24.1 C
Bengaluru
Sunday, June 30, 2024

ಫ್ಲಾಟ್ ಖರೀದಿ ವೇಳೆ ಮೋಸ ಆಗಿದ್ದಲ್ಲಿ, ರೇರಾ ಕೋರ್ಟ್ ಮೊರೆ ಹೋಗಲು ಬೇಕಾದ ಪ್ರಮುಖ ದಾಖಲೆ‌ಗಳೇನು.?

ಬೆಂಗಳೂರು ಜೂನ್ 30: ನಾವು ಎಷ್ಟೇ ಜಾಗೃತರಾಗಿ ವ್ಯವಹಾರ ಮಾಡುತಿದ್ದರು, ಕೆಲಮೊಮ್ಮೆ ನಾವು ವಂಚಕರ ಬಲೆಗೆ ಬೀಳುವ ಸಾಧ್ಯತೆಗಳು ನಾವು ತಳ್ಳಿ ಹಾಕುವಂತಿಲ್ಲ. ಅದರಲ್ಲೂ ಬಹಳ ಮುಖ್ಯವಾಗಿ ಈ ರಿಯಲ್ ಎಸ್ಟೇಟ್ ವಿಚಾರಗಳಲ್ಲಂತೂ ಮೋಸದ ಜಾಲದ ವಾಸನೆ ಆಗಾಗ್ಗೆ ಬರುತ್ತಲೇ ಇರುತ್ತದೆ. ಸಾಮಾನ್ಯವಾಗಿ ಆಸ್ತಿ ಖರೀದಿ ವೇಳೆಯಾಗಿರಬಹುದು, ಇಲ್ಲ ಮಾರಾಟದ ಸಂಧರ್ಭದಲ್ಲಿ ಸೂಕ್ತವಾದ ಬೆಲೆ ಸಿಗದೆ ನಾವು ಮೋಸ ಹೋಗ್ಬಿಟ್ವಿ ಅನ್ನೋ ಮಾತುಗಳು ಅಲ್ಲಲ್ಲಿ ನಾವು ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ನಮಗೆ ಗೊತ್ತಿತ್ತು ಹೀಗೆ ಆಗುತ್ತದೆ ಅಂತ, ಆದರೂ ನಾವು ಮೋಸ ಹೋದ್ವಿ ಅಂತ ಕೆಲವರು‌ ನಿಮ್ಮ, ನಮ್ಮಗಳ ಸುತ್ತಮುತ್ತ ಮಾತಾನಾಡುತ್ತಿರುವುದು, ಅಥವಾ ನಮಗರ ಪರಿಚಯಸ್ಥರೆ ನಮ್ಮ ಬಳಿ ವಿಚಾರ ಹಂಚಿಕೊಂಡಿರುವುದು ಹೌದು.

ಹಾಗಿರುವಾಗ ನಾವು ಒಂದು ಫ್ಲಾಟ್ ಅಥವಾ ಮನೆ ಖರೀದಿ ವೇಳೆ ಒಂದು ವೇಳೆ ಡೆವಲಪರ್, ಪ್ರಮೋಟರ್ಸ್ ಗಳು ನಮಗೆ ಒಪ್ಪಂದದ ಪ್ರಕಾರ ನಡೆದುಕೊಳ್ಳದೆ ವಂಚಿಸಲು, ಅಥವಾ ನಮ್ಮ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು, ಅಥವಾ ಬೇರೆಕಡೆ ಅದನ್ನು ಹೋಡಿಕೆ ಮಾಡಿ ಅದರ ಲಾಭ ಅವರು ಪಡೆದು ನಮಗೆ ಮೋಸ ಮಾಡಲು ಯತ್ನಿಸಬಹುದು ಇದರಿಂದಾಗಿ ನಮಗೆ ನಾವು ಅಂದುಕೊಂಡ ಸಮಯಕ್ಕೆ ನಮ್ಮ ಕನಸಿನ ಮನೆ ಅಥವಾ ಫ್ಲಾಟ್ , ಕಟ್ಟಡ ಇತ್ಯಾದಿ ಸಿಗದೆ ಹೋಗಬಹುದು ಆಗ ನಾವು ಅದನ್ನು ಕೂನಿನ ಮೂಲಕ ಯಾವ ರೀತಿ ಪಡೆದುಕೊಳ್ಳ ಬೇಕು ಅದಕ್ಕೆ ಯಾವೆಲ್ಲ ದಾಖಲೆಗಳು ಮುಖ್ಯ ನಾವು ಯಾರನ್ನು ಸಂಪರ್ಕ ಮಾಡಬೇಕು ಎಂಬು ಗೊಂದಲಗಳು ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೆ ಇರುತ್ತದೆ ಅದಕ್ಕೆ ಒಂದಷ್ಟು ಸೂಕ್ತ ಪರಿಹಾರದ ಮಾರ್ಗೋಪಾಯಗಳೇನು ಅನ್ನೋದನ್ನು‌ ನೋಡವುದಾದರೆ.

