ಬೆಂಗಳೂರು, ಫೆ. 04 : ಸಾಮಾನ್ಯವಾಗಿ ಡೈನಿಂಗ್ ಹಾಲ್ ಹಳೆ ಕಾಲದಲ್ಲಿ ಲಿವಿಂಗ್ ಏರಿಯಾದಲ್ಲೇ ಕೆಳಗೆ ಕೂತು ಊಟ ಮಾಡುತ್ತಿದ್ದೆವು. ನಂತರವೇ ಟೇಬಲ್, ಚೇರ್ ಹಾಕಿ ಊಟ ಮಾಡುವ ಪದ್ಧತಿ ಬಂದಿದ್ದು ಪಾಶಚಿಮಾತ್ಯದಿಂದ. ಈಗ ಯಾರೂ ಕೆಳಗೆ ಕೂತು ಊಟ ಮಾಡುವುದಿಲ್ಲ. ಎಲ್ಲರೂ ಚೇರ್ ಮೇಲೆ ಕುಳಿತು ಊಟ ಮಾಡಲು ಬಯಸುತ್ತಾರೆ. ಎಲ್ಲರ ಮನೆಯಲ್ಲೂ ಈಗ ಡೈನಿಂಗ್ ಟೇಬಲ್ ಇದ್ದೇ ಇರುತ್ತದೆ. ಹಾಗಾದರೆ, ಡೈನಿಂಗ್ ಟೇಬಲ್ ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು.? ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.
ಸಾಮಾನ್ಯವಾಗಿ ಊಟ ಮಾಡುವ ಡೈನಿಂಗ್ ಹಾಲ್ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ದರೆ ಒಳ್ಳೆಯದು. ಯಾಕಂದರೆ, ಅಡುಗೆ ಮನೆ ಈಶಾನ್ಯದಲ್ಲಿರುತ್ತದೆ. ಆಗ ಇದು ಪೂರ್ವದಲ್ಲಿ ಡೈನಿಂಗ್ ಹಾಲ್ ಇದ್ದರೆ ಅನುಕೂಲವಾಗುತ್ತದೆ. ಇನ್ನು ವಾಯುವ್ಯದಲ್ಲಿ ಅಉಗೆ ಮನೆ ಇದ್ದರೆ, ಪಶ್ಚಿಮದಲ್ಲಿ ಡೈನಿಂಗ್ ಟೇಬಲ್ ಇದ್ದರೆ ಒಳ್ಳೆಯದು. ಇದು ವಾಸ್ತು ಪ್ರಕಾರ ಇದೆರಡು ಡೈರೆಕ್ಷನ್ ಒಳ್ಳೆಯದು. ಇನ್ನು ಡೈನಿಂಗ್ ಟೇಬಲ್ ಅನ್ನು ಒಬ್ಬೊಬ್ಬರು ಒಂದೊಂದು ಶೇಪ್ ನಲ್ಲಿ ಹಾಕುತ್ತಾರೆ. ಕೆಲವರು ಓವೆಲೆ ಶೇಪ್ ಡೈನೀಮಗ್ ಟೇಬಲ್ ಇಟ್ಟರೆ, ಮತ್ತೆ ಕೆಲವರು ರೌಂಡ್ ಶೇಟ್ ಟೇಬಲ್, ಸ್ಕ್ವಯರ್ ಶೇಪ್ ಅನ್ನು ಬಳಸುತ್ತಾರೆ.
ಆದರೆ, ಸರ್ಕಲ್ ಮತ್ತು ಓವೆಲ್ ಶೇಪ್ ಡೈನಿಂಗ್ ಟೇಬಲ್ ಅಶುಭವನ್ನು ಸೂಚಿಸುತ್ತದೆ. ಈ ಎರಡೂ ಶೇಪ್ ನಲ್ಲಿ ಡೈನಿಂಗ್ ಟೇಬಲ್ ಇದ್ದರೆ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವುದಿಲ್ಲ. ಒಬ್ಬೊಬ್ಬರು ಒಂದೊಂದು ಸಮಯಕ್ಕೆ ಬಂದು ಊಟ ಮಾಡುತ್ತಾರೆ. ಸ್ಕ್ವಯರ್ ಅಥವಾ ರೆಕ್ಟ್ಯಾಂಗುಲರ್ ಶೇಪ್ ನಲ್ಲಿ ಡೈನಿಂಗ್ ಟೇಬಲ್ ಇದ್ದರೆ ಒಳ್ಳೆಯದು. ಇದು ಬಹಳ ಮುಖ್ಯ. ಅದರಲ್ಲೂ ಚೇರ್ ಅನ್ನು ಹಾಕಿದಾಗ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಕೂತು ಊಟ ಮಾಡುವುದು ಬಹಳ ಮುಖ್ಯ. ಎಲ್ ಶೇಪ್ ನಲ್ಲಿ ಪೂರ್ವ ಅಥವಾ ಪಶ್ಚಿಮ ಇಲ್ಲ ಅಂದರೆ ಉತ್ತರ ಅಥವಾ ದಕ್ಷಿಣದಲ್ಲಿ ಹಾಕುತ್ತಾರೆ.
ಹಾಗೆಯೇ ಅಗತ್ಯ ಇದ್ದರೆ ಪೂರ್ವ ಹಾಗೂ ಪಶ್ಚಿಮ ಒಳ್ಳೆಯದು. ಯಾಕೆಂದರೆ, ಊಟ ಮಾಡುವ ದಿಕ್ಕನ್ನು ಕೂಡ ನೋಡಬೇಕು. ಇಲ್ಲದಿದ್ದರೆ, ಡೈನಿಂಗ್ ಟೇಬಲ್ ಮೇಲೆ ಕೂತು ಊಟ ಮಾಡುವಾಗ ಜಗಳವಾಗುತ್ತದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕೂರುವುದು ಒಳ್ಳೆಯದಲ್ಲ. ಇನ್ನು ಕೆಲವರು ಮಕ್ಕಳನ್ನು ಡೈನಿಂಗ್ ಟೇಬಲ್ ಮೇಲೆ ಕೂರಿಸಿಕೊಂಡು ಸಾಕಷ್ಟು ಪ್ರಶ್ನೆ ಮಾಡುತ್ತಾರೆ. ಇದು ಒಳ್ಳೆಯದಲ್ಲ. ಯಾಕೆಂದರೆ ಊಟ ಮಾಡುವಾಗ ನೆಮ್ಮದಿಯಾಗಿ ಊಟ ಮಾಡಬೇಕು. ಅದು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು ಒಳ್ಳೆಯದಲ್ಲ. ಇನ್ನು ವಾಶ್ ಬೇಸಿನ್ ಅನ್ನು ವಾಯುವ್ಯದಲ್ಲಿ ಇಟ್ಟರೆ ಒಳ್ಳೆಯದು. ಫ್ರಿಡ್ಜ್ ಅನ್ನು ಡೈನಿಂಗ್ ಹಾಲ್ ನಲ್ಲಿ ಇಡುವುದಾದರೆ, ವಾಯುವ್ಯ ಅಥವಾ ನೈರುತ್ಯ ದಿಕ್ಕಿನಲ್ಲಿ ಒಳ್ಳೆಯದು