20.6 C
Bengaluru
Saturday, July 6, 2024

ನಿಮ್ಮ ಪಿಎಫ್ ಹಣ ಎಷ್ಟಿದೆ ಎಂದು ತಿಳಿಯಬೇಕಾ..? ಹಾಗಿದ್ದರೆ ಇಲ್ಲಿದೆ ನೋಡಿ ಮಾಹಿತಿ..

ಬೆಂಗಳೂರು, ಡಿ. 27: ಯಾವ ಸಂಸ್ಥೆಯಲ್ಲೇ ಆಗಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಭವಿಷ್ಯ ನಿಧಿ ಇರುತ್ತದೆ. ಉದ್ಯೋಗಿಗಳ ಈ ಭವಿಷ್ಯ ನಿ ಧೀ ಅವರ ಬದುಕಿನಲ್ಲಿ ಮಹತ್ವದ ಉಳಿತಾಯ ಹಣವಾಗಿರುತ್ತದೆ. ಇಪಿಎಫ್ ಎಷ್ಟಿದೆ ಎಂದು ವರ್ಷಾಂತ್ಯದಲ್ಲಿ ಪರಿಶೀಲಿಸಬಹುದು. ಇಪಿಎಫ್ ಖಾತೆಗೆ ಸಂಬಳದ ಶೇ.12 ರಷ್ಟು ಹಣವನ್ನು ಪ್ರತಿ ತಿಂಗಳು ಜಮಾ ಮಾಡಲಾಗುತ್ತದೆ. ಕಂಪನಿಗಳು ಸಂಬಳ ಪಡೆಯುವವರ ಖಾತೆಗೆ ಕಂಪನಿಗಳು ಹಣವನ್ನು ಸಂದಾಯ ಮಾಡುತ್ತವೆ. ನಿಮ್ಮ ಸಂಬಳದ ವಂತಿಕೆ ಹಾಗೂ ಕಂಪನಿಯೂ ವಂತಿಕೆಯನ್ನು ಸೇರಿಸಿ, ಇಂತಿಷ್ಟು ಎಂದು ಹಣ ನಿಮ್ಮ ಇಪಿಎಫ್ ಖಾತೆಗೆ ಸಂದಾಯವಾಗುತ್ತದೆ. ಈ ಹಣ ಎಷ್ಟಿದೆ ಎಂದು ಪರಿಶೀಲಿಸುವುದು ಹಾಗು ಹಣ ತೆಗೆದುಕೊಳ್ಳುವುದು ಹೇಗೆ ಎಂದಬುದನ್ನು ತಿಳಿಯಿರಿ..

ಎಸ್ಎಂಎಸ್ : ಎಸ್ಎಂಎಸ್ ಮೂಲಕ ನಿಮ್ಮ ಇಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂದು ತಿಳಿಯಬಹುದು. ಇದಕ್ಕೆ ನೀವು ಯುಎಎನ್ ನಂಬರ್ ಮತ್ತು ಪಾಸ್ವರ್ಡ್ ಬೇಕಾಗುವುದಿಲ್ಲ. 7738299899 ಮೊಬೈಲ್ ಸಂಖ್ಯೆಗೆ ಇಪಿಎಫ್ ಗೆ ನೋಂದಾಯಿಸಿರುವ ಮೊಬೈಲ್ ಮೂಲಕ EPFOHO UAN ENG ಎಂದು ಸಂದೇಶ ಕಳುಹಿಸಿ. ಕೆಲ ಸಮಯದ ಬಳಿಕ ನಿಮ್ಮ ಉಳಿತಾಯ ಹಣದ ವಿವದ ಬಗ್ಗೆ ನಿಮಗೆ ಎಸ್ಎಂಎಸ್ ಬರುತ್ತದೆ.

ಮಿಸ್ಡ್ ಕಾಲ್ : ಇನ್ನು ಮಿಸ್ ಕಾಲ್ ಕೊಡುವುದರ ಮೂಲಕವೂ ನೀವು ನಿಮ್ಮ ಪಿಎಫ್ ಮೊತ್ತದ ಬಗ್ಗೆ ಮಾಹಿತಿ ಪಡೆಯಬಹುದು. ಇದಕ್ಕೂ ಕೂಡ ನೀವು ಯುಎಎನ್ ನಂಬರ್ ಹಾಗೂ ಪಾಸ್ ವರ್ಡ್ ಬಳಸುವ ಅಗತ್ಯವಿಲ್ಲ. 011-22901406 ಎಂಬ ಮೊಬೈಲ್ ಸಂಖೆಗೆ ನಿಮ್ಮ ನೋಮದಾಯಿತ ಮೊಬೈಲ್ ನಿಂದ ಮಿಸ್ ಕಾಲ್ ಕೊಡಿ. ಸ್ವಲ್ಪ ಸಮಯದ ಬಳಿಕ ನಿಮಗೆ ಎಸ್ ಎಂಎಸ್ ಮೂಲಕ ನಿಮ್ಮ ಉಳಿತಾಯದ ಹಣದ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ಸೇವೆಯನ್ನು ಪಡೆಯಲು ನಿಮ್ಮ ಮೊಬೈಲ್ ಸಂಕ್ಯೆ, ಆಧಾರ್, ಪ್ಯಾನ್ ಹಾಗೂ ಬ್ಯಾಂಕ್ ಖಾತೆ ಯುಎಎನ್ ಗೆ ಲಿಂಕ್ ಆಗಿರಬೇಕು.

