24.2 C
Bengaluru
Sunday, December 22, 2024

ನಿಮ್ಮ ಆರೋಗ್ಯ, ಸಂಪತ್ತು, ಆಧ್ಯಾತ್ಮದ ಗುಟ್ಟು ಈಶಾನ್ಯ ಧಿಕ್ಕು!

ಬೆಂಗಳೂರು: ಈಶಾನ್ಯ ಧಿಕ್ಕು ದೇವತೆಗಳ ನಿವಾಸ. ಒಂದು ಮನೆ ನಿರ್ಮಿಸುವಾಗ ಈಶಾನ್ಯ ಧಿಕ್ಕನ್ನು ಅತಿ ಸೂಕ್ಷ್ಮವಾಗಿ ಗಮನಿಸಿ ನಿರ್ಮಿಸಬೇಕು. ಈಶಾನ್ಯ ಧಿಕ್ಕಿನಲ್ಲಿ ಏನಿರಬೇಕು ಏನಿರಬಾರದು ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.ಈಶಾನ್ಯ ದಿಕ್ಕನ್ನು ಉಪ ದೇಶ ಧಿಕ್ಕು ಎಂದು ಕರೆಯುತ್ತೇವೆ. ಉಪ ದಿಕ್ಕು ಎಂದು ಕರೆಯುತ್ತಾರೆ. ಎರಡು ಮುಖ್ಯ ದಿಕ್ಕುಗಳ ನಡುವಿನ ಕೋನ. ಉತ್ತರ ಮತ್ತು ಪೂರ್ವ ಧಿಕ್ಕಿನ ನಡುವಿನ ಕೋನ.

ಈಶಾನ್ಯ ದಿಕ್ಕನ್ನು ದೇವತಗಳ ನಿವಾಸ ಎಂದು ಭಾವಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯನ ಕಿರಣಗಳು ಪ್ರಥಮವಾಗಿ ಮನೆಯ ಯಾವ ಭಾಗಕ್ಕೆ ಬೀಳುತ್ತವೋ ಅದನ್ನು ಈಶಾನ್ಯ ದಿಕ್ಕು ಎಂದು ಕರೆಯಲಾಗುತ್ತದೆ.
ನಾಲ್ಕು ಕೋನಗಳಲ್ಲಿ ಇದು ಪವಿತ್ರವಾದ ಧಿಕ್ಕು. ಈಶಾನ್ಯ, ವಾಯುವ್ಯ, ಆಗ್ನೇಯ, ನೈರುತ್ಯ ದಿಕ್ಕಿನಲ್ಲಿ ಈಶಾನ್ಯ ಪವಿತ್ರ ದಿಕ್ಕು. ಆದ್ದರಿಂದ ಆರಾಧನೆ, ಸಾಧನೆ, ವಿದ್ಯಾರ್ಜನೆ, ಲೇಖನ ಮತ್ತು ಸಾಹಿತ್ಯಿಕ ಚಟುವಟಿಕೆಗಳಿಗೆ ಶುಭ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಈ ಕೋನ ಮನುಷ್ಯನಿಗೆ ಬುದ್ಧಿ , ಜ್ಞಾನ, ವಿವೇಕ, ದೈರ್ಯ ಸಾಹಸವನ್ನು ನೀಡಿ ಸಕಲ ಕಷ್ಟಗಳಿಂದ ರಕ್ಷಿಸುತ್ತದೆ.

ಪೂಜ್ಯನೀಯವಾದ ಈ ಕೋನವನ್ನು ಸದಾ ಕಾಲ ಹಾಗೂ ಪಾವನ ಹಾಗೂ ಸ್ವಚ್ಛವಾಗಿ ಇರಿಸಿಕೊಳ್ಳುವುದು ಅತಿ ಮುಖ್ಯ.ಒಂದು ವೇಳೆ ಈಶಾನ್ಯ ಕೋನವನ್ನು ಅಶುದ್ಧವಾಗಿ ಇರಿಸಿಕೊಂಡರೆ, ಮನೆಯಲ್ಲಿ ಕಲಹ, ವಿಭಿನ್ನ ಕಷ್ಟಗಳು ತಲೆದೂರಿ, ವ್ಯಕ್ತಿಯ ಬುದ್ಧಿ ಭ್ರಷ್ಟವಾಗುತ್ತದೆ. ಹೆಚ್ಚಾಗಿ ಹೆಣ್ಣು ಸಂತಾನದ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಈಶಾನ್ಯ ಕೋನ ಅತಿ ಮುಖ್ಯವಾಗಿದೆ.ಪಂಚ ಭುತಗಳ ತತ್ವದಲ್ಲಿ ಇದು ಜಲ ತತ್ವದ ಕ್ಷೇತ್ರವಾಗಿದೆ. ಇಲ್ಲಿ ಜಲಾಶಯ, ಜಲ ಸಂಗ್ರಹ, ಇತ್ಯಾದಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬಹುದು. ಡ್ರಾಯಿಂಗ್ ರೂಮ್ ನ್ನು ಈಶಾನ್ಯಕೋನದಲ್ಲಿ ಅಥವಾ ಫಿಶ್ ಟ್ಯಾಂಕ್ ಅಕ್ವೇರಿಯಂ ಇರಿಸಿದರೆ ತುಂಬಾ ಒಳ್ಳೆಯದು ಎಂದು ಭಾವಿಸಲಾಗಿದೆ.