ಫ್ಲಾಟ್, ಮನೆ, ಕಟ್ಟಡಗಳ ಖರೀದಿ ವೇಳೆ ಮೋಸವಾಗಿದ್ದರೆ ಮೊದಲು ರೇರಾ‌ ಮೊರೆ ಹೋಗುವುದು ಮುಖ್ಯ

ಸದ್ಯ ಫ್ಲಾಟ್ ಖರೀದಿಗೆ ಹಣ ಹೂಡಿಕೆ ಮಾಡಿ, ಸೇಲ್ ಅಗ್ರಿಮೆಂಟ್ ಪ್ರಕಾರ ಫ್ಲಾಟ್ ‌ಸಿಗದೆ ಕರ್ನಾಟಕ ರೇರಾ ಮೊರ ಹೊಗಿ ಅಲ್ಲಿ ನ್ಯಾಯ ದೊರಕಿರುವ ಪ್ರಕರಣವನ್ನು ನಾವು ನೋಡುತ್ತಾ ಹೇಳುವುದಾದರೆ. ಬೆಂಗಳೂರಿನ ವಿದ್ಯಾಪೀಠದ ನಿವಾಸಿ R.Lakshmi ಎಂಬುವವರು, K-RERA ಕಾಯ್ದೆ 2016 ಸೆಕ್ಷನ್ 31ರ ಅಡಿಯಲ್ಲಿ ಎದುರಾಳಿಗಳಾದ S G Bharath Reddy, ಬೆಂಗಳೂರು ನಗರ ಹಾಗೂ B G Anjanappa, Hemalatha, B G Krishna Reddy ಎಂಬುವರು ವಿರುದ್ಧ ಕರ್ನಾಟಕ ರೇರಾ ಕೋರ್ಟ್ ನಲ್ಲಿ ದೂರು ದಾಖಲು ಮಾಡಿ ಸದ್ಯ ತಾವು ಕೊಟ್ಟಿದ್ದ ಹಣಕ್ಕೆ ಬಡ್ಡಿ ಸೇರಿದಂತೆ ಹಣ ವಾಪಾಸ್ ಪಡೆಯುವ ಆದೇಶವನ್ನು ಪಡೆದುಕೊಂಡಿದ್ದಾರೆ.

* ಏನಿದು ಪ್ರಕರಣ.? ಅದರ ಪ್ರಮುಖ ಸಾರಾಂಶ ಏನು.?

ದೂರುದಾರರಾದ ಆರ್ ಲಕ್ಷ್ಮೀ ಅವರು ತಮ್ಮ ಎದುರಾಳಿಗಳು ಮಾಡಿಕೊಂಡಿದ್ದ ARYAN GOLDEN ARENA-J ಎಂಬ ಪ್ರಾಜೆಕ್ಟ್ ಅನ್ನು “M/s ARYAN HOMETEC PRIVATE LIMITED ಕಂಪನಿ ಹೆಸರಲ್ಲಿ ಆನೇಕಲ್ ತಾಲೂಕಿನ ಅತ್ತಿಬೇಲೆ ಹೋಬಳಿಯ ಬಿದರಗುಪ್ಪೆ ಬಳಿ ಅಭಿವೃದ್ಧಿ ಪಡಿಸಲಾಗುತ್ತಿದ್ದ ಪ್ರಾಜೆಕ್ಟ್ ನಲ್ಲಿ ಒಂದು ಫ್ಲಾಟ್ ಖರೀದಿಸಲು ಹಣ ಹೋಡಿಕೆ ಮಾಡಿದ್ದರು. ಅದು ಮಾರಾಟ ಮತ್ತು ನಿರ್ಮಾಣದ ಒಪ್ಪಂದದ ಪ್ರಕಾರ, ಆರ್ ಲಕ್ಷ್ಮೀ ಅವರು ಖರೀದಿ ಮಾಡಲು ಮುಂದಾಗಿದ್ದ ಫ್ಲಾಟ್ ಒಟ್ಟು ಮೊತ್ತ 34,37,280ರೂಪಾಯಿಗಳಾಗಿದ್ದು, ದೂರು ದಾರರು ಅವರಿಗೆ ಮುಂಗಡವಾಗಿ ಕೆಲ ಕಂತುಗಳ‌ಮೂಲಕ ಒಟ್ಟು 29,67,038 ರೂಪಾಯಿ ಹಣ ಜಮಾ ಮಾಡಿದ್ದರು. ಅಂತೆಯೇ ಅಲ್ಲದೆ ದೂರು ದಾರರು ಡೆವಲಪರ್ ಗಳು ಸೇರಿದಂತೆ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಪ್ರವೈಟ್ ಲಿಮಿಟೆಡ್ ಅವರ ಜೊತೆ ಟ್ರೈ ಪಾರ್ಟಿ ಒಪ್ಪಂದದ ಮಾಡಿಕೊಂಡು, ಫ್ಲಾಟ್ ಖರೀದಿಗೆ ಹಣ ಪಡೆದುಕೊಂಡಿದ್ದರು ಅದು ಕೋಡ 2018ರ ಜನವರಿ 19ರಂದು ಈ ಒಪ್ಪಂದ ಮಾಡಿಕೊಂಡಿರುವುದಾಗಿ ಉಲ್ಲೆಖ ಮಾಡಿದ್ದಾರೆ.

