22 C
Bengaluru
Monday, December 23, 2024

ಬರುವ ಆದಾಯದಲ್ಲಿ ಹಣ ಉಳಿತಾಯ ಮಾಡುವುದೇಗೆ ?

ಬೆಂಗಳೂರು, ಡಿ. 12: ಪ್ರತಿಯೊಬ್ಬರಿಗೂ ಹಣ ಉಳಿತಾಯ ಮಾಡುವುದು ಒಂದು ದೊಡ್ಡ ಸವಾಲು ಎಂದರೆ ತಪ್ಪಾಗುವುದಿಲ್ಲ. ಕೆಲವೊಮ್ಮೆ ಹಣವನ್ನು ಉಳಿಸುವುದು ಕಷ್ಟವಾದ ಟಾಸ್ಕ್‌ ಆಗಿರುತ್ತದೆ. ಹಣ ಉಳಿತಾಯ ಮಾಡುವುದು ಕಷ್ಟ ಎಂಬುವವರಿಗಾಗಿ ನಾವಿಲ್ಲ ಸರಳವಾದ ಸೂತ್ರಗಳನ್ನು ಹೇಳಲಾಗಿದೆ. ಈ ಸಲಹೆಗಳನ್ನು ತಿಳಿದು ಪ್ರತಿ ತಿಂಗಳು ಹಣ ಉಳಿಸುವುದು ಎಂಬುದನ್ನು ತಿಳಿಯಬಹುದು. ಅಲ್ಪಾವಧಿ ಹಾಗೂ ದೀರ್ಘಾವಧಿಗಾಗಿ ಹಣವನ್ನು ಉಳಿಸುವುದನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಿಕೊಡಲಾಗಿದೆ.

ಖರ್ಚಿನ ಬಗ್ಗೆ ಗಮನವಿಟ್ಟು ಲೆಕ್ಕವಿಡಿ

ಹಣವನ್ನು ಉಳಿಸಲು ಪ್ರಾರಂಭಿಸುವ ಮೊದಲ ಹಂತವೆಂದರೆ ನೀವು ಎಷ್ಟು ಖರ್ಚು ಮಾಡುತ್ತೀರಿ ಎಂಬುದನ್ನು ತಿಳಿದುಕೊಳ್ಳುವುದು. ಪ್ರತಿ ತಿಂಗಳು ನೀವು ಮಾಡುವ ನಿಮ್ಮ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಿ. ಅಂದರೆ ಸಂಬಳದ ಪೂರ್ತಿ ಹಣವನ್ನು ಯಾವುದಕ್ಕಾಗಿ ಖರ್ಚು ಮಾಡುತ್ತಿದ್ದಿರಿ ಎಂಬುದು ತಿಳಿದಿರಲಿ. ಕಾಫಿ, ಗೃಹೋಪಯೋಗಿ ವಸ್ತುಗಳು, ಅನಿಲ, ದಿನಸಿ, ಓಡಾಟ, ಶಾಪಿಂಗ್ ಹಾಗೂ ನಿಯಮಿತ ಮಾಸಿಕ ಬಿಲ್‌ಗಳು ಎಲ್ಲವನ್ನೂ ಲೆಕ್ಕವಿಡಿ. ಲೆಕ್ಕ ಮಾಡಲು ಪೇಪರ್, ಸ್ಪ್ರೆಡ್‌ಶೀಟ್ ಅಥವಾ ಉಚಿತ ಆನ್‌ಲೈನ್ ಖರ್ಚು ಟ್ರ್ಯಾಕರ್ ಅಪ್ಲಿಕೇಶನ್ ಗಳನ್ನು ಬಳಸಿ. ಈ ಮೂಲಕ ನಿಮ್ಮ ಖರ್ಚುಗಳನ್ನು ರೆಕಾರ್ಡ್ ಮಾಡಿ. ತಿಂಗಳ ಕೊನೆಯಲ್ಲಿ ಖರ್ಚು ಮಾಡಿರುವುದನ್ನು ಟೋಟಲ್‌ ಮಾಡಿ.

