26.7 C
Bengaluru
Sunday, December 22, 2024

ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ಭಾರತದ ಮನೆಗಳು ಈ ರೀತಿ ಇರುತ್ತವೆ..

ನಮ್ಮ ಭಾರತವು ವೈವಿಧ್ಯಮಯ ಸಂಸ್ಕೃತಿಗಳು, ಭೌಗೋಳಿಕತೆ, ಜನ ಸಮುದಾಯ ಮತ್ತು ಆರ್ಥಿಕತೆಗಳ ಭೂಮಿಯಾಗಿದೆ. ಹೀಗಾಗಿಯೇ ಭಾರತೀಯ ಮನೆಗಳು ಕುಟುಂಬದ ಮೌಲ್ಯಗಳನ್ನು ಪ್ರತಿಬಿಂಬಿಸುವ ವಿವಿಧ ವೈಶಿಷ್ಟ್ಯಗಳು, ಸೌಂದರ್ಯಶಾಸ್ತ್ರ ಮತ್ತು ವಾಸ್ತುಶಿಲ್ಪದ ಅಂಶಗಳನ್ನು ತನ್ನೊಳಗೆ ಬೆರೆಸಿಕೊಂಡಿರುತ್ತವೆ. ಇಂತಹ ವೈವಿದ್ಯ ಭಾರತದಲ್ಲಿನ ಮನೆಗಳ ಕೆಲವು ವಿಧಗಳು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಅರಮನೆ
ಭಾರತದಲ್ಲಿ ಅರಮನೆಗಳಿಗೆ ಅದರದ್ದೇ ಆದ ವಿಶೇಷ ಸ್ಥಾನಮಾನಗಳಿವೆ. ದೇಶವು ಭವ್ಯವಾದ ಹಲವಾರು ಅರಮನೆಗಳನ್ನು ಹೊಂದಿದೆ. ಅವು ಹಿಂದಿನ ಭಾರತೀಯ ಮಹಾರಾಜರ ನಿವಾಸಗಳಾಗಿವೆ. ಇವುಗಳಲ್ಲಿ ಬಹುತೇಕ ಮನೆಗಳು ಈಗ ಪಾರಂಪರಿಕ ಹೋಟೆಲ್‌ಗಳಾಗಿ ಪರಿವರ್ತನೆಯಾಗಿವೆ. ಭಾರತದ ವಿವಿಧ ರಾಜ್ಯಗಳಲ್ಲಿ ಕಂಡುಬರುವ ಈ ಅರಮನೆಗಳು ರಾಜಮನೆತನದ ವಾಸ್ತುಶಿಲ್ಪ ಮತ್ತು ಮಹಾರಾಜರ ಅದ್ದೂರಿ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ.

 

ಬಂಗಲೆ
ಬಂಗಲೆಗಳು ಏಕ-ಕುಟುಂಬದ ಮಾಲೀಕತ್ವದ ಅತ್ಯಂತ ಶ್ರೀಮಂತ ಮನೆಯ ವಾಸ್ತುಶಿಲ್ಪವಾಗಿದೆ. ಈ ಮನೆಗಳು ತುಂಬಾ ದೊಡ್ಡದಾಗಿರುತ್ತವೆ. ದೊಡ್ಡದಾದ ಮತ್ತು ಅಗಲವಾದ ಹಾಲ್, ರೂಂಗಳು ಇರುತ್ತವೆ. ಮುಂಭಾಗ ವಿಶಾಲವಾಗಿರುತ್ತದೆ. ಹುಲ್ಲುಹಾಸು ಅಥವಾ ಉದ್ಯಾನಕ್ಕಾಗಿ ಮುಂಭಾಗ ಅಥವಾ ಹಿಂಭಾಗದಲ್ಲಿ ಸಣ್ಣ ಪ್ರದೇಶವೂ ಇರುತ್ತದೆ.

