26.5 C
Bengaluru
Wednesday, January 22, 2025

ಪಾಲುಗಾರಿಕೆ ಎಂದರೇನು? ಪಾಲುದಾರಿಕೆಯ ಲಕ್ಷಣಗಳು ಹಾಗೂ ಅದರ ಬಗೆಗಿನ ಸಂಕ್ಷಿಪ್ತ ವಿವರ

ಪಾಲುಗಾರಿಕೆ ಎಂದರೇನು?
ಒಬ್ಬನಿಗಿಂತ ಹೆಚ್ಚಿಗೆ ವ್ಯಕ್ತಿಗಳು ಸೇರಿ ಒಟ್ಟಾಗಿ ಅಥವಾ ಉಳಿದವರ ಪರವಾಗಿ ಯಾರಾದರೊಬ್ಬರು ವ್ಯಾಪಾರವನ್ನು ಮಾಡಿ ಅದರ ಲಾಭವನ್ನು ಹಂಚಿಕೊಳ್ಳಲು ಕರಾರು ಮಾಡಿಕೊಳ್ಳುವ ವ್ಯವಹಾರ ಸಂಬಂಧವನ್ನುಪಾಲುಗಾರಿಕೆ ಎಂದು ಹೇಳುತ್ತಾರೆ.

ಏಕವ್ಯಕ್ತಿ ಮಾರಾಟ ಸಂಸ್ಥೆಗಳ,ಅಥವಾ ಒಬ್ಬನೇ ಮಾಲೀಕ ವ್ಯವಹಾರದ ದೋಷಗಳ ಕಾರಣವಾಗಿ ಹುಟ್ಟಿಕೊಂಡ ಪಾಲುದಾರಿಕೆ ಒಂದು ವ್ಯವಹಾರ ಸಂಸ್ಥೆಯ ರೂಪ. ಏಕವ್ಯಕ್ತಿ ಮಾರಾಟ ಸಂಸ್ಥೆಯ ಅತ್ಯಂತ ಪ್ರಧಾನ ದೋಷಗಳಾದ ಸೀಮಿತ ಬಂಡವಾಳ ಮತ್ತು ಸೀಮಿತ ನಿರ್ವಹಣಾ ಕೌಶಲ್ಯವನ್ನು,ಪಾಲುದಾರಿಕೆ ಸಂಸ್ಥೆಯ ರಚನೆಯ ಮೂಲಕ ಗೆಲ್ಲಲಾಯಿತು. ಪಾಲುದಾರಿಕೆಯಲ್ಲಿ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದುಗೂಡುತ್ತಾರೆ.ಅವರಲ್ಲಿ ಕೆಲವರು ಬಂಡವಾಳ ಹೊಂದಿದ್ದರೆ ಮತ್ತೆ ಕೆಲವರು ಕೌಶಲ್ಯ ಅಥವಾ ಅನುಭವವನ್ನು ಹೊಂದಿರುತ್ತಾರೆ. ಅವರು ಒಂದು ಸಂಸ್ಥೆಯನ್ನು ರೂಪಿಸಿಕೊಂಡು ಯಾವುದೇ ನ್ಯಾಯವಾದ ವ್ಯವಹಾರವನ್ನು ನಡೆಸಿ,ಅದರ ಲಾಭವನ್ನು ಹಂಚಿಕೊಳ್ಳುತ್ತಾರೆ. ಅದರಿಂದ ಪಾಲುದಾರಿಕೆಯನ್ನು ರೂಪಿಸುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ಪಾಲುದಾರು ಎಂದು ಮತ್ತು ಸಾಮೂಹಿಕವಾಗಿ ‘ಸಂಸ್ಥೆ’ ಎಂದು ಕರೆಯಲಾಗುತ್ತದೆ. ಅವರ ವ್ಯವಹಾರ, ಸಂಸ್ಥೆಯ ಹೆಸರಿನ ಮೇಲೆ ನಡೆಯುತ್ತದೆ.