ನಿಗಧಿತ ಸಮಯಕ್ಕೆ ಫ್ಲಾಟ್ ಬಿಟ್ಟುಕೊಡದ ಡೆವಲಪರ್

ನಿರ್ಮಾಣ ಹಾಗೂ ಮಾರಾಟ ಒಪ್ಪಂದದ ಪ್ರಕಾರ 18ತಿಂಗಳು ಹಾಗೂ ಹೆಚ್ಚುವರಿಯಾಗಿ 9ತಿಂಗಳ ಕಾಲಾವಧಿಯಲ್ಲಿ ದೂರು ದಾರರಿಗೆ ಫ್ಲಾಟ್ ಕೊಡಬೇಕಾಗಿದ್ದ ಡೆವಲಪರ್. ಆದರೆ 2020 ಏಪ್ರಿಲ್ 19 ಆ ಗಡುವಿನ ಸಮಯ ಮುಗಿದರು ಫ್ಲಾಟ್ ಮಾತ್ರ ದೂರುದಾರ ಕೈ ಸೇರದಿದ್ದಾಗ,ಕರ್ನಾಟಕ ರೇರಾ ಕೋರ್ಟ್ ಕದತಟ್ಟಿದ ದೂರುದಾರು ತಮಗೆ ನ್ಯಾಯ ದುರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

* ಯಾವೆಲ್ಲ ಪ್ರಮುಖ‌ ದಾಖಲೆಗಳನ್ನು ಕರ್ನಾಟಕ ರೇರಾ ನ್ಯಾಯಾಲಯಕ್ಕೆ ದೂರುದಾರರು ಸಲ್ಲಿಸಿದ್ದರು*

*ARYAN GOLDEN ARENA-J ಎಂಬ ಪ್ರಾಜೆಕ್ಟ್ ಅನ್ನು “M/s ARYAN HOMETEC PRIVATE LIMITED ಕಂಪನಿ ರೇರಾದಲ್ಲಿ ನೊಂದಣಿ ಮಾಡಿಸಿಕೊಂಡಿರಲಿಲ್ಲವೆಂಬ ವಿಚಾರ

* ಫ್ಲಾಟ್ ನಿರ್ಮಾಣ ಮತ್ತು ಮಾರಾಟದ ಒಪ್ಪಂದದ ಪತ್ರ

* ತ್ರೀಪಕ್ಷೀಯ ಒಪ್ಪಂದದ ದಾಖಲೆ ಪತ್ರಗಳು, ಬಾಡಿಗೆ ಒಪ್ಪಂದ ದಾಖಲೆ

* ಫ್ಲಾಟ್ ಖರೀದಿಗೆ ಪಡೆದಿದ್ದ ಸಾಲದ ಕುರಿತ ದಾಖಲೆಗಳು

* ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ನಲ್ಲಿ ಹಣ ಪಡೆದಿದ್ದ ಬ್ಯಾಂಕ್ ದಾಖಲೆಗಳು

* ದೂರುದಾರರು ಹೊಂದಿದ್ದ ಬ್ಯಾಂಕ್ ವಿವರಗಳು

* ಸಮಯಕ್ಕೆ‌ಸರಿಯಾಗಿ ಮನೆ, ಫ್ಲಾಟ್ ಕೊಡದಿದ್ದಲ್ಲಿ ಈ ಮೊದಲೇ ಒಪ್ಪಂದದ ವೇಳೆ ಪಾವತಿ ಮಾಡಿದ್ದ ಹಣಕ್ಕೆ ಕಾನೂನಿನಡಿಯಲ್ಲಿ ಬರ ಬೇಕಾದ ಬಡ್ಡಿಯ ಲೆಕ್ಕಾಚಾರದ ಪತ್ರಗಳು

