24.4 C
Bengaluru
Sunday, September 8, 2024

ಪ್ರಧಾನ ಮಂತ್ರಿ ಆವಾಜ್‌ ಯೋಜನೆ ಅಡಿ ಗುಜರಾತ್‌ ನಲ್ಲಿ ಮನೆಗಳ ಗೃಹಪ್ರವೇಶ ನೆರವೇರಿಸಲಿರುವ ಪಿಎಂ

ಬೆಂಗಳೂರು, ಮೇ. 12 : ಸರ್ಕಾರಗಳು ಬಡವರಿಗಾಗಿ ಸಾಕಷ್ಟು ವಸತಿ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತವೆ. ಅದರಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯೂ ಒಂದು. ಈ ಯೋಜನೆ ಅಡಿಯಲ್ಲಿ ವಸತಿ ಇಲ್ಲದ ಬಡವರಿಗೆ ಮನೆಯನ್ನು ನಿರ್ಮಿಸಿಕೊಡುವುದೇ ಕೇಂದ್ರ ಸರ್ಕಾರದ ಉದ್ದೇಶ. ಈಗಾಗಲೇ ಈ ಯೋಜನೆ ಅಡಿಯಲ್ಲಿ ಹಲವು ಕಡೆ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ವಿತರಣೆಯನ್ನೂ ಮಾಡಲಾಗಿದೆ. ಇನ್ನಷ್ಟು ಮನೆಗಳು ನಿರ್ಮಾಣವಾಗುತ್ತಿದೆ.

ಇದೀಗ ಗುಜರಾತ್‌ ನಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ 19,000 ಮನೆಗಳು ನಿರ್ಮಾಣಗೊಂಡಿವೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಗೆ ತೆರಳಲಿದ್ದು, ವಿವಿಧ ಕಾರ್ಯಕ್ರಮಗಳ ಜೊತೆಗೆ ಪಿಎಂ ಅವಾಸ್ ಯೋಜನೆ ಅಡಿ ನಿರ್ಮಾಣಗೊಂಡಿರುವ 19,000 ಮನೆಗಳ ಗೃಪ್ರವೇಶವನ್ನೂ ಪಿಎಂ ಮೋದಿ ಅವರು ನೆರವೇರಿಸಲಿದ್ದಾರೆ. ಮನೆಗಳ ಕೀ ಅನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಇನ್ಜು ಇದನ್ನು ಹೊರತು ಪಡಿಸಿ ಈಗಾಗಲೇ ಪಿಎಂ ಅವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಕಳೆದ ತಿಮಗಳು ರೇವಾದಲ್ಲಿ 4 ಲಕ್ಷ ಮನೆಗಳು, 2022ರ ಡಿಸೆಂಬರ್ ತಿಂಗಳಲ್ಲಿ ತ್ರಿಪುರಾದಲ್ಲಿ 2 ಲಕ್ಷ ಮನೆಗಳು, 2022ರ ಅಕ್ಟೋಬರ್ ತಿಂಗಳಲ್ಲಿ ಮಧ್ಯ ಪ್ರದೇಶ ಸಾತ್ನಾದಲ್ಲಿ 4.51 ಲಕ್ಷ ಮನೆಗಳು, 2022ರ ನವೆಂಬರ್ ತಿಂಗಳಲ್ಲಿ ದೆಹಲಿ ಸ್ಲಂ ನಿವಾಸಿಗಳಿಗೆ 3024 ಫ್ಲ್ಯಾಟ್ಗಳನ್ನು ಪಿಎಂ ವಿತರಿಸಿದ್ದಾರೆ.

ಅಂತೆಯೇ, 2022ರ ಸೆಪ್ಟೆಂಬರ್ ತಿಂಗಳಲ್ಲಿ ಗುಜರಾತ್ ನಲ್ಲಿ 45,000 ಮನೆಗಳು, 2022ರ ಮಾರ್ಚ್ ನಲ್ಲಿ ಮಧ್ಯ ಪ್ರದೇಶದಲ್ಲಿ 5 ಲಕ್ಷ ಮನೆಗಳು 2021ರ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ 75,000 ಮನೆಗಳು, 2020ರ ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ 1.75 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿ ಆವಾಜ್‌ ಯೋಜೆನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ.

Related News

spot_img

Revenue Alerts

spot_img

News

spot_img