28.2 C
Bengaluru
Wednesday, July 3, 2024

ದಸ್ತಾವೇಜನ್ನು ಹಾಜರುಪಡಿಸಿದಾಗ ನೋಂದಣಾಧಿಕಾರಿಗಳು ಮಾಡಬೇಕಾದ ಕರ್ತವ್ಯಗಳೇನು?

ಬೆಂಗಳೂರು ಜುಲೈ 06: ನೋಂದಣಿಗಾಗಿ ದಸ್ತಾವೇಜನ್ನು ಹಾಜರುಪಡಿಸಿದಾಗ ನೋಂದಣಾಧಿಕಾರಿಗಳು ಮಾಡಬೇಕಾದ ಪ್ರಮುಖ ಕರ್ತವ್ಯಗಳು. ಯಾವುವೆಂದರೆ ದಿವಸ, ಗಂಟೆ ಮತ್ತು ಸ್ಥಳವನ್ನು ಹಾಜರುಪಡಿಸುವ ಪ್ರತಿಯೊಬ್ಬ ವ್ಯಕ್ತಿಯ ಸಹಿ ‘[ಪ್ರಕರಣ 32-ಎರಲ್ಲಿ ಭಾವಚಿತ್ರ ಮತ್ತು ಬೆರಳು ಮುದ್ರೆಗಳನ್ನು] ದೃಢೀಕರಿಸಬೇಕು ಮತ್ತು ಅದನ್ನು ಹಾಜರುಪಡಿಸುವ ಕಾಲದಲ್ಲಿ ಅಂಥ ಪ್ರತಿಯೊಂದು ದಸ್ತಾವೇಜಿನ ಮೇಲೆ ಹಿಂಬರಹ ಮಾಡತಕ್ಕದ್ದು;

ಪ್ರಕರಣ 32-ಎ ಯಲ್ಲಿ ಭಾವಚಿತ್ರ ಮತ್ತು ಬೆರಳು ಮುದ್ರೆಗಳನ್ನು ದೃಢೀಕರಿಸಬೇಕು.

(ಬಿ) ನೋಂದಣಾಧಿಕಾರಿಯು ಅಂಥ ದಸ್ತಾವೇಜಿಗಾಗಿ ಸ್ವೀಕೃತಿಯನ್ನು, ಅದನ್ನು ಹಾಜರುಪಡಿಸುವ ವ್ಯಕ್ತಿಗೆ ಕೊಡತಕ್ಕದ್ದು; ಮತ್ತು
ನೋಂದಣಿ ಅಧಿನಿಯಮ, 1908.

(ಸಿ)62ನೇ ಪ್ರಕರಣದಲ್ಲಿ ಅಡಕಗೊಂಡ ಉಪಬಂಧಗಳಿಗೆ ಒಳಪಟ್ಟು ನೋಂದಣಿಗಾಗಿ ಸ್ವೀಕರಿಸಿದ ಪ್ರತಿಯೊಂದು ದಸ್ತಾವೇಜನ್ನು ಅನವಶ್ಯಕ ವಿಳಂಬವಿಲ್ಲದೆ ಅದನ್ನು ಸ್ವೀಕರಿಸಿದ ಕ್ರಮದಲ್ಲಿ ಅದಕ್ಕಾಗಿ ಇರುವ ಸಮಾಚಿತ ಪುಸ್ತಕದಲ್ಲಿ ಅಥವಾ ಎಲೆಕ್ಟ್ರಾನಿಕ್ ಅಥವಾ ಇತರೆ ಸಂಗ್ರಹಿಸುವ ಉಪಕರಣಗಳಲ್ಲಿ ಪ್ರತಿ ಮಾಡತಕ್ಕದ್ದು.

(2)ಎಲ್ಲಾ ಅಂಥ ನಿಯಮಗೊಳಿಸಬಹುದಾದಂಥ ಅಧಿಪ್ರಮಾಣನಗೊಳಿಸತಕ್ಕದ್ದು.

