24.8 C
Bengaluru
Monday, October 7, 2024

ಪಿಎಂಎವೈ ಯೋಜನೆ ಅಡಿ ಮನೆ ನಿರ್ಮಾಣದ ಗುರಿ ಹಾಗೂ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ವಸತಿ ಸಚಿವರು

ಬೆಂಗಳೂರು, ಜು. 13 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರಿಗಾಗಿ ಸಾಕಷ್ಟು ವಸತಿ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತವೆ. ಅದರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯೂ ಒಂದು. ಈ ಯೋಜನೆ ಅಡಿಯಲ್ಲಿ ವಸತಿ ಇಲ್ಲದ ಬಡವರಿಗೆ ಮನೆಯನ್ನು ನಿರ್ಮಿಸಿ ಕೊಡುವುದೇ ಕೇಂದ್ರ ಸರ್ಕಾರದ ಉದ್ದೇಶ. ಈಗಾಗಲೇ ಈ ಯೋಜನೆ ಅಡಿಯಲ್ಲಿ ಹಲವು ಕಡೆ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ವಿತರಣೆಯನ್ನೂ ಮಾಡಲಾಗಿದೆ. ಇನ್ನಷ್ಟು ಮನೆಗಳು ನಿರ್ಮಾಣವಾಗುತ್ತಿದೆ.

ಈ ಬಗ್ಗೆ ನಿನ್ನೆ ವಿಧಾನ ಪರಿಷತ್ನಲ್ಲಿ ಬುಧವಾರ ಬಿಜೆಪಿಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ 2020-21 ರಿಂದ 2022-23 ರವರೆಗೆ 7,06,290 ಮನೆ ನಿರ್ಮಾಣದ ಗುರಿ ಹೊಂದಲಾಗಿದ್ದು, ಇದುವರೆಗೂ 3,68,177 ಮನೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, 68,177 ಮನೆ ಪೂರ್ಣಗೊಂಡಿದೆ. 1.19,090 ಮನೆಗಳು ವಿವಿಧ ಹಂತದಲ್ಲಿವೆ. 1,77,868 ಮನೆ ಇನ್ನೂ ಪ್ರಾರಂಭಗೊಂಡಿಲ್ಲ. 3042 ಮನೆ ನಿರ್ಮಾಣಕ್ಕೆ ತಡೆ ಹಿಡಿಯಲಾಗಿದೆ ಎಂದು ಹೇಳಿದರು.

ಇದೇ ವೇಳೆ ಪಿಎಂಎವೈ ನಗರ ಮತ್ತು ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಅಡಿಯಲ್ಲಿ 1.05,267 ಮನೆ ನಿರ್ಮಾಣದ ಗುರಿ ಹೊಂದಿದ್ದು, 99,218 ಮನೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. 10,148 ಮನೆ ಪೂರ್ಣಗೊಂಡಿದ್ದು, 60,277 ಮನೆ ನಿರ್ಮಾಣ ವಿವಿಧ ಹಂತದಲ್ಲಿವೆ. 28,793 ಮನೆಗಳ ಕಾಮಗಾರಿ ಪ್ರಾರಂಭಗೊಂಡಿಲ್ಲ. ವಸತಿ ಯೋಜನೆಗಳಿಗೆ ಒಟ್ಟಾರೆ 8,11,557 ಮನೆಗಳ ಪೈಕಿ 4,67,395 ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡಲಾಗಿದೆ. ಈ ಪೈಕಿ 78, 325 ಮನೆ ಗಳು ಪೂರ್ಣಗೊಂಡಿದ್ದು, 1,79,367 ಮನೆ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ, 2,06,661 ಮನೆ ಪೂರ್ಣ ಗೊಳ್ಳಲು ಬಾಕಿ ಇದೆ. ಉಳಿದ 3,042 ಮನೆ ಫಲಾನುಭವಿಗಳು ಆಸಕ್ತಿ ತೋರದಿರುವುದು ಸೇರಿ ನಾನಾ ಕಾರಣಕ್ಕೆ ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದರು.

ಮೇ ತಿಂಗಳ ಪ್ರಕಾರ ರಾಜ್ಯಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2015ರಿಂದ 7,06,320 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದುವರೆಗೂ 3,09,324 ಮನೆಗಳು ಪೂರ್ಣಗೊಂಡಿದ್ದವು. ಪಿಎಂಎವೈ-ಯು ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ 11,624 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಇದುವರೆಗೂ 16,504 ಕೋಟಿ ಕೇಂದ್ರದಿಂದ ನೆರವು ಬಿಡುಗಡೆಯಾಗಿದೆ. ಕೋಲಾರ ಜಿಲ್ಲೆಗೆ 8,390 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರ ಪೈಕಿ 5,170 ಮನೆಗಳು ಪೂರ್ಣಗೊಂಡಿವೆ. ಉಳಿದ ಮನೆಗಳು ನಿರ್ಮಾಣ ಹಂತದಲ್ಲಿವೆ. ಚಿಕ್ಕಬಳ್ಳಾಪುರ ಜಿಲ್ಲೆಗೆ 6,358 ಮನೆಗಳು ಮಂಜೂರಾಗಿದ್ದು, 3,346 ಮನೆಗಳು ಪೂರ್ಣಗೊಂಡಿತ್ತು.

Related News

spot_img

Revenue Alerts

spot_img

News

spot_img