ಬೆಂಗಳೂರು, ಮೇ. 06 : ಮನೆಗೆ ಮೂರು ಬಾಗಿಲು ಇದೆ ಎಂದರೆ ಹೇಗಿರಬೇಕು ಹೇಗಿರಬಾರದು ಎಂಬುದನ್ನು ಮೊದಲು ನೋಡಬೇಕಾಗುತ್ತದೆ. ಅದರಲ್ಲೂ ಒಂದೇ ದಿಕ್ಕಿನಲ್ಲಿ ಸಾಲಾಇ ಮೂರು ಬಾಗಿಲುಗಳು ಇವೆ ಎಂದರೆ ಅದು ಪೂರ್ವದಲ್ಲಿ ಅಥವಾ ಉತ್ತರದಲ್ಲಿ ಮೂರು ಬಾಗಿಲುಗಳು ಸಾಲಾಗಿರುತ್ತವೆ. ಇಲ್ಲ, ದಕ್ಷಿಣ ಹಾಗೂ ಪಶ್ಚಿಮದಲ್ಲೂ ಸಾಲಾಗಿ ಮೂರು ಬಾಗಿಲುಗಳು ಇರುತ್ತವೆ. ಆದರೆ, ಹೀಗೆ ಒಂದೇ ದಿಕ್ಕಿನಲ್ಲಿ ಸಾಲಾಗಿ ಮೂರು ಬಾಗಿಲುಗಳು ಇರಬಾರದು.
ಹೀಗೆ ಮೂರು ಬಾಗಿಲುಗಳು ಸಾಲಾಗಿ ಇದ್ದರೆ ಶೂಲ ದ್ವಾರ ಎಂದು ಕರೆಯುತ್ತೇವೆ. ದ್ವಾರ ಶೂಲದ ರೂಪದಲ್ಲಿ ಸೃಷ್ಟಿಯಾಗಿ ಬ್ರಹ್ಮಸ್ಥಾನ ತಲುಪಿದಾಗ ನೆಗೆಟಿವ್ ಎನರ್ಜಿ ಅನ್ನು ಕೊಡುತ್ತದೆ ಎಂದು ಹೇಳಲಾಗಿದೆ. ಇದು ಕೆಲವೊಮ್ಮೆ ಮೃತ್ಯೂವನ್ನೂ ತಂದು ಕೊಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೆಲವೊಮ್ಮೆ ಮನೆಗೆ ಎಂಟ್ರಿಯಾಗುವಾಗ ಮನೆಗೆ ಒಂದು ವಾರದಲ್ಲಿ ಹೋಗಿ ಇನ್ನೊಂದು ದ್ವಾರದ ಮೂಖಾಂತರ ಮತ್ತೊಂದು ದ್ವಾರಕ್ಕೆ ಹೋಗಿ ಬಳಿಕ ಯುಟಿಲಿಟಿ ಅನ್ನು ತಲುಪುತ್ತೇವೆ.
ಮಧ್ಯದಲ್ಲಿರುವ ಬಾಗಿಲು ಅನಗತ್ಯ ಸಮಸ್ಯೆ ಅನ್ನು ತಂದುಕೊಡುತ್ತದೆ. ಲೀಕೇಜ್ ಸಮಸ್ಯೆ ಅನ್ನು ತಂದೊಡ್ಡುತ್ತದೆ. ಹಾಗಾಗಿ ಹೀಗೆ ಸಾಲಾಗಿ ಮೂರು ದ್ವಾರಗಳು ಇರುವುದು ಅಶುಭವನ್ನು ತಂದು ಕೊಡುತ್ತದೆ. ಮುಖ್ಯದ್ವಾರ ಆಗಿರಬಹುದು ಅಥವಾ ಮನೆಯ ಒಳಗೆ ಆಗಿರಬಹುದು ಸಾಲಾಗಿ ಮೂರು ಬಾಗಿಲುಗಳು ಒಂದೇ ದಿಕ್ಕಿನಲ್ಲಿ ಇರಬಾರದು. ಹಳೆಯ ಕಾಲದ ಮನೆಗಳನ್ನು ನೋಡಬಹುದು. ಮನೆಯನ್ನು ಉದ್ದಕ್ಕೆ ನಿರ್ಮಾಣ ಮಾಡುತ್ತಿದ್ದರು.
ಮುಖ್ಯದ್ವಾರದ ಬಳಿಕ ಹಾಲ್ ಬಳಿ ಡೈನಿಂಗ್ ಹಾಲ್ ನಂತರ ಅಡುಗೆ ಮನೆಯ ಬಾಗಿಲು ಇರುತ್ತದೆ. ಇವೆಲ್ಲವೂ ಒಳ್ಳೆಯದಲ್ಲ. ಇದರಿಂದ ಮನೆಗೆ ಅಶುಭ ಫಲಗಳನ್ನು ಕೊಡುತ್ತವೆ. ಮನೆಯಲ್ಲಿ ಸಮಸ್ಯೆಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮನೆಯ ಯಜಮಾನನಿಗೆ ಕುತ್ತು ಕಾಡಲಿದ್ದು, ಕೆಲವು ಸಂದರ್ಭದಲ್ಲಿ ಮೃತ್ಯು ಕೂಡ ಸಂಭವಿಸಲಿದೆ ಎಂದು ಹೇಳಳಾಗಿದೆ. ಹೀಗೆ ಸಾಲಾಗಿ ಅಥವಾ ಸರಣಿಯಲ್ಲಿ ಒಂದೇ ದಿಕ್ಕಿಗೆ ಮೂರು ಬಾಗಿಲುಗಳನ್ನು ಶೂಲದ್ವರ ಎಂದು ಹೇಳಲಾಗಿದೆ.