ಪ್ರತಿ ಮಗುವಿಗೆ ತನ್ನದೇ ಆದ ಆಸಕ್ತಿ, ಅಭಿರುಚಿ ಇರುತ್ತವೆ. ಕೆಲವು ಮಕ್ಕಳು ದಿನವಿಡೀ ಪುಸ್ತಕಗಳಲ್ಲಿ ಮುಳುಗಿದ್ದರೆ, ಇನ್ನೂ ಕೆಲವರು ಓದಿನ ಹೆಸರು ಕೇಳಿದ ತಕ್ಷಣ ಓಡಿಹೋಗುತ್ತಾರೆ. ಅಂತಹ ಸನ್ನಿವೇಶದಲ್ಲಿ, ನಿಮ್ಮ ಮಗುವಿಗೆ ಓದಲು ಇಷ್ಟವಿಲ್ಲದಿದ್ದರೆ, ಈ ವಾಸ್ತು ಪರಿಹಾರಗಳು ನಿಮಗೆ ಉಪಯುಕ್ತವಾಗಬಹುದು. ಇಲ್ಲಿ ನಾವು ಮಗುವಿಗೆ ಓದಿನ ಅಭಿರುಚಿಯನ್ನು ಹೆಚ್ಚಿಸುವ ಕೆಲವು ವಾಸ್ತು ಪರಿಹಾರಗಳನ್ನು ತಿಳಿಸಿದ್ದೇವೆ. ಇದರಿಂದ ನಿಸ್ಸಂದೇಹವಾಗಿ ಉತ್ತಮ ಪರಿಣಾಮ ಪಡೆಯತ್ತೀರಿ. ನಿಮ್ಮ ಮಗು ಅಧ್ಯಯನ ಮಾಡುವ ಸ್ಥಳದಲ್ಲಿ, ಅವನ ಓದುವ ಟೇಬಲ್ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಬೇಕು.ಹಾಗೆಯೆ ಮಗುವಿನ ಕೊಠಡಿಯನ್ನು ಸ್ವಚ್ಚವಾಗಿಡಬೇಕು. ಮಗುವಿನ ಆಸಕ್ತಿಯನ್ನು ಸೆಳೆಯುವಂತಹ ಯಾವುದೇ ವಸ್ತುಗಳನ್ನು ಇಡಬೇಡಿ.
ಈ ಜಾಗದಲ್ಲಿ ಮಗುವಿನ ಕೊಠಡಿ ಬೇಡ: ಸ್ನಾನಗೃಹದ ಮುಂದೆ ಮಗುವಿನ ಕೊಠಡಿಯ ಬಾಗಿಲು ತೆರೆದರೂ, ಅವನ ಏಕಾಗ್ರತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ, ಮಗುವಿನ ಹಾಸಿಗೆಯ ಮುಂದೆ ಕನ್ನಡಿ ಇರಬಾರದು, ಇದರಿಂದ ಮಗುವಿಗೆಓದಲು ಮನಸ್ಸಾಗುವುದಿಲ್ಲ. ಆದ್ದರಿಂದ, ಮಕ್ಕಳ ಕೊಠಡಿಯ ಬಾಗಿಲು ಎಂದಿಗೂ ಸ್ನಾನಗೃಹದ ಮುಂದೆ ಇರಬಾರದು.
ತುಪ್ಪದ ದೀಪ ಬೆಳಗಿ: ವಾಸ್ತು ಶಾಸ್ತ್ರದ ಪ್ರಕಾರ ವಿಷ್ಣುವಿನ ಚಿತ್ರದ ಮುಂದೆ ತುಪ್ಪದ ದೀಪವನ್ನು ಹಚ್ಚುವುದು, ಬಾಳೆಗಿಡಕ್ಕೆ ನೀರನ್ನುಹಾಕುವದು ಮತ್ತು ಅಲ್ಲಿನ ಮಣ್ಣಿನಿಂದ ಮಗುವಿಗೆ ತಿಲಕವನ್ನು ಹಚ್ಚುವುದು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಮೊದಲು ಈ ಕೆಲಸ ಮಾಡಿ: ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಏಕಾಗ್ರತೆ ಮತ್ತು ಓದಲು ಅನುಕೂಲವಾಗುವಂತೆ ಓದುವ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿದೆ. ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳ ಕೊಠಡಿಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೇ ಅವರಿಗೆ ಓದಿನಲ್ಲಿ ಆಸಕ್ತಿ ಹೆಚ್ಚು ಮೂಡುತ್ತದೆ ಎನ್ನಲಾಗಿದೆ.
ಈ ಸರಳ ಟಿಪ್ಸ್ ಪಾಲಿಸಿ ನೋಡಿ: ವಾಸ್ತುಶಾಸ್ತ್ರದ ಪ್ರಕಾರ, ನಿಮ್ಮ ಮಗುವಿಗೆ ಅಭ್ಯಾಸ ಮಾಡಲು ಇಷ್ಟವಿಲ್ಲದಿದ್ದರೆ, ನೀವು ಅವನ ಜೇಬಿನಲ್ಲಿ ಒಂದು ಸಣ್ಣ ಆಲ್ಯುಂ ತುಂಡನ್ನು ಇಟ್ಟುಕೊಳ್ಳಬೇಕು. ಜೊತೆಗೆ ನಿಮ್ಮ ಮಗುವಿನ ಹಣೆ ಹಾಗು ಹೊಕ್ಕುಳಿಗೆ ದಿನಾಲು ತಪ್ಪದೆ ಕುಂಕುಮ ತಿಲಕವನ್ನು ಹಚ್ಚಬೇಕು.
ಓಂಕಾರದ ಜಪ: ಪ್ರತಿದಿನ ಬೆಳಿಗ್ಗೆ ಸ್ನಾನ ಇತ್ಯಾದಿ ಕ್ರಿಯೆ ಮುಗಿಸಿದ ನಂತರ ಸ್ವಲ್ಪ ಸಮಯ ಓಂಕಾರದ ಜಪವನ್ನು ಮಾಡಲು ಮಕ್ಕಳಿಗೆ ಕಲಿಸಿ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ಮನಸ್ಸೂ ಓದಿನಲ್ಲಿ ತೊಡಗಿಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ.