24.3 C
Bengaluru
Saturday, December 21, 2024

Vastu;ಮನೆಯಲ್ಲಿ ತಪ್ಪಾದ ದಿಕ್ಕಿನಲ್ಲಿ ಇರಿಸಿದ ಟಿವಿ ಧನ ಹಾನಿಗೆ ಕಾರಣ, ಅದು ಈ ದಿಕ್ಕಿನಲ್ಲಿ ಇದ್ದರೆ ಮಾತ್ರ ಶುಭ

ಬೆಂಗಳೂರು;ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿ ಕೆಲಸಕ್ಕೂ ನಿರ್ದೇಶನವನ್ನು ನೀಡಲಾಗುತ್ತದೆ. ವಾಸ್ತುವಿನಲ್ಲಿ ಮನೆಯ ಮುಖ್ಯ ದ್ವಾರ, ಕಿಟಕಿ ಬಾಗಿಲಿನಿಂದ ಹಿಡಿದು ಅಡುಗೆಮನೆ, ಮಲಗುವ ಕೋಣೆ ಮತ್ತು ಸ್ನಾನಗೃಹದವರೆಗೆ ಎಲ್ಲದಕ್ಕೂ ನಿರ್ದಿಷ್ಟ ದಿಕ್ಕನ್ನು ತಿಳಿಸಲಾಗಿದೆ. ಅಂತೆಯೇ, ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಇಡುವ ವಸ್ತುಗಳಿಗೂ ಕೂಡ ಕೆಲವು ಸಲಹೆಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲೆಂದರಲ್ಲಿ ಟಿ.ವಿ.(TV) ಹಾಕುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಮನೆ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸಬೇಕಾದೀತು. ತೀವ್ರ ಆರ್ಥಿಕ ನಷ್ಟ ಅನುಭವಿಸಬೇಕಾದೀತು ಎನ್ನುತ್ತಾರೆ ವಾಸ್ತು ತಜ್ಞರು.

ವಾಸ್ತು ಪ್ರಕಾರ ಟಿವಿ ಇರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

*ವಾಸ್ತು ಶಾಸ್ತ್ರದ ಪ್ರಕಾರ, ಆಗ್ನೇಯ(Southeast) ಅಥವಾ ಪೂರ್ವ(Eastern) ದಿಕ್ಕು ಮನೆಯಲ್ಲಿ ಟಿವಿ ಇಡಲು ಸರಿಯಾದ ದಿಕ್ಕು.

*ಈ ದಿಕ್ಕಿನಲ್ಲಿ ಟಿವಿಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಇದರಿಂದ ಧನಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುತ್ತದೆ ಎಂಬ ನಂಬಿಕೆಯೂ ಇದೆ.

*ಇದರಿಂದ ಧನಾತ್ಮಕ(Positive) ಶಕ್ತಿಯು ಮನೆಗೆ ಪ್ರವೇಶಿಸುತ್ತದೆ ಎಂದು ನಂಬಲಾಗಿದೆ.

*ವಾಸ್ತು ಪ್ರಕಾರ, ಟಿವಿ ವೀಕ್ಷಿಸುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು.ಇದರೊಂದಿಗೆ, ಮನೆಯ ಪ್ರವೇಶದ್ವಾರದ(Enternce) ಮುಂದೆ ಟಿವಿಯನ್ನು ಎಂದಿಗೂ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸದಾ ಕಲಹ ಉಂಟಾಗಿ ಕುಟುಂಬ ಸದಸ್ಯರ ನಡುವೆ ಕಲಹದ ವಾತಾವರಣ ನಿರ್ಮಾಣವಾಗುತ್ತದೆ.

*ಮನೆಯ ಈಶಾನ್ಯ(Northeast) ಮೂಲೆಯಲ್ಲಿ ಟಿ.ವಿಯನ್ನು ಎಂದಿಗೂ ಇಡಬೇಡಿ. ಈ ದಿಕ್ಕಿನಲ್ಲಿ ಟಿವಿಯನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಯ ಮಾರ್ಗವನ್ನು ನಿರ್ಬಂಧಿಸುತ್ತದೆ. ಮನೆಯಲ್ಲಿ ನಕಾರಾತ್ಮಕತೆ ತುಂಬಿಕೊಳ್ಳುತ್ತದೆ.

*ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಟಿವಿ(TV) ಇಡುವುದು ಒಳ್ಳೆಯದಲ್ಲ. ನಿಮ್ಮ ಮಲಗುವ ಕೋಣೆ(bedroom)ಯಲ್ಲಿ ಟಿ.ವಿ(TV) ಹಾಕಲು ನೀವು ನಿರ್ಧರಿಸಿದ್ದರೆ, ಕೆಲವು ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಮುಖ್ಯ.

*ಮಲಗುವ ಕೋಣೆಯಲ್ಲಿ ಟಿ.ವಿಯನ್ನು ಆಗ್ನೇಯ(Southeast) ದಿಕ್ಕಿನಲ್ಲಿ ಅಂದರೆ ಆಗ್ನೇಯ ಕೋನದಲ್ಲಿ ಇಡಬೇಕು. ಮಲಗುವ ಇದಲ್ಲದೆ, ಟಿವಿ ಮಲಗುವ ಕೋಣೆಯ ಮಧ್ಯದಲ್ಲಿ ಇರಬಾರದು. ಏಕೆಂದರೆ, ಇದು ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.

*ವಾಸ್ತು ಪ್ರಕಾರ ಟಿವಿ ಯಾವಾಗಲೂ ಸ್ವಚ್ಛವಾಗಿರಬೇಕು. ಧೂಳು ಸಂಗ್ರಹವಾಗದಂತೆ ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಹೀಗೆ ಮಾಡದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.

Related News

spot_img

Revenue Alerts

spot_img

News

spot_img