ಪಾಲುಗಾರಿಕೆ ಸಂಸ್ಥೆಯನ್ನು ಪ್ರಾರಂಭಿಸಲು ಕನಿಷ್ಟ ಮತ್ತು ಗರಿಷ್ಠ ಎಷ್ಟು ವ್ಯಕ್ತಿಗಳು ಇರಬಹುದು ?
ಪಾಲುಗಾರಿಕೆಯನ್ನು ಪ್ರಾರಂಭಿಸಲು ಕನಿಷ್ಠ ಇಬ್ಬರು ವ್ಯಕ್ತಿಗಳು ಬೇಕಿದು,ಹಣಕಾಸಿನ ವ್ಯವಹಾರಗಳನ್ನು ಮಾಡುವ ಸಂಸ್ಥೆಯಾದಲ್ಲಿ ಗರಿಷ್ಠ 10 ಜನ, ಇತರ ಯಾವುದಾದರೂ ವ್ಯಾಪಾರವನ್ನು ಮಾಡುವುದಾದಲ್ಲಿ ಗರಿಷ್ಠ 20 ವ್ಯಕ್ತಿಗಳು ಇರಬಹುದು. (ಕಂಪನಿ ಕಾಯಿದಯ ವಿಧಿ 11(2)).

ಪಾಲುಗಾರಿಕೆಯು ಯಾವ ಅವಧಿಯದಾಗಿರಬಹುದು?
ಪಾಲುಗಾರಿಕೆಗೆ ಯಾವುದೇ ಅವಧಿಯನ್ನು ನಿಗದಿಪಡಿಸಬಹುದು ಅಥವಾ ಇಷ್ಟವಿದ್ದಷ್ಟು ದಿವಸ ಎಂದು ನಿಗದಿಪಡಿಸಬಹುದು. ಒಂದು ಪಕ್ಷನಿಗದಿಪಡಿಸದಿದಲ್ಲಿ ಪಾಲುದಾರರು ಬಯಸುವವರಗೂ ಪಾಲುಗಾರಿಕೆಯು ಮುಂದುವರೆಯುತ್ತದ (ಭಾರತೀಯ ಪಾಲುಗಾರಿಕ ಕಾಯಿದೆ, 1932ರ ವಿವಿ – 7).

ಪಾಲುದಾರಿಕೆಯ ಲಕ್ಷಣಗಳು,ಮೂಲತತ್ವಗಳು ಅಥವಾ ಗುಣಲಕ್ಷಣಗಳು
೧.ಒಪ್ಪಂದ: ಪಾಲುದಾರಿಕೆ,ಪಾಲುದಾರರ ನಡುವೆ ಉಂಟಾದ ಒಪ್ಪಂದ ಅಥವಾ ಕರಾರಿನ ಫಲಿತಾಂಶ. ಅದು ಹುಟ್ಟಿನಿಂದ, ಸ್ಥಾನಮಾನ ಅಥವಾ ಅನುವಂಶಿಕ ಅಥವಾ ಉತಾರಾಧಿಕಾರರಿಂದ ಉಂಟಾಗುವುದಿಲ್ಲ.

೨.ಒಪ್ಪಂದದ ಲಕ್ಷಣ: ವ್ಯಕ್ತಿಗಳ ನಡುವಿನ ಒಪ್ಪಂದ ಅಥವಾ ಕರಾರು ಬಾಯಿ ಮಾತಿನ ಮೂಲಕವಾಗಿರಬಹುದು. ಆದರೆ ಸಾಮಾನ್ಯವಾಗಿ ಕರಾರು ಬರಹದಲ್ಲಿರುತ್ತದೆ.

