23.1 C
Bengaluru
Monday, October 7, 2024

ಭಾರತದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಇರುವ ನಿಯಮಗಳೇನು.

ಬೆಂಗಳೂರು, ಜೂ. 27 : ಕೋವಿಡ್ ಸಾಂಕ್ರಾಮಿಕ ರೋಗ ಮುಕ್ತಾಯಗೊಂಡಾಗಲಿಂದ ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಪ್ರತಿಯೊಬ್ಬರೂ ತಮ್ಮ ಉಳಿತಾಯದ ಮೊತ್ತವನ್ನು ಭೂಮಿಯ ಮೇಲೆ ಹೂಡಿಕೆ ಮಾಡಲು ಇಚ್ಛಿಸುತ್ತಿದ್ದಾರೆ. ಸ್ವಂತ ಮನೆಯ ಕನಸು ಕಾಣುತ್ತಿದ್ದವರು ಕೂಡ ಈಗ ನಿವೇಶನಗಳನ್ನು ಖರೀದಿಸುತ್ತಿದ್ದಾರೆ. ಈಗಾಗಲೇ ಸ್ವಂತ ಮನೆ ಉಳ್ಳವರು ಕೃಷಿ ಭೂಮಿಯನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಹೀಗೆ ಪ್ರತಿಯೊಬ್ಬರೂ ಭುಮಿಯನ್ನು ಖರೀದಿಸುವಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ.

ಹೀಗಿರುವಾಗ ಭಾರತದಲ್ಲಿ ಭೂಮಿ ಖರೀದಿಯ ಬಗ್ಗೆ ಸಾಕಷ್ಟು ನಿಯಮಗಳಿವೆ. ಅದರಲ್ಲೂ ಕೃಷಿ ಭೂಮಿಯನ್ನು ಖರೀದಿಸಲು ವಿಶೇಷವಾದ ನಿಯಮಗಳಿವೆ. ಭಾರತದ ಪ್ರತೀ ರಾಜ್ಯಕ್ಕೂ ಅದರದ್ದೇ ಆದ ನಿಯಮಗಳಿವೆ. ಕೃಷಿ ಭೂಮಿಯನ್ನು ಯಾರೆಂದರೆ ಅವರು ಖರೀದಿಸಲು ಸಾಧ್ಯವಿಲ್ಲ. ಕೃಷಿ ಭೂಮಿಯನ್ನು ಖರೀದಿಸುವವರಿಗೆ ಮಿತಿಯೂ ಕೂಡ ಇದೆ. ಒಬ್ಬರ ಬಳಿಯೇ ಸಾವಿರಾರು ಎಕರೆ ಭೂಮಿಯನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾದರೆ, ಯಾರು ಹಾಗೂ ಯಾವ ರಾಜ್ಯದಲ್ಲಿ ಎಷ್ಟು ಕೃಷಿ ಭೂಮಿಯನ್ನು ಖರೀದಿ ಮಾಡಬಹುದು..?

ಕೃಷಿಯೇತರ ಭೂಮಿಯನ್ನು ಭಾರತದಲ್ಲಿ ಖರೀದಿಸುವವರಿಗೆ ಇರುವ ನಿಯಮಗಳನ್ನು ತಿಳಿಯಿರಿ. ಕರ್ನಾಟಕ ರಾಜ್ಯದಲ್ಲಿ ನೀವೇನಾದರೂ ಕೃಷಿ ಭೂಮಿಯನ್ನು ಖರೀದಿಸಬೇಕು ಎಂದಿದ್ದರೆ, ರೈತರಿಗೆ ಗರಿಷ್ಠ 54 ಎಕರೆ ಅನ್ನು ಖರೀದಿ ಮಾಡಲು ಅವಕಾಶವಿದೆ. ಇನ್ನು ಕೇರಳ ರಾಜ್ಯದಲ್ಲಿ ಒಬ್ಬ ವ್ಯಕ್ತಿ 7.5 ಎಕರೆ ಕೃಷಿ ಭೂಮಿಯನ್ನು ಖರೀದಿಸಬಹುದು. ಕುಟುಂಬದಲ್ಲಿ 5 ಸದಸ್ಯರಿದ್ದರೆ 15 ಎಕರೆ ಕೃಷಿ ಭೂಮಿಯನ್ನು ಖರೀದಿ ಮಾಡಲು ಅವಕಾಶವಿದೆ. ಇನ್ನು ಮಹಾರಾಷ್ಟ್ರದಲ್ಲಿ ರೈತರು ಮಾತ್ರವೇ ಕೃಷಿ ಭೂಮಿಯನ್ನು ಖರೀದಿ ಮಾಡಬಹುದು.

ಮಹಾರಾಷ್ಟ್ರದಲ್ಲಿ ಒಬ್ಬ ರೈತ ಗರಿಷ್ಟ 54 ಎಕರೆ ಭೂಮಿಯನ್ನು ಖರೀದಿ ಮಾಡಬಹುದಾಗಿದೆ. ಗುಜರಾತ್ ನಲ್ಲಿಯೂ ಕೂಡ ಕೃಷಿ ಭೂಮಿಯಲ್ಲಿ ರೈತರು ಗರಿಷ್ಟ 54 ಎಕರೆ ಅನ್ನು ಖರೀದಿಸಬಹುದು. ಪಶ್ಚಿಮ ಬಂಗಾಳ ರಾಜ್ಯದಲ್ಲಿ 24.5 ಎಕರೆ, ಹಿಮಾಚಲ ಪ್ರದೇಶದಲ್ಲಿ 32 ಎಕರೆ, ಉತ್ತರ ಪ್ರದೇಶದಲ್ಲಿ 12.5 ಎಕರೆ ಹಾಗೂ ಬಿಹಾರದಲ್ಲಿ 15 ಎಕರೆ ಕೃಷಿ ಭೂಮಿಯನ್ನು ಮಾತ್ರ ಖರೀದಿಸಲು ನಿಯಮಗಳಿವೆ. ಇನ್ನು ಅನಿವಾಸಿ ಭಾರತೀಯರಿಯರು ಭಾರತದಲ್ಲಿ ಯಾವುದೇ ರೀತಿಯ ಕೃಷಿ ಭೂಮಿಯನ್ನು ಖರೀದಿಸುವಂತಿಲ್ಲ.

Related News

spot_img

Revenue Alerts

spot_img

News

spot_img