31.4 C
Bengaluru
Friday, February 21, 2025

ಬೆಂಗಳೂರಿನಲ್ಲಿ ಸರ್ಕಾರದಿಂದ 2 BHK ಮನೆ ಬೇಕಾ? ಕೂಡಲೇ ಅರ್ಜಿ ಸಲ್ಲಿಸಿ

ಬೆಂಗಳೂರು: ಬೆಂಗಳೂರು ನಗರದಲ್ಲಿ ಸ್ವಂತ ಮನೆ ಹೊಂದಬೇಕು ಎಂಬ ಕನಸಿಟ್ಟುಕೊಂಡವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಮಾಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸೂರು ಕಲ್ಪಿಸುವ ಉದ್ದೇಶದಿಂದಲೇ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಜಾರಿ ಮಾಡಲಾಗಿದೆ. ಈ ಹಿಂದೆ ಇದ್ದಂತಹ “ವಾಜಪೇಯಿ ನಗರ ವಸತಿ ಯೋಜನೆ” ಹಾಗೂ ಕೇಂದ್ರ ಸರ್ಕಾರದ “ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)- ಸರ್ವರಿಗೂ ಸೂರು” ಯೋಜನೆಯಡಿ ಅನುದಾನವನ್ನು ಸಂಯೋಜಿಸಿಕೊಂಡು ಬಹುಮಹಡಿ ಬೆಂಗಳೂರು ವಸತಿ ಯೋಜನೆ ರೂಪಿಸಲಾಗಿದೆ. ಇದಲ್ಲದೆ, ಫಲಾನುಭವಿಗಳಿಂದ ವಂತಿಕೆ ಮತ್ತು ಯೋಜನೆಯಡಿ ನಿರ್ಮಿಸುವ ನಿವೇಶನ ಅಥವಾ ಬಹುಮಹಡಿ ಮನೆಗಳ ಅಥವಾ ಉಳಿಕೆ ಜಮೀನನ್ನು ಮಾರಾಟ ಮಾಡಿ ಬರುವ ಆದಾಯದಿಂದ ವಸತಿ ಯೋಜನೆಯನ್ನು ಕೈಗೊಳ್ಳಲಾಗುತ್ತದೆ.

ಬೆಂಗಳೂರು ನಗರಜಿಲ್ಲೆ ವ್ಯಾಪ್ತಿಯ 5 ತಾಲ್ಲೂಕುಗಳಲ್ಲಿ ಬರುವ ಐದು ತಾಲ್ಲೂಕುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಜಾರಿ ಮಾಡಲಾಗುತ್ತಿದೆ. ಎರಡು ಬೆಡ್‌ರೂಮ್‌ (2BHK) ಹೊಂದಿರುವ 8,096 ಫ್ಲಾಟ್/ ಮನೆಗಳನ್ನು Shear wall ತಂತ್ರಜ್ಞಾನವನ್ನು ಅಳವಡಿಸಕೊಂಡು ನಿರ್ಮಿಸಲಾಗುತ್ತಿದೆ. ಇವುಗಳ ಪೈಕಿ ಮೊದಲ ಹಂತದಲ್ಲಿ 3,138 (G+3 to S+14) ಫ್ಲಾಟ/ ಮನೆಗಳ ಹಂಚಿಕೆಗಾಗಿ ಆರ್ಜಿಗಳನ್ನು ಆಹ್ವಾನಿಸಲಾಗಿದೆ.