ಈಶಾನ್ಯ ಧಿಕ್ಕಿನ ಸ್ವಾಮಿ ರುದ್ರ. ಆಯುಧ ತ್ರಿಶೂ. ಪ್ರತಿ ನಿಧಿ ಗ್ರಹ ಬುಧ ಮತ್ತು ಖೇತು ಗ್ರಹ. ಇದರ ಮೇಲೆ ಕಾಲ ಪುರುಷನ ಬಲಗಣ್ಣಿನ ಪ್ರಭಾವ ಇರುತ್ತದೆ. ಜನ್ಮ ಕುಂಡಲಿಯ ದ್ವಿತೀಯ ಹಾಗೂ ತೃತೀಯ ಭಾವಗಳು ಈಶಾನ್ಯ ದಿಕ್ಕಿನಲ್ಲಿರುತ್ತವೆ. ಈಶಾನ್ಯ ಧಿಕ್ಕು ತುಂಬಾ ಪವಿತ್ರವಾಗಿರುವುದರಿಂದ ಯಾವಾಗಲೂ ಯಾವುದೇ ಭಾರ ಇಲ್ಲದೇ ಕೊಳಕು ಇಲ್ಲದೇ, ಖಾಲಿಯಾಗಿಡುವುದು ತುಂಬಾ ಒಳ್ಳೆಯದು.

ಈಶಾನ್ಯ ದಿಕ್ಕಿನಲ್ಲಿ ದೊಡ್ಡ ಹಾಲು, ಪಡಸಾಲೆ ಇದ್ದರೆ ತುಂಬಾ ಶುಭ. ಕಾಲ ಪುರುಷ ಇಂತಹ ಮನೆಯಲ್ಲಿ ಪೂರ್ವ ಹಾಗೂ ಈಶಾನ್ಯ ಧಿಕ್ಕಿನ ಮೂಲಕ ಪ್ರವೇಶಿಸುತ್ತಾನೆ. ಈ ಧಿಕ್ಕಿನಲ್ಲಿ ಶೌಚಾಲಯ ಇದ್ದರೆ ವಂಶ ಕ್ಷೀಣಿಸುತ್ತದೆ. ಪ್ರಗತಿ ಹೊಂದುವುದಿಲ್ಲ. ಸಂತಾನ ಆಲಸಿ ಪ್ರೌವೃತ್ತಿ ಇರುತ್ತದೆ. ಯಾವಾಗಲೂ ಮನೆಯಲ್ಲಿ ಜಗಳ ಇರುತ್ತದೆ. ಒಂದು ವೇಳೆ ನಿರ್ಮಾಣ ಕಾರಣದಿಂದ ಈಶಾನ್ಯ ಧಿಕ್ಕು ಮುಚ್ಚಲ್ಪಟ್ಟುತ್ತಿದ್ದರೂ ಕೆಟ್ಟ ಪ್ರಭಾವ ಉಂಟಾಗುತ್ತದೆ.

ಪೂರ್ವ ಮತ್ತು ಉತ್ತರ ದಿಕ್ಕುಗಳು ಕಲೆತಂತಿದ್ದರೆ ಅಂತಹ ಮನೆಯಲ್ಲಿ ಸಾಕಷ್ಟು ಧನ ಸಂಪತ್ತು ಇದ್ದರೂ ನೀರಸ ಜೀವನ ನಡೆಸುತ್ತಾರೆ. ಸಂತಾನ ಪ್ರಾಪ್ತಿಯಾಗುವುದಿಲ್ಲ. ದತ್ತಕ ಪುತ್ರನನ್ನು ಪಡೆದರೆ, ಪುತ್ರನಿಂದ ಏನೂ ಪ್ರಯೋಜನ ಆಗುವುದಿಲ್ಲ.ಪೂರ್ವ ಧಿಕ್ಕಿನ ಸ್ಥಳ ಕಡಿಮೆ ಇದ್ದು, ಪೂರ್ವ ಧಿಕ್ಕಿನಲ್ಲಿ ಕಟ್ಟಡ ನಿರ್ಮಿಸಿದ್ದರೆ, ಮನೆಯ ಯಜಮಾನ ಅಥವಾ ಆತನ ಹಿರಿಯ ಪುತ್ರ, ಈ ಮೇಲೆ ವಿವರಿಸಿದ ಅನುಭವಗಳು ಆಗುವುದು. ಮೂರನೇ ತಲೆ ಮಾರಿನ ಒಳಗೆ ವಂಶ ನಿಂತು ಹೋಗುತ್ತದೆ.

