೆ ಇದ್ದರೆ, ಅಥವಾ ಯಾವುದೇ ರಸ್ತೆಯ ಅಂತಿಮದಲ್ಲಿ (ಡೆಡ್‌ಎಂಡ್)ನಲ್ಲಿ ಮನೆ ಇದ್ದರೆ ಅದನ್ನು ರಸ್ತೆ ಕುತ್ತು ಎಂದು ಹೇಳುತ್ತಾವೆ. ಅದೇ ರೀತಿ ಬೀದಿ ಶೂಲೆಗಳೂ ಇರುತ್ತವೆ. ಅದರಲ್ಲಿಯೂ ವಾಸ್ತು ಪ್ರಕಾರ ಶುಭ- ಅಶುಭ ಫಲಗಳು ಉಂಟು. ಅದನ್ನು ಗಮನಿಸಿ ಯೋಗ್ಯವಾದ ರೀತಿಯಲ್ಲಿ ಮುಂದುವರಿದರೆ ಉತ್ತಮ ಫಲಗಳನ್ನೇ ದೊರೆಯಬಹುದಾದ ಸಾಧ್ಯತೆಗಳು ಇರುತ್ತವೆ.
ಬೀದಿ ಶೂಲೆ ಅಥವಾ ರಸ್ತೆಗಳ ತಾಪತ್ರಯದಲ್ಲಿ ಪೂರ್ವ, ಉತ್ತರ, ಈಶಾನ್ಯ ಬೀದಿ ಶೂಲೆಗಳು ಒಳ್ಳೆಯ ಫಲಗಳನ್ನು ಉಂಟು ಮಾಡುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಪೂರ್ವ ಈಶಾನ್ಯ ಬೀದಿ ಶೂಲೆಯಿಂದ ಹೆಸರು ಖ್ಯಾತಿಗಳನ್ನು ಸಂಪಾದಿಸಬಲ್ಲವರಾಗಿರುತ್ತಾರೆ. ಉತ್ತರ ಈಶಾನ್ಯ ಬೀದಿ ಶೂಲೆಗಳಿಂದ ಸಂಪತ್ತು ಲಭ್ಯವಾಗುತ್ತದೆ. ಪೂರ್ವ ಆಗ್ನೇಯ ಬೀದಿ ಶೂಲೆಯಿಂದ ಕುಟುಂಬದಲ್ಲಿ ಶಾಂತಿ ಸುಖ ಇರುವುದಿಲ್ಲ. ದಕ್ಷಿಣ ಆಗ್ನೇಯ ಬೀದಿ ಶೂಲೆಯಿಂದಾಗಿ ಅದಾಯ ಹೆಚ್ಚುತ್ತದೆ ಎನ್ನುತ್ತದೆ ವಾಸ್ತು.
ದಕ್ಷಿಣ ನೈರುತ್ಯ ಬೀದಿ ಶೂಲೆ ಇರಬಾರದು. ಅನೇಕ ಅಪಾಯಗಳು ಸಂಭವಿಸುತ್ತವೆ, ಸ್ತ್ರೀಯರ ಮೇಲೆ ಪ್ರಭಾವ ತೋರುತ್ತದೆ. ಅದೇ ರೀತಿ ಪಶ್ಚಿಮ ನೂರತ್ಯ ಬೀದಿ ಶೂಲೆ ಇರಬಾರದು. ಪುರುಷರ ಮೇಲೆ ಪ್ರಭಾವ ಬೀರುತ್ತದೆ. ದೀರ್ಘ ವ್ಯಾದಿಗಳು ಬರುತ್ತವೆ ಎಂಬ ಆತಂಕವೂ ಇದೆ. ಇಂತಹವುಗಳ ಬಗ್ಗೆ ಮೊದಲೇ ಜಾಗೃತೆ ವಹಿಸಿ ಖರೀದಿಸುವುದು ಅಥವಾ ಅಲ್ಲಿ ವಾಸಿಸುವ ಬಗ್ಗೆ ನಿರ್ಧರಿಸಬೇಕಾಗುತ್ತದೆ.
ಇನ್ನು ಪಶ್ಚಿಮ ವಾಯುವ್ಯ ಬೀದಿ ಶೂಲೆಯಿಂದ ಕೊಂಚ ಮಟ್ಟಿಗೆ ಅಷ್ಟೆ ಒಳ್ಳೆಯದಾಗುತ್ತದೆ. ಉತ್ತರ ವಾಯುವ್ಯ ಬೀದಿ ಶೂಲೆ ಇರಬಾರದು. ಮಾನಸಿಕ ಆತಂಕ, ಆದಾಯ ಇಲ್ಲದೆ ಇರುವುದು, ಧನಹಾನಿಯಿಂದಾಗಿ ಈ ಶೂಲೆ ಕೂಡಿ ಬರುವುದಿಲ್ಲ ಎಂಬ ಆತಂಕ ಇದೆ.
ಮನೆಗೆ ಬೀದಿ ಶೂಲೆ ಉಂಟು ಮಾಡುತ್ತಿರುವ ಬೀದಿಗೆ ಅಡ್ಡವಾಗಿ ಬೀದಿಶೂಲೆ ನೀಡುತ್ತಿರುವ ಬೀದಿಗಿಂತಲು ಹೆಚ್ಚು ಅಗಲ ಇರುವ ಬೀದಿಗಳು ಬಂದರೆ ದಷ್ಪಲಗಳು ಇರುವುದಿಲ್ಲ. ಬೀದಿ ಶೂಲೆ ಉಂಟು ಮಾಡುತ್ತಿರವು ಬೀದಿಗೆ ಅಡ್ಡಲಾಗಿ ಅಗಲ ಕಡಿಮೆ ಇರುವ ಬೀದಿ ಬಂದರೆ ಬೀದಿ ಶೂಲೆಯ ಫಲಗಳು ಕೊಂಚ ಮಟ್ಟಿಗೆ ತಗ್ಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ನೀವು ನಿವೇಶನ, ಮನೆ ಅಥವಾ ಯಾವುದೇ ರೀತಿಯ ಸ್ವಂತಕ್ಕೆ ಜಾಗ ಖರೀದಿಸುತ್ತಿದ್ದೀರಿ ಎಂದಾದರೆ ಈ ಬೀದಿ ನಿವೇಶನದ ಫಲಾಫಲಗಳನ್ನು ಒಮ್ಮೆ ತಿಳಿದು ಮುಂದುವರಿಯುವುದು ಸೂಕ್ತ.