19.9 C
Bengaluru
Friday, November 22, 2024

ಅಡಮಾನ ಸಾಲ ಎಂದರೇನು? ಗೃಹ ಸಾಲದಿಂದ ಇದು ಹೇಗೆ ಭಿನ್ನವಾಗಿದೆ? ವಿವರಗಳು ಇಲ್ಲಿವ

Mortgage# loan# and# home# loan#, which# one# is# better #severa#l types# loans# available.

Mortgage Loan vs Home Loan: ಅಡಮಾನ ಸಾಲ ಮತ್ತು ಗೃಹ ಸಾಲ, ವ್ಯತ್ಯಾಸವನ್ನು ತಿಳಿಯಿರಿ ಮತ್ತು ಯಾವುದು ಉತ್ತಮ ? ನಮ್ಮಲ್ಲಿ ಹಲವಾರು ರೀತಿಯ ಸಾಲಗಳು ಲಭ್ಯವಿವೆ. ಸುರಕ್ಷಿತ ಸಾಲ ಮತ್ತು ಅಸುರಕ್ಷಿತ ಸಾಲ ಎಂದು ಎರಡು ವರ್ಗೀಕರಣಗಳಿವೆ.ಸಾಲ ಪಡೆಯುವ ಮೊದಲು ಯಾವ ವಿಧದ ಸಾಲ ಪಡೆಯಬೇಕೆಂದು ನಿರ್ಧರಿಸಬೇಕು. ಏಕೆಂದರೆ ಪ್ರತಿಯೊಂದು ಸಾಲಕ್ಕೂ ಬಡ್ಡಿದರ ಹಾಗೂ ಇತರೆ ಸೌಲಭ್ಯಗಳಲ್ಲಿ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಗೃಹಸಾಲ ಮತ್ತು ಅಡಮಾನ ಸಾಲವನ್ನು ಬಹುತೇಕರು ಒಂದೇ ಅರ್ಥದಲ್ಲಿ ಬಳಸುತ್ತಾರೆ. ವ್ಯಕ್ತಿಯ ಆದಾಯ ಮತ್ತು ಸಾಲದ ಇತಿಹಾಸ ಪರಿಗಣಿಸಿ ಯಾವುದೇ ಅಡಮಾನ ಪಡೆಯದೇ ಬ್ಯಾಂಕ್ ನೀಡುವ ಸಾಲವಾಗಿರುತ್ತದೆ. ಇನ್ನು, ಸೆಕ್ಯೂರ್ಡ್ ಲೋನ್ ಅಥವಾ ಭದ್ರತಾ ಸಾಲದಲ್ಲಿ ನಾವು ಯಾವುದಾದರೂ ಆಸ್ತಿಗಳನ್ನು ಅಡಮಾನವಾಗಿ ಇಟ್ಟು ಪಡೆಯುವ ಸಾಲವಾಗಿದೆ.

ಗೃಹ ಸಾಲವೆಂದರೇನು?
ಗೃಹ ಸಾಲವೆಂದರೆ ಸಾಲಗಾರನು ಮನೆ ನಿರ್ಮಾಣಕ್ಕೆ ಅಥವಾ ಮನೆ ಖರೀದಿಗೆ ಸಾಲದಾತನಿಂದ ಹಣ ಪಡೆದುಕೊಳ್ಳುತ್ತಾನೆ. ಮನೆ ನವೀಕರಣಕ್ಕೆ ಅಥವಾ ಜಮೀನು ಖರೀದಿಗೂ ಈ ಸಾಲ ಪಡೆಯಬಹುದು. ಸಾಲದ ಮೂಲಕ ಖರೀದಿಸುವ ಮನೆಯನ್ನು ಆಧಾರವಾಗಿಸಿ ಇಲ್ಲಿ ಸಾಲ ನೀಡಲಾಗುತ್ತದೆ. ಸಾಲವನ್ನು ಪೂರ್ತಿಯಾಗಿ ಮರುಪಾವತಿಸಿದಾಗ ಮನೆಯ ಸಂಪೂರ್ಣ ಮಾಲೀಕತ್ವ ಸಾಲ ಪಡೆದುಕೊಂಡಿದ್ದ ವ್ಯಕ್ತಿಗೆ ಲಭಿಸುತ್ತದೆ. ಒಂದು ವೇಳೆ ಸಾಲಗಾರ ಸಾಲವನ್ನು ಮರುಪಾವತಿಸದಿದ್ದರೆ ಅಥವಾ ದಿವಾಳಿಯಾದರೆ ಬ್ಯಾಂಕ್‌ ಆ ಮನೆಯನ್ನು ಹರಾಜು ಹಾಕಿ ಉಳಿದ ಮೊತ್ತವನ್ನು ವಸೂಲಿ ಮಾಡಿಕೊಳ್ಳುತ್ತದೆ. ಲೋನ್‌ ಟು ವ್ಯಾಲ್ಯೂ ಅಥವಾ ಗೃಹಸಾಲದ ಮೂಲಕ ಪಡೆಯುವ ಮೊತ್ತ ಶೇ.85ರಿಂದ 90ರಷ್ಟಿರುತ್ತದೆ. ಈ ಅಂಶ ಗೃಹ ಸಾಲ ಮತ್ತು ಅಡಮಾನ ಸಾಲದ ನಡುವಿನ ಅತ್ಯಂತ ಪ್ರಮುಖ ವ್ಯತ್ಯಾಸಗಳಲ್ಲಿ ಒಂದಾಗಿದೆ.ಗೃಹ ಸಾಲ ಮರುಪಾವತಿಯ ಅವಧಿ ಕೆಲವೊಮ್ಮೆ 25 ವರ್ಷಗಳವರೆಗೂ ಹೋಗಬಹುದು.

