14.2 C
Bengaluru
Wednesday, January 22, 2025

ವಾಸ್ತು ಪ್ರಕಾರ ನಿಮ್ಮ ಮನೆಯ ಮಲಗುವ ಕೋಣೆಗೆ ಕನ್ನಡಿ, ಮಂಚಗಳನ್ನು ಎಲ್ಲಿ ಇಡಬೇಕು..?

ಬೆಂಗಳೂರು, ಆ. 25 : ಇಡೀ ಮನೆಯನ್ನು ವಾಸ್ತು ಪ್ರಕಾರ ಕಟ್ಟಲಾಗುತ್ತದೆ. ಆದರೂ ಕೆಲವೊಮ್ಮೆ ಮನೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲೆ ಏನಾಗಿದೆ ಎಂಬುದನ್ನು ತಿಳಿಯುವುದೇ ಕಷ್ಟ. ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಸಾಲದು. ಅದರ ಜೊತೆಗೆ ಮನೆಯ ಯಾವ ಭಾಗದಲ್ಲಿ ಏನಿರಬೇಕು ಎಂಬುದನ್ನೂ ತಿಳಿದಿರಬೇಕು. ಇನ್ನು ಮನೆಯ ಬೆಡ್ ರೂಮ್ ನಲ್ಲಿ ವಾಸ್ತು ಕರೆಕ್ಟ್ ಆಗಿದ್ದರೆ, ನಿದ್ದೆಯೂ ಅರಾಮಾಗಿರುತ್ತದೆ. ಜೀವನವೂ ಉತ್ತಮವಾಗಿರುತ್ತದೆ.

ಹಾಗಾದರೆ ಬೆಡ್ ರೂಮ್ ನ ವಾಸ್ತು ಹೇಗಿರಬೇಕು..? ಬೆಡ್ ರೂಮ್ ನಲ್ಲಿ ಏನಿರಬೇಕು..? ಏನಿರಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಯೋಣ ಬನ್ನಿ. ನಿಮ್ಮ ಮನೆಯಲ್ಲಿ ಬಾಕ್ಸ್ ಟೈಪ್ ಕಾರ್ಟ್ ಇದ್ಯಾ..? ಹಾಗಾದರೆ ಮೊದಲು ಅದನ್ನ ಬದಲಾಯಿಸಿ. ಇದರಿಂದ ಸಮಸ್ಯೆಗಳು ಉದ್ಭವಿಸುವುದು ಗ್ಯಾರೆಂಟಿ. ಬಾಕ್ಸ್ ಟೈಪ್ ಕಾರ್ಟ್ ಇದ್ದಾಗ ಅದರಲ್ಲಿ ಬೇಡದ ವಸ್ತುಗಳನ್ನು ಇಡುತ್ತಾರೆ. ಈ ಬೇಡದ ವಸ್ತುಗಳಿಂದ ನಕರಾತ್ಮಕ ಶಕ್ತಿ ಉಂಟಾಗುತ್ತದೆ. ಅದರ ಮೇಲೆಯೇ ನಿತ್ಯ ಮಲಗುವುದರಿಂದ ಮನೆಯಲ್ಲಿ ಸಂಬಂಧಗಳು ಕೆಡುತ್ತವೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳೆಂದರೆ, ಉಳಿದ ಕೆಲಸಗಳನ್ನು ಬೆಡ್ ರೂಮ್ ನಲ್ಲಿರುವ ಟೇಬಲ್ ಮೇಲೆ ಇಟ್ಟುಕೊಂಡು ನಿದ್ದೆ ಬರುವವರೆಗೂ ಕೆಲಸ ಮಾಡಿ ಮಲಗುವುದು ಕೆಟ್ಟ ಅಭ್ಯಾಸ. ಇದು ಯಾವುದಾದರೂ ಮುಗಿಯದೆ ಉಳಿದ ಕೆಲಸವನ್ನು ಹಾಗೆ ಇಡ ಕೂಡದು. ಬುಕ್, ಲ್ಯಾಪ್ ಟಾಪ್ ಯಾವುದೇ ಆಗಲಿ, ಹಾಗೆ ಪೆಂಡಿಂಗ್ ಇಡಬಾರದು. ಇನ್ನು ಡ್ರೆಸ್ಸಿಂಗ್ ಟೇಬಲ್ ಅನ್ನು ಬೆಡ್ ರೂಮ್ ನಲ್ಲಿ ಇಡುವುದನ್ನು ಯೋಚಿಸಬೇಕು.

ಯಾಕೆಂದರೆ ಅದರ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದರೆ, ಕಾರ್ಟ್ ಎದುರುಗಡೆ ಇಡಬಾರದು. ಇನ್ನು ವಾಸ್ತು ಪ್ರಕಾರ ಆದಷ್ಟು ನೈರುತ್ಯದ ಕಡೆಗೆ ಹಾಕಿ, ತಲೆಯನ್ನು ದಕ್ಷಿಣಕ್ಕೆ ಹಾಕುವುದು ಉತ್ತಮ. ಮಿರರ್ ಎಂದು ಬಂದಾಗ ವಾಸ್ತುವಿನಲ್ಲಿ ಮುಖ್ಯವಾಗಿ ಕೆಲ ನಿಯಮಗಳನ್ನು ಹೇಳಲಾಗಿದೆ. ವಾಸ್ತು ಗ್ರಂಥಗಳಲ್ಲಿ ಏಳು ತರಹದ ಕನ್ನಡಿಗಳ ಬಗ್ಗೆ ಹೇಳಲಾಗಿದೆ. ಕನ್ನಡಿಗಳು ಏನನ್ನು ಮಾಡುವುದಕ್ಕೆ ಸಾಧ್ಯ ಎಂದು ಹೇಳಲಾಗಿದೆ. ವೈಮಾನಿಕ ಶಾಸ್ತ್ರದಲ್ಲಿ ಕನ್ನಡಿಯ ಬಗ್ಗೆ ವಿವಿರವಾಗಿ ಹೇಳಲಾಗಿದೆ.