(ii) ನಮೂದನೆಗಳಿಗೆ ಕ್ರಮಾನುಗತವಾಗಿ ಸಂಖ್ಯೆಯನ್ನು ಕೊಡತಕ್ಕದ್ದು:-
ಪ್ರತಿಯೊಂದು ಪುಸ್ತಕದ ಎಲ್ಲಾ ನಮೂದನೆಗಳಿಗೆ ಕ್ರಮಾನುಗತ ಸಂಖ್ಯೆಯನ್ನು ಕೊಡತಕ್ಕದ್ದು ಮತ್ತು ಅವುಗಳು ವರ್ಷದೊಂದಿಗೆ ಪ್ರಾರಂಭವಾಗಿ ಕೊನೆಗೊಳ್ಳತಕ್ಕದ್ದು. ಪ್ರತಿವರ್ಷದ ಪ್ರಾರಂಭದಲ್ಲಿ ಹೊಸ ಸರಣಿಗಳನ್ನು ಪ್ರಾರಂಭಿಸಬೇಕು.

(iii) ಚಾಲ್ತಿಯಲ್ಲಿರುವ ವಿಷಯ ಸೂಚಿಗಳು ಮತ್ತು ಅವುಗಳಲ್ಲಿ ನಮೂದನೆಗಳು:-ಇಲ್ಲಿ ಈ ಮೊದಲು ನಮೂದಿಸಿದ ಯಾವುದೇ ಪುಸ್ತಕಗಳನ್ನು ಇಟ್ಟಿರುವಂಥ ಪ್ರತಿಯೊಂದು ಕಛೇರಿಯಲ್ಲಿ ಅಂಥ ಪುಸ್ತಕಗಳ ವಿಷಯಗಳ ಚಾಲ್ತಿಯಲ್ಲಿರುವ ವಿಷಯಸೂಚಿಗಳನ್ನು ತಯಾರಿಸತಕ್ಕದ್ದು ಮತ್ತು ಕಾರ್ಯ ಸಾಧ್ಯವಾದಷ್ಟು ಮಟ್ಟಿಗೆ ಯಾವ ದಸ್ತಾವೇಜಿಗೆ ಆ ನಮೂದು ಸಂಬಂಧಿಸುತ್ತದೆಯೋ ಆ ಯಾವುದೇ ದಸ್ತಾವೇಜಿನ ವಿವರ ಪತ್ರವನ್ನು ನೋಂದಣಾಧಿಕಾರಿಯು ನಕಲು ಮಾಡಿದ [ಅಥವಾ ಎಲೆಕ್ಟ್ರಾನಿಕ್ ಅಥವಾ ಇತರೆ ಸಂಗ್ರಹಿಸುವ ಉಪಕರಣಗಳಲ್ಲಿ] ಅಥವಾ ಇಟ್ಟ ತರುವಾಯ ಕೂಡಲೇ ಅಂಥ ವಿಷಯಸೂಚಿಗಳಲ್ಲಿ ಪ್ರತಿಯೊಂದು ನಮೂದನ್ನು ಮಾಡತಕ್ಕದ್ದು.

(iv)ನೋಂದಣಾಧಿಕಾರಿಗಳು ತಯಾರಿಸಬೇಕಾದ ಸೂಚಿಗಳು ಮತ್ತು ಅವುಗಳ ಒಳಾಂಶಗಳು:-
(1)ಎಲ್ಲಾ ನೋಂದಣಿ ಕಛೇರಿಗಳಲ್ಲಿ ನಾಲ್ಕು ಅಂಥ ವಿಷಯಸೂಚಿಗಳನ್ನು ಮಾಡತಕ್ಕದ್ದು ಮತ್ತು ಅವುಗಳನ್ನು ಅನುಕ್ರಮವಾಗಿ ಸೂಚಿ ಸಂಖ್ಯೆ I, ಸೂಚಿ ಸಂಖ್ಯೆ II, ಸೂಚಿ ಸಂಖ್ಯೆ III ಮತ್ತು ಸೂಚಿ
ಸಂಖ್ಯೆ IV ಎಂದು ಹೆಸರಿಸತಕ್ಕದ್ದು.

Related News

spot_img

Revenue Alerts

spot_img

News

spot_img