21.1 C
Bengaluru
Monday, July 8, 2024

ನೀವು ಸ್ವಂತ ಮನೆ ಹೊಂದಿದ್ದೀರಾ ? ಮನೆಗೆ ಚಿನ್ನದ ಬಣ್ಣ ಲೇಪಿಸಿದ್ರೆ ಏನು ಅನುಕೂಲ ?

ಬೆಂಗಳೂರು, ಡಿ. 07: ಸಾಮಾನ್ಯವಾಗಿ ಮನೆಗಳಿಗೆ ಬಣ್ಣ ಹೊಡೆಯುವಾಗ ಕೆಲವರು ಮನೆ ಬೇರೆಯವರಿಗೆ ಕಾಣಲಿ ಅಂತ ಕಣ್ಣಿಗೆ ರಾಚುವ ಬಣ್ಣ ಹಚ್ಚುತ್ತಾರೆ. ಇತ್ತೀಚೆಗೆ ಕೆಲವು ರೆಸ್ಟೋರೆಂಟ್ ಗಳಲ್ಲಿ ಕಪ್ಪು ಬಣ್ಣ ರಾಚುವಂತೆ ಬಳಿದು ಗ್ರಾಹಕರನ್ನು ಅಕರ್ಷಿಸುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಮನೆಗಳಿಗೆ ಮನಸಿಗೆ ತೋಚಿದ ಬಣ್ಣ ಹಚ್ಚುತ್ತಾರೆ. ಮನೆ ಕಚೇರಿಗಳ ಬಣ್ಣದ ಬಗ್ಗೆ ವಾಸ್ತು ಶಾಸ್ತ್ರ ಬೇರೆಯದ್ದೇ ಇದೆ.

ಮನುಷ್ಯನ ಜೀವನ ಶೈಲಿ ಹಾಗೂ ಬಣ್ಣಕ್ಕೂ ಅವಿನಾಭಾವ ಸಂಬಂಧವಿದೆ. ಮನೆ ಮತ್ತು ಕಚೇರಿಗೆ ಹೊಡೆಯುವ ಬಣ್ಣಗಳು ಕೂಡ ಕಷ್ಟ – ಸುಖ – ಸಂತೋಷವನ್ನು ಪ್ರತಿನಿಧಿಸುತ್ತವೆ. ಮನೆಗಳಿಗೆ ವಾಸ್ತು ಪ್ರಕಾರ ಬಣ್ಣ ಬಳಿಯಬಹದು. ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಸಂತೋಷ ಮನೆ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಕೆಳಗಿನ ಬಣ್ಣಗಳು , ಅವು ಪ್ರತಿನಿಧಿಸುವ ಗುಣಗಳ ವಿವರ ಇಂತಿದೆ.

1) ಕಪ್ಪು ಬಣ್ಣ(Block):
ಈ ಬಣ್ಣವನ್ನು ಮನೆಯ ಯಾವುದೇ ಭಾಗದಲ್ಲಿ ಅಥವಾ ರೂಮ್‌ಗಳಲ್ಲಾಗಲಿ ಉಪಯೋಗಿಸಬಾರದು. ಇದು ಕಷ್ಟವನ್ನು ಸೂಚಿಸುತ್ತದೆ.

2) ಬಿಳಿ ಬಣ್ಣ(White)-
ಅತೀಯಾದ ಬಿಳಿಯ ಬಣ್ಣ ಸಹ ಒಳೆಯದಲ್ಲ. ಬಿಳಿಯ ಬಣ್ಣವಿದ್ದರೆ ಮನೆಗೆ ಬರುವವರು ಮಹಾತ್ವಾಕಾಂಕ್ಷೆವುಳ್ಳವರಾಗಿ, ತಮ್ಮ ಜೀವನ ಶೈಲಿಯಲ್ಲಿ ಅತೀ ವೈಭವಯುತವಾಗಿ ಬದಲಾಗಿ ಸಂಸಾರಿಕ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ.

3) ಕೆಂಪು ಬಣ್ಣ (Deep and pure Red)-
ಇದು ಪ್ರೀತಿ ಮತ್ತು ಸ್ನೇಹವನ್ನು ಸೂಚಿಸುತ್ತದೆ.

4) ಮಧ್ಯಮ ಹಸಿರು(Medium Green)-
ಮುಕ್ತತೆ ಹಾಗೂ ಪರಸ್ಪರ ಕ್ರಿಯಾಶೀಲತೆಯನ್ನು ಸೂಚಿಸುತ್ತದೆ.

