20 C
Bengaluru
Wednesday, January 22, 2025

ಉದ್ಯೋಗಿನಿ’ ಯೋಜನೆ ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ,ಬೇಕಾದ ದಾಖಲೆಗಳು ,ಅರ್ಹತೆಗಳು

#udyogini Yojana’ #scheme, #loan facility #three lakh rupees #required documents# qualifications

ಬೆಂಗಳೂರು; ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.ರಾಜ್ಯದ ಮಹಿಳೆಯರಿಗಾಗಿ ಈ ಹಿಂದೆಯೂ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಆ ಪೈಕಿ ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆ ಕೂಡಾ ಒಂದಾಗಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿ ಆಗಬೇಕು ಎನ್ನುವ ಉದ್ದೇಶಕ್ಕಾಗಿ ಉದ್ಯೋಗ ಯೋಜನೆ , ಸಾಲ ಸೌಲಭ್ಯ ಹಾಗು ಸಹಾಯಧನಗಳಂತಹ ಹಲವು ಯೋಜನೆಗಳನ್ನು ಪರಿಚಯಿಸಲಾಗಿದ್ದು, ಈಗ ಅದರಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದಾಗಿದೆ. ನಿರುದ್ಯೋಗಿ ಮಹಿಳೆಯರು ಸ್ವಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಯೋಜನೆಯೇ ಉದ್ಯೋಗಿನಿ ಯೋಜನೆಯಾಗಿದೆ. ಇದು 2015-16ರಲ್ಲಿ ಜಾರಿಗೆ ಬಂದಿದೆ. ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರಿಗೆ ಸ್ವ ಉದ್ಯೋಗ ಸ್ಥಾಪನೆಗೆ ಸಾಲವನ್ನು ನೀಡಲಾಗುತ್ತದೆ.ಉದ್ಯೋಗಿನಿ ಯೋಜನೆಗೆ ಮಹಿಳೆಯರು ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶವಿದೆ. ಹಾಗಂತ ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಆನ್‌ಲೈನ್‌ನಲ್ಲಿ ಅವಕಾಶವಿಲ್ಲ.ಸ್ವಯಂ ಉದ್ಯೋಗ ಮಾಡಲು ಬಯಸುವ ಮಹಿಳೆಯರು ಉದ್ಯೋಗಿನಿ ಯೋಜನೆ ಅಡಿಯಲ್ಲಿಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಮಹಿಳೆಗೆ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಬ್ಯಾಂಕ್‌ ಮೂಲಕ ಸಾಲ ನೀಡಲಾಗುತ್ತದೆ. ಇದರಲ್ಲಿ ಪರಿಶಿಷ್ಠ ಪಂಗಡ/ ಪರಿಶಿಷ್ಠ ಜಾತಿಯ ಮಹಿಳೆಯರಿಗೆ 50%ರಷ್ಟು ಅಥವಾ ಗರಿಷ್ಠ 1,50,000 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೆ ಇತರ ವರ್ಗದ ಮಹಿಳೆಯರಿಗೆ ಶೇಕಡ 30ರಷ್ಟು ಅಥವಾ ಗರಿಷ್ಠ 90,000 ರೂಪಾಯಿ ಸಬ್ಸಿಡಿ ದೊರೆಯಲಿದೆ.

ಬೇಕಾದ ದಾಖಲೆಗಳು

* ಅರ್ಜಿದಾರರ ಆಧಾರ್ ಕಾರ್ಡ್

* ಅರ್ಜಿದಾರರ ಜನನ ಪ್ರಮಾಣ ಪತ್ರ

* ವಿಳಾಸ ಹಾಗೂ ಆದಾಯ ಪುರಾವೆ (Income certificate)

* ಅರ್ಜಿ ಸಲ್ಲಿಸುವ ಮಹಿಳೆಯ ಬಿಪಿಎಲ್ ಕಾರ್ಡ್ ಜೆರಾಕ್ಸ್‌ ಪ್ರತಿ

* ಎಸ್‌ಟಿ/ ಎಸ್‌ಸಿ ಮಹಿಳೆಯರಾಗಿದ್ದರೆ ಜಾತಿ ಪ್ರಮಾಣಪತ್ರ ಕಡ್ಡಾಯ

* ಬ್ಯಾಂಕ್‌ ಪಾಸ್‌ಬುಕ್‌ ಜೆರಾಕ್ಸ್‌ ಪ್ರತಿ

* ಬ್ಯಾಂಕ್ ಅಥವಾ NBFC ಇತರೆ ದಾಖಲೆಗಳು

ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗಿರುವ ಅರ್ಹತೆಗಳು

* ಕರ್ನಾಟಕ ರಾಜ್ಯದ ಖಾಯಂ ನಾಗರಿಕ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹರು

*ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆ ಇರಬೇಕು.

* 18 ವರ್ಷದಿಂದ 55 ವರ್ಷದೊಳಗಿನ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಈ ಸಾಲ ಸೌಲಭ್ಯ ಲಭ್ಯ

*ಎಸ್‌ಸಿ/ ಎಸ್‌ಟಿ ವರ್ಗದವರು ಸಾಲ ಪಡೆಯಲು ವಾರ್ಷಿಕ ಆದಾಯವು 2 ಲಕ್ಷ ರೂಪಾಯಿಗಿಂತ ಕಡಿಮೆಯಾಗಿರಬೇಕು.

Related News

spot_img

Revenue Alerts

spot_img

News

spot_img