ಬೆಂಗಳೂರು, ಏ. 12 : ನೈರುತ್ಯ ದಿಕ್ಕಿನಲ್ಲಿ ನೀರು ನಿಲ್ಲುವುದರಿಂದ ಅಥವಾ ನೈರುತ್ಯದಲ್ಲಿ ಬಾವಿ, ಸಂಪು, ಟಾಯ್ಲೆಟ್ ಅಥವಾ ಬೋರ್ ವೆಲ್ ಇರುವುದರಿಂದ ಏನಾಗುತ್ತದೆ ಎಂದು ತಿಳಿಯೋಣ. ನೈರುತ್ಯ ದಿಕ್ಕು ಪೃಥ್ವಿಗೆ ಸಂಬಂಧಿಸಿದ್ದು, ನೈರುತ್ಯ ಕೋಣೆಯನ್ನು ಪೃಥ್ವಿ ತತ್ವ ರೂಲ್ ಮಾಡುತ್ತದೆ. ಈ ಪೃಥ್ವಿ ಮೇಲೆ ನೀರು ಬಿದ್ದಾಗ ಕೆಸರು ರೀತಿ ಆಗಿ ಪೃಥ್ವಿ ತನ್ನ ಧೃಢತೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ವಾಸ್ತುವಿನಲ್ಲಿ ಏನು ಪರಿಣಾಮ ಎಂದು ತಿಳಿದುಕೊಳ್ಳಬಹುದು.
ಈಗಾಗಲೇ ನೈರುತ್ಯ ದಿಕ್ಕು ಮನೆಯ ಯಜಮಾನನ ಕೋಣೆ. ಈ ಜಾಗದಲ್ಲಿ ಬಾವಿ ಅಥವಾ ಬೋರ್ ಅನ್ನು ಹಾಕಿದಾಗ ಅಲ್ಲಿ ಇರಬೇಕಿರುವ ಪೃಥ್ವಿಯ ಧೃಢತೆ ಕಡಿಮೆಯಾಗಿ ಮನೆಯ ಯಜಮಾನನ ಶಕ್ತಿ ಕುಗ್ಗುತ್ತದೆ. ಮೊದಲನೇಯದಾಗಿ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಯಜಮಾನ ಸಂಪೂರ್ಣವಾಗಿ ಹಾಸಿಗೆ ಹಿಡಿಯುವ ಸಾಧ್ಯತೆ ಇರುತ್ತದೆ. ಇನ್ನೊಂದು ಸಾವು ಕೂಡ ಸಂಭವಿಸಬಹುದು. ಅದರಲ್ಲೂ ಹೃದಯಾಘಾತಗಳು ಹೆಚ್ಚಾಗಿ ಆಗಿರುವುದು ಕಂಡು ಬಂದಿದೆ.
ಸಂಪನ್ನು ನೈರುತ್ಯದಲ್ಲಿ ಹಾಕಿದ್ದರೂ ಕೂಡ ಇದೇ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನೀರು ಓಡಾಡುವುದರಿಂದಾಗಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇನ್ನು ಟಾಯ್ಲೆಟ್ ಏನಾದರೂ ಇದ್ದರೆ, ನೀರು ಅಶುದ್ಧವಾಗುವುದರಿಂದ ಯಜಮಾನನ ಮರಿಯಾದೆ ಹೋಗುತ್ತದೆ. ಆಗ ಯಜಮಾನನಿಗೆ ಮನೆಯಲ್ಲಿ ಬೆಲೆಯೇ ಇಲ್ಲದಂತೆ ಆಗುತ್ತದೆ. ಯಜಮಾನ ಸಂಪೂರ್ಣವಾಗಿ ಮೂಲೆ ಗುಂಪಾಗುತ್ತಾನೆ.
ಇನ್ನು ನೈರುತ್ಯದಲ್ಲಿ ಮನೆಯ ತ್ಯಾಜ್ಯ ನೀರು ಹರಿದರೆ, ಇದರಿಂದ ಮನೆಯ ಹಣ ಖಾಲಿಯಾಗಿ ಮನೆಯನ್ನು ಸಂಪೂರ್ಣವಾಗಿ ತೊಳೆಯುವಂತೆ ಮಾಡುತ್ತದೆ. ಇನ್ನು ಓವರ್ ಹೆಡ್ ಟ್ಯಾಂಕ್ ಅನ್ನು ನೈರುತ್ಯದಲ್ಲಿ ಹಾಕುವುದರಿಂದ ಸದಾ ನೀರು ಲೀಕೇಜ್ ಆಗುತ್ತಿದ್ದರೆ, ಅದರಿಂದಲೂ ಮನೆಯ ಯಜಮಾನನಿಗೆ ಅಶುಭವಾಗುತ್ತದೆ. ಹಾಗಾಗಿ ನೈರುತ್ಯದಲ್ಲಿ ನೀರಿನ ಹರಿವು ಇರದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.