ಬೆಂಗಳೂರು, ಮಾ. 30 : 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು ಎಚ್ ಡಿ ಎಫ್ಸಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ತೆರೆಯ ಬಹುದಾಗಿದೆ. ಜಂಟಿ ಖಾತೆಯನ್ನು ತೆರೆಯಲು ಅರ್ಹರಾಗಿರುತ್ತಾರೆ. ಜಂಟಿ ಖಾತೆಯ ಸಂದರ್ಭದಲ್ಲಿ, ಮೊದಲ ಅರ್ಜಿದಾರರು ಹಿರಿಯ ನಾಗರಿಕರಾಗಿರಬೇಕು. ಇನ್ನು ಎಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರು ಉಳಿತಾಯ ಖಾತೆಯನ್ನು ತೆರೆಯಲು ಏನೆಲ್ಲಾ ಬೇಖು ಹಾಗೂ ಯಾವೆಲ್ಲಾ ಉಪಯೋಗಗಳು ಇವೆ ಎಂದು ತಿಳಿಯೋಣ ಬನ್ನಿ..
ಹಿರಿಯ ನಾಗರಿಕರು ಎಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ತೆರೆದರೆ, ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿರಬೇಕು. ಹಿರಿಯ ನಾಗರಿಕರ ಖಾತೆಯನ್ನು ತೆರೆಯಲು 5,000 ರೂ. ಕನಿಷ್ಠ ಠೇವಣಿ ಅಗತ್ಯವಿದೆ. ಪ್ರತಿ ತಿಂಗಳೂ ಈ ಮಿನಿಮಮ್ ಬ್ಯಾಲೆನ್ಸ್ ಅನ್ನು ಹಅಗೆ ಉಳಿಸಿಕೊಳ್ಳಬೇಕು. ಹಾಗೊಂದು ವೇಳೆ ಅಕೌಂಟ್ ಮಿನಿಮಮ್ ಬ್ಯಾಲೆನ್ಸ್ ಅನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. 5,000 ಕಿಂತ ಕಡಿಮೆ ಹಾಗೂ 2,500 ಕ್ಕಿಂತ ಹೆಚ್ಚಿನ ಬ್ಯಾಲೆನ್ಸ್ ಇದ್ದಲ್ಲಿ ರೂ. 150/- ಹಾಗೂ 2,500ಕ್ಕಿಂತಲೂ ಕಡಿಮೆ ಬ್ಯಾಲೆನ್ಸ್ ಅನ್ನು ಇಟ್ಟುಕೊಂಡಿದ್ದರೆ ರೂ. 300 ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.
ಹಿಂದಿನ ತಿಂಗಳಲ್ಲಿ ಖಾತೆಯಲ್ಲಿ ನಿರ್ವಹಿಸಲಾದ AMB ಆಧಾರದ ಮೇಲೆ ಪ್ರಸ್ತುತ ತಿಂಗಳಲ್ಲಿ ಸೇವೆ/ವಹಿವಾಟು ಶುಲ್ಕಗಳನ್ನು ಅನ್ವಯಿಸಲಾಗುತ್ತದೆ. AMB ಯ ನಿರ್ವಹಣೆಯ ಆಧಾರದ ಮೇಲೆ ಸೇವೆ/ವಹಿವಾಟು ಶುಲ್ಕಗಳು (ಮೇಲೆ ನಿರ್ದಿಷ್ಟಪಡಿಸಿದಂತೆ) ಆದ್ಯತೆಯ , ಕಾರ್ಪೊರೇಟ್ ಸಂಬಳ ಮತ್ತು ಸೂಪರ್ ಸೇವರ್ ಗ್ರಾಹಕರಿಗೆ ಅನ್ವಯಿಸುವುದಿಲ್ಲ. ಎಲ್ಲಾ ಶುಲ್ಕಗಳು ಮತ್ತು ಶುಲ್ಕಗಳು ತೆರಿಗೆಗಳನ್ನು ಹೊರತುಪಡಿಸಿ. ಸುಂಕದಲ್ಲಿ ಉಲ್ಲೇಖಿಸಲಾದ ಶುಲ್ಕಗಳು ಅನ್ವಯವಾಗುವಂತೆ ಸರಕು ಮತ್ತು ಸೇವಾ ತೆರಿಗೆಯನ್ನು ಆಕರ್ಷಿಸುತ್ತವೆ.
ಇನ್ನು ಚೆಕ್ ಬುಕ್ ಅನ್ನು ಹೊಂದುವುದಾದರೆ, 25 ಚೆಕ್ ಬುಕ್ ಹಾಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಹೆಚ್ಚಿನ 25 ಚೆಕ್ ಬುಕ್ ಹಾಳೆಗಳಿಗೆ 75 ರೂ. ಅನ್ನು ಹಿರಿಯ ನಾಗರಿಕರಿಗೆ ಚಾರ್ಜ್ ಮಾಡಲಾಗುತ್ತದೆ. ಇನ್ನು ಡಿಮಾಂಡ್ ಡ್ರಾಫ್ಟ್ ಗಾಗಿ ಹಿರಿಯ ನಾಗರಿಕರಿಗೆ 10,000ರೂ. ವರೆಗೂ ಕೇವಲ 5ರೂ. ಅನ್ನು ಚಾರ್ಜ್ ಮಾಡಲಾಗುತ್ತದೆ. 10,000ಕ್ಕಿಂತಲೂ ಹೆಚ್ಚಿನ ಹಣಕ್ಕೆ 45 ರೂ. ಅನ್ನು ಪಡೆಯಲಾಗುತ್ತದೆ. ಪ್ರತೀ ತಿಂಗಳು ನಾಲ್ಕು ಬಾರಿ ಹಣ ವಿನಿಮಯವನ್ನು ಉಚಿತಗೊಳಿಸಿದ್ದು, ಅದರ ಮೇಲಿನ ಅಥವಾ ಎರಡು ಲಕ್ಷ ಮೀರಿದ ವರ್ಗಾವಣೆಗೆ 150ರೂ. ಶುಲ್ಕವನ್ನು ವಿಧಿಸಲಾಗುತ್ತದೆ.
ಇನ್ನು ಫೋನ್ ಬ್ಯಾಂಕಿಂಗ್ ಹಿರಿಯ ನಾಗರಿಗೆ ಯಾವುದೇ ಶುಲ್ಕವಿಲ್ಲ. ಡೆಬಿಟ್ ಕಾರ್ಡ್ ಪಡೆಯಲು ಇಂಟರ್ ನ್ಯಾಷನಲ್ ಕಾರ್ಡ್ ಗೆ ಯಾವುದೇ ಶುಲಕ್ವಿಲ್ಲ. ರೂಪೇ ಪ್ರಿಯಂ ಕಾರ್ಡ್ ಗೆ 200 ರೂ. ಅನ್ನು ಚಾರ್ಜ್ ಮಾಡಲಾಗುತ್ತದೆ. ಕಾರ್ಡ್ ಬದಲಾಯಿಸಲು ಕೂಡ 200ರೂ. ಶುಲ್ಕ ವಿಧಿಸಲಾಗುತ್ತದೆ. ಇನ್ನು ಪ್ರತೀ ತಿಂಗಳು ಡೆಬಿಟ್ ಕಾರ್ಡ್ ಬಳಕೆಗೆ ಹಿರಿಯ ನಾಗರಿಕರಿಗೆ ಮೊದಲು ಐದು ವರ್ಗಾವಣೆಯನ್ನು ಉಚಿತಗೊಳಿಸಲಾಗಿದೆ. ನಂತರದ ಬಳಕೆಗೆ ಶುಲ್ಕ ವಿಧಿಸಲಾಗುತ್ತದೆ.