ಕನ್ನಡಿಗಳು ಬರುವ ಎನರ್ಜಿಯನ್ನು ಅಬ್ಸರ್ವ್ ಮಾಡುವ ಶಕ್ತಿಯನ್ನೂ ಹೊಂದಿರುತ್ತವೆ. ಎನರ್ಜಿಯನ್ನು ಎಳೆದುಕೊಂಡು ಬಿಡುವಂತಹ ಕನ್ನಡಿಗಳೂ ಇವೆ. ಕನ್ನಡಿಗಳಿಗೆ ಇರುವ ರೂಪಗಳನ್ನು ಬದಲಾಯಿಸುವ ಶಕ್ತಿ ಇದೆ. ಕೆಲವು ರೂಪಗಳನ್ನು ಬದಲಾಯಿಸುತ್ತವೆ. ಕೆಲವರು ಕನ್ನಡಿಯನ್ನು ನೋಡಿ ಭವಿಷ್ಯ ಹೇಳುತ್ತಾರೆ. ಹೀಗೆ ಕನ್ನಡಿಗಳಲ್ಲಿ ಏಳು ವಿಧಗಳಿವೆ. ಕಾನ್ವೆಕ್ಸ್, ಕಾನ್ಕೇವ್, ಪ್ಲೈನ್ ಕನ್ನಡಿ ಎಂದು ಕರೆಯಲಾಗುತ್ತೆ. ಹಿಂದಿನ ಕಾಲದಲ್ಲಿ ಕನ್ನಡಿಯ ಮುಂದೆ ನಿಂತು ಕಾಲಹರಣ ಮಾಡಬೇಡ ಎಂಬ ಮಾತುಗಳನ್ನು ಕೇಳಿದ್ದೆವು.

ಅದರಂತೆ ಕನ್ನಡಿಯ ಎದುರಿಗೆ ಹೆಚ್ಚು ಸಮಯ ಇರುವುದು ಒಳ್ಳೆಯದಲ್ಲ ಎಂಬುದು ಅದರ ಅರ್ಥ. ಆದರೆ ಈಗ ಈ ಮಾರ್ಡನ್ ಯುಗದಲ್ಲಿ ಮಿರರ್ ಗೇಝಿಂಗ್ ಎಂಬ ಕಾನ್ಸೆಪ್ಟ್ ಇದೆ. ಅಂದರೆ ಕನ್ನಡಿಯ ಮುಂದೆ ಕುಳಿತು ಮೆಡಿಟೇಟ್ ಮಾಡುತ್ತಾರೆ. ಇದನ್ನೆಲ್ಲಾ ವೆಸ್ಟರ್ನ್ ಕಡೆಯವರು ಕನ್ನಡಿ ಮುಂದೆ ಮೆಡಿಟೇಟ್ ಮಾಡುತ್ತಾರೆ. ಕನ್ನಡಿಯಲ್ಲಿ ಆಳವಾದಂತಹ ಇಂಪ್ಯಾಕ್ಟ್ ಇದೆ. ಕನ್ನಡಿಯನ್ನ ಎಲ್ಲೇ ಇಟ್ಟರು ಅದಕ್ಕೆ ಶಕ್ತಿಯನ್ನ ಎಳೆದುಕೊಳ್ಳುವ ಸಾಮರ್ಥ್ಯ ಇರುತ್ತದೆ.

ಕನ್ನಡಿಗೆ ಎನರ್ಜಿಯನ್ನ ಬಿಡುವ ಸಾಮರ್ಥ್ಯ ಹಾಗೂ ಎಳೆದುಕೊಂಡು ಬಿಡುವ ಶಕ್ತಿಯೂ ಇರುತ್ತದೆ. ಹಾಗಾಗಿ ನಾವು ಮುಖ್ಯವಾಗಿ ಪೂರ್ವ ಅಥವಾ ಉತ್ತರದ ಗೋಡೆಗಳಲ್ಲಿ ಮಾತ್ರವೇ ಕನ್ನಡಿಯನ್ನು ಇಡಬೇಕು. ಅದೂ ಕೂಡ ಪ್ಲೇನ್ ಮಿರರ್ ಅನ್ನು ಇಡಬೇಕು. ದೇವರ ಫೋಟೋಗಳು, ಸತ್ತವರ ಫೋಟೋಗಳನ್ನು ಕೂಡ ಬೆಡ್ ರೂಮ್ ನಲ್ಲಿ ನೇತು ಹಾಕಬಾರದು.

Related News

spot_img

Revenue Alerts

spot_img

News

spot_img