೩.ಕರಾರಿಗೆ ಒಳಪಡಲು ಕಾನೂನುಬದ್ಧ ಸಾಮರ್ಥ್ಯ: ಪಾಲುದಾರಿಕೆಯನ್ನು ರೂಪಿಸಿಕೊಳ್ಳಲು ವ್ಯಕ್ತಿಗಳು ಕರಾರಿಗೆ ಪ್ರವೇಶಿಸಲು ತಕ್ಕ ಶಕ್ತಿ ಅಥವಾ ಸಾಮರ್ಥ್ಯ ಹೊಂದಿರಬೇಕು.

೪.ಪಾಲುದಾರರ ಸಂಖ್ಯೆ: ಪಾಲುದಾರಿಕೆಯನ್ನು ರೂಪಿಸಲು ಕಡೇಪಕ್ಷ ಇಬ್ಬರು ವ್ಯಕ್ತಿಗಳು ಬೇಕಾಗುತ್ತದೆ. ಗರಿಷ್ಠ ಸಂಖ್ಯೆಯ ಪಾಲುದಾರರೆಂದರೆ, ಸಾಮಾನ್ಯ ಸ್ವರೂಪದ ವ್ಯವಹಾರವಾದರೆ ೨೦ಕ್ಕೆ ಮತ್ತು ಬ್ಯಾಂಕಿಂಗ್ ವ್ಯವಹಾರವಾದರೆ ೧೦ಕ್ಕೆ ಸೀಮಿತವಾಗಿರುತ್ತದೆ.

೫.ಲಾಭ ಹಂಚಿಕೊಳ್ಳುವಿಕೆ: ಲಾಭ ಮಾಡುವುದು ಮತ್ತು ಅದನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳುವುದು ಪಾಲುದಾರರ ನಡುವಿನ ಒಪ್ಪಂದವಾಗಿರುತ್ತದೆ. ಪಾಲುದಾರರು ಒಪ್ಪಂದದ ಪ್ರಮಾಣದಲ್ಲಿ ಲಾಭವನ್ನು ಹಂಚಿಕೊಳ್ಳುತ್ತಾರೆ.

೬.ನಿರ್ವಹಣೆ: ಪಾಲುದಾರಿಕೆ ವ್ಯವಹಾರ ಎಲ್ಲ ಪಾಲುದಾರದಿಂದ ಅಥವಾ ಎಲ್ಲರ ಪರವಾಗಿ ಒಬ್ಬ ಅಥವಾ ಹಲವರಿಂದ ನಡೆಯುತ್ತದೆ.

೭.ಅಪರಿಮಿತ ಹೊಣೆಗಾರಿಕೆ: ಪಾಲುದಾರರ ಹೊಣೆಗಾರಿಕೆ ಅಪರಿಮಿತವಾಗಿರುತ್ತದೆ. ಒಂದು ವೇಳೆ ಸಂಸ್ಥೆ ತನ್ನ ಸಾಲವನ್ನು ತೀರಿಸದಿದ್ದರೆ, ಪ್ರತೀ ಪಾಲುದಾರನೂ ಅದನ್ನು ತನ್ನ ವೈಯಕ್ತಿಕ ಸ್ವತ್ತಿನಿಂದ ಪಾವತಿ ಮಾಡಲು ಹೊಣೆಗಾರನಾಗಿರುತ್ತಾನೆ.

೮.ವರ್ಗಾವಣೆ ಮಾಡಲಾಗದ ಹಿತಾಸಕ್ತಿ: ಇತರ ಅನುಮತಿಯಿಲ್ಲದೆ ಒಬ್ಬ ಪಾಲುದಾರ, ಸಂಸ್ಥೆಯ ಬಗೆಗಿನ ತನ್ನ ಹಿತಾಸಕ್ತಿಯನ್ನು ಹೊರಗಿನವರಿಗೆ ವರ್ಗಾವಣೆ ಮಾಡುವಂತಿಲ್ಲ.

