28.2 C
Bengaluru
Wednesday, July 3, 2024

ವಾಸ್ತು ಪ್ರಕಾರ ಮನೆ ಅಭಿವೃದ್ಧಿಗೆ ಅಕ್ಕಿಯನ್ನು ಯಾವ ದಿಕ್ಕಿನಲ್ಲಿಡಬೇಕು?

ಬೆಂಗಳೂರು, ಡಿ. 13: ಅಡುಗೆ ಕೋಣೆಯು ಮನೆಯಲ್ಲಿ ವಾಸಿಸುವವರ ಆಹಾರವನ್ನು ತಯಾರಿಸುವ ಪ್ರದೇಶವಾಗಿದೆ. ಈ ಪ್ರಮುಖ ಸ್ಥಳವಾದ ಅಡುಗೆ ಮನೆ ವಾಸ್ತು ಶಾಸ್ತ್ರದ ಪ್ರಕಾರವೇ ನಿರ್ಮಿಸಬೇಕಾಗುತ್ತದೆ. ಅಡುಗೆ ಮನೆಯನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಬೇಕು ಎಂದು ಹಲವಾರು ವಾಸ್ತುಗಳನ್ನು ನೋಡುತ್ತೇವೆ.. ಅಡುಗೆ ಮನೆಯಲ್ಲಿ ಕುಟುಂಬದ ಸದಸ್ಯರು ಅಡುಗೆ ಮಾಡುವುದು, ಸಂವಹನ ಮಾಡುವುದು ಮತ್ತು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬೆರೆಯುವುದನ್ನು ನಾವು ಗಮನಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಗೆ ಸಾಕಷ್ಟು ವಿವಿಧ ಮಾನದಂಡಗಳನ್ನು ಒಳಗೊಂಡಿರುತ್ತದೆ. ಅಡುಗೆಮನೆಯಲ್ಲಿನ ವಾತಾವರಣವು ನಿವಾಸಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ.

ಇನ್ನು ಅಡುಗೆ ಮನೆಯಲ್ಲಿ ಇಡುವ ಪದಾರ್ಥಗಳ ಬಗ್ಗೆಯೂ ಎಚ್ಚರ ವಹಿಸಬೇಕಾಗುತ್ತದೆ. ಅಡುಗೆ ಮನೆಯ ಶಕ್ತಿ ಕೇಂದ್ರ, ಆರೋಗ್ಯಧಾಮ ಎಂದರೆ ತಪ್ಪಾಗುವುದಿಲ್ಲ. ಡುಗೆ ಮನೆಯನ್ನು ಶುಚಿಯಾಗಿಡುವುದರ ಜೊತೆಗೆ ವಾಸ್ತು ನಿಯಮಕ್ಕೆ ಅನುಗುಣವಾಗಿರಬೇಕು ಎಂಬುದು ಬಹಳ ಮುಖ್ಯ. ಅಲ್ಲಿರುವ ಪ್ರತಿಯೊಂದು ಸಾಮಗ್ರಿಗಳನ್ನು ವಾಸ್ತು ಪ್ರಕಾರ ಇಡಬೇಕು. ಇನ್ನು ಅಡುಗೆ ಮನೆಯಲ್ಲಿ ಕೆಲ ಸಾಮಾಗ್ರಿಗಳನ್ನು ಕೆಲ ದಿಕ್ಕಿನಲ್ಲಂತೂ ಇಡಲೇ ಬಾರದು. ಹಾಗೇನಾದರೂ ಮಾಡಿದರೆ, ತೊಂದರೆಗಳನ್ನು ಅನುಭವಿಸಬೇಕಾಗಿ ಬರುವುದು. ಃಆಗಾಗಿ ವಾಸ್ತು ಪ್ರಕಾರವೇ ಅಡುಗೆ ಮನೆಯಲ್ಲಿ ಕೆಲ ಸಾಮಾಗ್ರಿಗಳನ್ನು ಇಡತಕ್ಕದ್ದು.

ನಾವು ಪ್ರತಿ ದಿನ ಸೇವಿಸುವ ಅಕ್ಕಿಯನ್ನು ಲಕ್ಷ್ಮಿ ದೇವಿಗೆ ಹೋಲಿಸುತ್ತೇವೆ. ಹಾಗಾಗಿ ವಾಸ್ತು ಪ್ರಕಾರ ಅಡುಗೆ ಮನೆಯ ಯಾವ ದಿಕ್ಕಿನಲ್ಲಿ ಅಕ್ಕಿಯನ್ನು ಇಡಬೇಕೆಂದು ತಿಳಿಯುವ ಸಮಯ ಬಂದಿದೆ. ಈ ಬಗ್ಗೆ ಒಂದಿಷ್ಟು ವಿವರಗಳಿ ಇಲ್ಲಿದೆ. ತಪ್ಪದೇ ನೋಡಿ..

