22.9 C
Bengaluru
Friday, July 5, 2024

100 ಕೋಟಿ ವೆಚ್ಚದಲ್ಲಿ 50 ಸರ್ಕಾರಿ ಶಾಲೆಗಳನ್ನು ಕೆವಿ ಮಾದರಿಯಲ್ಲಿ ಉನ್ನತೀಕರಣ:

ಹುಬ್ಬಳ್ಳಿ-ಧಾರವಾಡ:ಫೆ 21;ಕೇಂದ್ರಿಯ ವಿದ್ಯಾಲಯಗಳ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯದ 50 ಸರ್ಕಾರಿ ಶಾಲೆಗಳಿಗೆ 100 ಕೋಟಿ ರೂ ವೆಚ್ಚದಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಕಲ್ಪಿಸಿ ಶಾಲೆಗಳ ತಾಂತ್ರಿಕ ಉನ್ನತೀಕರಣಕ್ಕಾಗಿ ಒತ್ತು ನೀಡಲಾಗುವುದೆಂದು ಸರ್ಕಾರ ತಿಳಿಸಿದೆ.

ಈವರೆಗೆ ಜಿಲ್ಲೆಯ ಮೂರು ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆರಿಸಲಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ನೂತನ ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಯೋಜನೆಯಡಿ ಧಾರವಾಡದ ಕರಡಿಗುಡ್ಡದಲ್ಲಿರುವ ಸಾರ್ವಜನಿಕ ಶಾಲೆಯ ನವೀಕರಣವನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ನವೀಕರಣದ ಕೆಲಸವು 2021 ರಲ್ಲಿ ಪ್ರಾರಂಭವಾಗಿದ್ದು ಹೊಸ ಮೂಲಕಸೌಕರ್ಯವು ಗ್ರಂಥಾಲಯ ವಿಜ್ಞಾನ ಕೊಠಡಿ, ಪ್ರಯೋಗಾಲಯಗಳು ಮತ್ತು ಕ್ರೀಡಾ ಕೊಠಡಿಯನ್ನು ಒಳಗೊಂಡಿದೆ.

ಫೆಬ್ರವರಿ 24 ರಂದು ಧಾರವಾಡದ ಕರಡಿಗುಡ್ಡದ ಕೆಪಿಎಸ್ ಹೊಸ ಕಟ್ಟಡವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟನೆ ಮಾಡುವ ಸಾಧ್ಯತೆಯಿದೆ ಎಂದು ಅಲ್ಲಿನ ಮುಖ್ಯೋಪಾಧ್ಯಾಯರಾದ ಎಸ್.ಪಿ ಅಂಕಲಿ ರವರು ತಿಳಿಸಿದ್ದಾರೆ. ಧಾರವಾಡದಲ್ಲಿ ಇದೇ ರೀತಿಯ ಸೌಲಭ್ಯ ಹೊಂದಿರುವ ಇನ್ನೆರಡು ಶಾಲೆಗಳ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಘಟಗಿ ತಾಲ್ಲೂಕಿನ ಕೆಪಿಎಸ್ ಬಮ್ಮಿಗಟ್ಟಿ, ನವಲಗುಂದ ತಾಲೂಕಿನ ಕೆಪಿಎಸ್ ಶಲವಡಿ ಹಾಗೂ ಧಾರವಾಡ ತಾಲೂಕಿ ಕೆಪಿಎಸ್ ಕರಡಿಗುಡ್ಡ ಎಂಬ ಮೂರು ಶಾಲೆಗಳನ್ನು ಅಭಿವೃದ್ದಿ ಕಾರ್ಯಕ್ರಮಕ್ಕೆ ಸರಕಾರ ಆಯ್ಕೆ ಮಾಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ)ಶಾಣಮುಕ್ ಸ್ವಾಮಿ ಕೆಳದಿಮಠ ರವರು ತಿಳಿಸಿದರು.

ರಾಷ್ಟ್ರಿಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಉಪ ಯೋಜನೆ ಸಂಯೋಜಕರಾದ ಎಸ್.ಎಂ ಹುಡೇದ ಮನಿ ಮಾತನಾಡಿ ಸಂಸ್ಥೆಗಳಿಗೆ ದಾಖಲಾದ ವಿಧ್ಯಾರ್ಥಿಗಳು ಉತ್ತಮ ಸೌಲಭ್ಯಗಳಿಗಾಗಿ ಬೇರೆ ಶಾಲೆಗಳಿಗೆ ತೆರಳುವ ಅಗತ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮತ್ತು ತಮ್ಮ ಸಂಪೂರ್ಣ ಶೈಕ್ಷಣಿಕ ಪ್ರಯಾಣವನ್ನು ಒಂದೇ ಸಮಯದಲ್ಲಿ ಪೂರ್ಣಗೊಳಿಸಲು ಸಾರ್ವಜನಿಕ ಶಾಲೆಗಳಲ್ಲಿ ಸೌಲಭ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

Related News

spot_img

Revenue Alerts

spot_img

News

spot_img