ಬೆಂಗಳೂರು, ಫೆ. 03 : ಕನ್ನಡಿಯನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಎದ್ದಾಗಿನಿಂದ ಮಲಗುವವರೆಗೂ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುತ್ತಾರೆ. ಕನ್ನಡಿಯನ್ನು ನೋಡದೆ ಮನೆಯಿಂದ ಹೊರಗೆ ಹೋಗುವ ಮಾತೇ ಇಲ್ಲ. ಹಾಗಾದರೆ ಮನೆಯ ಯಾವದಿಕ್ಕಿನಲ್ಲಿ ಕನ್ನಡಿಯನ್ನು ಇಡಬೇಕು. ಕನ್ನಡಿ ಬಗ್ಗೆಯೂ ವಾಸ್ತುವಿನಲ್ಲಿ ಶಾಸ್ತ್ರ ಹೇಳಲಾಗಿದ್ಯಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..
ಮಿರರ್ ಎಂದು ಬಂದಾಗ ವಾಸ್ತುವಿನಲ್ಲಿ ಮುಖ್ಯವಾಗಿ ಕೆಲ ನಿಯಮಗಳನ್ನು ಹೇಳಲಾಗಿದೆ. ವಾಸ್ತು ಗ್ರಂಥಗಳಲ್ಲಿ ಏಳು ತರಹದ ಕನ್ನಡಿಗಳ ಬಗ್ಗೆ ಹೇಳಲಾಗಿದೆ. ಕನ್ನಡಿಗಳು ಏನನ್ನು ಮಾಡುವುದಕ್ಕೆ ಸಾಧ್ಯ ಎಂದು ಹೇಳಲಾಗಿದೆ. ವೈಮಾನಿಕ ಶಾಸ್ತ್ರದಲ್ಲಿ ಕನ್ನಡಿಯ ಬಗ್ಗೆ ವಿವಿರವಾಗಿ ಹೇಳಲಾಗಿದೆ. ಕನ್ನಡಿಗಳು ಬರುವ ಎನರ್ಜಿಯನ್ನು ಅಬ್ಸರ್ವ್ ಮಾಡುವ ಶಕ್ತಿಯನ್ನೂ ಹೊಂದಿರುತ್ತವೆ. ಎನರ್ಜಿಯನ್ನು ಎಳೆದುಕೊಂಡು ಬಿಡುವಂತಹ ಕನ್ನಡಿಗಳೂ ಇವೆ. ಕನ್ನಡಿಗಳಿಗೆ ಇರುವ ರೂಪಗಳನ್ನು ಬದಲಾಯಿಸುವ ಶಕ್ತಿ ಇದೆ. ಕೆಲವು ರೂಪಗಳನ್ನು ಬದಲಾಯಿಸುತ್ತವೆ. ಕೆಲವರು ಕನ್ನಡಿಯನ್ನು ನೋಡಿ ಭವಿಷ್ಯ ಹೇಳುತ್ತಾರೆ. ಹೀಗೆ ಕನ್ನಡಿಗಳಲ್ಲಿ ಏಳು ವಿಧಗಳಿವೆ. ಕಾನ್ವೆಕ್ಸ್, ಕಾನ್ಕೇವ್, ಪ್ಲೈನ್ ಕನ್ನಡಿ ಎಂದು ಕರೆಯಲಾಗುತ್ತೆ.
ಹಿಂದಿನ ಕಾಲದಲ್ಲಿ ಕನ್ನಡಿಯ ಮುಂದೆ ನಿಂತು ಕಾಲಹರಣ ಮಾಡಬೇಡ ಎಂಬ ಮಾತುಗಳನ್ನು ಕೇಳಿದ್ದೆವು. ಅದರಂತೆ ಕನ್ನಡಿಯ ಎದುರಿಗೆ ಹೆಚ್ಚು ಸಮಯ ಇರುವುದು ಒಳ್ಳೆಯದಲ್ಲ ಎಂಬುದು ಅದರ ಅರ್ಥ. ಆದರೆ ಈಗ ಈ ಮಾರ್ಡನ್ ಯುಗದಲ್ಲಿ ಮಿರರ್ ಗೇಝಿಂಗ್ ಎಂಬ ಕಾನ್ಸೆಪ್ಟ್ ಇದೆ. ಅಂದರೆ ಕನ್ನಡಿಯ ಮುಂದೆ ಕುಳಿತು ಮೆಡಿಟೇಟ್ ಮಾಡುತ್ತಾರೆ. ಇದನ್ನೆಲ್ಲಾ ವೆಸ್ಟರ್ನ್ ಕಡೆಯವರು ಕನ್ನಡಿ ಮುಂದೆ ಮೆಡಿಟೇಟ್ ಮಾಡುತ್ತಾರೆ. ಕನ್ನಡಿಯಲ್ಲಿ ಆಳವಾದಂತಹ ಇಂಪ್ಯಾಕ್ಟ್ ಇದೆ. ಕನ್ನಡಿಯನ್ನ ಎಲ್ಲೇ ಇಟ್ಟರು ಅದಕ್ಕೆ ಶಕ್ತಿಯನ್ನ ಎಳೆದುಕೊಳ್ಳುವ ಸಾಮರ್ಥ್ಯ ಇರುತ್ತದೆ. ಕನ್ನಡಿಗೆ ಎನರ್ಜಿಯನ್ನ ಬಿಡುವ ಸಾಮರ್ಥ್ಯ ಹಾಗೂ ಎಳೆದುಕೊಂಡು ಬಿಡುವ ಶಕ್ತಿಯೂ ಇರುತ್ತದೆ.
