22 C
Bengaluru
Monday, December 23, 2024

ಯಾವ ಮನೆಗೆ ಎರಡು ಗೇಟ್‌ಗಳು ಇರಬೇಕು? ವಾಸ್ತುಶಾಸ್ತ್ರ ಏನು ಹೇಳುತ್ತದೆ ಗೊತ್ತಾ

ನೀವೊಂದು ಸುಂದರವಾದ ಮನೆ ಕಟ್ಟಿದರೆ ಸಾಕೇ? ಅದಕ್ಕೊಂದು ಸುಂದರವಾದ ಆವರಣ ಮತ್ತು ಆಕರ್ಷಕ ಗೇಟ್ ನಿರ್ಮಾಣ ಮಾಡಬೇಕಲ್ಲವೇ. ಮನೆ ಎಷ್ಟು ಅಚ್ಚುಕಟ್ಟಾಗಿ ನಿರ್ಮಾಣ ಮಾಡುತ್ತೇವೋ ಅದರ ಸುರಕ್ಷತೆಗೆ ಕಳ್ಳ ಕಾಕರು ಸುಲಭವಾಗಿ ಒಳಬರದಂತೆ ಸುರಕ್ಷಿತ ಗೇಟ್ ನಿರ್ಮಾಣ ಮಾಡುವುದೂ ಸಹ ಅಷ್ಟೇ ಮುಖ್ಯ. ಹೀಗೆ ನಿರ್ಮಾಣ ಮಾಡುವ ಗೇಟ್‌ಗೂ ಸಹ ಕೆಲವು ವಾಸ್ತು ನಿಯಮಗಳು ಅನ್ವಯ ಆಗುತ್ತವೆ.

ಬಹುತೇಕ ಸಂದರ್ಭದಲ್ಲಿ ಮನೆ ಕಟ್ಟುವ ಮೊದಲೇ ಗೇಟ್ ಯಾವ ಕಡೆ ಇಡಬೇಕು, ಮನೆಯೊಳಗೆ ಪ್ರವೇಶ ಹೇಗಿರಬೇಕು ಎಂದು ನಿರ್ಧರಿಸಲಾಗಿರುತ್ತದೆ. ಕೆಲವೊಮ್ಮೆ ಮೊದಲೇ ಗೇಟ್‌ಗಳನ್ನು ಕಟ್ಟಿಸಿದರೆ ಅನೇಕರು ಮನೆ ನಿರ್ಮಾಣ ಕಾರ್ಯ ಮುಗಿದ ಬಳಿಕ ಗೇಟ್ ನಿರ್ಮಿಸುವ ಬಗ್ಗೆ ಅಲೋಚಿಸುತ್ತಾರೆ. ಅದೇನೆ ಇದ್ದರೂ ಸಹ ಗೇಟ್‌ಗಳು ಕೆಲವೊಮ್ಮೆ ಮನೆಯ ವಿಳಾಸಕ್ಕೂ ಸಹಕಾರಿಯಾಗುತ್ತವೆ. ಇಂತಹ ಗೇಟ್ ಇದೆ, ಈ ಬಣ್ಣದ ಗೇಟ್ ಇದೆ, ಗೇಟ್‌ನ ಆಕಾರ ಹೀಗಿದೆ ಎಂದು ಹೇಳಿದರೆ ಅಂಚೆ, ಕೋರಿಯರ್, ಮನೆಗೆ ಆನ್‌ಲೈನ್ ಡೆಲಿವರಿ ಮಾಡುವವರು ಮನೆ ತಲುಪುವುದು ಸುಲಭ. ಗ್ರಾಮೀಣ ಭಾಗದಲ್ಲಿ ಎತ್ತರದ ಕಾಂಪೌಂಡ್ ಮತ್ತು ಅದಕ್ಕೆ ತಕ್ಕಂತೆ ದೊಡ್ಡ ಗೇಟ್ ಇದ್ದರೆ ಶ್ರೀಮಂತರ ಮನೆ ಎಂದು ಸ್ವಾಭಾವಿಕವಾಗಿ ಗುರುತಿಸುವ ಪ್ರಕ್ರಿಯೆಯೂ ಇದೆ.

