23.9 C
Bengaluru
Sunday, December 22, 2024

ಮನೆಯಲ್ಲಿ ಯಾವಾಗಲೂ ಹಣ ಇರಬೇಕೆಂದರೆ ಈ ಮೂಲೆ ಶುಚಿಯಾಗಿಡಿ!

ನಾವು ಮಾಡುವ ಉದ್ಯೋಗ ಅಥವಾ ವ್ಯವಹಾರದಿಂದ ಶ್ರೀಮಂತರಾಗಬೇಕು ಮತ್ತು ಮನೆಯಲ್ಲಿ ಹಣಕಾಸು ಸ್ಥಿರತೆ ಇರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ, ಹಠಾತ್ ಎಂದು ಎದುರಾಗುವ ಅನಿರೀಕ್ಷಿತ ವೆಚ್ಚಗಳು ನಮ್ಮ ನಿರೀಕ್ಷಿತ ಖರ್ಚಿನ ಮೇಲೆ ಪರಿಣಾಮ ಬೀರುತ್ತವೆ. ನಾವು ಬಯಸದೇ ಬಂದ ವೆಚ್ಚಗಳಿಂದ ಆರ್ಥಿಕ ಅಸಮತೋಲನ ಉಂಟಾಗುತ್ತದೆ. ಇದರಿಂದ ಸಾಲ ಮಾಡುವುದು ಅನಿವಾರ್ಯವಾಗುತ್ತದೆ. ಅದನ್ನು ತಪ್ಪಿಸಿ ಮನೆಯಲ್ಲಿ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಂತೋಷ ಇರಬೇಕಾದರೆ ಮನೆಯಲ್ಲಿ ಧನಾತ್ಮಕ ಶಕ್ತಿಯೂ ಇರಬೇಕಾಗುತ್ತದೆ. ಇದಕ್ಕೆ ವಾಸ್ತುಶಾಸ್ತ್ರದಲ್ಲಿ ಕೆಲವು ಪರಿಹಾರೋಪಾಯಗಳನ್ನು ನೀಡಲಾಗಿದೆ.

“ನಮ್ಮ ಯೋಗಕ್ಷೇಮ ಮತ್ತು ಜೀವನದ ಇತರೆ ಅಂಶಗಳಲ್ಲಿ ವಾಸ್ತುಶಾಸ್ತ್ರ ಪ್ರಧಾನ ಪಾತ್ರ ವಹಿಸುತ್ತದೆ. ಇದು 16 ದಿಕ್ಕುಗಳು ಮತ್ತು 5 ಅಂಶಗಳನ್ನು ಸಮತೋಲನಗೊಳಿಸುವುದು (ಭೂಮಿ, ನೀರು, ಬೆಂಕಿ, ಆಕಾಶ ಮತ್ತು ಗಾಳಿ) ಮುಖ್ಯವಾಗಿದೆ. ಧನಾತ್ಮಕ ಶಕ್ತಿಗಳು ಮತ್ತು ಸಕಾರಾತ್ಮಕ ಗುಣಗಳಿಂದ ಮನೆಯಲ್ಲಿ ನಿರಂತರ ಪಾಸಿಟಿವ್ ಎನರ್ಜಿ ರೂಪಿಸಬಹುದು,” ಎಂದು ಅಖಿಲ ಭಾರತ ನಿಗೂಢ ವಿಜ್ಞಾನ ಮತ್ತು ನಿಜವಾದ ವಾಸ್ತು ಸಂಸ್ಥೆಯ ಸಂಸ್ಥಾಪಕ/ಅಧ್ಯಕ್ಷರಾದ ಗುರುದೇವ್ ಕಶ್ಯಪ್ ಹೇಳುತ್ತಾರೆ, ಹೇಳುತ್ತಾರೆ.

ಆರ್ಥಿಕ ಸ್ಥಿರತೆಗೆ ವಾಸ್ತು ಸಲಹೆಗಳು:
ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಆದರೆ, ಆರೋಗ್ಯಕರ ಮತ್ತು ನೆಮ್ಮದಿಯ ಜೀವನ ನಡೆಸಬೇಕು ಎಂದು ಮನೆಯಲ್ಲಿ ಆರ್ಥಿಕ ಸ್ಥಿರತ ಇರಬೇಕಾದದು ಅನಿವಾರ್ಯ. ಹಣದ ಬಗ್ಗೆ ಇರುವ ಪ್ರಾಮುಖ್ಯತೆಯನ್ನು ಕಡೆಗಣಿಸಲು ಸಾಧ್ಯವಿಲ್ಲ.

