22.9 C
Bengaluru
Friday, July 5, 2024

ನಿರ್ಮಾಣ ಹಂತ ಹಾಗೂ ನಿರ್ಮಾಣಗೊಂಡ ಈ ಎರಡು ಮನೆಯಲ್ಲಿ ಯಾವುದನ್ನು ಖರೀದಿಸಿದರೆ ಲಾಭ

ಬೆಂಗಳೂರು, ಮಾ. 17 : ಈಗ ಬೆಂಗಳೂರಿನಂತಹ ನಗರಗಳಲ್ಲಿ ಮನೆಯನ್ನು ಖರೀದಿಸುವುದು ಸುಲಭವಲ್ಲ. ಆದರೂ ಪ್ರತಿಯೊಬ್ಬರಿಗೂ ತಾವು ದುಡಿಯುವ ನಗರಗಳಲ್ಲಿ ಮನೆಯೊಂದು ಸ್ವಂತಕ್ಕಿದ್ದರೆ ಚೆಂದ ಎಂದು ಆಸೆಯನ್ನು ಪಡುತ್ತಾರೆ. ಆದರೆ, ಈಗ ನಿವೇಶನವನ್ನು ಖರೀದಿಸಿ, ಅಲ್ಲೊಂದು ಮನೆಯನ್ನು ಕಟ್ಟುವುದು ಸುಲಭವಂತೂ ಅಲ್ಲ. ಹಾಗಾಗಿ ಎಲ್ಲರೂ ನಿರ್ಮಾಣ ಆಗಿರುವಂತಹ ಮನೆಗಳನ್ನೇ ಖರೀದಿ ಮಾಡುತ್ತಾರೆ. ಇನ್ನು ಫ್ಲ್ಯಾಟ್‌ ಗಳನ್ನು ಕೂಡ ಖರೀದಿಸುತ್ತಾರೆ. ಹಾಗಾದರೆ, ನಿರ್ಮಾಣ ಮುಗಿದ ಬಳಿಕ ಖರೀದಿ ಮಾಡುವುದು ಉತ್ತಮವೇ ಅಥವಾ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಖರೀದಿಸುವುದು ಸೂಕ್ತವೇ ಎಂದು ನೋಡೋಣ ಬನ್ನಿ.

ಆಸ್ತಿಯ ಮೇಲೆ ಹೂಡಿಕೆ ಮಾಡುವಾಗ ಯಾವಾಗಲೂ ಲೆಕ್ಕಾಚಾರ ಹಾಕಬೇಕು. ಹಣಕಾಸು, ಖರೀದಿ ಮಾಡುತ್ತಿರುವ ಜಾಗ, ಅದರಿಂದ ತಮಗೆ ಮುಂದಿನ ದಿನಗಳಲ್ಲಿ ಸಿಗುವ ರಿಟರ್ನ್ಸ್‌ ಸೇರಿದಂತೆ ಎಲ್ಲದರ ಬಗೆಯೂ ಪ್ಲಾನ್‌ ಮಾಡಿ ಮುಂದುವರೆಯಬೇಕು. ಯಾವುದನ್ನು ಖರೀದಿಸಿದರೆ ಲಾಭ, ಯಾವುದರಿಂದ ನಷ್ಟ. ದೀರ್ಘಾವಧಿ ಹೂಡಿಕೆಯಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂದು ತಿಳಿಯಬೇಕು.

