26.7 C
Bengaluru
Sunday, December 22, 2024

ವಿಧಾನಸಭೆ ಚುನಾವಣೆಗೆ ಹೊಸ ವಿದ್ಯುನ್ಮಾನ ಮತಯಂತ್ರ ಬಳಕೆ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ

ಬೆಂಗಳೂರು ಏ 5; ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅನಕ್ಷರಸ್ಥರೆ ಹೆಚ್ಚಾಗಿರುವ ಭಾರತದಲ್ಲಿ ಚುನಾವಣೆ ಆಯೋಗವು ಆಧುನಿಕ ತಂತ್ರ ಬಳಕೆ, ಪಾರದರ್ಶಕ ಚುನಾವಣಾ ಕ್ರಮಗಳಿಂದಾಗಿ ವಿಶ್ವವೇ ಬೆರಗಾಗುವಂತೆ ಚುನಾವಣೆಗಳನ್ನು ನಡೆಸುತ್ತಿರುವುದು ಜಾಗತಿಕ ಮೆಚ್ಚುಗೆ, ಪ್ರಶಂಸೆ, ವಿಶ್ವಾಸಾರ್ಹತೆಗೆ ಪಾತ್ರವಾಗಿದೆ. ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅಗತ್ಯ ಸೌಲಭ್ಯ ಕಲ್ಪಿಸುವುದು ಒಂದು ಸಾಹಸದ ಕೆಲಸ. ಬದಲಾದ ರಾಜಕೀಯ ಸ್ವರೂಪ, ಮತದಾರರ ಮನೋಭಾವ, ತಾಂತ್ರಿಕ ಬದಲಾವಣೆಗೆ ತಕ್ಕಂತೆ ನಿಯಮಾವಳಿಗಳನ್ನು ರೂಪಿಸುತ್ತ ಬಂದಿದೆ, 2004 ಕ್ಕಿಂತ ಮೊದಲು ಚುನಾವಣೆಯಲ್ಲಿ ಕಾಗದ ಮತ ಪತ್ರವನ್ನು ಬಳಸಲಾಗುತ್ತಿತ್ತು. ವಿದ್ಯುನ್ಮಾನ ಮತಯಂತ್ರಗಳನ್ನು ಚುನಾವಣಾ ಕಾರ್ಯದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆಧುನಿಕ ತಂತ್ರeನವನ್ನು ಮತದಾನ ವ್ಯವಸ್ಥೆಯಲ್ಲಿ ಜಾರಿಗೊಳಿಸಿರುವ ಭಾರತದ ಚುನಾವಣಾ ಆಯೋಗದ ಕಾರ್ಯ ಜಗತ್ತಿಗೆ ಮಾದರಿಯಾಗಿದೆ.

ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದಲ್ಲಿ ಹೊಸ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಈ ವಿಚಾರವನ್ನು ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತರಾದ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.ಹೈದರಾಬಾದ್ ಮೂಲದ ಕಂಪನಿ ಹೊಸತಾಗಿ ಈ ಮತಯಂತ್ರಗಳನ್ನು ತಯಾರಿ ಮಾಡಿದ್ದು, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮುಂದೆ ಪ್ರಾತಕ್ಷಿತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ,ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಏ.4) ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಪ್ರಥಮ ರ್ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು.

ಮೊದಲ ರ್‍ಯಾಂಡಮೈಸೇಶನ್‌ ಆದ ಕೂಡಲೇ ಈ ಮತಯಂತ್ರಗಳನ್ನು ಚುನಾವಣಾಧಿಕಾರಿಗಳಿಗೆ ಹಸ್ತಾಂತರಿಸಿ ಮುಂದಿನ ಮತದಾನ ಪ್ರಕ್ರಿಯೆ ನಡೆಯುತ್ತದೆ. ಒಟ್ಟು 1,680 ಮತಗಟ್ಟೆಗಳು ಜಿಲ್ಲೆಯಲ್ಲಿವೆ. ಒಂದು ಮತಯಂತ್ರದಲ್ಲಿ ನೋಟಾ ಸೇರಿ 16 ಅಭ್ಯರ್ಥಿಗಳ ಹೆಸರು ಹಾಕಬಹುದು, ಹೆಚ್ಚು ಅಭ್ಯರ್ಥಿಗಳಿದ್ದರೆ ಹೆಚ್ಚುವರಿ ಮತದಾನ ಘಟಕಗಳನ್ನು ಅಳವಡಿಸಬೇಕಾಗುತ್ತದೆ.ಮತಯಂತ್ರಗಳಲ್ಲಿ64 ಅಭ್ಯರ್ಥಿಗಳ ಹೆಸರನ್ನು ಮಾತ್ರ ಅಳವಡಿಸುವ ಅವಕಾಶ ಇತ್ತು. ಹೊಸ ಮತಯಂತ್ರಗಳಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ಬಳಸಬಹುದಾಗಿದೆ. ವಿವಿ ಪ್ಯಾಟ್‌ಗಳು ಸಹ ತ್ವರಿತವಾಗಿ ಮಾಹಿತಿ ನೀಡುವ ತಂತ್ರಜ್ಞಾನ ಅಳವಡಿಸಿಸಲಾಗಿದೆ. ಮತಯಂತ್ರಗಳನ್ನು ಪ್ರಯಾಸವಿಲ್ಲದೇ ಅಧಿಕಾರಿ,ಸಿಬ್ಬಂದಿ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗಬಹುದಾಗಿದೆ.ಹೊಸ ಮತಯಂತ್ರಗಳನ್ನೇ ಬಳಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಮೀನಾ,“ಈ ಬಾರಿಯ ಚುನಾವಣೆಯಲ್ಲಿ ಒಟ್ಟು 1,15,709 ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ 82,543 ಹಾಗೂ 89,379 ವಿವಿಪ್ಯಾಟ್ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಹೊಸ ಮತಯಂತ್ರಗಳ ಪ್ರಯೋಜನವೆಂದರೆ ಇವು ಹಗುರ ಹಾಗೂ ತೆಳುವಾಗಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗಿವೆ.ಹಿಂದಿನ ಮತಯಂತ್ರಗಳಲ್ಲಿ ಒಂದು ಕಂಟ್ರೋಲ್‌ ಯುನಿಟ್‌ಗೆ 4 ಬ್ಯಾಲಟ್‌ ಯುನಿಟ್‌ಗಳನ್ನಷ್ಟೇ ಜೋಡಿಸಲು ಸಾಧ್ಯವಿತ್ತು. ಈಗಿನ ಯಂತ್ರದಲ್ಲಿ 24 ಬ್ಯಾಲಟ್‌ ಯುನಿಟ್‌ ಜೋಡಿಸಬಹುದು. ಹೀಗಾಗಿ 384 ಅಭ್ಯರ್ಥಿಗಳಿದ್ದರೂ ಇದರಲ್ಲಿ ಸಂಭಾಳಿಸಬಹುದು.ಎಂ-3 ಕಂಟ್ರೋಲ್‌ ಯುನಿಟ್‌ನಲ್ಲಿ ಬ್ಯಾಟರಿ ಬಾಕಿ ಪ್ರಮಾಣ ನಿರಂತರವಾಗಿ ತೋರಿಸುತ್ತದೆ. ಇದರಿಂದಾಗಿ ಬ್ಯಾಟರಿ ಮುಗಿಯುವ ಮುನ್ನ ಮತಗಟ್ಟೆ ಅಧಿ ಕಾರಿಯು ಬೇರೆ ಬ್ಯಾಟರಿ ನೀಡುವಂತೆ ಕೇಳಿಕೊಂಡು ಮತದಾನ ಪ್ರಕ್ರಿಯೆ ಅಡ್ಡಿಯಾಗದಂತೆ ನಿರ್ವಹಿಸಬಹುದು.