ಅಡಮಾನ ಸಾಲ (Mortgage Loan) ಎಂದರೆ ಏನು?

ಈಗಾಗಲೇ ಹೇಳಿದಂತೆ ಅಡಮಾನ ಸಾಲವು ನಾವು ಭದ್ರತೆಯಾಗಿ ತೆಗೆದುಕೊಳ್ಳುವ ಸಾಲವಾಗಿದೆ. ಇಲ್ಲಿ ನಾವು ಅಡಮಾನವಾಗಿ ಪಡೆಯುವ ಸಾಲಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಇಡಬೇಕಾಗಬಹುದು. ಇಲ್ಲಿ ಆಸ್ತಿ ಯಾವುದಾದರೂ ಆಗಿರಬಹುದು. ಅದು ಮನೆ ಪತ್ರ, ಭೂಮಿ ಪತ್ರಗಳು ಅಥವಾ ನಮ್ಮ ವಿವಿಧ ಹೂಡಿಕೆ ಯೋಜನೆಗಳ ಪತ್ರವಾಗಿರಬಹುದು. ಸಾಲವನ್ನು ಮರುಪಾವತಿಸಲು ಸಾಲಗಾರ ನೀಡಿದ ಖಾತರಿಗಳು ಇವು.ಅಡಮಾನ ಸಾಲವನ್ನು ಸಾಲಗಾರ ಯಾವುದೇ ಉದ್ದೇಶಕ್ಕಾಗಿ ಬಳಸಬಹುದು. ಆದಾಗ್ಯೂ, ಗೃಹ ಸಾಲಕ್ಕೂ ಅಡಮಾನ ಸಾಲಕ್ಕೂ ಒಂದು ಹೋಲಿಕೆ ಇದೆ. ಅದೇನೆಂದರೆ, ಅಡಮಾನ ಸಾಲದಲ್ಲೂ ಮರುಪಾವತಿ ಪೂರ್ಣಗೊಳ್ಳುವವರೆಗೆ ಸಾಲದಾತನು ಸಾಲಗಾರನ ಆಸ್ತಿಯ ಮಾಲೀಕತ್ವವನ್ನು ತೆಗೆದುಕೊಳ್ಳುತ್ತಾನೆ.

ಅಡಮಾನ ಸಾಲ ಎನ್ನುವುದು ನಾವು ಏನನ್ನಾದರೂ ಭದ್ರತೆಯಾಗಿ ಇಟ್ಟು ಪಡೆಯುವ ಸಾಲವಾಗಿರುತ್ತದೆ. ಇಲ್ಲಿ ನಾವು ಪಡೆಯುವ ಸಾಲಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಅಡಮಾನವಾಗಿ ಇಡಬೇಕಾಗಬಹುದು. ಇಲ್ಲಿ ಆಸ್ತಿ ಯಾವುದಾದರೂ ಆಗಬಹುದು. ಮನೆಯ ಪತ್ರ ಆಗಬಹುದು, ಜಮೀನು ದಾಖಲೆಯಾಗಬಹುದು, ಅಥವಾ ನಮ್ಮ ವಿವಿಧ ಹೂಡಿಕೆ ಯೋಜನೆಗಳ ಪತ್ರವಾಗಬಹುದು. ಇವು ಸಾಲ ತೀರಿಸಲು ಸಾಲಗಾರ ಒದಗಿಸುವ ಗ್ಯಾರಂಟಿ ಆಗಿರುತ್ತದೆ.ಅಡಮಾನ ಸಾಲದಲ್ಲಿ ವಿವಿಧ ಬಗೆಗಳಿರುತ್ತವೆ. ಸಿಂಪಲ್ ಮಾರ್ಟ್​ಗೇಜ್, ಯೂಜೀಫ್ರಕ್ಚರಿ ಮಾರ್ಟ್​ಗೇಜ್, ಇಂಗ್ಲೀಷ್ ಮಾರ್ಟ್​ಗೇಜ್, ಸಬ್ ಮಾರ್ಟ್​ಗೇಜ್ ಎಂದಿರುತ್ತವೆ. ಆಸ್ತಿಪತ್ರ ಅಡಮಾನ ಇಟ್ಟು ಪಡೆಯುವ ಮಾರ್ಟ್​ಗೇಜ್ ಲೋನ್​ನ ಹಣವನ್ನು ಮನೆ ಖರೀದಿಸಲು ಅಥವಾ ಮನೆ ಕಟ್ಟಲು ಬಳಸಬಹುದು.

