28.2 C
Bengaluru
Wednesday, July 3, 2024

ಕರ್ನಾಟಕ ಸರ್ಕಾರದ ಖಜಾನೆ-2 ನಲ್ಲಿ ಇರುವ ಸೇವೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ.

ಬೆಂಗಳೂರು ಜುಲೈ 13: ಕರ್ನಾಟಕ ಸರ್ಕಾರದ ಆರ್ಥಿಕ ಅಥವಾ ಹಣಕಾಸು ಇಲಾಖೆಯ ಖಜಾನೆ-2 ಅನ್ನು ಅನುಕಲಿನ ಆರ್ಥಿಕ ನಿರ್ವಹಣಾ ವ್ಯವಸ್ಥೆಯೆಂದು ಸಹ ಕರೆಯಲಾಗುತ್ತದೆ. ಎಲ್ಲಾ ಇಲಾಖೆಗಳ ಮುಖ್ಯ ನಿಯಂತ್ರಣಾಧಿಕಾರಿಗಳು, ನಿಯಂತ್ರಣಾಧಿಕಾರಿಗಳು ಮತ್ತು ಹಣ ಸೆಳೆಯುವ ಹಾಗೂ ಬಟವಾಡೆ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಹಣಕಾಸಿನ ಚಟುವಟಿಕೆಗಳನ್ನು ನಿರ್ವಹಿಸಲು ಖಜಾನೆ-2 ನಲ್ಲಿ ಅನುಕೂಲ ಕಲ್ಪಿಸುತ್ತದೆ.

ಕರ್ನಾಟಕ ಸರ್ಕಾರದ ಖಜಾನೆ-2 ನ ಪ್ರಮುಖ ಪೋರ್ಟಲ್: https://K2.karnataka.gov.in ಖಜಾನೆ-2 ಕರ್ನಾಟಕ ಸರ್ಕಾರದ ಆರ್ಥಿಕ ವಹಿವಾಟುಗಳನ್ನು ಸಮಗ್ರವಾಗಿ ನಿರ್ವಹಿಸುವ ಉದ್ದೇಶಕ್ಕಾಗಿ ಅನುಷ್ಠಾನಗೊಂಡಿರುತ್ತದೆ. ಖಜಾನೆ-2, “ಯಾವುದೇ ಸ್ಥಳದಿಂದ – ಯಾವುದೇ ಸಮಯದಲ್ಲಿ” ಸಂದಾಯ ಮಾಡುವ ಅನುಕೂಲತೆಯೊಂದಿಗೆ ಸರ್ಕಾರಕ್ಕೆ ಸಂದಾಯ ಮಾಡುವ ವಿಧಾನವನ್ನು ಸರಳೀಕೃತಗೊಳಿಸಲು ಬಯಸಿರುತ್ತದೆ.

ಖಜಾನೆ-2 ಅಡಿಯಲ್ಲಿ ಸಂದಾಯ ಮಾಡಿಕೊಳ್ಳುವ ಕರ್ನಾಟಕ ಸರ್ಕಾರದ ಕೆಲವು ಪ್ರಮುಖ ಇಲಾಖೆಗಳು:-
*ನೋಂದಣಿ ಮತ್ತು ಮುದ್ರಾಂಕ ಇಲಾಖೆ.
*Department of empowerment of differntly abled and senior citizens.
*Department of Animal Husbandry and Veternary services.
*Department of Backward Classes Welfare
*Department of Co-operative Societies.
*Department of Employee State Insurance Scheme(Medical)Safety
*Department of Food,Civil Suplies and Consumer Affairs. and many more……

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಗ್ರಾಹಕರಿಗೆ ಈ ಕೆಳಕಂಡ ಸಂದಾಯ ವಿಧಾನಗಳಲ್ಲಿ ಸರ್ಕಾರಕ್ಕೆ ಸಂದಾಯ ಮಾಡಲು ಖಜಾನೆ-2 ಅವಕಾಶ ಮಾಡಿಕೊಟ್ಟಿರುತ್ತದೆ.

*ಇಂಟರ್ ನೆಟ್ ಬ್ಯಾಂಕಿಂಗ್
*ಡೆಬಿಟ್ ಕಾರ್ಡ್
*ಭೀಮ್/ಯುಪಿಐ
*ಕ್ರೆಡಿಟ್ ಕಾರ್ಡ್
*ಎನ್.ಇ.ಎಫ್.ಟಿ.
*ಕೌಂಟರುಗಳಲ್ಲಿ(ಓಟಿಸಿ)
*ಪಾಯಿಂಟ್ ಆಫ್ ಮಾರಾಟ
*ಇಲಾಖಾ ಕೌಂಟರುಗಳಲ್ಲಿ/ಕಛೇರಿಗಳಲ್ಲಿ ಸಂದಾಯ
*ನಾಗರೀಕ ಸೌಲಭ್ಯ ಕೇಂದ್ರದ ಮೂಲಕ ಸಂದಾಯ (ಬೆಂಗಳೂರು ಒನ್,ಕರ್ನಾಟಕ ಒನ್)

K2 ನೋಂದಣಿ ಎಂದರೇನು?
ಬಿಲ್‌ಗಳು, ರಶೀದಿಗಳು, ಠೇವಣಿಗಳು, ವರದಿಗಳು ಇತ್ಯಾದಿಗಳ ತಯಾರಿಕೆಗೆ ಸಂಬಂಧಿಸಿದ ವಿವಿಧ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರ್ವಹಿಸುವ ಡಿಡಿಒ ಮತ್ತು ಅವರ ಸಿಬ್ಬಂದಿಗಳು, ಖಜಾನೆ2 ಬಳಕೆದಾರರಾಗಿ ನೋಂದಾಯಿಸಿಕೊಳ್ಳಬೇಕು. ಪ್ರತಿ ನೋಂದಾಯಿತ ಬಳಕೆದಾರರಿಗೆ ಅವರ ಪೋಸ್ಟ್ ಅನ್ನು ಆಧರಿಸಿ ಪಾತ್ರವನ್ನು ನಿಗದಿಪಡಿಸಲಾಗಿದೆ.

K2 ಚಲನ್ ಎಷ್ಟು ದಿನಗಳವರೆಗೆ ಮಾನ್ಯವಾಗಿರುತ್ತದೆ?
90 ದಿನಗಳು
K2 ಚಲನ್ ಚಲನ್ ಉತ್ಪಾದನೆಯ ದಿನದಿಂದ 7 ದಿನಗಳವರೆಗೆ ಮಾನ್ಯವಾಗಿರುತ್ತದೆ, ಆದ್ದರಿಂದ ಚಲನ್ ಉತ್ಪಾದನೆಯ ದಿನದಿಂದ 7 ದಿನಗಳಲ್ಲಿ ಪಾವತಿಯನ್ನು ಪೂರ್ಣಗೊಳಿಸಿ. ಒಮ್ಮೆ ಪಾವತಿ ಮಾಡಿದ ನಂತರ K2 ಚಲನ್ 90 ದಿನಗಳವರೆಗೆ ಮಾನ್ಯವಾಗಿರುತ್ತದೆ. ಪಾವತಿಯ ದಿನದಿಂದ 90 ದಿನಗಳಲ್ಲಿ ನೀವು K2 ಚಲನ್ ಅನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸಬಹುದು.

Related News

spot_img

Revenue Alerts

spot_img

News

spot_img