೯.ಜಂಟಿ ಮಾಲೀಕತ್ವ: ಪ್ರತಿ ಪಾಲುದಾರನೂ ಸಂಸ್ಥೆಯ ಸ್ವತ್ತಿನ ಜಂಟಿ ಮಾಲೀಕನಾಗಿರುತ್ತಾನೆ. ಆದ್ದರಿಂದ, ಕಾನೂನಿನ ದೃಷ್ಟಿಯಲ್ಲಿ ಸಂಸ್ಥೆ ಮತ್ತು ಪಾಲುದಾರ, ಇಬ್ಬರನ್ನೂ ಒಂದೇ ಎಂದು ಪರಿಗಣಿಸಲಾಗುತ್ತದೆ. ಪಾಲುದಾರಿಕೆಗೆ, ಅದನ್ನು ರೂಪಿಸಿದ ಪಾಲುದಾರರನ್ನು ಬಿಟ್ಟು ಪ್ರತ್ಯೇಕ ಅಸ್ತಿತ್ವವಿಲ್ಲ.

೧೦.ಒಕ್ಕೂಟ ಭಾವನೆ: ಪಾಲುದಾರಿಕೆಯ ಸತ್ವ ಸಹಕಾರ ಭಾವನೆಯನ್ನು ಆಧರಿಸುತ್ತದೆ. ಅದರಿಂದ ಪಾಲುದಾರರಲ್ಲಿ ಪರಸ್ಪರ ನಂಬಿಕೆ ಮತ್ತು ಪರಸ್ಪರ ನಿಯಂತ್ರಣ ಬೇಕಾಗುತ್ತದೆ.

ಪಾಲುಗಾರಿಕೆಯನ್ನು ದಸ್ತಾವೇಜಿನ ಮುಖಾಂತರ ಮಾಡಿಕೊಳ್ಳುವ ಅವಶ್ಯಕತೆ ಇದೆಯೇ ?
ಸಾಮಾನ್ಯವಾಗಿ ಹೌದು, ಕರ್ನಾಟಕ ಮುದ್ರಾಂಕ ಕಾಯಿದ, 1957 ರ ಷಡ್ಯೂಲ್‌ನ ಆರ್ಟಿಕಲ್ 40ರಲ್ಲಿ ವಿಧಿಸಿದಂತೆ ಪಾಲುಗಾರಿಕೆಯ ಬಂಡವಾಳವು ರೂ.5000-00 ಗಳನ್ನು ಮೀರದಿದಲ್ಲಿ ರೂ.100-00ರ
ಛಾಪಾ ಕಾಗದದ ಮೇಲೂ, ರೂ.5000-00 ಮೀರಿದಲ್ಲಿ ರೂ 500ರ ಭಾಪಾ ಕಾಗದದ ಮೇಲೂ ಬರೆಯತಕ್ಕದ್ದು.

ಪಾಲುಗಾರಿಕೆ ಸಂಸ್ಥೆಯನ್ನು ನೋಂದಣಿ ಮಾಡಿಸುವುದು ಕಡ್ಡಾಯವ ಇಲ್ಲ. ಅದರ ನೋಂದಣಿ ಮಾಡಿಸದಿದ್ದಲ್ಲಿ ಈ ಕೆಳಕಂಡ ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ:-
(ಅ) ಒಬ ಪಾಲುದಾರ ಇನ್ನೊಬ್ಬನ ವಿರುದ್ಧ ವಾಗಲೀ ಅಥವಾ ಪಾಲುಗಾರಿಕೆಯ ಸಂಸ್ಥೆಯ ವಿರುದ್ಧ ವಾಗಲೀ ತನ್ನ ಹಕ್ಕನ್ನು ಸಮರ್ಥಿಸಲು ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವುದು ಸಾಧ್ಯವಿಲ್ಲ.

(ಆ) ಪಾಲುಗಾರಿಕೆ ಸಂಸ್ಥೆಯು ತನ್ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಕ್ಕು ಸಾಧಿಸಲು ಯಾವುದೇ ಮೂರನೇ ವ್ಯಕ್ತಿಯ ವಿರುದ್ಧ ವ್ಯಾಜ್ಯ ಹೂಡಲು ಸಾಧ್ಯವಿಲ್ಲ (1932ರ ಭಾರತೀಯ ಪಾಲುಗಾರಿಕ ಕಾಯಿದೆ ವಿವಿ-69).