ಇಪಿಎಫ್ಒ ವೆಬ್ಸೈಟ್ : ಇದರ ಮೂಲಕವೂ ನೀವು ನಿಮ್ಮ ಪಿಎಫ್ ಸೇವಿಂಗ್ಸ್ ಬಗ್ಗೆ ಮಾಹಿತಿ ಪಡೆಯಬಹುದು. ಇಪಿಎಫ್ ವೆಬ್ ಸೈಟ್ ಗೆ ತೆರಳಿ ಮೆಂಬರ್ ಪಾಸ್ ಬುಕ್ ಎಂಬುದರ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ ಹಾಕಿ. ಕೆಳಗೆ ಪಾಸ್ ವರ್ಡ್ ಅನ್ನು ಹಾಕಿ . ಆಗ ನಿಮ್ಮ ಪಿಎಫ್ ಅಕೌಂಟ್ ನಲ್ಲಿರುವ ಉಳಿತಾಯದ ಮೊತ್ತವನ್ನು ಪರಿಶೀಲಿಸಬಹುದು. ಇದರಲ್ಲಿ ನಿಮ್ಮ ಹಾಗೂ ಕಂಪನಿ ಹಾಕಿದ ಹಣದ ಬಗ್ಗೆ ಮಾಹಿತಿ ಇರುತ್ತದೆ. ಈನ್ನು ನಿಮ್ಮ ಯುಎಎನ್ ನಂಬರ್ ಗೆ ಹೆಚ್ಚು ಪಿಎಫ್ ನಂಬರ್ ಗಳಿದ್ದರೆ. ಅದರ ವಿವರ ಗಳು ಕೂಡ ನಿಮಗೆ ಸಿಗುತ್ತವೆ.

ಯೂನಿಫೈಡ್ ಪೋರ್ಟಲ್ : ನಿಮ್ಮ ಪಿಎಫ್ ಅಕೌಂಟ್ ನ ಯುಎಎನ್ ನಂಬರ್ ಹಾಗೂ ಪಾಸ್ ವರ್ಡ್ ಇದ್ದರೆ, ಯೂನಿಫೈಡ್ ಪೋರ್ಟಲ್ ಮುಖಾಂತರವೂ ಮಾಹಿತಿ ತಿಳಿದುಕೊಳ್ಳಬಹುದು. ಇದರಲ್ಲಿ ನೀವು ಯಾವ ವರ್ಷದಲ್ಲಿ ಎಷ್ಟೆಷ್ಟು ವಂತಿಕೆಗಳನ್ನು ಹಾಕಲಾಗಿದೆ ಎಂಬುದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.

ಉಮಾಂಗ್ ಆ್ಯಪ್ : ಈ ಮೊಬೈಲ್ ಆಪ್ ಮೂಲಕವೂ ನೀವು ನಿಮ್ ಉಳಿತಾಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವ ಅವಕಾಶವಿದೆ. ಯೂನಿಫೈಡ್ ಮೂಲಕ ಉಮಾಂಗ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶವಿದೆ.

ಇನ್ನು ನಿಮ್ಮ ಪಿಎಫ್ ಹಣವನ್ನು ಹಿಂಪಡೆಯಬೇಕಿದ್ದರೆ, ಮೊದಲಿಗೆ ಕೆವೈಸಿ ಪ್ರಕ್ರಿಯೆಗಳನ್ನು ಮುಗಿಸಿ. ನಂತರ ಆನ್ ಲೈನ್ ಮೂಲಕ ಪಿಎಫ್ ಹಣವನ್ನು ಹಿಂಪಡೆಯಿರಿ. ಅಗತ್ಯಕ್ಕೆ ಹಣ ಬೇಕಿದ್ದರೆ, ಪಿಎಫ್ ಹಣದಲ್ಲಿ ಸ್ವಲ್ಪ ಮೊತ್ತವನ್ನಷ್ಟೇ ಹಿಂಪಡೆಯಬಹುದು. ನಿವೃತ್ತಿ ಹೊಂದಿದ ಬಳಿಕ ಸಂಪೂರ್ಣವನ್ನು ಪಡೆಯುವ ಅವಕಾಶವಿರುತ್ತದೆ

Related News

spot_img

Revenue Alerts

spot_img

News

spot_img