ಮನೆ ಹೇಗಿರುತ್ತದೆ?
ಪ್ರತಿ ಮನೆ/ ಫ್ಲಾಟ್‌ನ ಕಾರ್ಪೆಟ್ ಏರಿಯಾ 45 ಚ.ಮೀ. (486 ಚ.ಅಡಿ) ಇರುತ್ತದೆ. ಇದಲರಲ್ಲಿ ಒಂದು ಹಾಲ್, ಒಂದು ಮಲಗುವ ಕೋಣೆ (ಸ್ನಾನಗೃಹ ಸಹಿತ), ಒಂದು ಮಲಗುವ ಕೋಣೆ, ಒಂದು ಪ್ರತ್ಯೇಕ ಸ್ನಾನ ಹಾಗೂ ಶೌಚಗೃಹ, ಒಂದು ಅಡುಗೆ ಕೋಣೆಯೊಂದಿಗೆ ಯುಟಿಲಿಟಿ ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
2 ಬಿಎಚ್‌ಕೆ ಮನೆ/ ಫ್ಲಾಟ್‌ಗಳ ಹಂಚಿಕೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾಗಿರುವ ಆಗತ್ಯ ದಾಖಲೆಗಳು ಈ ರೀತಿ ಇವೆ:
* ಆಧಾರ್ ಸಂಖ್ಯೆ
* ಜಾತಿ ಪ್ರಮಾಣ ಪತ್ರ ಸಂಖ್ಯೆ (ಕಂದಾಯ ಇಲಾಖೆಯಿಂದ ನೀಡಲಾಗುವ ಸಂಖ್ಯೆಯನ್ನು ಮಾತ್ರ ನಮೂದಿಸಬೇಕು)
* ಕುಟುಂಬದ ಪಡಿತರ ಚೀಟಿ ಸಂಖ್ಯೆ (ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾಗಿರುವ ಪಡಿತರ ಚೀಟಿ ಸಂಖ್ಯೆಯನ್ನು ಮಾತ್ರ ನಮೂದಿಸಬೇಕು)
* ಕುಟುಂಬದ ಆದಾಯ ಪ್ರಮಾಣ ಪತ್ರ ಸಂಖ್ಯೆ (ಕಂದಾಯ ಇಲಾಖೆಯಿಂದ ನೀಡಲಾಗುವ ಸಂಖ್ಯೆಯನ್ನು ಮಾತ್ರ ನಮೂದಿಸಬೇಕು)
* ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕನಿಷ್ಟ ಐದು ವರ್ಷಕ್ಕಿಂತ ಮೇಲ್ಪಟ್ಟು ವಾಸವಾಗಿರುವ ವಾಸ ದೃಢೀಕರಣ ಪತ್ರ ಸಂಖ್ಯೆ (ಕಂದಾಯ ಇಲಾಖೆಯಿಂದ ನೀಡಲಾಗುವ ಸಂಖ್ಯೆಯನ್ನು ಮಾತ್ರ ನಮೂದಿಸಬೇಕು)
* ಬ್ಯಾಂಕ್ ಖಾತೆ ಸಂಖ್ಯೆ (ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, ಬ್ರಾಂಚ್ ಹೆಸರು, ಐಎಫ್‌ಎಸ್‌ಸಿ ಸಂಖ್ಯೆ)
* ದಿವ್ಯಾಂಗ ಚೇತರ ಗುರುತಿನ ಚೀಟಿ (ಸರ್ಕಾರದ ಅಧಿಕೃತ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿ

ಹಣ ಪಾವತಿ ಹೇಗೆ ಮಾಡಬೇಕು?
ಒಂದು ಬಿಎಚ್‌ಕೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಸಬ್ಸಿಡಿ ದರದಲ್ಲಿ ಮನೆಗಳನ್ನು ಹಂಚಿಕೆ ಮಾಡುತ್ತದೆ. ಆದರೆ, 2 ಬಿಎಚ್‌ಕೆಗೆ ಯಾವುದೇ ಸಬ್ಸಿಡಿ ನೀಡುತ್ತಿಲ್ಲ. ಬಡ ಮತ್ತು ಮಧ್ಯಮವರ್ಗದವರಿಗೆ ಈ ಮನೆಗಳನ್ನು ಹಂಚಿಕೆ ಮಾಡುತ್ತಿರುವುದರಿಂದ ಈ ಹಿಂದೆ ನಿಗದಿಪಡಿಸಲಾಗಿದ್ದ 15 ಲಕ್ಷ ರೂಗಳ ದರದಲ್ಲಿ ಒಂದು ಲಕ್ಷ ರೂ. ಕಡಿಮೆ ಮಾಡಿ 14 ಲಕ್ಷ ರೂ. ಎಂದು ನಿಗದಿಪಡಿಸಿ ಕಳೆದ ಆಗಸ್ಟ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. ಅದರಂತೆ ಈಗ ಎರಡು ಬಿಎಚ್‌ಕೆ ಮನೆ/ ಫ್ಲಾಟ್ ಪ್ರತಿ ಘಟಕದ ಅಂದಾಜು ಮೊತ್ತ 14 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ.

1ನೇ ಕಂತನ್ನು ಅರ್ಹತೆ ಪರಿಶೀಲಿಸಿದ ಕೂಡಲೇ 3 ಲಕ್ಷ ರೂ. ಪಾವತಿಸಬೇಕಾಗುತ್ತದೆ. 2ನೇ ಕಂತನ್ನು ಫ್ಲಾಟ್ ಆಯ್ಕೆ ಮಾಡಿದ 30 ದಿನಗಳ ಒಳಗೆ (ಸ್ವ ಉಳಿತಯಾ/ ಬ್ಯಾಂಕ್ ಲೋನ್) 5 ಲಕ್ಷ ರೂ. ಪಾವತಿಸಬೇಕು. 3ನೇ ಕಂತನ್ನು ಫ್ಲಾಟ್ ನೋಂದಣಿ ಮಾಡಿಕೊಳ್ಳುವಾಗ 6 ಲಕ್ಷ ರೂ. ಪಾವತಿಸಬೇಕು ಎಂದು ನಿಗದಿಪಡಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ: https://ashraya.karnataka.gov.in/ ವೆಬ್‌ಸೈಟ್ ವೀಕ್ಷಿಸಬಹುದು. ಇಲ್ಲಿಯೇ ಅರ್ಜಿ ಸಲ್ಲಿಸುವ ಲಿಂಕ್ ಸಹ ಲಭ್ಯವಿದೆ.
ಮೊಬೈಲ್:
9164239699
9448277072
9606138200
8660807796
9448021564
7975956234

Related News

spot_img

Revenue Alerts

spot_img

News

spot_img