ಪಾಲುಗಾರಿಕೆ ಸಂಸ್ಥೆಯನ್ನು ನೋಂದಾಯಿಸುವ ಅಧಿಕಾರಿ ಯಾರು ಮತ್ತು ಪಾಲುಗಾರಿಕೆಯ ಸಂಸ್ಥೆಯ ನೋಂದಾವಣಿಗಾಗಿ ಯಾರಿಗೆ ಯಾವ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು?

ಜಿಲ್ಲಾ ನೋಂದಣಾಧಿಕಾರಿಗಳು ಆಯಾ ಜಿಲ್ಲೆಗಳ ಪಾಲುಗಾರಿಕ ಸಂಸ್ಥೆಯ ರಿಜಿಸ್ಟ್ರಾರ್‌ ಆಗಿರುತ್ತಾರೆ ಮತ್ತು ಅವರಿಗೆ ಪ್ರಪತ್ರ ಸಂಖ್ಯೆ | ರಲ್ಲಿ ಪಾಲುಗಾರಿಕೆ ಸಂಸೆಯ ನೋಂದಾವಣೆಗಾಗಿ ಅರ್ಜಿ ಸಲ್ಲಿಸಬೇಕು (1932ರ ಭಾರತೀಯ ಪಾಲುಗಾರಿಕ ಕಾಯಿದೆ ವಿಧಿ 57 ಮತ್ತು 58).

ನೋ೦ದಾವಣಿ ಮಾಡಿದ ಬಗ್ಗೆ ದೃಢೀಕರಣವನ್ನೇನಾದರೂ ನೀಡಲಾಗುವುದೇ ?

ನೋಂದಾವಣೆ ಮಾಡಿದ್ದಕ್ಕಾಗಿ ನಿಗದಿಪಡಿಸಿದಂತೆ ಪತ್ರ “ಸಿ” ಯಲ್ಲಿ ಸ್ವೀಕೃತಿಯನ್ನು ನೀಡಲಾಗುವುದು (ನಿಯಮ 10),

ಪಾಲುಗಾರಿಕೆಗೆ ಯಾವುದೇ ಹೆಸರನ್ನಾದರೂ ಇಡಬಹುದೇ?

Crown, Emperor, Empress, Imperial, King, Queen, Royal ಅಥವಾ ಸರ್ಕಾರದಿಂದ ಮಾನ್ಯತೆ ಪಡೆದಿದೆ ಎಂಬ ಅಭಿಪ್ರಾಯ ಬರುವಂತಹ ಹೆಸರುಗಳನ್ನು ಹೊರತುಪಡಿಸಿ ಬೇರೆ ಯಾವ ಹೆಸರನ್ನಾದರೂ ಇಡಬಹುದು (1932ರ ಭಾರತೀಯ ಪಾಲುಗಾರಿಕೆ ಕಾಯಿದೆ ವಿಧಿ 58).

ಪಾಲುಗಾರಿಕೆ ಸಂಸ್ಥೆಯ ಬಗ್ಗೆ ಇನ್ನಿತರ ಯಾವ ನೋಂದಾವಣೆಯನ್ನು ಮಾಡಬಹುದು ಮತ್ತು ಅನುಸರಿಸಬಹುದಾದ ಕ್ರಮವೇನು?

