ಬೆಂಗಳೂರು, ಮೇ. 20 : ಓದುವ ಮಕ್ಕಳಿಗೆ ವಾಸ್ತು ಬಹಳ ಮುಖ್ಯವಾಗಿರುತ್ತದೆ. ಮಕ್ಕಳ ಏಳಿಗೆ ಅವರ ಓದಿನ ಮೇಲೆ ನಿರ್ಧರಿಸುತ್ತದೆ. ಸ್ವಲ್ಪ ಹೆಚ್ಚಿಗೆ ಜಾಗವಿದೆ ಎಂದು ಎಲ್ಲೆಂದರಲ್ಲಿ ಸ್ಟಡಿ ರೂಮ್ ಅನ್ನು ಹಾಕಲು ಸಾಧ್ಯವಾಗುವುದಿಲ್ಲ. ಓದುವ ಕೋಣೆ ಆದಷ್ಟು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ ಬಹಳ ಶುಭ. ಮಕಕ್ಕಳ ಮನಸ್ಸಿಗೆ ಬೇರೆಯಾವ ವಿಚಾರವೂ ಬರದೇ, ಕೇವಲ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಲು ಈ ಮೂರು ದಿಕ್ಕಿನಲ್ಲಿ ಸ್ಟಡಿ ರೂಮ್ ನಿರ್ಮಾಣ ಮಾಡುವುದು ಬಹಳ ಮುಖ್ಯವಾಗುತ್ತದೆ.
ಒಳ ವಿನ್ಯಾಸ ಬಹಳ ಮುಖ್ಯ. ಓದುವ ಟೇಬಲ್ ಅನ್ನು ಮೂಲೆಯಲ್ಲಿ ಹಾಕಿರಲಾಗುತ್ತದೆ. ಯಾಕೆಂದರೆ, ವಾಯುವ್ಯ ಹಾಗೂ ಆಗ್ನೇಯ ಮೂಲೆಗಳು ಓದುವುದಕ್ಕೆ ಸೂಕ್ತ ಜಾಗವಲ್ಲ. ಓದುವ ಟೇಬಲ್ ಪೂರ್ವ ದಿಕ್ಕಿನಲ್ಲಿ ಇರುವುದು ಒಳ್ಳೆಯದು. ಇಲ್ಲವೇ ಉತ್ತರ ಭಾಗವೂ ಸರಿ. ಇನ್ನು ಬುಕ್ಸ್ ಶೆಲ್ಫ್ ಯಾವಾಗಲು ಬಲಗಡೆ ಇದ್ದರೆ ಒಳ್ಳೆಯದು. ಪೂರ್ವಾಭಿ ಮುಖವಾಗಿ ಓದುವ ಟೇಬಲ್ ಇದ್ದರೆ, ಬಲಗಡೆಗೆ ಶೆಲ್ಫ್ ಇರಲಿ. ಅಂದರೆ ಆಗ್ನೇಯ ದಿಕ್ಕಿಗೆ ಬರುವುದು ಸೂಕ್ತ. ಉತ್ತರಾಭಿಮುಖವಾಗಿ ಟೇಬಲ್ ಇದ್ದರೆ, ಶೇಲ್ಫ್ ಎಡ ದಿಕ್ಕಿಗೆ ಅಂದರೆ ವಾಯುವ್ಯದಲ್ಲಿ ಇದ್ದರೆ ಒಳ್ಳೆಯದು. ಇದರಿಂದ ಮಕ್ಕಳ ಬುದ್ಧಿಶಕ್ತಿ ವೃದ್ಧೀಸುತ್ತದೆ ಎಂದು ಫೆಂಗ್ ಶೂಯಿ ಎಂದು ಹೇಳಲಾಗಿದೆ.
ಇನ್ನು ಎನರ್ಜಿ ಅನ್ನು ಬೂಸ್ಟ್ ಮಾಡುವ ವಿಚಾರ ಬಂದಾಗ ಓದುವ ಕೋಣೆಯಲ್ಲಿ ಕೆಲ ವಸ್ತುಗಳನ್ನು ಬಳಸಬಹುದು. ಗ್ಲೋಬ್ ಅನ್ನು ಸ್ಟಡಿ ಟೇಬಲ್ ಮೇಲೆ ಇಟ್ಟು, ದಿನಕ್ಕೆ 3-4 ಬಾರಿ ತಿರುಗಿಸಬಹುದು. ಕ್ರಿಸ್ಟಲ್ ಪಿರಮಿಡ್ ಅನ್ನು ಟೇಬಲ್ ಮೇಲೆ ಇಡಬಹುದು. ಪಿರಮಿಡ್ ಕ್ಯಾಪ್ ಅನ್ನು ಹಾಕಿಕೊಂಡು ಓದುವುದು ಕೂಡ ಹೆಚ್ಚು ಕಾನ್ಸೇಂಟ್ರೇಟ್ ಬರುವಂತೆ ಮಾಡುತ್ತದೆ. ಇದೆಲ್ಲವೂ ಮಕ್ಕಳಿಗೆ ಓದಲು ಕಾನ್ಸಂಟ್ರೇಟ್ ಅನ್ನು ಹೆಚ್ಚಿಸುತ್ತದೆ. ಮಕ್ಕಳು ಚೆನ್ನಾಗಿ ಓದುತ್ತಾರೆ.