ಹಾಗಾಗಿ ನಾವು ಮುಖ್ಯವಾಗಿ ಪೂರ್ವ ಅಥವಾ ಉತ್ತರದ ಗೋಡೆಗಳಲ್ಲಿ ಮಾತ್ರವೇ ಕನ್ನಡಿಯನ್ನು ಇಡಬೇಕು. ಅದೂ ಕೂಡ ಪ್ಲೇನ್ ಮಿರರ್ ಅನ್ನು ಇಡಬೇಕು. ಯಾಕೆಂದರೆ, ಒಂದು ಕನ್ನಡಿಯ ಎದುರುಗಡೆ ಯಾವುದಾದರೂ ವಸ್ತುವನ್ನ ಇಟ್ಟರೆ, ಕನ್ನಡಿಯ ಹಿಂದೆಗಡೆ ಅಷ್ಟೇ ದೂರದಲ್ಲಿ ಅಷ್ಟೇ ಎತ್ತರದ, ಗಾತ್ರದ ಬಿಂಬವನ್ನು ರೂಪಿಸುವ ಶಕ್ತಿ ಕನ್ನಡಿಗೆ ಇರುತ್ತದೆ. ಹಾಗಾಗಿ ಕನ್ನಡಿ ಪೂರ್ವದಲ್ಲಿದ್ದರೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ದಕ್ಷಿಣ ಹಾಗೂ ಪಶ್ಚಿಮದಲ್ಲಿದ್ದರೆ ಸಮಸ್ಯೆ ಆಗುತ್ತದೆ. ಇದರಿಂದ ಅಶುಭ ಫಲಗಳು ಸಿಗುತ್ತವೆ ಎಂದು ವಾಸ್ತು ಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇನ್ನು ಕೆಲವರು ಮನೆಯ ವಾಸ್ತುವಿನಲ್ಲಿ ಸಮಸ್ಯೆ ಇದ್ದರೆ, ಅಂದರೆ ಮನೆಯೊಳಗೆ ಮೆಟ್ಟಿಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಇಟ್ಟಿದ್ದರೆ, ಅದರ ಎದುರುಗಡೆ ಕನ್ನಡಿಯನ್ನು ಇಡಿ ಆಗ ವಾಸ್ತು ದೋಷ ಸರಿ ಹೋಗುತ್ತದೆ ಎಂದು ಹೇಳುತ್ತಾರೆ. ಆದರೆ ಇದರಲ್ಲೂ ಒಂದು ಸಮಸ್ಯೆ ಇದೆ. ಯಾವ ಗೋಡೆಯಲ್ಲಿ ಕನ್ನಡಿಯನ್ನ ಇಡುತ್ತೀವೋ ಅದರ ಹಿಂದೆ ಎಷ್ಟು ದೂರದಲ್ಲಿ ಮೆಟ್ಟಿಲುಗಳು ರೂಪುಗೊಳ್ಳುತ್ತವೆ ಎಂಬುದನ್ನು ನೋಡಬೇಕು. ಯಾಕೆಂದರೆ, ಮನೆಯ ಬ್ರಹ್ಮಸ್ಥಾನಕ್ಕೆ ಅದರ ರಿಫ್ಲೆಕ್ಷನ್ ಶಿಫ್ಟ್ ಆಗಬಹುದು. ಆಗ ಮನೆಯ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಕನ್ನಡಿಯನ್ನ ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು ಎಂದನ್ನು ಬಹಳ ಗಮನವಿಡಬೇಕು.