25 C
Bengaluru
Monday, December 23, 2024

ಅಮೆರಿಕದಲ್ಲಿ ಮನೆಗಳ ಬೆಲೆ ಕುಸಿಯುವ ಆತಂಕ: ಹೇಗಿದೆ ರಿಯಲ್ ಎಸ್ಟೇಟ್ ಟ್ರೆಂಡ್?

ಅಮೆರಿಕದ ವಸತಿ ಮಾರುಕಟ್ಟೆ ಈಗಾಗಲೇ ಆರ್ಥಿಕ ಹಿಂಜರಿತ ಅನುಭವಿಸುತ್ತಿದ್ದು, ಬರುವ ಬೇಸಿಗೆ ಸಂದರ್ಭದಲ್ಲಿ ಮನೆಗಳ ಬೆಲೆ ಇನ್ನೂ ಶೇ 20ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಮಾರಾಟ ವ್ಯವಹಾರದಲ್ಲಿ ಕುಸಿತ ಕಾಣುತ್ತಿದೆ. ಮನೆಗಳ ಬೆಲೆ ಆಗಸ್ಟ್‌ ವೇಳೆಗೆ ಶೇ 0.7 ಕುಸಿತ ಕಂಡಿದ್ದು ತಿಂಗಳಲ್ಲಿ ಇದು ಮೂರನೇ ಬಾರಿಗೆ ಆಗಿರುವ ಬೆಲೆ ಕುಸಿತ ಆಗಿದೆ. ಮೇ ತಿಂಗಳಿನ ನಂತರ ಶೇ 5ರಷ್ಟು ದರದಲ್ಲಿ ಇಳಿಕೆ ಕಂಡಿದ್ದು ಮುಂದೆಯೂ ಇಳಿಕೆ ಕಾಣುವ ಎಲ್ಲ ಲಕ್ಷಣಗಳಿವೆ. ವಸತಿ ಹಾಗೂ ವಸತಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳೂ ಆರ್ಥಿಕ ಹಿಂಜರಿತಕ್ಕೊಳಗಾಗಿದೆ. ಇಲ್ಲವೇ ಸದ್ಯದಲ್ಲಿಯೇ ಸಮಸ್ಯೆ ಎದುರಿಸಲಿವೆʼ ಎಂದು ಶೆಫರ್ಡ್‌ಸನ್‌ ಹಾಗೂ ಅವರ ತಂಡ ನಡೆಸಿರುವ ಸಂಶೋಧನೆಯಲ್ಲಿ ವಿವರಿಸಲಾಗಿದೆ.

ವಸತಿ ಮಾರುಕಟ್ಟೆ ಆರ್ಥಿಕ ಹಿಂಜರಿತದಿಂದ ಬಳಲಿದರೂ ಇದು ಅಮೆರಿಕದ ಆರ್ಥಿಕತೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಯಾಕೆಂದರೆ 2000 ದಶಕದ ಮಧ್ಯಭಾಗದಲ್ಲಿ ಅನುಭವಿಸಿದ ಅಪಾಯಕ್ಕಿಂತ ಈಗಿನ ಸಮಸ್ಯೆ ಕಡಿಮೆ ಮಟ್ಟದ್ದಾಗಿದೆ.

ಜೂನ್‌ ವೇಳೆಗೆ ಹಣದುಬ್ಬರ 40ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಅಲ್ಲದೆ ಆಗಸ್ಟ್‌ನಲ್ಲಿ ಶೇ 8ಕ್ಕಿಂತ ಹೆಚ್ಚಿತ್ತು. ಇದರಿಂದ ಗ್ರಾಹಕರ ಬಜೆಟ್‌ನ ಮೇಲೆ ವ್ಯತಿರಿಕ್ತ ಕಾರಣ ಬೀರಿತು. ಇದೇ ವಸತಿ ಕ್ಷೇತ್ರದಲ್ಲಿ ಬೇಡಿಕೆ ಕಡಿಮೆ ಆಗುತ್ತಿರುವುದಕ್ಕೆ ಮುಖ್ಯ ಕಾರಣವಾಗಿದೆ ಎಂದೂ ಅವರು ವಿಶ್ಲೇಷಿಸಿದ್ದಾರೆ.

