vastu# shastra#north#home#room
ಬೆಂಗಳೂರು, ಏ. 11 : ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ದಿಕ್ಕು ಬಹಳ ಮುಖ್ಯ. ಈಶಾನ್ಯ ಕೋಣೆ ಖಾಲಿ ಇರುವುದು ಹಾಗೂ ತೆರೆದಿಡುವುದು ಏನು ಎಂಬುದನ್ನು ತಿಳಿಯೋಣ. ಈಶಾನ್ಯ ಕೋಣೆ ತೆರದಿಡುವುದು ಎಂದರೆ, ಸುಮಾರು ಕಡೆ ರೂಫ್ ಅನ್ನು ಕೂಡ ಮುಂದುವರೆಸಿರುವುದಿಲ್ಲ. ರೂಫ್ ಅನ್ನು ಕಂಟಿನ್ಯೂ ಮಾಡಿದ್ದರೂ ಕೂಡ, ಕೆಳಗಡೆ ಉಪಯೋಗಕ್ಕೆ ಬರುವಂತಹ ಸ್ಥಳವನ್ನು ತೆಗೆದುಕೊಂಡಿರುವುದಿಲ್ಲ. ಮನೆಯೊಳಗೆ ಜಾಗ ಸೇರಿರುವುದಿಲ್ಲ. ಈ ಸ್ಥಳವನ್ನು ಖಾಳಿ ಬಿಟ್ಟು ಸುತ್ತಲು ಓಪನ್ ಬಿಟ್ಟಿರುತ್ತಾರೆ. ಗಾಡಿಗಳನ್ನು ನಿಲ್ಲಿಸಿಕೊಳ್ಳಲು ಸಹಾಯವಾಗುವಂತೆ ಕಟ್ಟಿಕೊಂಡಿರುತ್ತಾರೆ.
ಹೀಗೆ ತೆರೆದಿಡುವ ಜಾಗದಲ್ಲಿ ಇದು ಈಶಾನ್ಯ ಕೋಣೆ ತೆಗೆದಿದ್ದರೆ, ಕಟ್ ಆಗುತ್ತದೆ. ಈಶಾನ್ಯ ದಿಕ್ಕು ಯಅವುದೇ ಕಾರಣಕ್ಕೂ ಕಟ್ ಆಗಬಾರದು. ಇದರಿಂದ ಬಹಳ ಸಮಸ್ಯೆಗಳು ಆಗುತ್ತದೆ. ಈ ಈಶಾನ್ಯ ದಿಕ್ಕು ಖಾಲಿ ಬಿಡುವುದು ಎಂದರೆ, ಮನಯ ಒಳಗೆ ಸೇರಿಸಿಕೊಂಡಿರುತ್ತೇವೆ. ಇಲ್ಲಿ ಲಾನ್ ಅಥವಾ ವಾಹನ ನಿಲುಗಡೆಗೆ ಖಾಲಿ ಆಗಿರುತ್ತದೆ. ಇಲ್ಲಿ ಲಾನ್ ಹಾಗೂ ಕಾರು ಪಾರ್ಕಿಂಗ್ ಇದ್ದರೆ ಸಮಸ್ಯೆ ಆಗುವುದಿಲ್ಲ. ಇನ್ನು ಈಶಾನ್ಯ ದಿಕ್ಕಿನಲ್ಲಿ ದೇವರ ಮನೆಯನ್ನು ಕೂಡ ಇಡುತ್ತಾರೆ. ಹೆಚ್ಚಿನ ಭಾರ ಬಿಡದಂತೆ ನಿರ್ಮಾಣ ಮಾಡಿಕೊಂಡರೆ, ಈಶಾನ್ಯ ದಿಕ್ಕಿನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.
ಇನ್ನು ಹೀಗೆ ಈಶಾನ್ಯ ದಿಕ್ಕನ್ನು ಹೆಚ್ಚಿಸಿದಾಗ ಎರಡೂ ಕಡೆ ಬಾಗಿಲು ಅಥವಾ ಕಿಟಕಿಯನ್ನು ಇಟ್ಟು ಓಪನ್ ಬಿಡುವುದು ಒಳ್ಳೆಯದು. ಓಪನ್ ಬಿಡದೇ ಮುಚ್ಚಿದಾಗ ಸಮಸ್ಯೆ ಆಗುತ್ತದೆ. ಈಶಾನ್ಯ ದಿಕ್ಕು ತೆರೆದಿಡುವುದು ಹಾಗೂ ಖಾಲಿ ಇರುವುದು ಎರಡೂ ಕೂಡ ಸಣ್ಣ ವ್ಯತ್ಯಾಸವಿದ್ದು, ಮನೆಯನ್ನು ನಿರ್ಮಾಣ ಮಾಡುವಾಗ ಹೆಚ್ಚು ಗಮನ ಕೊಡಬೇಕು. ಕಟ್ ಆಗದಂತೆ, ಮನೆಗೆ ಸೇರಿಕೊಳ್ಳುವಂತೆ ಈ ಜಾಗವನ್ನು ನಿರ್ಮಾಣ ಮಾಡುವುದು ಬಹಳ ಮುಖ್ಯವಾಗುತ್ತದೆ.