19.3 C
Bengaluru
Thursday, November 21, 2024

ವಾಸ್ತು ಪ್ರಕಾರ ಮಕ್ಕಳು ವಿದ್ಯಾಭ್ಯಾಸ ಮಾಡುವ ಕೋಣೆಯಲ್ಲಿ ಯಾವ ವಸ್ತು ಎಲ್ಲಿರಬೇಕು..?

ಬೆಂಗಳೂರು, ಡಿ. 20: ಮಕ್ಕಳು ಸದಾ ವಿದ್ಯಾಭ್ಯಾಸದಲ್ಲಿ ಮುಂದಿರಬೇಕು ಎಂದು ಪೋಷಕರು ಬಯಸುತ್ತಾರೆ. ಮಕ್ಕಳಿಗೂ ತಮ್ಮ ಶಾಲೆಯಲ್ಲಿನ ಇತರ ಮಕ್ಕಳನ್ನು ಮೀರಿಸುವಂತೆ ಓದಿ, ಉತ್ತಮವಾದ ಅಂಕಗಳನ್ನು ಗಳಿಸುವ ರೇಸ್‌ ನಲ್ಲಿ ಇರುತ್ತಾರೆ. ಆದರೆ, ಕೆಲವೊಮ್ಮೆ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುವುದೂ ಉಂಟು. ಆಗ ಮಕ್ಕಳು ಹಾಗೂ ಪೋಷಕರು ಇಬ್ಬರೂ ಕೂಡ ನಿರೀಕ್ಷೆಯನ್ನು ಪೂರೈಸಲಾಗುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳುವುದು ಸಾಮಾನ್ಯ. ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಕಷ್ಟು ಮಾರ್ಗಗಳಿವೆ. ಅವುಗಳಲ್ಲಿ ಒಂದು ವಾಸ್ತು ದೋಷವಿದ್ದರೆ ಸರಿ ಪಡಿಸುವುದು.

ಕಷ್ಟಪಟ್ಟು ಓದುವ ವಿದ್ಯಾರ್ಥಿಗಳನ್ನು ಉನ್ನತ ಸಾಧಕರನ್ನಾಗಿ ಪರಿವರ್ತಿಸಲು ವಾಸ್ತು ಶಾಸ್ತ್ರ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಬಹುದು. ಸರಳವಾದ ವಾಸ್ತು ಸಲಹೆಗಳೊಂದಿಗೆ ಅವರ ಗುಪ್ತ ಸಾಮರ್ಥ್ಯಗಳನ್ನು ಅನ್ವೇಷಿಸಲೂಬಹುದು. ಪೋಷಕರಿಗೆ, ಮಕ್ಕಳನ್ನು ಉತ್ತಮ ಶಾಲೆಗೆ ಕಳುಹಿಸುವುದು ಸುಲಭ ಆದರೆ ಅದು ಸಾಕಾಗುವುದಿಲ್ಲ ಎಂಬುದನ್ನು ಮರೆತುಬಿಡುತ್ತೇವೆ. ಇದು ಕಠಿಣ ಪರಿಶ್ರಮಕ್ಕೆ ಪರ್ಯಾಯವಲ್ಲ. ಆದರೆ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುವ ನಿಮ್ಮ ಸುತ್ತಲಿನ ಶಕ್ತಿಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಸ್ಟಡಿ ರೂಮ್ ನಲ್ಲಿ ಯಾವ ವಸ್ತು ಯಾವ ಜಾಗದಲ್ಲಿರಬೇಕು. ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಓದಬೇಕು ಎಂಬುದನ್ನು ನಮ್ಮ ವಾಸ್ತು ತಜ್ಞರಾದ ಡಾ.ರೇವತಿ ವೀ.ಕುಮಾರ್ ತಿಳಿಸಿದ್ದಾರೆ. ಈಗ ಮೊದಲಿನಂತೆ ಮಕ್ಕಳು ಪೋಷಕರ ಜೊತೆಗೆ ಮಲಗುವುದು ತುಂಬಾ ಕಡಿಮೆ. ಮಕ್ಕಳಿಗೆಂದೇ ಸ್ಟಡಿ ರೂಮ್ ಇರುತ್ತದೆ. ಅಲ್ಲೇ ಮಕ್ಕಳು ಮಲಗುತ್ತಾರೆ. ಇಂಡಿಪೆಂಡೆಂಟ್ ಆಗಿ ಮಲಗುವ ಮಕ್ಕಳು ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎಂಬುದನ್ನು ತಿಳಿಯೋಣ ಬನ್ನಿ. ಸಾಮಾನ್ಯವಾಗಿ ಎಲ್ಲರೂ ದಕ್ಷಿಣದಲ್ಲಿ ತಲೆ ಹಾಕಿ ಕಾಲನ್ನು ಉತ್ತರಕ್ಕೆ ಹಾಕಿ ಮಲಗಿದರೆ ಎಲ್ಲರಿಗೂ ಶುಭ. ಆದರೆ, ಸ್ಟಡಿ ರೂಮಿನಲ್ಲಿ ಮಲಗುವ ಮಕ್ಕಳು ಪೂರ್ವದಲ್ಲಿ ತಲೆ, ಪಶ್ಚಿಮದಲ್ಲಿ ಕಾಲು ಹಾಕಿ ಮಲಗಬೇಕು. ಇದು ಓದುವ ಮಕ್ಕಳು ಎಂದರೆ, ಚಿಕ್ಕ ಮಕ್ಕಳು ಎನ್ನುವುದಕ್ಕಿಂತ ಮದುವೆಯಾಗದವರೂ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಇದೇ ವಾಸ್ತು ಶಾಸ್ತ್ರದಂತೆ ಮಲಗಬಹುದು.

