14.2 C
Bengaluru
Wednesday, January 22, 2025

ಮಲಗುವ ಕೋಣೆಗೆ ವಾಸ್ತು ಬಹಳ ಮುಖ್ಯ: ನೀವು ಮಲಗುವ ದಿಕ್ಕು ಸರಿಯಾಗಿದೆಯೇ..?

ಭಾರತದಲ್ಲಿ ಬಹುತೇಕರು ವಾಸ್ತು ಶಾಸ್ತ್ರದ ತತ್ವಗಳನ್ನು ಅನುಸರಿಸುತ್ತಾರೆ. ಭಾರತೀಯರ ಪ್ರಕಾರ ವಾಸ್ತು ನಮ್ಮ ವಾಸಸ್ಥಳ ಮತ್ತು ಜೀವನವನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಧನಾತ್ಮಕವಾಗಿರಲು ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದ ತತ್ವಗಳನ್ನು ನಂಬದ ಜನರು ಕೂಡ, ತಮ್ಮ ಅನುಭವಕ್ಕೆ ಬಂದ ಮೇಲೆ ನಂಬಲು ಶುರು ಮಾಡಿರುವ ಬಹಳಷ್ಟು ಉದಾರಹರಣೆಗಳು ನಮ್ಮ ನಿಮ್ಮ ನಡುವೆ ನೋಡಬಹುದು. ಸಂಬಂಧವನ್ನು ಸುಧಾರಿಸುವಲ್ಲಿ ವಾಸ್ತು ಶಾಸ್ತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಹಳ ವಿಶೇಷವಾಗಿ ದಂಪತಿಗಳಿಗೆ ವಾಸ್ತು ಶಾಸ್ತ್ರ ಉತ್ತಮ ಬಾಂಧವ್ಯ ಹೊಂದಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಅಡುಗೆ ಮನೆ, ಹಾಲ್‌, ಸ್ನಾನ ಗೃಹ, ಮಲಗುವ ಕೋಣೆ, ದೇವರ ಮನೆ ಎಲ್ಲವೂ ವಾಸ್ತು ಪ್ರಕಾರ ಇರಲಿ ಎಂದು ಜನ ಬಯಸುತ್ತಾರೆ. ಈನ್ನು ವಾಸ್ತು ಪ್ರಕಾರ ಸರಿಯಾದ ಹಾಸಿಗೆಯ ದಿಕ್ಕು ಮತ್ತು ಮಲಗುವ ದಿಕ್ಕನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಧನಾತ್ಮಕ ಶಕ್ತಿಗಳನ್ನು ಆಹ್ವಾನಿಸಬಹುದು. ಆದ್ದರಿಂದ, ಮಲಗುವ ಕೋಣೆಯನ್ನು ವಿನ್ಯಾಸಗೊಳಿಸುವಾಗ, ಹಾಸಿಗೆಯ ಸ್ಥಾನ, ಕೋಣೆಯ ಬಣ್ಣ ಮತ್ತು ಮಲಗುವ ದಿಕ್ಕನ್ನು ವಾಸ್ತುವಿನ ನಿಯಮದಂತೆ ಪಾಲಿಸುವುದು ಸೂಕ್ತ. ಪ್ರತಿಯೊಬ್ಬರ ಮನೆಯಲ್ಲೂ ವಯಕ್ತಿಕ ಜಾಗವೆಂದರೆ ಅದು ಮಲಗುವ ಕೋಣೆ. ಏಕಾಂತದಲ್ಲಿ ವಿಶ್ರಾಂತಿ ಪಡೆಯುವ ಸ್ಥಳವದು.

ವಾಸ್ತು ಶಾಸ್ತ್ರ ಕುಟುಂಬದ ಸಂಪತ್ತು, ಸಂತೋಷ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಜೀವನವನ್ನು, ಸಮತೋಲನದಲ್ಲಿರಸಲು ಸಹಕರಿಸುತ್ತದೆ. ವಾಸ್ತು ಶಾಸ್ತ್ರದ ಪ್ರಾಚೀನ ತತ್ವಗಳ ಪ್ರಕಾರ, ಮಲಗಲು ವಾಸ್ತು ದಿಕ್ಕು ದಕ್ಷಿಣ ದಿಕ್ಕು ಎಂದು ಪರಿಗಣಿಸಲಾಗಿದೆ. ಅಂದರೆ, ನೀವು ಮಲಗುವಾಗ ತಲೆ ದಕ್ಷಿಣದ ಕಡೆಗೆ ಮತ್ತು ಪಾದಗಳು ಉತ್ತರದ ಕಡೆಗೆ ಇರಬೇಕು. ಹಾಗಾದರೆ, ಯಾವ ದಿಕ್ಕಿನಲ್ಲಿ ಮಲಗುವುದು ಸೂಕ್ತ, ಬೆಡ್ರೂಮ್‌ ನಲ್ಲಿ ಹಾಸಿಗೆಯನ್ನು ಯಾವ ದಿಕ್ಕಿಗೆ ಹಾಕಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ.

ಮಲಗುವ ದಿಕ್ಕು ಹಾಗೂ ಹಾಸಿಗೆ ಯಾವ ಕಡೆ ಇಡಬೇಕು..?

