26.7 C
Bengaluru
Sunday, December 22, 2024

ಸೃಷ್ಟಿಯ ಆರಂಭವೇ ಯುಗಾದಿ ಹಬ್ಬ ಆಚರಣೆ: ಇದರ ಪುರಾಣ ಕಥೆ ಗೊತ್ತಾ..?

ಬೆಂಗಳೂರು, ಮಾ. 20 : ನಮ್ಮ ಭಾರತದಲ್ಲಿ ಹಲವು ಹಬ್ಬಗಳನ್ನು ಆಚರಿಸುತ್ತೇವೆ. ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ಮಹತ್ವಗಳಿರುತ್ತವೆ. ಪುರಾಣಗಳಲ್ಲಿ ಪ್ರತಿಯೊಂದು ಹಬ್ಬದ ಮಹತ್ವವನ್ನು ತಿಳಿಸಿಕೊಡಲಾಗಿದೆ. ಆಯಾ ಕಾಲಕ್ಕೆ ಅನುಗುಣವಾಗಿ ಹಬ್ಬದ ಆಚರಣೆಯನ್ನು ಮಾಡಲಾಗುತ್ತದೆ. ಗೌರಿ ಗಣೇಶ ಹಬ್ಬ ಎಂದರೆ, ಅದು ಅವರಿಬ್ಬರು ಹುಟ್ಟಿದ ದಿನ. ಹಾಗೆಯೇ ಈ ಯುಗಾದಿ ಹಬ್ಬವೂ ಕೂಡ. ಆದರೆ ಈ ಯುಗಾದಿ ಹಬ್ಬ ಯಾರ ಹುಟ್ಟು ಹಬ್ಬವೂ ಅಲ್ಲ. ಬದಲಿಗೆ ಇಡೀ ಜಗತ್ತಿನ ಹುಟ್ಟು.

ಹೌದು.. ಹಿಂದೂ ಪುರಾಣಗಳ ಪ್ರಕಾರ, ಹಿಂದೂ ಬ್ರಹ್ಮಾಂಡ ಸೃಷ್ಟಿಯಾದ ದಿನ. ಬ್ರಹ್ಮ ದೇವರು ಯುಗಾದಿ ಹಬ್ಬದ ದಿನದಂದು ಬ್ರಹ್ಮಾಂಡದ ಸೃಷ್ಟಿ ಮಾಡುವುದನ್ನು ಪ್ರಾರಂಭಿಸಿದರು. ಎಂದು ಹೇಳಲಾಗಿದೆ. ಮೊದಲಿಗೆ ದೇವರನ್ನು ಸೃಷ್ಟಿಸಿ, ಬಳಿಕ ಪ್ರಕೃತಿ, ಪ್ರಾಣಿ-ಪಕ್ಷಿ ಹಾಗೂ ಮನುಷ್ಯನನ್ನು ಸೃಷ್ಟಿಸಲಾಯ್ತು. ಚೈತ್ರ ನವರಾತ್ರಿ ಎಂದು ಒಂಬತ್ತು ದಿನಗಳು ಒಂಬತ್ತು ರೂಪದ ದುರ್ಗಾ ದೇವಿಯನ್ನು ಆಚರಿಸಲಾಗುತ್ತದೆ. ಈ ಉತ್ಸವದ ಮೊದಲ ದಿನವೇ. ಭಗವಾನ್ ಬ್ರಹ್ಮನಿಂದ ಮಾನವಕುಲದ ಸೃಷ್ಟಿಯ ಪ್ರಾರಂಭವನ್ನು ಗುರುತಿಸಲು ಯುಗಾದಿ ಎಂದು ಈ ದಿನವನ್ನು ಆಚರಿಸಲಾಗುತ್ತದೆ.

ಇನ್ನು ಯುಗಾದಿ ಎಂದರೆ ಯುಗ+ಆದಿ ಅಂದರೆ ಯುಗದ ಆರಂಭ. ಇದು ಹಿಂದೂಗಳಿಗೆ ಹೊಸ ವರ್ಷ ಆರಂಬವಾಗುವುದು ಯುಗಾದಿ ಹಬ್ಬದಿಂದಲೇ. ವಸಂತ ಋತುವನ್ನು ಸ್ವಾಗತಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಯುಗಾದಿ ಹಬ್ಬವನ್ನು ಚೈತ್ರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಈ ದಿನವನ್ನು ಮರಾಠಿ ಮತ್ತು ಕೊಂಕಣಿ ಹಿಂದೂಗಳು ಗುಡಿ ಪಾಡ್ವಾ ಎಂದು ಆಚರಿಸುತ್ತಾರೆ.

ಇದನ್ನು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿ ಎಂದು ಹೇಳುವರು.

Related News

spot_img

Revenue Alerts

spot_img

News

spot_img