ಪಾಲುಗಾರಿಕೆ ಸಂಸ್ಥೆಯ ಹೆಸರಿನ, ವ್ಯಾಪಾರ ಸ್ಥಳಗಳ ಬದಲಾವಣೆಗಳು, ರಾಖೆಗಳ ಪ್ರಾರಂಭ ಮತ್ತು ಮುಕ್ತಾಯ, ಪಾಲುದಾರರ ಹೆಸರು ಮತ್ತು ವಿಳಾಸದ ಬದಲಾವಣೆ, ಮೈನರ್ ಪಾಲುದಾರನ ಖುಲಾಸೆ ಮತ್ತುಪಾಲುಗಾರಿಕೆಯ ವಿಘಟನೆಗಳನ್ನು ನೋಂದಾಯಿಸಬಹುದು (1932ರ ಭಾರತೀಯ ಪಾಲುಗಾರಿಕೆ ಕಾಯಿದೆ ವಿಧಿ 60, 61, 62 ಮತ್ತು 63).

ನೋಂದಣಾಧಿಕಾರಿಗಳಲ್ಲಿರುವ ದಾಖಲೆಗಳನ್ನು ಯಾರು ಬೇಕಾದರೂ ಪರಿಶೀಲಿಸಬಹುದೇ ಮತ್ತು ದೃಢೀಕೃತ ನಕಲನ್ನು ಪಡೆಯಬಹುದೇ ?

ನಿಗದಿಪಡಿಸಿದ ಶುಲ್ಕವನ್ನು ನೀಡಿ ನೋಂದಣಾಧಿಕಾರಿಗಳಲ್ಲಿರುವ ಎಲ್ಲಾ ವರದಿ, ತಿಳುವಳಿಕೆಗಳನ್ನು ಸಾರ್ವಜನಿಕರು ಪರಿಶೀಲಿಸಬಹುದು ಮತ್ತು ದೃಢೀಕೃತ ನಕಲನ್ನು ಪಡೆಯಬಹುದು (1932ರ ಭಾರತೀಯ
ಪಾಲುಗಾರಿಕೆ ಕಾಯಿದೆ ವಿಧಿ 66 ಮತ್ತು 67).

ಪಾಲುಗಾರಿಕೆ ಸಂಸ್ಥೆಯ ನೋಂದಾವಣೆ ಅರ್ಜಿಯಲ್ಲಿ ಯಾವ ವಿವರಗಳಿರಬೇಕು?
ಅರ್ಜಿಯಲ್ಲಿ ಈ ಕೆಳಕಂಡ ಅಂಶಗಳು ಇರಬೇಕು.

(ಅ) ಪಾಲುಗಾರಿಕೆಯ ಸಂಸ್ಥೆಯ ಹೆಸರು
(ಆ) ಮುಖ್ಯ ವ್ಯಾಪಾರ ಸಳ, ವಿಳಾಸ
(ಇ) ವ್ಯಾಪಾರಗಳನ್ನು ನಡೆಸಬಹುದಾದ ಇತರೆ ಸ್ಥಳಗಳು
(ಈ) ಪ್ರತಿಯೊಬ್ಬ ಪಾಲುದಾರನು ಪಾಲುದಾರಿಕೆಯನ್ನು ಸೇರಿದ ದಿನಾಂಕ
(೮) ಪ್ರತಿಯೊಬ್ಬ ಪಾಲುದಾರರ ಹೆಸರು ಮತ್ತು ಖಾಯಂ ವಿಳಾಸ
(ಊ) ಪಾಲುಗಾರಿಕೆ ಅವಧಿ

ಎಲ್ಲ ಪಾಲುದಾರರು ಅಥವಾ ಅವರುಗಳ ಅಧಿಕೃತ ಪ್ರತಿನಿಧಿಗಳು ಅರ್ಜಿಗೆ ಸಹಿ ಮಾಡಿರಬೇಕು ಮತ್ತು ಅವರಿಗೆ ಪತ್ರಾಂಕಿತ ಅಧಿಕಾರಿ, ವಕೀಲರು, ಅಟಾರ್ನಿ, ವೀಡರ್‌ ಅಥವಾ ನೋಂದಾಯಿತ
ಅಕೌಂಟೆಂಟ್‌ಗಳು ಸಾಕ್ಷಿ ಹಾಕಿರಬೇಕು (ಕರ್ನಾಟಕ ಪಾಲುಗಾರಿಕ ಸಂಸ್ಥೆಗಳ ನೋಂದಾವಣಿ ನಿಯಮ 1954ರ ನಿಯಮ 3).

