22.4 C
Bengaluru
Thursday, October 31, 2024

ಅನಾದಿ ಕಾಲದಲ್ಲೂ ವಾಸ್ತು ಶಾಸ್ತ್ರವನ್ನು ಅನುಸರಿಸಲಾಗುತ್ತಿತ್ತಾ..?

ಬೆಂಗಳೂರು, ಡಿ. 31 : ಧಾರ್ಮಿಕ ಶಾಸ್ತ್ರ, ಆಚರಣೆಗಳು ಪುರಾತನ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿನಿಧೀಸುತ್ತವೆ. ಇದರಲ್ಲಿ ವಾಸ್ತು ಶಾಸ್ತ್ರವೂ ಒಂದಾಗಿದೆ. ಮನೆ, ಕಚೇರಿಗಳಲ್ಲಿ ಸಾಕಷ್ಟು ಮಂದಿ ವಾಸ್ತು ಶಾಸ್ತ್ರವನ್ನು ಅನುಸರಿಸುವುದು ಸಾಮಾನ್ಯ. ಧನಾತ್ಮಕ ಅರಿವನ್ನು ಹೆಚ್ಚಿಸುವ ಸಲುವಾಗಿ ಕೆಲ ವಾಸ್ತು ಶಾಸ್ತ್ರವನ್ನು ಅನುಸರಿಸಬೇಕಾಗುತ್ತದೆ. ಇದನ್ನು ಪಾಲಿಸುವುದರಿಂದ ಮನೆ ಹಾಗೂ ಕಚೇರಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂಬ ಸಮೃದ್ಧಿಯ ಭಾವನೆ ನೀಡುತ್ತದೆ. ಕೆಲ ವಾಸ್ತು ಶಾಸ್ತ್ರವನ್ನು ಅನುಸರಿಸುವುದರಿಂದ ಕೆಲ ಸಮಸ್ಯೆಗಳಿಗೆ ಪರಿಹಾರವೂ ದೊರಕುತ್ತದೆ. ಇದು ಹಲವು ಕಡೆ ಸಾಬೀತಾಗಿದೆ ಕೂಡ.

ವಾಸ್ತು ಶಾಸ್ತ್ರ ಅನಾದಿ ಕಾಲದಲ್ಲಿ ಅಸ್ತಿತ್ವದಲ್ಲಿ ಇತ್ತಾ..? ಇತ್ತು ಎಂದಾದರೆ, ಆಗ ಹೇಗೆ ವಾಸ್ತುವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು..? ಯಾವ ಧರ್ಮದವರು ಯಾವ ರೀತಿಯಲ್ಲಿ ವಾಸ್ತು ಶಾಸ್ತ್ರವನ್ನು ಅನುಸರಿಸುತ್ತಿದ್ದರು.? ವಾಸ್ತು ನಮ್ಮ ಧರ್ಮದಲ್ಲಿ ಮಾತ್ರ ಇದೆಯಾ..? ಅಥವಾ ಇತರೆ ಧರ್ಮದವರೂ ಇದನ್ನು ಫಾಲೋ ಮಾಡುತ್ತಾರಾ..? ಎಂಬ ಸಾಕಷ್ಟು ಪ್ರಶ್ನೆಗಳಿಗೆ ಇಂದು ವಾಸ್ತು ಶಾಸ್ತ್ರಜ್ಞರಾದ ಡಾ.ರೇವತಿ ವೀ ಕುಮಾರ್ ಅವರು ಉತ್ತವನ್ನು ನೀಡಿದ್ದಾರೆ. ಅನಾದಿ ಕಾಲದಲ್ಲಿ ವಾಸ್ತುವನ್ನು ಹೇಗೆ ಅನುಸರಿಸಲಾಗಿತ್ತು ಎಂದು ನೋಡೋಣ ಬನ್ನಿ.

