28.2 C
Bengaluru
Friday, September 20, 2024

ಬಹುಮಹಡಿ ಕಟ್ಟಡಗಳ ಮೇಲ್ಮನೆ ವಾಸ್ತು ಪ್ರಭಾವ ಹೇಗಿರುತ್ತದೆ..?

ಬೆಂಗಳೂರು, ಮೇ. 15 : ಬಹುಮಹಡಿ ಕಟ್ಟಡಗಳು ಬಂದರೆ, ಅಲ್ಲಿ ಸಾಕಷ್ಟು ಮಂದಿ ವಾಸ ಇರುತ್ತಾರೆ. ಆ ಭೂಮಿಯಲ್ಲಿ ಯಾವುದಾದರು ದೋಷಗಳಿದ್ದರೆ, ಅಥವಾ ಇನ್ಫಾಸ್ಟ್ರಕ್ಷರ್‌ ನಲ್ಲಿ ದೋಷಗಳಿದ್ದರೆ, ಅದು ಇಡೀ ಬಿಲ್ಡಿಂಗ್‌ ನಲ್ಲಿರುವ ಪ್ರತಿಯೊಬ್ಬರಿಗೂ ಆ ದೋಷಗಳು ಹಂಚಿಕೆಯಾಗುತ್ತದೆ. ಭಾಗಶಃ ಕೆಳಮನೆಯವರಿಗೆ ಪ್ರಭಾವ ಹೆಚ್ಚಿರುತ್ತದೆ. ಮನೆಗಳು ಎಷ್ಟು ಮೇಲೆ ಇರುತ್ತವೆ, ಅದರ ಪ್ರಭಾವ ಕಡಿಮೆ ಇರುತ್ತದೆ. ಆದರೆ, ಪ್ರತಿಯೊಬ್ಬರಿಗೆ ದೋಷ ತಗುಲುವುದು ಖಚಿತ. ಹಾಗಾಗಿ ನಾವು ಎಚ್ಚರಿಕೆ ಇಂದ ಇರಬೇಕು.

ಅದರಲ್ಲೂ ಸಮಸ್ಯೆ ಇದ್ದರೆ ಅದು ಕೆಳಗಿನ ಮನೆಯವರಿಗೆ, ನಮಗೆ ಬರುವುದಿಲ್ಲ ಎಂದು ತಿಳಿದುಕೊಳ್ಳುವುದು ತಪ್ಪು. ಇನ್ನು ಬಹುಮಹಡಿ ಕಟ್ಟಡಗಳಲ್ಲಿ ಆದಷ್ಟು ಮನೆಯ ಮಾಲೀಕರು ಮೇಲೆ ಇದ್ದು, ಬಾಡಿಗೆದಾರರು ಕೆಳಗಿರುವುದು ಬಹಳ ಒಳ್ಳೆಯದು. ಯಾಕೆಂದರೆ, ಮೊದಲನೇಯದಾಗಿ ಬಾಡಿಗೆದಾರರು ಮೇಲಿದ್ದರೆ, ಅವರ ಒತ್ತಡಗಳು ಮಾಲೀಕರ ಮೇಲೆ ಬಿದ್ದ ಹಾಗೆ ಆಗಬಹುದು. ಎರಡನೇಯದಾಗಿ ಮಾಲೀಕರ ಒತ್ತಡ ಬಾಡಿಗೆದಾರರ ಮೇಲೆ ಬೀಳುತ್ತದೆ. ಮಾಲೀಕರು ಅಧಿಕಾರವನ್ನು ಚಲಾಯಿಸಬಹುದು.

ಇನ್ನು ಭೂಮಿ ದೋಷಗಳಿದ್ದರೆ, ಅದು ಬಾಡಿಗೆದಾರರಿಗೆ ಹೆಚ್ಚಿರುತ್ತದೆ. ಇದರಿಂದ ಮಾಲೀಕರು ಕೊಂಚ ರಿಲೀಫ್‌ ಪಡೆಯಬಹುದು. ಇನ್ನು ಮನೆಯು ಮೇಲೆ ಹೋದಂತೆ ದೋಷಗಳು ಹೆಚ್ಚುತ್ತದೆ. ಇನ್ನು ಅಪಾರ್ಟ್‌ ಮೆಂಟ್‌ ವಾಸ್ತುಗಳಿಗೂ, ಇಂಡಿಪೆಂಡೆಂಟ್‌ ಮನೆಗಳ ವಾಸ್ತುವಿಗೂ ಬಹಳ ವ್ಯತ್ಯಾಸವಿದೆ. ಅಪಾರ್ಟ್‌ ಮೆಂಟ್ ಗಳಲ್ಲಿನ ದೋಷಗಳು ಹೆಚ್ಚಾಗಿ ಮಾಲೀಕರ ಮೇಲೆ ಬೀಳುತ್ತದೆ. ಬಾಡಿಗೆದಾರರಿಗೆ ಹಂಚಿಕೆಯಾಗುವುದರಿಂದ, ದೋಷ ಪ್ರಭಾಗಳು ಕಡಿಮೆ ಇರುತ್ತದೆ. ಇಂಡಿಪೆಂಡೆಂಟ್‌ ಮನೆಗಳಲ್ಲಿ ವಾಸ್ತು ಪ್ರಭಾವ ಎಲ್ಲರಿಗೂ ಹಂಚಿಕೆಯಾಗುತ್ತದೆ.

Related News

spot_img

Revenue Alerts

spot_img

News

spot_img