ಹೀಗೆ ಮನೆಯ ಆವರಣ ಮತ್ತು ಗೇಟ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ ಏನನ್ನು ಹೇಳುತ್ತದೆ, ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕಾದರೆ ಮನೆಯ ಪ್ರವೇಶ ಹೇಗಿರಬೇಕು ಎಂಬುದನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

* ಮನೆಯ ಅಳತೆ, ಸ್ಥಳದ ಅಳತೆಯನ್ನು ಅನುಸರಿಸಿ ಆವರಣ ಗೇಟು ನಿರ್ಮಾಣ ಮಾಡಬೇಕು.

* ಪೂರ್ವ ಸಿಂಹದ್ವಾರ ಮನೆ ಇದ್ದರೆ ಅಂತಹ ಮನೆಗೆ ಎರಡು ಗೇಟ್‌ಗಳು ಇಡುವುದು ಸೂಕ್ತ. ಮನೆಯ ಎದುರಿಗೆ ಒಂದು ಸಣ್ಣ ಗೇಟು ಇದ್ದಲ್ಲಿ, ಈಶಾನ್ಯ ಭಾಗದಲ್ಲಿ ಒಂದು ದೊಡ್ಡ ಗೇಟು ಇಟ್ಟು ಅದರ ಮೂಲಕ ಓಡಾಡಬೇಕು.

* ಸ್ಥಳದ ಅಳತೆ ಅನ್ವಯ ಸಣ್ಣ ಗೇಟು ಎತ್ತರದಲ್ಲಿ ಇದ್ದರೆ ದೊಡ್ಡ ಗೇಟಿನ ಅಗತ್ಯವಿರದು.

* ಪೂರ್ವ ಆಗ್ನೇಯದಲ್ಲಿ ದೊಡ್ಡ ಗೇಟು, ಪೂರ್ವ ಈಶಾನ್ಯದಲ್ಲಿ ಸಣ್ಣ ಗೇಟು ಏರ್ಪಾಡು ಮಾಡಬಾರದು.

* ದಕ್ಷಿಣ ಮುಂಬಾಗಿಲು ದೊಡ್ಡ ಗೇಟು, ಪೂರ್ವ ಈಶಾನ್ಯದಲ್ಲಿ ಸಣ್ಣ ಗೇಟು ಇದ್ದರೆ ದಕ್ಷಿಣ ಆಗ್ನೇಯದಲ್ಲಿ ದೊಡ್ಡ ಗೇಟು ಏರ್ಪಾಡು ಮಾಡಿಕೊಂಡು ಓಡಾಡಬೇಕು.

* ಸಣ್ಣ ಗೇಟು ಎತ್ತರ ಜಾಗದಲ್ಲಿ ಇದ್ದರೆ ಈ ಗೇಟಿನ ಅಗತ್ಯವಿಲ್ಲ.

* ದಕ್ಷಿಣ ನೈರುತ್ಯ ಭಾಗದಲ್ಲಿ ಗೇಟು ಇಡಬಾರದು. ಇದು ಅಕಾಲ ಮರಣಗಳಿಗೆ ದಾರಿಯಾಗುತ್ತದೆ. ಅಲ್ಲಿ ಓಡಾಡುವುದೂ ಅಶುಭ.

* ಪಶ್ಚಿಮ ಮುಂಬಾಗಿಲು ಮನೆಗೆ ಎದುರಾಗಿ ಸಣ್ಣ ಗೇಟು ಇದ್ದರೆ ಪಶ್ಚಿಮ ವಾಯುವ್ಯದಲ್ಲಿ ದೊಡ್ಡ ಗೇಟು ಏರ್ಪಾಡು ಮಾಡಿಕೊಂಡು ಓಡಾಡಬೇಕು. ಪಶ್ಚಿಮ ನೈರುತ್ಯ ಗೇಟು ಉಪಯೋಗವಿಲ್ಲ.

* ಉತ್ತರ ಸಿಂಹ ದ್ವಾರದ ಮನೆಗೆ ಉತ್ತರ ಈಶಾನ್ಯ ಗೇಟಿನ ಮೂಲಕ ಓಡಾಡುವುದು ಉತ್ತಮ. ಇಲ್ಲಿಯೇ ಗೇಟು ಇಟ್ಟುಕೊಳ್ಳಬೇಕು. ಉತ್ತರ ವಾಯುವ್ಯಗಳಲ್ಲಿ ಗೇಟು ಪ್ರಯೋಜನವಿಲ್ಲ.

