22.9 C
Bengaluru
Saturday, July 6, 2024

ಗುಡ್ ನ್ಯೂಸ್: ಕೋಟಿಗಟ್ಟಲೆ ಮನೆಗಳಿಗೆ 300 ಯೂನಿಟ್’ವರೆಗೆ ಉಚಿತ ವಿದ್ಯುತ್;ಅನುರಾಗ್ ಠಾಕೂರ್

ನವದೆಹಲಿ : ಒಂದು ಕೋಟಿ ಕುಟುಂಬಗಳಿಗೆ 75,000 ಕೋಟಿ ರೂ.ಗಳ ಮೇಲ್ಛಾವಣಿ ಸೌರ ಯೋಜನೆಗೆ ಕೇಂದ್ರವು ಗುರುವಾರ ಅನುಮೋದನೆ ನೀಡಿದೆ.ಒಂದು ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. 2025 ರ ವೇಳೆಗೆ ಕೇಂದ್ರ ಕಚೇರಿಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದು ಈ ಯೋಜನೆಯ ಗುರಿ. ಈ ಯೋಜನೆಯಿಂದ ಕೋಟಿಗಟ್ಟಲೆ ಮನೆಗಳಿಗೆ ಉಚಿತ ವಿದ್ಯುತ್‌ ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಒಂದು ಕೋಟಿ ಕುಟುಂಬಗಳು 300 ಯೂನಿಟ್‌ಗಳ ಉಚಿತ ವಿದ್ಯುತ್‌ ಪಡೆಯುತ್ತವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.ಪ್ರತಿ ಕುಟುಂಬವು 1 ಕಿಲೋವ್ಯಾಟ್ ವ್ಯವಸ್ಥೆಗೆ 30,000 ರೂ ಮತ್ತು 2 ಕಿಲೋವ್ಯಾಟ್ ವ್ಯವಸ್ಥೆಗೆ 60,000 ರೂ ಸಬ್ಸಿಡಿ ಪಡೆಯಬಹುದು.ಸೌರಶಕ್ತಿ ಮತ್ತು ಸುಸ್ಥಿರ ಪ್ರಗತಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ತಮ್ಮ ಸರ್ಕಾರವು ‘ಪಿಎಂ ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆ’ ಅನ್ನು ಪ್ರಾರಂಭಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದರು.ಇನ್ನು ಕೇಂದ್ರ ಸೌರ ಯೋಜನೆಯಡಿ 2025ರ ವೇಳೆಗೆ ಎಲ್ಲಾ ಸರ್ಕಾರಿ ಕಟ್ಟಡಗಳನ್ನ ಮೇಲ್ಛಾವಣಿ ಸೌರ ಫಲಕಗಳಿಂದ ಮುಚ್ಚಲಾಗುವುದು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಈ ಮೂಲಕ ಸರ್ಕಾರಿ ಕಟ್ಟಡಗಳು ವಿದ್ಯುತ್ ಮುಕ್ತವಾಗಲಿದ್ದು, ಸೌರ ಶಕ್ತಿ ಬೆಳಗಲಿದೆ.

Related News

spot_img

Revenue Alerts

spot_img

News

spot_img