ವಾಸ್ತು ಇರೋದು ವಸ್ತುವಿನ ಆಧಾರದ ಮೇಲೆ. ಹಾಗಾಗಿ ವಸ್ತುವನ್ನು ಯಾರು ಯಾರು ಬಳಸುತ್ತಾರೆ ಅವರೆಲ್ಲರೂ ವಾಸ್ತುವನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ. ಹಾಗಾದರೆ ವಸ್ತು ಯಾವುದು ಎಂದು ಹೇಳುವುದಾದರೆ, ಪ್ರಕೃತಿ, ಪಂಚಭುತಗಳು ಅಂತ ಹೇಳಬಹುದು. ಇನ್ನು ಎಲ್ಲಾ ನಾಗರಿಕತೆಗಳಲ್ಲೂ ಕೂಡ ಪ್ರಕೃತಿಯನ್ನು ಪೂಜಿಸಿರುವುದು ಕಂಡು ಬರುತ್ತದೆ. ಮೊಹೆಂಜೊದಾರೊ, ಹರಪ್ಪ, ಸಿಂಧೂ, ಈಜಿಪ್ಟ್ ನಾಗರಿಕತೆಗಳ ಬಗ್ಗೆ ನಾವು ಇತಿಹಾಸ ಪಾಠಗಳಲ್ಲಿ ಓದಿದ್ದೇವೆ. ಆ ಕಾಲದಲ್ಲಿಯೂ ಎಲ್ಲರೂ ಪ್ರಕೃತಿಯ ಆರಾಧನೆಯನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ಅಲ್ಲಿಗೆ ವಸ್ತುವಿನ ಅಥವಾ ಪಂಚಭೂತಗಳ ಆರಾಧನೆಯನ್ನು ಪ್ರತಿಯೊಬ್ಬರೂ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಇನ್ನು ವಾಸ್ತುವನ್ನು ಅವರೆಲ್ಲರೂ ಅನುಸರಿಸಿದ್ದರು ಎಂದು ಹೇಳಬೇಕೆಂದರೆ ಸುಲಭವಅದ ಉದಾಹರಣೆ ಎಂದರೆ ಧಾರ್ಮಿಕ ಸ್ಥಳಗಳು. ಹೌದು ಎಲ್ಲಾ ಧರ್ಮದ ದೇವಸ್ಥಾನಗಳು ಕೂಡ ಪಿರಾಮಿಡ್ ಆಕಾರದಲ್ಲೇ ಇವೆ. ಇವು ವಾಸ್ತು ಶಾಸ್ತ್ರವನ್ನು ತೋರುತ್ತವೆ. ಬೇರೆ ಬೇರೆ ಧರ್ಮಗಳ ದೇವಸ್ಥಾನದ ಗೋಪುರಗಳು ನೋಡುವುದಕ್ಕೆ ಬೇರೆ ಬೇರೆಯಾಗಿರಬಹುದು. ಆದರೆ, ಎಲ್ಲವುದರ ಮೂಲವೂ ಪಿರಾಮಿಡ್ ಆಕಾರವೇ ಆಗಿದೆ. ಪಿರಾಮಿಡ್ ರೀತಿ ಬಂದು ತುದಿಯಲ್ಲಿ ಚೂಪಾಗಿರುತ್ತದೆ. ಚರ್ಚ್, ಹಿಂದೂ ದೇವಾಲಯ, ಮಸೀದಿಗಳಲ್ಲೂ ಇದನ್ನು ನೋಡಬಹುದು.

ಇನ್ನು ಹಿಂದೂ ಧರ್ಮದ ದೇವಸ್ಥಾನಗಳು ಹೆಚ್ಚು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಬೆಟ್ಟದ ಮೂಲ ಆಕಾರವೇ ಪಿರಾಮಿಡ್ ಎಂದೇ ಅರ್ಥ. ಹಾಗಾಗಿ ಎಲ್ಲಾ ಧರ್ಮದವರೂ ಕೂಡ ವಾಸ್ತುವಿನ ಮೂಲ ತತ್ವಗಳನ್ನೇ ಆಧಾರವನ್ನಾಗಿಟ್ಟುಕೊಂಡು ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲಿಗೆ ಅನಾದಿ ಕಾಲದಲ್ಲೂ ವಾಸ್ತು ಶಾಸ್ತ್ರವನ್ನು ಅನುಸರಿಸುತ್ತಿದ್ದರು ಎಂಬುದನ್ನು ಡಾ.ರೇವತಿ ವೀ ಕುಮಾರ್ ಅವರು ಸುಲಭವಾಗಿ ಉದಾಹರಣೆ ಸಮೇತ ಹೇಳಿದ್ದಾರೆ.

Related News

spot_img

Revenue Alerts

spot_img

News

spot_img