ವಾಸ್ತು ಎಂದರೆ ಮನೆಯಲ್ಲಿ ದುಬಾರಿ ಖರ್ಚುಗಳನ್ನು ಮಾಡಿಕೊಂಡು ಬದಲಾವಣೆಗಳನ್ನು ಮಾಡುವುದು ಪರಿಹಾರವಲ್ಲ. ಇದ್ದ ಇತಿಮಿತಿಯೊಳಗೆ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡುವ ಮೂಲಕವೂ ಕೆಲವು ಪರಿಹಾರಗಳನ್ನು ಪಡೆಯಬಹುದು. ಇದರಲ್ಲಿ ಮನೆಯನ್ನು ಶುಚಿಯಾಗಿಡುವುದು ಬಹಳ ಪ್ರಮುಖವಾದುದು. ಯಾರಾದರೂ ಮನೆಗೆ ಬಂದಾಗ ಮನೆ ಶುಚಿಯಾಗಿ ಇದ್ದದ್ದನ್ನು ಕಂಡರೆ ಅವರಲ್ಲಿ ನೆಮ್ಮದಿ ತರಿಸುತ್ತದೆ. ಎಲ್ಲೆಂದರಲ್ಲಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು, ಕಸ ಗುಡಿಸದಿರುವುದು, ಬಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು ನೋಡಿದಾಗ ಅಲ್ಲಿ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ.

ಹೀಗೆ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ಇರುವಂತೆ ನೋಡಿಕೊಳ್ಳುವುದು ಆ ಮೂಲಕ ಹಣದ ಹರಿವು ಉತ್ತಮವಾಗಿಸುವ ಸಂಬಂಧ ಗುರುದೇವ್ ಕಶ್ಯಪ್ ನಮಗೆ ಕೆಲವು ಪ್ರಮುಖ ವಾಸ್ತು ಸಲಹೆಗಳನ್ನು ನೀಡುತ್ತಾರೆ. ಅವುಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

* ಮನೆಯಲ್ಲಿ ಆರ್ಥಿಕ ಸಮೃದ್ಧಿ ಹೊಂದಬೇಕು ಎಂದರೆ ಮನೆಯ ಈಶಾನ್ಯ ದಿಕ್ಕಿಗೆ ಪ್ರಧಾನ ಪ್ರಾಮುಖ್ಯತೆ ನೀಡಬೇಕು. ಮನೆಯ ಈಶಾನ್ಯ ದಿಕ್ಕನ್ನು ಯಾವಾಗಲೂ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇಟ್ಟಿರಬೇಕು. ಈಶಾನ್ಯ ದಿಕ್ಕು ಸ್ವಚ್ಛವಾಗಿ ಇದ್ದಷ್ಟೂ ಮನಸ್ಸು ಧನಾತ್ಮಕವಾಗಿರುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರವಿರಿಸುತ್ತದೆ.

* ವಾಸ್ತು ಪ್ರಕಾರ ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ನೀರಿನ ಕಾರಂಜಿ ಇರಿಸಿ ಮತ್ತು ಇದು ಹಣದ ಸರಿಯಾದ ಹರಿವನ್ನು ನಿರಂತರವಾಗಿ ಇರುವಂತೆ ಚೈತನ್ಯ ನೀಡುತ್ತದೆ.

*ವಾಸ್ತು ಪ್ರಕಾರ, ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ನೀರು ಅಥವಾ ನೀರಿಗೆ ಸಂಬಂಧಿಸಿದ ವಸ್ತುಗಳು ಇರದಂತೆ ನೋಡಿಕೊಳ್ಳಿ.

* ನಿಮ್ಮ ಮನೆಯ ಬ್ಯೂರೊ ಅಥವಾ ಅಲ್ಮಿರಾವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದರೆ ನೀವು ಅಲ್ಮಿರಾ ಬಾಗಿಲು ತೆರೆದಾಗ ಅದು ಉತ್ತರ ದಿಕ್ಕಿನಲ್ಲಿ ತೆರೆಯಬೇಕು. ಉತ್ತರವು ಮೊದಲ ಆದ್ಯತೆಯಾಗಿದ್ದರೆ, ಎರಡನೇ ಅನುಕೂಲಕರ ದಿಕ್ಕು ಪೂರ್ವ, ಮತ್ತು ಮೂರನೆಯದು ಈಶಾನ್ಯ ದಿಕ್ಕು.

* ನೀವು ಆಗ್ನೇಯ ದಿಕ್ಕಿನಲ್ಲಿ ನೀರು ಅಥವಾ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿದ್ದರೆ, ಆಗ್ನೇಯ ದಿಕ್ಕಿನಲ್ಲಿ ಕೆಂಪು ಬಣ್ಣದ ಬಲ್ಬ್‌ಗಳನ್ನು ಹಾಕುವುದರಿಂದ ತಾತ್ಕಾಲಿಕ ಪರಿಹಾ ಮಾಡಿದಂತಾಗುತ್ತದೆ.

Related News

spot_img

Revenue Alerts

spot_img

News

spot_img