5) ಮಧ್ಯಮ ಕೆಂಪು(Medium red)-
ಆರೋಗ್ಯ ಮತ್ತು ಜೀವನೋತ್ಸಹವನ್ನು ಸೂಚಿಸುತ್ತದೆ.

6) ಆಳವಾದ ಹಸಿರು (Deep green)-
ಮುಗ್ದತೆಯನ್ನು ಸೂಚಿಸುತ್ತದೆ.

7) ಒಳಪಿಸಿನಿಂದ ಕೂಡಿದ ಕೆಂಪುಬಣ್ಣ(Shining red)-
ಆಸೆ ಮತ್ತು ಹಂಬಲದ ಗುಣವನ್ನು ಸೂಚಿಸುತ್ತದೆ.

8) ಆಳವಾದ ನೀಲಿ ಬಣ್ಣ(Deep Blue)-
ಸಹಾನುಭೂತಿಯನ್ನು ಸೂಚಿಸುತ್ತದೆ

9) ಆಳವಾದ ಗುಲಾಬಿ ಬಣ್ಣ(Deep rose)-
ಹೆಣ್ತನ ಹಾಗೂ ಸಂಭ್ರಮಾಚರಣೆಯನ್ನು ಸೂಚಿಸುತ್ತದೆ.

10) ವೇಗದ ಮಧ್ಯಮ ನೀಲಿ( Fast Medium Blue)-
ಆದರ್ಶಪ್ರಾಯತ್ವವನ್ನು ಸೂಚಿಸುತ್ತದೆ

11)ಮಧ್ಯಮ ಗುಲಾಬಿ ಬಣ್ಣ(Medium rose)-
ಮೃದುತ್ವ ಹಾಗೂ ಸರಳತ್ವವನ್ನು ಸೂಚಿಸುತ್ತದೆ.

12)ಆಳವಾದ ನೇರಳೆ(Deep Violet)-
ವೈಭವವನ್ನು ಸೂಚಿಸುತ್ತದೆ.

13) ಆಳವಾದ ಕಿತ್ತಳೆಬಣ್ಣ(Deep Orange)-
ಮಹಾತ್ವಾಕಾಂಕ್ಷೆಯನ್ನು ಸೂಚಿಸುತ್ತದೆ.

14)ತೀಳಿ ನೇರಳೆ(Light Violet)-
ಮೃದುತ್ವವನ್ನು ಸೂಚಿಸುತ್ತದೆ.

15)ಮಧ್ಯಮ ಕಿತ್ತಳೆಬಣ್ಣ(Medium Orange)-
ಜಗಳದ ಉತ್ಸಾಹದ ಗುಣವನ್ನು ಸೂಚಿಸುತ್ತದೆ.

16) ತೀಳಿ ನೇರಳೆ ಬಣ್ಣ(Light Orange)-
ವೇಗದ ಗುಣವನ್ನು ಸೂಚಿಸುತ್ತದೆ.

17) ಆಳವಾದ ಹಳದಿ(Deep yellow)-
ಚೈತನ್ಯವನ್ನು ಸೂಚಿಸುತ್ತದೆ.

18)ಮಧ್ಯಮ ಹಳದಿ(Medium Yellow)-
ಒಳ್ಳೆಯತನವನ್ನು ಸೂಚಿಸುತ್ತದೆ.

19) ತಿಳಿ ಹಳದಿ(Light Yellow)-
ಬುದ್ದಿವಂತಿಕೆಯ ಗುಣವನ್ನು ಸೂಚಿಸುತ್ತದೆ.

20) ವೇಗದ ಮಧ್ಯಮ ಹಳದಿ(Fast Medium Yellow)-
ಮಾನವಿಯತೇಯ ಮೇಲಿನ ಪ್ರೀತಿಯನ್ನು ಸೂಚಿಸುತ್ತದೆ.

21) ವೇಗದ ತಿಳಿ ಚಿನ್ನದ ಬಣ್ಣ(Fast Light Golden)-
ಮೋಡಿಮಾಡುವ ಗುಣವನ್ನು ಸೂಚಿಸುತ್ತದೆ.

21)ಮಧ್ಯದ ಚೀನದ ಬಣ್ಣ(Medium golden)-
ಸಂಪತ್ತನ್ನು ಸೂಚಿಸುತ್ತದೆ.

22)ಆಳವಾದ ಮಧ್ಯಮ ಚೀನದ ಬಣ್ಣ
(Deep Medium Golden)- ವೈಭವವನ್ನು ಸೂಚಿಸುತ್ತದೆ.

Related News

spot_img

Revenue Alerts

spot_img

News

spot_img