26.9 C
Bengaluru
Friday, July 5, 2024

2 ಸಾವಿರ ರೂ.ಗಿಂತ ಹೆಚ್ಚಿನ UPI ವರ್ಗಾವಣೆ ನಾಲ್ಕು ಗಂಟೆ ವಿಳಂಬ ಸಾಧ್ಯತೆ

#UPI transfer# above Rs 2 thousand # delayed # four hours

ಹೊಸದಿಲ್ಲಿ;ಕೇಂದ್ರ ಸರ್ಕಾರವು ಆನ್ಲೈನ್(Online) ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಯುಪಿಐ (UPI) ವಹಿವಾಟಿನಲ್ಲಿ ನಿರ್ದಿಷ್ಟ ಮೊತ್ತಕ್ಕೆ ಕನಿಷ್ಠ ನಾಲ್ಕು ಗಂಟೆ (4 hour) ಸಮಯ ಮಿತಿಯನ್ನು ನಿಗದಿ ಪಡಿಸಲು ಯೋಜನೆ ರೂಪಿಸುತ್ತಿದೆ. ಈ ನಿಯಮಗಳ ಅಡಿಯಲ್ಲಿ, ಮೊದಲ ಬಾರಿಗೆ ಎರಡು ಗ್ರಾಹಕರ ನಡುವೆ 2,000 ರೂ.ಗಿಂತ ಹೆಚ್ಚಿನ ವಹಿವಾಟು ಪೂರ್ಣಗೊಳ್ಳಲು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 2,000 ರೂ.ಗಿಂತ ಕಡಿಮೆ ವಹಿವಾಟಿಗೆ ಯಾವುದೇ ನಿಯಮ ಇರುವುದಿಲ್ಲ. ಇದರಿಂದ ಗ್ರಾಹಕರು ವಂಚನೆ ಸಂಭವಿಸಿದಲ್ಲಿ ಎಚ್ಚರಿಕೆ ಪಡೆಯಬಹುದು ಮತ್ತು ಸಂಬಂಧಿಸಿದ ಹಣಕಾಸು ಸಂಸ್ಥೆಗೆ ದೂರು ನೀಡಿ ವ್ಯವಹಾರ ನಿಲ್ಲಿಸಬಹುದು.ಈ ಯೋಜನೆಯನ್ನು ಯುಪಿಐ ಖಾತೆ ತೆರೆದ ಬಳಿಕ ಮೊದಲ ವಹಿವಾಟನ್ನು ವಿಳಂಬಗೊಳಿಸಲು ಅಥವಾ ತಡಮಾಡುವ ಉದ್ದೇಶದಿಂದ ಮಾತ್ರ ರೂಪಿಸಲಾಗಿಲ್ಲ. ಬದಲಿಗೆ ಇಬ್ಬರು ಬಳಕೆದಾರರ ನಡುವಿನ ಪ್ರತಿ ಮೊದಲ ವಹಿವಾಟನ್ನು ನಿಯಂತ್ರಿಸಲು ರೂಪಿಸಲಾಗಿದೆ.ಉದಾಹರಣೆಗೆ ಪ್ರಸ್ತುತ ಒಬ್ಬ ಬಳಕೆದಾರ ಹೊಸ ಯುಪಿಐ ಖಾತೆ ತೆರೆದಾಗ ಆತ ಮೊದಲ 24 ಗಂಟೆಗಳಲ್ಲಿ ಗರಿಷ್ಠ 5 ಸಾವಿರ ರೂ. ಕಳುಹಿಸಬಹುದು.ಅದೇ ರೀತಿ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ ಫರ್ (ನಿಫ್ಟ್ ) ವ್ಯವಸ್ಥೆಯಲ್ಲಿ ಕೂಡ ಅದನ್ನು ಆಕ್ಟಿವೇಟ್ ಮಾಡಿದ ಮೊದಲ 24 ಗಂಟೆಗಳಲ್ಲಿ 50 ಸಾವಿರ ರೂ. ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಗಳಲ್ಲಿ ಪಾವತಿಸಬಹುದು,ಆದರೆ, ಯೋಜನೆ ಪ್ರಕಾರ ಪ್ರತಿಬಾರಿ ಮೊದಲ ಬಾರಿಗೆ 2 ಸಾವಿರ ರೂ.ಗಿಂತ ಅಧಿಕ ಮೊತ್ತವನ್ನು ಈ ಹಿಂದೆ ವಹಿವಾಟು ನಡೆಸದಿರುವ ಇನ್ನೊಬ್ಬರು ಬಳಕೆದಾರರಿಗೆ ಪಾವತಿಸಿದಾಗ ನಾಲ್ಕು ಗಂಟೆಗಳ ಸಮಯ ಮಿತಿ ಪ್ರತಿ ಬಾರಿ ಅನ್ವಯಿಸಲಿದೆ.

Related News

spot_img

Revenue Alerts

spot_img

News

spot_img