ಇನ್ನು ನಿರ್ಮಾಣ ಹಂತದ ಕಟ್ಟಡವನ್ನು ಖರೀದಿಸುವಾಗ ಅಲ್ಲಿ ಮುಂದೆ ಬರಬಹುದಾದ ಕರ್ಚು ವೆಚ್ಚಗಳ ಬಗ್ಗೆ ಮಾಹಿತಿಯನ್ನು ತಿಳಿದಿರಬೇಕು. ನಿರ್ಮಾಣ ಹಂತದಲ್ಲಿ ಇರುವಾಗಲೇ ನಿರ್ವಹಣಾ ಶುಲ್ಕ, ಸಾಲದ ಬಡ್ಡಿ, ಆಸ್ತಿ ತೆರಿಗೆ ವೆಚ್ಚಗಳನ್ನು ಲೆಕ್ಕ ಹಾಕಬೇಕು. ಇನ್ನು ಭಾರತದ ರಿಯಲ್‌ ಎಸ್ಟೇಟ್‌ ನ ವರದಿಯ ಪ್ರಕಾರ, ನಿರ್ಮಾಣ ಹಂತದ ಕಟ್ಟಡ ಅಥವಾ ಮನೆಯನ್ನು ಖರೀದಿಸುವುದರಿಂದ ಹೆಚ್ಚು ರಿಟರ್ನಸ್ ಅನ್ನು ಪಡೆಯಬಹುದು. ಯಾಕೆಂದರೆ, ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಡೆವಲಪರ್‌ ಗಳು ಆಫರ್‌ ಬೆಲೆಗಳನ್ನು ನೀಡಿರುತ್ತಾರೆ. ಇದರಿಂದ ನಿರ್ಮಾಣ ಕಾರ್ಯ ಪೂರ್ಣಗೊಂಡ ಮೇಲೆ ಅದರ ಬೆಲೆ ಹೆಚ್ಚಾಗುತ್ತದೆ.

ಅಷ್ಟೇ ಅಲ್ಲದೇ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಖರೀದಿಸುವುದರಿಂದ ಮನೆಯ ವಿನ್ಯಾಸ ಹಾಗೂ ಕೆಲ ಸೌಕರ್ಯಗಳನ್ನು ನಮಗೆ ಬೇಕಾದಂತೆ ನಿರ್ಮಿಸಿಕೊಳ್ಳಲು ಅವಕಾಶವಿರುತ್ತದೆ. ಅಲ್ಲದೇ, ನಿರ್ಮಾಣ ಹಂತದಲ್ಲಿರುವಾಗಲೇ ಖರೀದಿ ಮಾಡಿದರೆ, ಇದನ್ನು ನಿರ್ವಹಣೆ ಮಾಡುವುದು ಕೂಡ ಸುಲಭವಾಗಿರುತ್ತದೆ. ಇದರಿಂದ ಫ್ಲೆಕ್ಸಿಬಿಲಿಟಿ ಹೆಚ್ಚಾಗಿರುತ್ತದೆ. ಖರ್ಚು ಕೂಡ ತಗ್ಗುತ್ತದೆ. ನಿರ್ಮಾಣದ ಖರ್ಚು ಹೆಚ್ಚು ಇರುವುದಿಲ್ಲ. ಲೋನ್‌ ಕೂಡ ಒಂದೇ ಬಾರಿಗೆ ಮಾಡಿದಂತೆ ಆಗುತ್ತದೆ.

ಇನ್ನು ನಿರ್ಮಾಣ ಹಂತದಲ್ಲಿರುವ ಮನೆಯನ್ನು ಖರೀದಿಸಿದಾಗ, ಪ್ಲಾನ್‌ ಗಳು ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ನಿರ್ಮಾಣ ಮುಗಿಯುವ ಸಮಯ ಹೆಚ್ಚಾಗಬಹುದು. ಇದರಿಂದ ಮನೆ ಶಿಫ್ಟ್‌ ಆಗುವುದಕ್ಕೆ ಕಷ್ಟವಾಗಬಹುದು. ಇನ್ನು ನಿರ್ಮಾಣಗೊಂಡ ಮನೆಯನ್ನು ಖರೀದಿಸಿದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಸಂಪೂರ್ಣವಾಗಿ ಪ್ಲಾನ್‌ ಪ್ರಕಾರವೇ ನಡೆಯುತ್ತದೆ. ನಿರ್ಮಾಣಗೊಂಡ ಮನೆಯಿಂದಲೂ ಲಾಭ ದೊರಕುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

Related News

spot_img

Revenue Alerts

spot_img

News

spot_img