ಬೆಂಗಳೂರು, ಡಿ. 22: ಎನ್.ಪಿ.ಎಸ್ ನೌಕರರ ಸಂಘದ ಬೇಡಿಕೆಯಂತೆ ಹೊಸ ಪಿಂಚಣಿ ಯೋಜನೆಯನ್ನು ಕೈ ಬಿಟ್ಟು, ಮತ್ತೆ ಹಳೆಯ ಯೋಜನೆಯನ್ನು ಜಾರಿಗೆ ತಂದರೆ ಸರ್ಕಾರಕ್ಕೆ ಹೊರೆಯಾಗಲಿದೆ. ಹಳೆ ಪಿಂಚಣಿ ಯೋಜನೆಯಲ್ಲಿ ನೌಕರರಿಗೆ ಸಾಕಷ್ಟು ಪ್ರಯೋಜನವಿದೆ. ಓಪಿಎಸ್ ಜಾರಿಗೆ ತಂದರೆ ನೌಕರರು ಹೂಡಿಕೆ ಮಾಡಬೇಕಿರುವುದಿಲ್ಲ. ಆದರೆ, ಒಪಿಎಸ್ ಜಾರಿಗೆ ಬಂದರೆ ಸರ್ಕಾರಕ್ಕೆ ದುಪ್ಪಟ್ಟು ಹೊರೆಯಾಗಲಿದೆ. ಈಗಾಗಲೇ ಹೂಡಿಕೆ ಮಾಡಿರುವ ಮೊತ್ತದಷ್ಟನ್ನೇ ಸರ್ಕಾರ ಮತ್ತೆ ನೀಡಬೇಕಾಗುತ್ತದೆ. ಇದು ಸರ್ಕಾರ ತನ್ನ ಬೊಕ್ಕಸಕ್ಕೆ ಕೈ ಹಾಕಬೇಕಾಗುತ್ತದೆ. ಈಗಾಗಲೇ ಸರ್ಕಾರ ಹೇಳಿರುವಂತೆ ವೇತನಕ್ಕಿಂತ ಹೆಚ್ಚು ಪಿಂಚಣಿ ಬಿಲ್ಗೆ ವೆಚ್ಚವಾಗುತ್ತಿದೆ. ಹಳೆ ಪಿಂಚಣಿ ಯೋಜನೆ ಜಾರಿ ಆದರೆ, ಖರ್ಚು ಹೆಚ್ಚಾಗುತ್ತದೆ. ಈ ಬಗ್ಗೆ ವಿವರಣೆಯನ್ನೂ ಕೂಡ ನೀಡಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಬೇಡಿಕೆಯನ್ನು ಈಡೇರಿಸಿದ್ದಲ್ಲಿ ಈ ಯೋಜನೆ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಲಿದೆ ಎಂದು ಅಭಿಪ್ರಾಯಿಸಲಾಗಿದೆ. ಸರ್ಕಾರಕ್ಕೆ ಹೊರೆಯಾಗುವ ಮೊತ್ತದ ಬಗ್ಗೆ ಮಾಹಿತಿ ಈ ಕೆಳೆಗೆ ನೀಡಲಾಗಿದೆ.
NPS ಯೋಜನೆ ದಿನಾಂಕ:01.04.2006 ರಲ್ಲಿ ಇದ್ದ ಮಾದರಿಯಲ್ಲಿ ಈಗ ಇಲ್ಲ. ಸರ್ಕಾರದ ವಂತಿಗೆ + ನೌಕರರ ವಂತಿಗೆ ಕ್ರಮವಾಗಿ ಶೇ.10 ಇದ್ದದ್ದು, ಪುಸ್ತುತ ಕ್ರಮವಾಗಿ ಶೇ.14, 10 ರಷ್ಟಾಗಿದೆ. ಮರಣ ಮತ್ತು ನಿವೃತ್ತಿ ಉಪಧನವನ್ನು ಮರುಸ್ಥಾಪಿಸಲಾಗಿದೆ. ಅಲ್ಲದೇ, ಮರಣ ಹೊಂದಿರುವ ನೌಕರರ ಅವಲಂಬಿತರಿಗೆ OPS ನೌಕರರಂತೆ ಕುಟುಂಬ ಪಿಂಚಣಿ ಜಾರಿಗೊಳಿಸಲಾಗಿದೆ. NPS ವಂತಿಗೆ ಹಣವನ್ನು ಕ್ರಮವಾಗಿ ಸರ್ಕಾರ ಮತ್ತು ಅವಲಂಬಿತರಿಗೆ ಹಿಂದಿರುಗಿಸಲಾಗುತ್ತಿದೆ. ಪಶ್ಚಿಮ ಬಂಗಾಳ ಈ ಯೋಜನೆಯನ್ನು ಜಾರಿಗೆ ತಂದಿರುವುದಿಲ್ಲ. ಜಾರಿಗೆ ತಂದಿದ್ದ, ನಾಲ್ಕು, ರಾಜ್ಯ ಸರ್ಕಾರಗಳಾದ ರಾಜಸ್ಥಾನ, ಚತ್ತೀಸಗಡ, ಜಾರ್ಖಂಡ್ ಮತ್ತು ಪಂಜಾಬ್ ಈ ಯೋಜನೆಯನ್ನು ರದ್ದುಗೊಳಿಸಿವೆ. ಆದರೆ ಈಗ ಕರ್ನಾಟಕ ರಾಜ್ಯದಲ್ಲಿ ಹೋರಾಟ ಹೆಚ್ಚಾಗಿದೆ. ಹಾಗೊಂದು ವೇಳೆ ಮುಂಬರುವ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದರೆ, ಮತ್ತೆ ಸರ್ಕಾರವೇ ವೆಚ್ಚವನ್ನು ಭರಿಸಬೇಕಾಗುತ್ತದೆ.
