25.4 C
Bengaluru
Wednesday, January 15, 2025

ಹಿರಿಯ ನಟಿ ಲೀಲಾವತಿ ವಿಧಿವಶ ;ಆರು ನೂರು ಸಿನಿಮಾಗಳಲ್ಲಿ ಅಭಿನಯಿಸಿದ ಕನ್ನಡದ ಅಪ್ರತಿಮ ಕಲಾವಿದೆ ಇನ್ನಿಲ್ಲ

ಬೆಂಗಳೂರು;ಕೆಲದಿನಗಳಿಂದ ವಯೋಸಹಜ ಆರೋಗ್ಯ . ಸಮಸ್ಯೆಯಿಂದ ಯಾಗಿ ಬಳಲುತ್ತಿದ್ದ ಲೀಲಾವತಿ ಅವರು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಕೊನೆಯುಸಿರೆಳೆದರು. ವಿನೋದ್ ಅವರನ್ನು ಲೀಲಾವತಿ ಆಗಲಿದ್ದಾರೆ. ಲೀಲಾವತಿ ನಗಳಲ್ಲಿ ಅವರ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದಂತಾಗಿದೆ.1937ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಲೀಲಾವತಿ ನಿಧನಕ್ಕೆ ಕನ್ನಡ ಚಿತ್ರರಂಗದ ಕಲಾವಿದರು, ಗಣ್ಯರು ಸಂತಾಪ ಸೂಚಿಸಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ನಟ ದರ್ಶನ್, ಅಭಿಷೇಕ್, ಸಿಎಂ ಸಿದ್ದರಾಮಯ್ಯ ಹೀಗೆ ಸಾಕಷ್ಟು ಮಂದಿ ಗಣ್ಯರು ಸೋಲದೇವನಹಳ್ಳಿಯ ಅವರ ನಿವಾಸಕ್ಕೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದ್ದರು. ಈ ವೇಳೆ, ಪುತ್ರ ವಿನೋದ್ ರಾಜ್ ಕುಮಾರ್ ತಮ್ಮ ತಾಯಿ ಮತ್ತೆ ಮೊದಲಿನಂತಾಗುವ ವಿಶ್ವಾಸವನ್ನು ಎಲ್ಲರ ಬಳಿಯೂ ವ್ಯಕ್ತಪಡಿಸಿದ್ದರು.ಲೀಲಾವತಿ ಅವರು ಆರಂಭದಲ್ಲಿ ‘ಚಂಚಲಾ ಕುಮಾರಿ’ & ‘ನಾಗ ಕನ್ನಿಕಾ’ ಚಿತ್ರದಲ್ಲಿ ಸಣ್ಣಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಅವರು ಮಹಾಲಿಂಗ ಭಾಗವತರ ‘ಶ್ರೀ ಸಾಹಿತ್ಯ ಸಾಮ್ರಾಜ್ಯ’ ನಾಟಕ ಕಂಪನಿಯ ತಂಡ ಸೇರಿದರು.

ಸುನ್ನೈನಾಯ್ಡುರ ಭಕ್ತ ಪ್ರಹ್ಲಾದ & ಮಾಂಗಲ್ಯ ಯೋಗ, ಧರ್ಮ ವಿಜಯ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದರು. 1960ರಲ್ಲಿ ‘ರಾಣಿ ಹೊನ್ನಮ್ಮ’ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕಿಯಾಗಿ ಹೊರಹೊಮ್ಮಿದರು. ಒಟ್ಟು 600 ಚಿತ್ರದಲ್ಲಿ ಅಭಿನಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.ನಟಿ ಲೀಲಾವತಿ ಅವರ ಅಂತ್ಯ ಸಂಸ್ಕಾರವನ್ನು ಪುತ್ರ ವಿನೋದ್ ರಾಜ್ ಆಸೆಯಂತೆ ನೆಲಮಂಗಲದ ಸೋಲದೇವನಹಳ್ಳಿಯ ತೋಟದಲ್ಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತದೆಂದು ದಕ್ಷಿಣ ವಲಯ ಐಜಿಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. ಜೂನಿಯ‌ರ್ ಕಾಲೇಜಿನ ಅಂಬೇಡ್ಕ‌ರ್ ಮೈದಾನಕ್ಕೆ ಕೊಂಡೊಯ್ದು ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂದಿದ್ದಾರೆ.ಲೀಲಾವತಿ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಸಿನಿಮಾ ಕಲಾವಿದರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ಮಿಸಿದ್ದರುಲೀಲಾವತಿ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಸಿನಿಮಾ ಕಲಾವಿದರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ಮಿಸಿದ್ದರು

Related News

spot_img

Revenue Alerts

spot_img

News

spot_img