#3 lakh #given #employment #women
ಬೆಂಗಳೂರು;ರಾಜ್ಯದ ಮಹಿಳೆಯರಿಗಾಗಿ ಈ ಹಿಂದೆಯೂ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಆ ಪೈಕಿ ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆ ಕೂಡಾ ಒಂದಾಗಿದೆ.ಸಣ್ಣ ಉದ್ಯಮ ಆರಂಭಿಸಲು ಹಣವಿಲ್ಲದೆ ಪರದಾಡುತ್ತಿರುವ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಅದೇ ಉದ್ಯೋಗಿನಿ ಯೋಜನೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ರೂ. 3 ಲಕ್ಷದವರೆಗೆ ಸಾಲ ದೊರೆಯುತ್ತದೆ.ಮಹಿಳೆಯರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವುದು ಸೇರಿದಂತೆ ಉದ್ಯಮಿಗಳಾಗಲು ಸಬಲೀಕರಣಗೊಳಿಸಲು ಈ ಯೋಜನೆಯನ್ನು ಪರಿಚಯಿಸಲಾಗಿದೆ.ನಿರುದ್ಯೋಗಿ ಮಹಿಳೆಯರು ಸ್ವಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಯೋಜನೆಯೇ ಉದ್ಯೋಗಿನಿ ಯೋಜನೆಯಾಗಿದೆ. ಇದು 2015-16ರಲ್ಲಿ ಜಾರಿಗೆ ಬಂದಿದೆ.
ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಅಗರಬತ್ತಿ, ಕಾಫಿ -ಟೀ ಅಂಗಡಿ, ಟೈಲರಿಂಗ್, ಎಸ್‌ಟಿಡಿ ಬೂತ್, ಬ್ಯೂಟಿ ಪಾರ್ಲರ್, ಅಗರಬತ್ತಿ, ಕ್ಲಿನಿಕ್, ಜಿಮ್, ಸಿಹಿ ಅಂಗಡಿ, ಹಿಟ್ಟಿನ ಗಿರಣಿ, ಪೋಟೋ ಸ್ಟೂಡಿಯೋ, ಕಾಂಡಿಮೆಂಟ್ಸ್, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದೆ. ಇದಲ್ಲದೆ, ಕುಟುಂಬದ ವಾರ್ಷಿಕ ಆದಾಯವನ್ನು ಅವಲಂಬಿಸಿ, 30 ಪ್ರತಿಶತದವರೆಗೆ ಸಹಾಯಧನವನ್ನು ಸಹ ನೀಡಲಾಗುತ್ತದೆ,ವಿಧವೆ, ಅಂಗವೈಕಲ್ಯ ಹೊಂದಿರುವ, ಧಮನಿತ ವರ್ಗದ ಮಹಿಳೆಯರಿಗೆ ಶೇಕಡ 30ರಷ್ಟು ಅಥವಾ ಗರಿಷ್ಠ 90,000 ರೂಪಾಯಿ ಸಬ್ಸಿಡಿ ಪಡೆಯಬಹುದು. ಪರಿಶಿಷ್ಠ ಪಂಗಡ/ ಪರಿಶಿಷ್ಠ ಜಾತಿಯ ಮಹಿಳೆಯರಿಗೆ ಶೇಕಡ 50ರಷ್ಟು ಅಥವಾ ಗರಿಷ್ಠ 1,50,000 ರೂಪಾಯಿ ಸಬ್ಸಿಡಿ ಪಡೆಯಬಹುದು
ಉದ್ಯೋಗಿನಿ ಯೋಜನೆಗೆ ಬೇಕಾದ ದಾಖಲೆಗಳು
* ಅರ್ಜಿದಾರರ ಆಧಾರ್ ಕಾರ್ಡ್
* ಅರ್ಜಿದಾರರ ಜನನ ಪ್ರಮಾಣ ಪತ್ರ
* ವಿಳಾಸ ಹಾಗೂ ಆದಾಯ ಪ್ರಮಾಣಪತ್ರ
* ಬಿಪಿಎಲ್ ಕಾರ್ಡ್ ಅಥವಾ ರೇಷನ್ ಕಾರ್ಡ್
* ಎಸ್‌ಟಿ/ ಎಸ್‌ಸಿ ಮಹಿಳೆಯರಾಗಿದ್ದರೆ ಜಾತಿ ಪ್ರಮಾಣಪತ್ರ ಕಡ್ಡಾಯ
* ಬ್ಯಾಂಕ್ ಪಾಸ್‌ಬುಕ್‌ನ ಪ್ರತಿ
* ಬ್ಯಾಂಕ್ ದಾಖಲೆಗಳು