ಒಂದು ವೇಳೆ ಉತ್ತರ ಧಿಕ್ಕಿನ ಎತ್ತರ ಕಡಿಮೆಯಾಗಿ, ಉತ್ತರದಲ್ಲಿ ಕಟ್ಟಡ ಇದ್ದರೆ ಮನೆಯ ಗೃಹಿಣಿ ರೋಗಗ್ರಸ್ಥಳಾಗುತ್ತಾಳೆ. ಅಥವಾ ಅಕಾಲಿಕ ಮೃತ್ಯವಾಗುತ್ತದೆ. ಆರ್ಥಿಕ ತೊಂದರೆ ಉಂಟಾಗಿ ದುಃಖ ಜೀವನ ನಡೆಸುತ್ತಾರೆ. ಬ್ಲಾಕ್ ಅಂತ್ಯದಲ್ಲಿ ಮನೆ ಇದ್ದರೆ, ನೈರುತ್ಯ ಭಾಗದಲ್ಲಿ ಎತ್ತರ ವಿದ್ದರೆ ದುಷ್ಕರಿಣಾಮ ಅನುಭವಿಸಬೇಕಾಗುತ್ತದೆ. ಒಂದು ವೇಳೆ, ಮನೆಯ ಅಥವಾ ನಾಲ್ಕು ಗೋಡೆಗಳು ಈಶಾನ್ಯ ಭಾಗ ಮುಚ್ಚಲ್ಪಟ್ಟಿದ್ದರೆ ಸಂತಾನ ಪ್ರಾಪ್ತಿ ಅಗುವುದಿಲ್ಲ. ಆದರೂ ಕೂಡ ವಿಕಲಾಂಗ, ಮತಿ ಭ್ರಮಣ, ಅಲ್ಪಾಯುಷ್ಯ ಆಗಿರುತ್ತದೆ. ಈಶಾನ್ಯ ಕೋನ ಬಿಟ್ಟಿದ್ದರೆ ಅಥವಾ ಮುಚ್ಚಲ್ಪಟ್ಟಿದ್ದರೆ ಸಂತಾನ ಸಮಸ್ಯೆ ಇರುತ್ತದೆ. ಈಶಾನ್ಯ ಭಾಗ ಎತ್ತರವಾಗಿದ್ದರೆ, ಧನ ಹಾನಿ, ಈಶಾನ್ಯ ಭಾಗದಲ್ಲಿ ಗುಡಿಸಲು ಉತ್ತರ ಮತ್ತು ಪೂರ್ವಕ್ಕೆ ಅಂಟಿಕೊಂಡಿದ್ದರೆ ವಂಶ ವಿನಾಶ ಮತ್ತು ದಾರಿದ್ರ್ಯ ಉಂಟಾಗುತ್ತದೆ. ಈಶಾನ್ಯ ಭಾಗದಲ್ಲಿ ಕಸ, ಕಡ್ಡಿ ಇದ್ದರೆ ಶತೃ ವೃದ್ಧಿಯಾಗುತ್ತದೆ. ಆಯುಷ್ಯ ಕಡಿಮೆಯಾಗಿ ದುಶ್ಚರಿತ್ರದ ಫಲ ಉಂಟಾಗುತ್ತದೆ.