ಹೊಸ ಮತಯಂತ್ರಗಳ ಪ್ರಥಮ ಹಂತದ ತಾಂತ್ರಿಕ ಪರಿಶೀಲನೆಗೆ ಕೇಂದ್ರ ಚುನಾವಣಾ ಆಯೋಗದ ತಂಡ ಜಿಲ್ಲೆಗೆ ಭೇಟಿ ನೀಡಿ 10 ದಿನಗಳ ಕಾಲ ಪರಿಶೀಲನೆ ನಡೆಸಿದ್ದು. ಈ ಹಂತ ದಲ್ಲಿ 7 ಸಿಯು, 3 ವಿವಿ ಪ್ಯಾಟ್‌, 3 ಬಿಯು ತಿರಸ್ಕೃತಗೊಂಡಿದ್ದು ಅವುಗಳನ್ನು ಪುನಃ ಕಳಿಸಲಾಗಿದೆ. ಎಲ್ಲ ಪಕ್ಷಗಳ ಮುಖಂಡರ ಸಮ್ಮುಖದಲ್ಲಿಅವರೇ ಆಯ್ಕೆ ಮಾಡಿರುವ 100 ಇವಿಎಂ ಬಳಸಿ ಅಣಕು ಮತದಾನ ಸಹ ಕೈಗೊಂಡು ಅವರಿಗೆ ಹೊಸ ಮತಯಂತ್ರಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಉಪಯೋಗ : *ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಂಟ್ರೋಲ್ ಯೂನಿಟ್‌ನ್ನು ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ದರೆ ಸಾಕು. ಮತಗಳನ್ನು ತ್ವರಿತವಾಗಿ ಎಣಿಕೆ ಮಾಡಬಹುದು. *ಸಾಮಾನ್ಯವಾಗಿ ಮತ ಚೀಟಿಗಳಂತೆ ಕಂಟ್ರೋಲ್ ಯೂನಿಟ್‌ಗಳನ್ನು ಸಹ ೩ ವರ್ಷಗಳಿಗೆ ಭದ್ರಪಡಿಸಬಹುದು. *ವಿದ್ಯುನ್ಮಾನ ಮತಯಂತ್ರವು ಅನಕ್ಷರಸ್ಥ ಮತದಾರರಿಗೆ ಒಂದು ವರದಾನವಾಗಿದೆ. ಉಮೇದುವಾರನ ಚಿಹ್ನೆಯ ಪಕ್ಕದಲ್ಲಿರುವ ನೀಲಿ ಗುಂಡಿ ಒತ್ತಲು ಯಾರಿಗೂ ಕಷ್ಟವಾಗದು. *ಒಬ್ಬರಿಗೆ ಒಂದೇ ಒಂದು ಮತ ಚಲಾಯಿಸಲು ಅವಕಾಶವಿರುವುದರಿಂದ ಅಕ್ರಮ ಮತದಾನಕ್ಕೆ ಹಾಗೂ ತಿರಸ್ಕೃತ ಮತಗಳಿಗೆ ಅವಕಾಶವಿರುವುದಿಲ್ಲ. *ಮುಕ್ತ , ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನ ಕಾರ್ಯಕ್ಕೆ ಈ ವಿದ್ಯುನ್ಮಾನ ಮತಯಂತ್ರಗಳು ನಂಬಿಕೆಗೆ ಅರ್ಹವಾಗಿರುತ್ತವೆ.

Related News

spot_img

Revenue Alerts

spot_img

News

spot_img