ತಿಂಗಳ ಖರ್ಚಿನಲ್ಲಿ ಉಳಿತಾಯವನ್ನೂ ಸೇರಿಸಿ

ಲೆಕ್ಕವಿಟ್ಟರೆ ಒಂದು ತಿಂಗಳಲ್ಲಿ ನೀವು ಎಷ್ಟು ಖರ್ಚು ಮಾಡುತ್ತೀರಿ ಎಂಬುದು ನಿಮಗೆ ತಿಳಿದಿರುತ್ತದೆ. ನಿಮ್ಮ ಸಂಬಳ ಅಥವಾ ಆದಾಯಕ್ಕೆ ತಕ್ಕಂತೆ ಖರ್ಚುಗಳ ಲಿಸ್ಟ್‌ ಮಾಡಿ. ಆಗ ನಿಮಗೆ ತೀರಾ ಅವಶ್ಯಕವಿದ್ದ ವಸ್ತುವಿಗಅಗಿ ಖರ್ಚು ಮಾಡಿ, ಅನಗತ್ಯವಾದ ವೆಚ್ಚವನ್ನು ಮಿತಿಗೊಳಿಸಬಹುದು. ಬಳಿಕ ಪ್ರರೀ ತಿಂಗಳು ನಿಮ್ಮ ಬಜೆಟ್‌ ನಲ್ಲಿ ಎಲ್ಲೆಲ್ಲಿ ಖರ್ಚನ್ನು ಮಿತಿಗೊಳಿಸಬಹುದು ಎಂಬುದನ್ನು ಗಮನಿಸಿ, ವೆಚ್ಚವನ್ನು ಕಡಿಮೆ ಮಾಡಿ. ಉದಾಹರಣೆಗೆ ಕಾರನ್ನು ಅಗತ್ಯವಿದ್ದಲ್ಲಿ ಬಳಸಿ, ಆಗ ಮೆಂಟೇನೆನ್ಸ್‌ ಖರ್ಚು ಉಳಿಯುತ್ತದೆ. ಇನ್ನು ನಿಮ್ಮ ಖರ್ಚಿನ ಲಿಸ್ಟ್‌ ನಲ್ಲಿ ಉಳಿತಾಯದ ಬಜೆಟ್‌ ಅನ್ನೂ ಸೇರಿಸಿ. ನಿಮ್ಮ ಆದಾಯ ಶೇ.20 ಪ್ರತಿಶತದಷ್ಟು ಹಣವನ್ನು ಉಳಿತಾಯ ಮಾಡುವ ಯೋಜನೆ ರೂಪಿಸಿ.

ನಿಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಿ

ನೀವು ಬಯಸಿದಷ್ಟು ಉಳಿಸಲು ಸಾಧ್ಯವಾಗದಿದ್ದರೆ, ಖರ್ಚುಗಳನ್ನು ಕಡಿತಗೊಳಿಸಲು ಯತ್ನಿಸಿ. ನೀವು ಎಲ್ಲೆಲ್ಲಿ ಕಡಿಮೆ ಖರ್ಚು ಮಾಡಬಹುದು ಎಂಬುವುದರ ಕಡೆಗೆ ಗಮನ ಹರಿಸಿ. ಹೊರಗಡೆ ತಿನ್ನುವುದು. ಅನವಶ್ಯಕವಾದ ವಿಚಾರಗಳಿಗೆ ಖರ್ಚು ಮಾಡುವುದನ್ನು ಜಾಣತನದಿಂದ ಕಡಿಮೆ ಮಾಡಿ. ನಿಮ್ಮ ಭವಿಷ್ಯಕ್ಕಾಗಿ ಉಳಿಸಿ, ನಿವೃತ್ತಿಯ ಬದುಕಿಗಾಗಿ ಇಂದಿನ ಆದಾಯದಲ್ಲಿ ಹೆಚ್ಚು ಉಳಿತಾಯ ಮಾಡಿ. ನಿವೃತ್ತಿವರೆಗೂ ಮುಟ್ಟಬಾರದು ಎಂದು ಹಣ ಉಳಿತಾಯ ಮಾಡಿ. ಆಗ ನಿಮ್ಮ ಭವಿಷ್ಯದಲ್ಲೂ ಃಣದ ಕೊರತೆ ಉಂಟಾಗುವುದಿಲ್ಲ.

ಉಳಿತಾಯಕ್ಕಾಗಿ ಉಪಾಯ ಮಾಡಿ

ನಿಮ್ಮ ಆದಾಯದಲ್ಲಿ ಉಳಿತಾಯ ಮಾಡುವುದುಕ್ಕೆ ಉಪಾಯವನ್ನು ಮಾಡಿ. ವಿವಿಧ ರೀತಿಯ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿ. ಜೀವ ವಿಮಾ ಕಟ್ಟುವುದು. ಸಣ್ಣ ಸಣ್ಣ ಹಣವನ್ನೂ ನಿಮ್ಮದಲ್ಲ ಎಂದು ತಿಳಿದು ಸೇವಿಂಗ್ಸ್‌ ಮಾಡಿ. ಸೇವ್‌ ಮಾಡಿದ ಹಣವನ್ನು ಎಫ್‌ ಡಿ ಮಾಡಿ ಇಡಿ. ನಿಮ್ಮದಲ್ಲ ಎಂದು ತೆಗೆದಿಡಿ. ತಿಂಗಳು ತಿಂಗಳು ಕಳೆಯುತ್ತಾ ಉಳಿತಾಯದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿ. ಇನ್ನು ವರ್ಷದ ತುರ್ತು ಪರೀಸ್ಥಿತಿಗೆ ಬಳಕೆಯಾಗಲಿ ಎಂದು ಕೂಡ ಸಣ್ಣ-ಪುಟ್ಟ ಹಣವನ್ನು ಉಳಿತಾಯ ಮಾಡಿ. ಆಗ ತುರ್ತು ಸಂದರ್ಭದಲ್ಲಿ ಹಣದ ಹೊರೆ ಆಗುವುದಿಲ್ಲ. ಉಳಿತಾಯ ಮಾಡಬೇಕು ಎಂದು ಧೃಢ ನಿರ್ಧಾರ ಮಾಡಿ. ಆಗ ಖಂಡಿತವಾಗಿಯೂ ಉಳಿತಾಯ ಮಾಡಬಹುದು.

Related News

spot_img

Revenue Alerts

spot_img

News

spot_img