ಇನ್ನು ಮಕ್ಕಳು ಓದುವಾಗ ಯಾವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ಓದಬೇಕು ಎಂಬುದನ್ನು ನೋಡುವುದಾದರೆ, ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಕೂತು ಮಕ್ಕಳು ಓದುವುದು ಒಳ್ಳೆಯದು. ಸ್ಟಡಿ ಟೇಬಲ್ ಅನ್ನು ಪೂರ್ವ ಹಾಗೂ ಉತ್ತರದ ವಿರುದ್ಧ ದಿಕ್ಕಿನಲ್ಲಿಡಬೇಕು. ಮಕ್ಕಳು ಪೂರ್ವ ದಿಕ್ಕಿಗೆ ಮುಖ ಮಾಡಿ ಇಲ್ಲವೇ ಉತ್ತರ ದಿಕ್ಕಿನೆಡೆಗೆ ,ಮುಖ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮಾಡುವುದು ಸೂಕ್ತ ಎಂದು ಹೇಳಲಾಗಿದೆ. ಆದರೆ, ಮಕ್ಕಳು ಯಾವುದೇ ಕಾರಣಕ್ಕು ವಾಯುವ್ಯ ದಿಕ್ಕಿನಲ್ಲಿ ಮಾತ್ರ ಓದಲು ಕೂರ ಬಾರದಂತೆ. ಹಾಗೇನಾದರೂ ವಾಯುವ್ಯದಲ್ಲಿ ಕೂತರೆ ಚಂದ್ರನ ಚಲನೆಯಿಂದಾಗಿ ಮಕ್ಕಳು ಓದುವ ಬದಲು ಓಡಾಡುತ್ತಲೇ ಇರುತ್ತಾರೆ.

ಇನ್ನು ಮಕ್ಕಳ ಪುಸ್ತಕಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದಕ್ಕೆ ಡಾ. ರೇವತಿ ವೀ ಕುಮಾರ್ ಅವರು ವಾಸ್ತು ಸಲಹೆಯನ್ನು ನೀಡಿದ್ದಾರೆ. ಪುಸ್ತಕಗಳನ್ನು ಇಡಲು ಬಳಸುವ ಸ್ಟ್ಯಾಂಡ್ ಅಥವಾ ಕಬೋರ್ಡ್ ಇಲ್ಲವೇ ಬುಕ್ ರ್ಯಾಕ್ ಅನ್ನು ಯಾವಾಗಲೂ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಆಗ ಮಕ್ಕಳಿಗೆ ಓದುವಾಗ ಪುಸ್ತಕವನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಮಕ್ಕಳ ಬಲ ಭಾಗ ಇಲ್ಲವೇ ಎಡ ಭಾಗದಲ್ಲಿ ಪುಸ್ತಕಗಳು ಇರುತ್ತವೆ. ಹಾಗಾಗಿ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಬುಕ್ ರ್ಯಾಕ್ ಇದ್ದರೆ ಒಳ್ಳೆಯದು. ಈ ವಾಸ್ತು ಶಾಸ್ತ್ರವನ್ನು ಪಾಲಿಸಿದರೆ, ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿಯುವುದಂತೂ ಗ್ಯಾರೆಂಟಿ.

Related News

spot_img

Revenue Alerts

spot_img

News

spot_img