* ಉಚ್ಚ ಸ್ಥಾನದಲ್ಲಿರುವ ಗೇಟುಗಳನ್ನು ಪೂರ್ವ, ಉತ್ತರ ಗೋಡೆಗಳಿಗೆ ಒರಗಿಸಿದ ಕನಿಷ್ಠ ಒಂದು ಅಡಿ ಮೂಲೆ ಬರುವಂತೆ ಗೋಡೆ ಕಟ್ಟಿ ಗೇಟು ಇಡಬೇಕು.

* ಮನೆಯ ಎಷ್ಟು ಕಡೆ ರಸ್ತೆಗಳು ಇದ್ದರೂ ಗೇಟು ಮಾತ್ರ ಉಚ್ಛ ಸ್ಥಾನದಲ್ಲಿ ಇರಬೇಕು.

* ನೈರುತ್ಯ ಭಾಗ ಸ್ಥಳದ ದಕ್ಷಿಣ ಆಗ್ನೇಯದಲ್ಲಿ ಇಲ್ಲವೇ ಪಶ್ಚಿಮ ವಾಯುವ್ಯದಲ್ಲಿ ಗೇಟು ಏರ್ಪಾಡು ಮಾಡಿಕೊಳ್ಳಬೇಕು. ಎರಡೂ ಕಡೆ ಗೇಟು ಇಡಬಾರದು. ಬೀದಿ ವಿಶಾಲವಾಗಿರುವ ಕಡೆ ಇಡುವುದೇ ಉತ್ತಮ.

* ಆಗ್ನೇಯ ಭಾಗ ಸ್ಥಳಕ್ಕೆ ದಕ್ಷಿಣದ ಕಡೆಗೆ ಗೇಟು ಇಡಬಾರದು. ಆಗ್ನೇಯ ಬ್ಲಾಕ್ ಸ್ಥಳಕ್ಕೆ ಈಶಾನ್ಯದಲ್ಲಿ ಗೇಟು ಇಡಬೇಕು. ವಾಯುವ್ಯ ಬ್ಲಾಕ್ ಸ್ಥಳಕ್ಕೆ ಉತ್ತರ ಈಶಾನ್ಯದಲ್ಲಿ ಗೇಟು ಇಡಬೇಕು. ಈಶಾನ್ಯ ಬ್ಲಾಕ್ ಸ್ಥಳಕ್ಕೆ ಪೂರ್ವ ಈಶಾನ್ಯ ಉತ್ತರ ಈಶಾನ್ಯಗಳಲ್ಲಿ ಇಲ್ಲವೇ ಎರಡೂ ಕಡೆ ಆಗಲಿ ಗೇಟುಗಳನ್ನು ಇಟ್ಟುಕೊಳ್ಳಬಹುದು. ಒಂದೇ ಕಡೆ ಆದರೆ ರಸ್ತೆ ವಿಶಾಲವಾಗಿ ಇರುವ ಕಡೆ ಇಡಬಹುದು.

* ಪೂರ್ವ ಪಶ್ಚಿಮ ಕಡೆಗಾಗಲೀ, ದಕ್ಷಿಣ ಉತ್ತರದ ಕಡೆಗಾಗಲೀ ಬೀದಿಗಳು ಇದ್ದರೆ ಪೂರ್ವ ಈಶಾನ್ಯದಲ್ಲೂ, ಉತ್ತರ ಈಶಾನ್ಯದಲ್ಲಾಗಲೀ ಗೇಟು ಎರ್ಪಾಡು ಮಾಡಬೇಕು.

* ದಕ್ಷಿಣ, ಪಶ್ಚಿಮ ಬೀದಿಗಳು ವಿಶಾಲವಾಗಿದ್ದರೆ ಈಶಾನ್ಯ ಗೇಟಿನೊಡನೆ ದಕ್ಷಿಣ ಆಗ್ನೇಯದಲ್ಲಾಗಲೀ, ಪಶ್ಚಿಮ ವಾಯುವ್ಯದಲ್ಲಾಗಲೀ ಕಡ್ಡಾಯವಾಗಿ ಗೇಟು ಇಡಬೇಕು.

Related News

spot_img

Revenue Alerts

spot_img

News

spot_img