ವಾಸ್ತು ಪ್ರಕಾರ ಮಲಗುವ ಕೋಣೆಯ ಸರಿಯಾದ ದಿಕ್ಕು ಮನೆಯ ನೈಋತ್ಯ ಮೂಲೆಯಲ್ಲಿರಬೇಕು. ಹಾಸಿಗೆಯ ದಿಕ್ಕು ದಕ್ಷಿಣ ಅಥವಾ ಪೂರ್ವದ ಕಡೆಗೆ ತಲೆ ಇಡಬೇಕು. ಕಾಲುಗಳನ್ನು ಉತ್ತರ ಅಥವಾ ಪಶ್ಚಿಮ ದಿಕ್ಕಿಗೆ ಇಡುವುದು ಒಳ್ಳೆಯದು. ಮಾಸ್ಟರ್ ಬೆಡ್‌ರೂಮ್‌ನಲ್ಲಿ ಹಾಸಿಗೆಯನ್ನು ದಕ್ಷಿಣ ಅಥವಾ ಪಶ್ಚಿಮದಲ್ಲಿ ಗೋಡೆಯ ವಿರುದ್ಧ ಇಡಬೇಕು ಇದರಿಂದ ನೀವು ಮಲಗಿದಾಗ ನಿಮ್ಮ ಕಾಲುಗಳು ಉತ್ತರ ಅಥವಾ ಪೂರ್ವದ ಕಡೆಗೆ ತೋರಿಸುತ್ತವೆ. ಮಾಸ್ಟರ್‌ ಬೆಡ್‌ ರೂಮ್‌ ನಲ್ಲಿ ಮಲಗುವರು ನೆಮ್ಮದಿಯಾಗಿ ಒಳ್ಳೆಯ ನಿದ್ದೆ ಮಾಡಬೇಕು. ಅವರಿಗೆ ಗುಣಮಟ್ಟದ ನಿದ್ದೆಯಾಗದಿದ್ದರೆ, ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ.

ಇನ್ನು ಅತಿಥಿ ಕೋಣೆಯಲ್ಲಿ ಹಾಸಿಗೆಯನ್ನು ಪಶ್ಚಿಮಕ್ಕೆ ತಲೆ ಇಡುವಂತೆ ಹೊಂದಬಹುದು. ಅಲ್ಲದೆ, ನಿಮ್ಮ ಹಾಸಿಗೆ ಮರದಿಂದ ಮಾಡಲ್ಪಟ್ಟಿದ್ದರೆ ಒಳ್ಳೆಯದು. ಲೋಹದಲ್ಲಿ ತಯಾರಿಸಿದ ಮಂಚಗಳು ನಕಾರಾತ್ಮಕ ಕಂಪನಗಳನ್ನು ಉಂಟುಮಾಡಬಹುದು. ಒಗ್ಗಟ್ಟನ್ನು ಉತ್ತೇಜಿಸಲು, ದಂಪತಿಗಳು ಒಂದೇ ಹಾಸಿಗೆಯ ಮೇಲೆ ಮಲಗಬೇಕು. ಎರಡು ಪ್ರತ್ಯೇಕ ಹಾಸಿಗೆಗಳನ್ನು ಸೇರಿಸಿರಬಾರದು. ಬೆಡ್ ರೂಮಿನ ಮೂಲೆಯಲ್ಲಿ ಹಾಸಿಗೆಯನ್ನು ಮಡಿಸಿ ಇಡುವುದನ್ನು ತಪ್ಪಿಸಿ. ಇದು ಧನಾತ್ಮಕ ಶಕ್ತಿಯು ಮುಕ್ತವಾಗಿ ಹರಿಯುವುದನ್ನು ತಡೆಯುತ್ತದೆ. ಮಲಗುವ ಕೋಣೆಯಲ್ಲಿ ಬೆಡ್‌ನ ಸ್ಥಾನವು ಗೋಡೆಯ ಮಧ್ಯಭಾಗದಲ್ಲಿರಬೇಕು.

ಉತ್ತಮ ನಿದ್ರೆಗೆ ವಾಸ್ತು

ಮನುಷ್ಯ ಉತ್ತಮವಾದ ನಿದ್ದೆ ಮಾಡುವುದು ಬಹಳ ಮುಖ್ಯ. ಉತ್ತಮ ನಿದ್ರೆ ಮೆದುಳಿನ ಕಾರ್ಯಕ್ಷಮತೆ ಮತ್ತು ಮನಸ್ಥಿತಿಯ ಮಟ್ಟವನ್ನು ಹೆಚ್ಚಿಸುತ್ತದೆ. ದಿನದ ಕೆಲಸವನ್ನು ನಿರ್ವಹಿಸಲು ವ್ಯಕ್ತಿಯನ್ನು ತಾಜಾ ಮತ್ತು ಸಕ್ರಿಯವಾಗಿರಲು ಮನುಷ್ಯ ನಿತ್ಯ ಚೆನ್ನಾಗಿ ನಿದ್ರೆ ಮಾಡಬೇಕು. ನೀವು ರಾತ್ರಿಯಲ್ಲಿ ಆಗಾಗ್ಗೆ ಎದ್ದೇಳುತ್ತಿದ್ದರೆ, ಮಲಗುವ ಕೋಣೆಯ ವಿನ್ಯಾಸವನ್ನು ಬದಲಿಸಿ. ವಾಸ್ತು ಮಾರ್ಗಸೂಚಿಗಳ ಪ್ರಕಾರ ಅದನ್ನು ಬದಲಾಯಿಸುವುದು ಅತ್ಯಗತ್ಯ. ವಾಸ್ತು ಪ್ರಕಾರ ಹಾಸಿಗೆ ಇಡದಿದ್ದರೆ, ಮಲಗುವ ದಿಕ್ಕು ಸರಿ ಇಲ್ಲದೇ ಹೋದಲ್ಲಿ ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಿಲ್ಲ.

Related News

spot_img

Revenue Alerts

spot_img

News

spot_img