ಈ ಎಲ್ಲಾ ದಾಖಲೆಗಳ ಜೊತೆ ದಾವೆಯನ್ನು ಸಲ್ಲಿಸಿದ್ದ ದೂರುದಾರರು ತಮಗೆ ನ್ಯಾಯ ಒದುಗಿಸಿಕೊಡುಂತೆ ಮನವಿ ಮಾಡಿದ್ದರು, ಇನ್ನು ಎಲ್ಲಾ ದಾಖಲೆಗಳನ್ನು ಸೂಕ್ಷ್ಮ ಹಾಗೂ ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯವು ಪ್ರತಿಪಕ್ಷಿವಾದಿಗಳಿಗೆ ಆಕ್ಷೇಪಣೆ ಪತ್ರ ಸಲ್ಲಿಕೆಗೆ ಗಡುವು ನೀಡಿದ್ದಾರದರೂ,ಅವರು ಆಕ್ಷೇಪಣೆ ಸಲ್ಲಿಸುವಲ್ಲಿ, ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲಾರಾಗಿದ್ದರು. ಮಾತ್ರವಲ್ಲದೆ ಕೋರ್ಟ್‌ ಪ್ರಕರಣದ ವಾದ ಹಾಗೂ ಪ್ರಕರಣದ ಹೇಳಿಕೆ ದಾಖಲಿಸಲು ಸೂಕ್ತ ಸಮಯಕ್ಕೆ ಬಾರದ ಗೈರಾಗಿದ್ದನ್ನು, ಮತ್ತು ಒಪ್ಪಂದದ ಪ್ರಕಾರ ನಿಗದಿತ ಕಾಲಕ್ಕೆ ಫ್ಲಾಟ್ ಗ್ರಾಹಕರಿಗೆ ಒದಗಿಸುವಲ್ಲಿ ವಿಫಲರಾಗಿದ್ದ ಡೆವಲಪರ್ ಕಂಪನಿಯು, ದೂರುದಾರರು ಈ ಮೊದಲು ನಿರ್ಮಾಣ ಹಾಗೂ ಮಾರಾಟದ ಒಪ್ಪಂದದ ವೇಳೆ ಹಾಗೂ ಕಂತುಗಳಲ್ಲಿ ನೀಡಿದ್ದ ಹಣಕ್ಕೆ ಬಡ್ಡಿಯನ್ನು ಹಾಗೂ ಅಸಲು ಮೊತ್ತವನ್ನು ಕೋರ್ಟ್ ಆದೇಶವಾದ 60ದಿನಗಳೋಳಗೆ ನೀಡಬೇಕೆಂದು ಆದೇಶಿಸಿದೆ..

ಆಕ್ಷೇಪಣೆ ಪತ್ರ ಸಲ್ಲಿಸಲು ವಿಫಲವಾಗಿರುವ ಡೆವಲಪರ್ ಕಂಪನಿಗೆ, ದೂರುದಾರು ಕ್ಲೈಮ್ ಮಾಡಿ ಸಲ್ಲಿಸಿದ ಮನವಿಯಂತೆ ಅಸಲು ಮೊತ್ತ 29,67,038 ರೂಪಾಯಿ ಹಾಗೂ ಬಡ್ಡಿ13,02,740 ಸೇರಿದಂತೆ ಒಟ್ಟು 42,69,778 ರೂಪಾಯಿಗಳು ನೀಡುವಂತೆ ಕರ್ನಾಟಕ ರೇರಾ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ.

ಯಾವುದೇ ವ್ಯಕ್ತಿ ಅಥವಾ ಕಂಪನಿಗಳ‌ ಜೊತೆ ಕಾನೂನು ಬದ್ಧವಾಗಿ ವ್ಯವಹಾರ ನಡೆಸಿದಾಗ, ಸೂಕ್ತ ದಾಖಲೆಗಳನ್ನು ಹೊಂದಿದ್ದಾಗ ಮೋಸದ ಆಟ, ವಂಚನೆ ಕೃತ್ಯಗಳು ಎಸಗಲೆಂದು ಸಮಾನ್ಯ ಜನರನ್ನು ಗುರಿಯಾಗಿಸಿಕೊಂಡು ತಲೆ‌ ಎತ್ತಿರುವ ಯಾವುದೇ ಕಂಪನಿಯಾದರೂ ಮಾಡಿದ ವಂಚನೆಗೆ ದಂಡ ಕಟ್ಟಲೇಬೇಕು ಅಲ್ಲದೆ ಕಾನೂನು ಅಡಿಯಲ್ಲಿ ವ್ಯವಹಾರ ಮಾಡಿದವರಿಗೆ ನ್ಯಾಯ ಸಿಕ್ಕೆ ಸಿಗುತ್ತದೆ ಅನ್ನೊದಕ್ಕೆ ಈ ಒಂದು ಪ್ರಕರಣ ಸಾಕ್ಷಿಯಾಗಿದೆ ಎಂದರೆ ಬಹುಶಃ ತಪ್ಪಾಗಲಾರದು…

Related News

spot_img

Revenue Alerts

spot_img

News

spot_img