ಪಾಲುಗಾರಿಕೆ ಪತ್ರವನ್ನು ನೋಂದಾಯಿಸುವುದಕ್ಕೂ ಪಾಲುಗಾರಿಕೆ ಸಂಸ್ಥೆಯನ್ನು ನೋಂದಾಯಿಸುವುದಕ್ಕೂ ಏನು ವ್ಯತ್ಯಾಸ ?

ಪಾಲುಗಾರಿಕೆ ಪತ್ರವನ್ನು ನಿಗದಿಪಡಿಸಿದ ಮುದ್ರಾಂಕ ಪತ್ರದ (ಭಾಪಾ ಕಾಗದದ) ಮೇಲೆ ಬರೆದು ಇತರೆ ಯಾವುದೇ ಪತ್ರಗಳನ್ನು ನೋಂದಾಯಿಸುವ ರೀತಿಯಲ್ಲಿ ಉಪನೋಂದಣಿ ಕಛೇರಿಯಲ್ಲಿ
ನೋಂದಾಯಿಸಬಹುದು. ಇದರಿಂದ ಪಾಲುಗಾರಿಕೆ ಪತ್ರ ಮಾತ್ರ ನೋಂದಾವಣೆ ಅದಂತಾಗುತ್ತದೆ. ಆದರೆ, ಈ ರೀತಿ ನೋಂದಾಯಿಸಿದ ಮಾತ್ರಕ್ಕೆ ಪಾಲುಗಾರಿಕೆ ಸಂಸೆಯನ್ನು ನೋಂದಾಯಿಸಿದಂತೆ ಆಗುವುದಿಲ್ಲ.
ಪಾಲುಗಾರಿಕ ಸ೦ಸ ಯನ್ನು ನೋಂದಾಯಿಸಬೇಕಾದಲ್ಲಿ 1932ರ ಭಾರತೀಯ ಪಾಲುಗಾರಿಕೆ ಕಾಯಿದೆ ಧಿ 59ರಂತ ಮೇಲೆ ತಿಳಿಸಿದ ಕ್ರಮವನ್ನು ಅನುಸರಿಸಿ ನೋಂದಾಯಿಸಿದಲ್ಲಿ ಮಾತ್ರ ಸ೦ಸೆ ಯು
ನೋ೦ದಾವಣೆಯಾಗುತ್ತದೆ ಮತ್ತು ಈ ಕಾಯಿದೆಯಡಿಯಲ್ಲಿ ಇರುವ ಅವಕಾರಗಳು ಲಭ್ಯವಾಗುತ್ತವೆ.

ಒಂದು ಪಾಲುಗಾರಿಕೆ ಸಂಸ್ಥೆಯು ಇನ್ನೊಂದು ಪಾಲುಗಾರಿಕೆ ಸಂಸ್ಥೆಯ ಪಾಲುದಾರರಾಗಬಹುದೇ ಹಾಗೂ ಒಂದು ಕಂಪೆನಿಯು ಪಾಲುಗಾರಿಕೆ ಸಂಸ್ಥೆಯ ಪಾಲುದಾರರಾಗಬಹುದೇ ?

ಒಂದು ಪಾಲುಗಾರಿಕ ಸಂಸ್ಥೆಯು ಇನ್ನೊಂದು ಪಾಲುಗಾರಿಕೆ ಸಂಸ್ಥೆಯ ಪಾಲುದಾರರಾಗಲು ಸಾಧ್ಯವಿಲ್ಲ. ಆದರೆ ಒಂದು ಕಂಪನಿಯು ಒಂದು ಪಾಲುಗಾರಿಕೆ ಸಂಸ್ಥೆಯ ಪಾಲುದಾರನಾಗಬಹುದು.

Related News

spot_img

Revenue Alerts

spot_img

News

spot_img