ಈಶಾನ್ಯ ಭಾಗದಲ್ಲಿ ಅಡುಗೆ ಮನೆಯಿದ್ದರೆ, ಗೃಹ ಕಲಹ, ಧನ ನಾಶವಾಗುತ್ತದೆ.ಪೂರ್ವ ಮತ್ತು ಉತ್ತರ ರಸ್ತೆಗಳು ಮನೆಗಿಂತಲೂ ಎತ್ತರದಲ್ಲಿದ್ದರೆ ಅಂತಹ ಮನೆಯಲ್ಲಿ ವಾಸಿಸುವರು ಆಪೇಕ್ಷಿತ ಶುಭ ಫಲಗಳಿಂದ ವಂಚಿತರಾಗುತ್ತಾರೆ.ನಾಲ್ಕು ಗೋಡಗಳ ಈಶಾನ್ಯ ಧಿಕ್ಕು ಸರಿಯಾಗಿದ್ದು, ಮನೆಯ ಈಶಾನ್ಯ ಧಿಕ್ಕು ಅದೃಶ್ಯವಾಗಿದ್ದರೆ, ಮನೆಯ ಯಜಮಾನ ತನ್ನ ಸಂತಾನವನ್ನು ಸ್ಮಶಾನಕ್ಕೆ ತಲುಪಿಸುವನಾಗುತ್ತಾನೆ. ಭಾವಿ, ಟ್ಯಾಂಕ್ , ನೀರಿನ ಮೂಲ ಇವುಗಳನ್ನು ಈಶಾನ್ಯ ಕೊಳದಲ್ಲಿ ಮಾಡಿದರೆ ತುಂಬಾ ಒಳ್ಳೆಯದು. ಪೂಜಾ ಕೋಣೆ, ಮಂದಿರ ಇದ್ದರೂ ತುಂಬಾ ಒಳ್ಳೆಯದು. ಮನೆಯನ್ನು ತೊಳೆದಾಗ, ನೀರು ಈಶಾನ್ಯ ಧಿಕ್ಕಿನ ಮೂಲಕ ಹೊರಗೆ ಹೋದರೆ ಉತ್ತಮ. ಮರೆತು ಕೂಡ ಸ್ನಾನದ ಮನೆಯನ್ನು ಈಶಾನ್ಯ ಅಥವಾ ಆಗ್ನೇಯ ಕೋಣೆಯಲ್ಲಿ ನಿರ್ಮಿಸಬಾರದು.

ಮನೆಗೆ ಸ್ವಾಗತ ಕಕ್ಷೆ, ಡ್ರಾಯಿಂಗ್ ರೂಮ್, ಪೂರ್ವ ಧಿಕ್ಕು ಅಥವಾ ವಾಯುವ್ಯ ಧಿಕ್ಕು ಅಥವಾ ಈಶಾನ್ಯ ಕೋನದಲ್ಲಿರಬೇಕು. ಅಶುದ್ಧ ನೀರು ಅಥವಾ ಮೋರಿಗಳು ಹೊರಗೆ ಹೋಗಲು ಪೂರ್ವ ಮತ್ತು ಉತ್ತರ ವಾಯುವ್ಯ ಕೋನ, ಈಶಾನ್ಯ ಕೋನಗಳು ಉತ್ತಮ.ಭೂಗತ ನೀರಿನ ಟ್ಯಾಂಕ್ ಉತ್ತರ, ಪೂರ್ವ ಹಾಗೂ ಈಶಾನ್ಯ ಕೋನದಲ್ಲಿ ನಿರ್ಮಿಸುವುದು ಒಳ್ಳೆಯದು. ಈ ದೋಷವಿದ್ದರೆ ನಿವಾರಣೆಗಾಗಿ, ಮನೆಯ ತ್ವಾರಣಕ್ಕೆ ರುದ್ರತೋರಣ ಕಟ್ಟಬೇಕು. ಸೋಮವಾರ ವೃತ ಮಾಡಬೇಕು. ಶಿವನ ಆರಾಧನೆ ಮಾಡಬೇಕು. ಮನೆಯ ಸ್ತ್ರೀ ಸೋಮವಾರ ಉಪವಾಸ ಮಾಡಬೇಕು. ಈಶಾನ್ಯ ಧಿಕ್ಕಿನಲ್ಲಿ ಮೆರ್ಕ್ಯುರಿ ಬಲ್ಪ್ ಉರಿಸಬೇಕು. ಗಣೇಶ ಮತ್ತು ಶಿವನ ಫೋಟೋ ಇಡಬೇಕು. ವಾಸ್ತು ಶಾಂತಿ ಯಂತ್ರ ಹಾಗೂ ವಾಸ್ತು ಪುರುಷ ಯಂತ್ರ ದೇವರ ಕೋಣೆಯಲ್ಲಿಟ್ಟು ಪೂಜಿಸಬೇಕು. ಮಣ್ಣಿನ ಗಡಿಗೆಯಲ್ಲಿ ನೀರು ತುಂಬಿ ಈಶಾನ್ಯ ಧಿಕ್ಕಿನಲ್ಲಿಡಬೇಕು.

Related News

spot_img

Revenue Alerts

spot_img

News

spot_img