ರಾಜ್ಯ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸುವುದರಿಂದ ಆಗುವ ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನೆಗಳನ್ನು ಕೂ ವಿವರಿಸಲಾಗಿದೆ. ಅದರಂತೆ, 35-40 ವರ್ಷ ಪ್ರಾಮಾಣಿಕವಾಗಿ ಸರ್ಕಾರಿ ಸೇವೆ ಸಲ್ಲಿಸಿರುವ ನೌಕರರ ನಿವೃತ್ತಿ ಬದುಕಿಗೆ/ ಆಕಸ್ಮಿಕ ಮರಣ ಹೊಂದಿದ ನೌಕರರಿಗೆ ಸಂವಿಧಾನ ಬದ್ಧವಾಗಿ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡಲು ಸಹಕಾರಿಯಾಗುತ್ತದೆ. NPS ನೌಕರರ ಬಾಬ್ತು, ವಾರ್ಷಿಕವಾಗಿ 2500 ಕೋಟಿಗಳನ್ನು ಸರ್ಕಾರ ಹೆಚ್ಚುವರಿಯಾಗಿ ಟ್ರಸ್ಟ್‌ಗೆ ಪಾವತಿಸಬೇಕಾಗಿರುತ್ತದೆ. ಜೊತೆಗೆ ಪ್ರತಿ ವರ್ಷ 5 ಕೋಟಿಗಳ ಸೇವಾ ಶುಲ್ಕದೊಂದಿಗೆ NSDL ಗೆ ಪಾವತಿಸಬೇಕು.
ಸರ್ಕಾರದ ವಂತಿಗೆಯು ವಾರ್ಷಿಕ ಬಡ್ತಿ, ಮುಂಬಡ್ತಿ ಮತ್ತು ವೇತನ ಆಯೋಗದ ಪರಿಷ್ಕರಣೆಯೊಂದಿಗೆ ಪ್ರತಿವರ್ಷ ಹಚ್ಚಳಗೊಂಡು ವರ್ಷ ಕಳೆದಂತೆ ಅಧಿಕ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ.ಈ ಹಂತದಲ್ಲಿ NPS ಯೋಜನೆಯನ್ನು ರದ್ದುಗೊಳಿಸಿರುವುದರಿಂದ ಸರ್ಕಾರದ ವಂತಿಕೆ ರೂ.8728 ಕೋಟಿ ಮತ್ತು ನೌಕರರ ವಂತಿಕೆ 7150 ಕೋಟಿ ಒಟ್ಟು ಸುಮಾರು 17000 ಕೋಟಿ ಹಣ ತಕ್ಷಣಕ್ಕೆ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಲಭ್ಯವಾಗಲಿದೆ. ಈ ಮಾದರಿಯನ್ನು ರಾಜಸ್ಥಾನ ಚತ್ತೀಸಗಡ ರಾಜ್ಯ ಅಳವಡಿಸಿಕೊಂಡಿವೆ. ಪ್ರತಿ ತಿಂಗಳು ಸರ್ಕಾರದಿಂದ ನೇರವಾಗಿ ಪಾವತಿಸುವ ವಂತಿಕೆ ಸುಮಾರು ರೂ.2500 ಕೋಟಿ ಉಳಿತಾಯವಾಗುವುದರಿಂದ ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.