ಅಡುಗೆ ಮನೆಯನ್ನು ವಾಸ್ತು ಪ್ರಕಾರವಾಗಿ ಆಗ್ನೇಯ ಪೂರ್ವ ದಿಕ್ಕಿನಲ್ಲಿ ನಿರ್ಮಿಸಲಾಗಿರುತ್ತದೆ. ಹೀಗೆ ರೂಪಿಸಲಾದ ಅಡುಗೆ ಮನೆಯನ್ನು ಕೆಲವರು ಶೂಚಿಯಾಗಿಟ್ಟುಕೊಳ್ಳುವ ಕ್ರಮದಲ್ಲಿ ವಿಫ‌ಲರಾಗುತ್ತಾರೆ. ಅಡುಗೆ ಮನೆಯಲ್ಲಿ ದೇವಿ ನೆಲೆಸಿರುತ್ತಾಳೆ. ಧಾನ್ಯ ಲಕ್ಷ್ಮಿಯ ಜೊತೆಗೆ ದುರ್ಗಾ ದೇವಿಯೂ ಇರುತ್ತಾಳೆ. ಅಡುಗೆ ಮನೆಯಲ್ಲಿ ಆಹಾರ ಬೇಯುವುದು ಬೆಂಕಿಯಲ್ಲಿ. ಬೆಂಕಿಯನ್ನು ದುರ್ಗಾ ಮಾತೆಗೆ ಹೋಲಿಸಲಾಗುತ್ತದೆ. ದೇವಿ ಇರುವ ಈ ಜಾಗವನ್ನು ಎಷ್ಟು ಸ್ವಚ್ಚವಾಗಿಡುತ್ತೀವೋ ದೇವಿ ಕೃಪೆಗೆ ಪಾತ್ರರಾಗುತ್ತೀವಿ. ಜೊತೆಗೆ ಊಟ ಮಾಡುವವರ ಆರೋಗ್ಯವೂ ಚೆನ್ನಾಗಿರುತ್ತದೆ.

ಆದರೆ ಹಲವರು ಅಡುಗೆ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದಿಲ್ಲ. ಅಡುಗೆ ಮಾಡಿ ಹಾಗೆ ಬರುತ್ತಾರೆ. ಅಡುಗೆ ಮನೆಯಲ್ಲಿ ಅಳಸಿದ ಆಹಾರ, ಕೊಳೆತ ತರಕಾರಿ ತ್ಯಾಜ್ಯ ಹಾಗೂ ವಾಸನೆಯಿಂದ ಸ್ವಚ್ಛ ಮಾಡುವುದಿಲ್ಲ. ಇದರಿಂದ ಅನಾರೋಗ್ಯ ಕಾಡುತ್ತದೆ. ಮನೆಯಿಂದ ಧಾನ್ಯ ಲಕ್ಷ್ಮೀ ಹೊರಟು ಬಿಡುತ್ತಾಳೆ ಎಂದು ಹೇಳಲಾಗಿದೆ. ದುರ್ಗಾ ಮಾತೆಯೂ ಕೂಡ ಶುಚಿ ಇಲ್ಲದ ಕಡೆಯಲ್ಲಿ ನಿಲ್ಲುವುದಿಲ್ಲ. ವಾಸ್ತು ಪ್ರಕಾರವಾಗಿ ಅಡುಗೆ ಮನೆಯನ್ನು ಆಗ್ನೇಯ ದಿಕ್ಕಿನಲ್ಲಿ ರೂಪಿಸಬೇಕು. ಇಲ್ಲವೇ ವಾಯುವ್ಯ ದಿಕ್ಕಿನಲ್ಲೂ ಅಡುಗೆ ಮನೆಯನ್ನು ನಿರ್ಮಿಸಬಹುದು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ.

ಆದರೆ ಬೇರೆ ಯಾವ ದಿಕ್ಕಿನಲ್ಲೂ ಅಡುಗೆ ಮನೆಯನ್ನು ನಿರ್ಮಿಸಬಾರದು. ಹಾಗೊಂದುವೇಳೆ ನೈರುತ್ಯ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಿದರೆ ಮನೆಯಲ್ಲಿ ಸದಾ ಜಗಳಗಳು ನಡೆಯುತ್ತಲೇ ಇರುತ್ತದೆಯಂತೆ. ಅಷ್ಟೇ ಅಲ್ಲದೆ ಅಡುಗೆ ಮನೆಯಲ್ಲಿ ಮುಖ್ಯವಾದ ಆಹಾರವೆಂದರೆ ಅದು ಅಕ್ಕಿ.. ಅಕ್ಕಿಯಿಂದ ಅನ್ನ ಮಾಡಿ ಎಲ್ಲರೂ ಸೇವಿಸುತ್ತಾರೆ. ಹಾಗಾಗಿ ಅಕ್ಕಿಯನ್ನು ಕೂಡ ವಾಸ್ತು ಪ್ರಕಾರ ಹೇಳುವ ಜಾಗದಲ್ಲೇ ಇಡಬೇಕಂತೆ. ಇಲ್ಲದೇ ಹೋದಲ್ಲಿ ಮನೆಯಲ್ಲಿ ದಟ್ಟ ದರ್ಧ್ರ ಕಾಡುವುದು ಎಂದು ಹೇಳುತ್ತಾರೆ. ಅಕಸ್ಮಾತ್ ಅಕ್ಕಿಯನ್ನು ನೈರುತ್ಯ ದಿಕ್ಕಿನಲ್ಲಿ ಇಟ್ಟರೆ ಸದಸ್ಯರಲ್ಲಿ ಅನಅರೋಗ್ಯ ಕಾಡುತ್ತದೆ. ಮನೆ ಒಡತಿಯ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಅಕ್ಕಿಯನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ, ಮನೆಯಲ್ಲಿ ಆರೋಗ್ಯ, ಆಯಸ್ಸು, ನೆಮ್ಮದಿ ನೆಲೆಸಿರುತ್ತದೆ. ಅಷ್ಟೇ ಅಲ್ಲದೇ, ಧನೋತ್ಪತ್ತಿಯಾಗುತ್ತದೆ ಹಾಗಾಗಿ ನೀವೂ ಕೂಡ ಮನೆಯ ಆಗ್ನೇಯ ಮೂಲೆಯಲ್ಲಿ ಅಕ್ಕಿಯನ್ನು ಇಡಿ. ಮನೆಯವರೆಲ್ಲಾ ಖುಷಿ ಖುಷಿಯಾಗಿರಿ.

Related News

spot_img

Revenue Alerts

spot_img

News

spot_img