26.7 C
Bengaluru
Sunday, December 22, 2024

Ugadi 2023: ಯುಗಾದಿ ಪಂಚಾಂಗ ಶ್ರವಣ ವೈಶಿಷ್ಟ್ಯ

ಎಲ್ಲ ಜಗತ್ ಸೃಷ್ಟಿಯ ಮೂಲಗಳ ಚಲನೆಯ ಆಧಾರದ ಮೇಲೆ ಪಂಚಾಂಗ ರಚಿಸಲಾಗುತ್ತದೆ. ಇವುಗಳ ಚಲನೆಯ ಆಧಾರದ ಮೇಲೆಯೇ ತಿಥಿ, ವಾರ, ನಕ್ಷತ್ರ, ಯೋಗ, ಕರ್ಣ ಮುಂತಾದವುಗಳನ್ನು ಹೇಳಲು ಸಾಧ್ಯವಾಗುವುದು. ಪಂಚಾಂಗವು ಈ ಐದು ವಿಷಯಗಳನ್ನೂ ಒಳಗೊಂಡಿರುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುತ್ತಾರೆ. ಇದು ಯುಗಾದಿ ಹಬ್ಬದ ವೈಶಿಷ್ಟ್ಯ ಅಂಶ ಹಾಗೂ ಸಂಪ್ರದಾಯ. ಅಂದು ಮದ್ಯಾಹ್ನ ಅಥವಾ ಸಂಜೆ ದೇವಸ್ಥಾನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಂಚಾಂಗ ಪಠಣ ಸಾಮೂಹಿಕ ಶ್ರವಣ ನಡೆಯುತ್ತದೆ. ಇದು ಮಹಾಭಾರತದ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿದು ಬಂದಿದೆ

ಯುಗಾದಿ ದಿನ ಪಂಚಾಂಗ ಶ್ರವಣ ಮಾಡುವುದರಿಂದ ಬಹಳ ಲಾಭವಿದೆ. ಹಾಗಾಗಿ ಬಹುತೇಕರ ಮನೆಯಲ್ಲಿ ಪಂಚಾಂಗ ಪಠಣ ಮಾಡಲಾಗುತ್ತದೆ. ಯಾರಿಗೆ ಮನೆಯಲ್ಲಿ ಮಾಡಲು ಸಾಧ್ಯವಿಲ್ಲವೋ ಅವರ ಇತರರ ಮನೆಗೆ ಹೋಗುತ್ತಾರೆ. ಒಟ್ಟಾರೆ ಆ ದಿನ ಪಂಚಾಂಗ ಶ್ರವಣ ಮಾಡುವುದು ಬಹಳ ಅಗತ್ಯ. ಪಂಚಾಂಗ ಶ್ರವಣ ಮಾಡುವುದರಿಂದ ಜೀವನದಲ್ಲಿ ಸುಖ ಹಾಗೂ ಯಶಸ್ಸು ಸಿಗುತ್ತದೆ.ಯುಗಾದಿ ಎಂದರೆ ಯುಗದ ಆದಿ. ಬ್ರಹ್ಮ(Lord Brahma)ನು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನ. ಒಂದು ಯುಗಾದಿಯಿಂದ ಮತ್ತೊಂದು ಯುಗಾದಿಗೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಇದನ್ನು ವಿಜ್ಞಾನ ಕೂಡಾ ಅನುಮೋದಿಸುತ್ತದೆ. ಹಾಗಾಗಿಯೇ ಯುಗಾದಿಗೆ ನಾವು ಹೊಸ ವರ್ಷ ಎಂದು ಆಚರಿಸುವುದು. ನಮ್ಮ ಒಂದು ವರ್ಷವೆಂದರೆ ಬ್ರಹ್ಮನಿಗೆ ಒಂದು ದಿನ

ವರ್ಷಾರಂಭದಲ್ಲಿ ಪಂಚಾಂಗ ಶ್ರವಣ ಮಾಡುವುದರಿಂದ ಇಡೀ ವರ್ಷದ ಮುನ್ಸೂಚನೆ(prediction) ಸಿಕ್ಕಂತಾಗುತ್ತದೆ. ಏಕೆಂದರೆ ಮೊದಲೇ ಹೇಳಿದಂತೆ ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ, ಕರ್ಣದ ಬಗ್ಗೆ ಹೇಳಲಾಗಿರುತ್ತದೆ. ಯಾವ ತಿಥಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಯಾವ ವಾರ, ನಕ್ಷತ್ರದಲ್ಲಿ ಏನು ಮಾಡಿದರೆ ಯಶಸ್ಸು ಲಭಿಸುತ್ತದೆ, ಯಾರಿಗೆ ಯಾವ ಯೋಗವಿದೆ ಎಲ್ಲವೂ ವಿವರವಾಗಿರುತ್ತದೆ. ಇವೆಲ್ಲವನ್ನೂ ಸುತ್ತಲಿನ ಗ್ರಹಗಳು ಹಾಗೂ ನಕ್ಷತ್ರಗಳ ಆಧಾರದಲ್ಲಿಯೇ ಲೆಕ್ಕ ಹಾಕಲಾಗಿರುತ್ತದೆ. ಅದರ ಆಧಾರದ ಮೇಲೆ ನಾವು ನಮ್ಮ ಮುಂದಿನ ದಿನಗಳು ಸುಲಲಿತವಾಗಿ ಸಾಗುವಂತೆ ಯೋಜನೆ ರೂಪಿಸಿಕೊಳ್ಳಬಹುದು. ಪ್ರಕೃತ್ತಿಯಲ್ಲಿ ಏನಾಗಲಿದೆ, ಯಾವ ರಾಶಿಗೆ ಈ ವರ್ಷ ಹೇಗಿರಲಿದೆ ಎಂಬುದನ್ನ ಸಹ ನಾವು ಪಂಚಾಂಗ ಶ್ರವಣದ ಮೂಲಕ ತಿಳಿದುಕೊಳ್ಳಬಹುದು.

Related News

spot_img

Revenue Alerts

spot_img

News

spot_img