ಗೃಹ ಸಾಲ ಮತ್ತು ಅಡಮಾನ ಸಾಲದ ನಡುವಿನ ವ್ಯತ್ಯಾಸವೇನು?

*ಗೃಹ ಸಾಲದ ಹಣವನ್ನು ಮನೆ ಖರೀದಿಸಲು ಅಥವಾ ಮನೆ ನಿರ್ಮಿಸಲು ಮಾತ್ರ ಬಳಸಬಹುದು. ಆದಾಗ್ಯೂ, ಅಡಮಾನ ಸಾಲವನ್ನು ಇತರ ಉದ್ದೇಶಗಳಿಗಾಗಿಯೂ ಬಳಸಬಹುದು.

*ಗೃಹ ಸಾಲದಲ್ಲಿ ನಾವು ಅಡಮಾನ ಇಡುವ ಆಸ್ತಿಪತ್ರದ ಶೇ. 90ರಷ್ಟು ಮಾರುಕಟ್ಟೆ ಮೌಲ್ಯದಷ್ಟು ಹಣವು ಸಾಲವಾಗಿ ಪಡೆಯಬಹುದು. ಆದರೆ, ಅಡಮಾನ ಸಾಲದಲ್ಲಿ ಆಸ್ತಿ ಮೌಲ್ಯದ ಶೇ. 60-70ರಷ್ಟು ಭಾಗದ ಹಣವನ್ನು ಮಾತ್ರ ಸಾಲವಾಗಿ ಪಡೆಯಬಹುದು.

*ಗೃಹ ಸಾಲದ ಹಣವನ್ನು ಮನೆ ಖರೀದಿಸಲು ಅಥವಾ ಮನೆ ನಿರ್ಮಿಸಲು ಮಾತ್ರ ಬಳಸಬಹುದು. ಆದಾಗ್ಯೂ, ಅಡಮಾನ ಸಾಲವನ್ನು ಇತರ ಉದ್ದೇಶಗಳಿಗಾಗಿಯೂ ಬಳಸಬಹುದು.

*ಗೃಹ ಸಾಲದಲ್ಲಿ ಮರುಪಾವತಿಗೆ ಸಾಮಾನ್ಯವಾಗಿ 15 ವರ್ಷ ಕಾಲಮಿತಿ ಇರುತ್ತದೆ. ಕೆಲ ಬ್ಯಾಂಕುಗಳು 25 ವರ್ಷದವರೆಗೆ ಇಎಂಐ ಕಟ್ಟುವ ಅವಕಾಶ ಕೊಡಬಹುದು.

*ಗೃಹ ಸಾಲ ಪಡೆಯುವಾಗ ನಾವು ಒಟ್ಟು ಸಾಲ ಮೊತ್ತದ ಶೇ. 1.5ರಷ್ಟು ಹಣವನ್ನು ಪ್ರೋಸಸಿಂಗ್ ಫೀಸ್ ಆಗಿ ಪಾವತಿಸಬೇಕಾಗಬಹುದು. ಆದರೆ, ಅಡಮಾನ ಸಾಲದಲ್ಲಿ ಪ್ರೋಸಸಿಂಗ್ ಶುಲ್ಕ ಸಾಮಾನ್ಯವಾಗಿ ಶೆ. 0.8-1.2ರಷ್ಟಿರುತ್ತದೆ.

ಭಾರತದಲ್ಲಿ ಅಡಮಾನ ಸಾಲಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳು

ಗೃಹ ಸಾಲ ಅಥವಾ ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲೆಗಳ ಸಂಪೂರ್ಣ ಪಟ್ಟಿಯನ್ನು ಕೆಳಗೆ ನೀಡಲಾಗಿದೆ

* ID ಪುರಾವೆ (PAN ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ)
* ವಿಳಾಸ ಪುರಾವೆ (ವಿದ್ಯುತ್ ಬಿಲ್, ಮನೆ ತೆರಿಗೆ ಬಿಲ್, ನೀರಿನ ಬಿಲ್, ಪಾಸ್‌ಪೋರ್ಟ್ ಅಥವಾ ಯಾವುದೇ ಇತರ ಐಡಿ ಪುರಾವೆ)
* ಆದಾಯ ಪುರಾವೆ ದಾಖಲೆಗಳು
* ಬ್ಯಾಂಕ್ ಹೇಳಿಕೆಗಳು
* ಆಸ್ತಿ ದಾಖಲೆಗಳು
* ಆದಾಯ ತೆರಿಗೆ ರಿಟರ್ನ್ಸ್

Related News

spot_img

Revenue Alerts

spot_img

News

spot_img