ಅಮೆರಿಕದ ಕೇಂದ್ರ ಬ್ಯಾಂಕಿಂಗ್‌ ವ್ಯವಸ್ಥೆಯಾದ ಫೆಡರಲ್‌ ರಿಸರ್ವ್‌ ಶೂನ್ಯ ದರದಲ್ಲಿದ್ದ ಬಡ್ಡಿದರವನ್ನು ಶೇ 3ಕ್ಕೆ ಏರಿಸುವ ಮುಖಾಂತರ ಈ ಬೆಳವಣಿಗೆಯ ಬಗ್ಗೆ ತನ್ನ ಆತಂಕವನ್ನು ತೋರ್ಪಡಿಸಿದೆ. ಅಲ್ಲದೆ ಸಾಲದ ವೆಚ್ಚವನ್ನು ಹೆಚ್ಚಿಸಿದೆ. ಮತ್ತು ದೀರ್ಘಾವಧಿ ಅಡಮಾನ ದರಗಳ ಬೆಲೆಯನ್ನು 2008ರಿಂದ ಈಚೆಗೆ ಶೇ 6ಕ್ಕೆ ಹೆಚ್ಚಿಸಿದೆ.
ಹೆಚ್ಚುತ್ತಿರುವ ಜೀವನ ವೆಚ್ಚ, ಅಗತ್ಯ ವಸ್ತುಗಳ ಬೆಲೆಗಳಲ್ಲಿನ ಏರಿಕೆ ಹಾಗೂ ಬಡ್ಡಿ ದರಗಳಲ್ಲಿ ಏರಿಕೆಯಂಥ ಅನೇಕ ಕಾರಣಗಳಿಂದಾಗಿ ಈತ್ತೀಚಿನ ದಿನಗಳಲ್ಲಿ ವಸತಿ ಕ್ಷೇತ್ರದೆಡೆಗಿನ ಬೇಡಿಕೆ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ.

ಅಸ್ತಿತ್ವದಲ್ಲಿರುವ ಸರಾಸರಿ ಮನೆಗಳ ಬೆಲೆಯು ಶೇ 6ರಷ್ಟು ಕುಸಿತ ಕಂಡು ಜೂನ್‌ ವೇಳೆಗೆ ಅಂದಾಜು 414ಸಾವಿರ ಡಾಲರ್‌ನಷ್ಟಿದ್ದ ಬೆಲೆ ಆಗಸ್ಟ್‌ ವೇಳೆಗೆ 390 ಸಾವಿರ ಡಾಲರ್‌ನಷ್ಟಾಯಿತು ಎಂದು ರಾಷ್ಟ್ರೀಯ ಚಿಲ್ಲರೆ ವ್ಯಾಪಾರಿಗಳ ಸಂಘವು ತಿಳಿಸಿದೆ. ಸತತ ಏಳು ತಿಂಗಳಿನಿಂದ ಕುಸಿತ ಕಾಣುತ್ತಿರುವ ವಸತಿ ಮಾರುಕಟ್ಟೆ ಕ್ಷೇತ್ರವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ ಎಂದೂ ಮಾಹಿತಿ ನೀಡಿದೆ.

ʼಅಮೆರಿಕದ ಸೆಂಟ್ರಲ್‌ ಬ್ಯಾಂಕ್‌, ವಸತಿ ಕ್ಷೇತ್ರದಲ್ಲಿ ಬೆಲೆ ಇಳಿಸುವ ಬಗ್ಗೆ ತನ್ನ ಬೆಂಬಲವನ್ನು ಸೂಚಿಸಿದೆ. ಇದರಿಂದಾಗಿ ಪೂರೈಕೆ ಹಾಗೂ ಬೇಡಿಕೆಯ ಪ್ರಮಾಣವನ್ನು ಮರುಹೊಂದಿಸಿ ಮನೆಗಳನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶವಿದೆʼ ಎಂದು ಫೆಡರಲ್‌ ರಿಸರ್ವ್‌ನ ಮುಖ್ಯಸ್ಥರಾದ ಜೆರೋಮ್‌ ಪೋವೆಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ʼದೇಶದಾದ್ಯಂತ ವಸತಿ ಮಾರುಕಟ್ಟೆಯ ಸ್ಥಿತಿ ಬಿಸಿತುಪ್ಪದಂತಾಗಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಬಾಡಿಗೆ ಮನೆ ಹಾಗೂ ಇತರೆ ವಸತಿ ಮಾರುಕಟ್ಟೆಯ ಮೌಲ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ಅದು ಒಳ್ಳೆಯ ಬೆಳವಣಿಗೆ ಕೂಡ ಹೌದುʼ ಎಂದು ಪೋವೆಲ್‌ ಅಭಿಪ್ರಾಯಿಸಿದ್ದಾರೆ.

Related News

spot_img

Revenue Alerts

spot_img

News

spot_img