ವಿಲ್ಲಾ
ಭಾರತದಲ್ಲಿ ವಿಲ್ಲಾ ಮಾದರಿ ಕೊಂಚ ಹೊಸತೆ. ಈ ಮಾದರಿಯ ಮನೆಯು ಇತ್ತೀಚಿನ ಎಲ್ಲಾ ಸೌಕರ್ಯಗಳೊಂದಿಗೆ ಐಷಾರಾಮಿ ಮನೆಯಂತೆಯೇ ಇರುತ್ತದೆ. ವಿಲ್ಲಾವು ಸಾಮಾನ್ಯವಾಗಿ ಲಾನ್ ಮತ್ತು ಹಿತ್ತಲಿನಲ್ಲಿ ದೊಡ್ಡ ಪ್ರದೇಶವನ್ನು ಹೊಂದಿರುತ್ತದೆ. ಜೊತೆಗೆ ಹಲವಾರು ಇತರ ಹೆಚ್ಚು ಐಷಾರಾಮಿ ಸೌಕರ್ಯಗಳನ್ನು ಹೊಂದಿದ್ದು, ಇದನ್ನು ಹೊಂದುವುದು ಬಹಳ ಜನರ ಕನಸಾಗಿದೆ.

ಅಪಾರ್ಟ್‌ಮೆಂಟ್ ಅಥವಾ ಫ್ಲಾಟ್
ಫ್ಲಾಟ್ ಎನ್ನುವುದು ದೊಡ್ಡ ಕಟ್ಟಡದೊಳಗಿನ ವಸತಿ ಘಟಕವಾಗಿದ್ದು, ಇದು ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ಕಂಡುಬರುತ್ತದೆ. ಈ ರೀತಿಯ ವಸತಿ ಯೋಜನೆಗಳು ಹುಟ್ಟುಕೊಳ್ಳೂವುದು ನಗರದಗಳಲ್ಲಿ ಜನಜಂಗುಳಿ ಕಿಕ್ಕಿರಿದು ತುಂಬಿದ ಕಾರಣ. ಅದರ ಪರಿಣಾಮವಾಗಿಯೇ ಅಪಾರ್ಟ್ಮೆಂಟ್ ಅಥವಾ ಪ್ಲಾಟ್‌ಗಳು ಹುಟ್ಟಿಕೊಂಡಿವೆ. ಇವುಗಳಿಗೆ ನಗರ ಪ್ರದೇಶಗಳಲ್ಲಿ ಬೇಡಿಕೆಯು ಹೆಚ್ಚಿದೆ.

ಪೆಂಟ್ ಹೌಸ್
ಪೆಂಟ್ ಹೌಸ್ ಒಂದು ಉನ್ನತ ಮಟ್ಟದ ಕಟ್ಟಡದ ಮೇಲಿನ ಮಹಡಿಯಲ್ಲಿರುವ ಐಷಾರಾಮಿ ನಿವಾಸವಾಗಿದೆ. ಭಾರತದಲ್ಲಿ, ಪೆಂಟ್ ಹೌಸ್ ತನ್ನದೆ ಆದ ಪ್ರತ್ಯೇಕತೆ ಮತ್ತು ಸ್ಥಾನಮಾನದೊಂದಿಗೆ ಸಂಬಂಧ ಹೊಂದಿವೆ. ಈ ರೀತಿಯ ಮನೆಗಳು ಕಟ್ಟಡದ ಇತರ ಅಪಾರ್ಟ್ಮೆಂಟ್ಗಳಲ್ಲಿ ಕಂಡುಬರದ ಅದ್ದೂರಿ ವೈಶಿಷ್ಟ್ಯಗಳನ್ನು ಹೊಂದಿವೆ. ಆದರೆ, ಪರಿಸರಕ್ಕೆ, ಆರ್ಥಿಕತೆಗೆ ತಕ್ಕಂತೆ ಪೆಂಟ್ ಹೌಸ್ ಬಳಕೆ ಕೂಡ ಬದಲಾಗುತ್ತದೆ.

ತೋಟದಮನೆ
ಈ ಮನೆಗಳನ್ನು ನಗರ ಕೇಂದ್ರದಿಂದ ದೂರದಲ್ಲಿರುವ ಕೃಷಿ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ. 1990 ರ ದಶಕದವರೆಗೆ, ಅಧಿಕಾರಶಾಹಿಗಳು ಈ ವಿಸ್ತಾರವಾದ ತೋಟದಮನೆಗಳನ್ನು ಹೊಂದಿದ್ದರು. ಆದರೆ, ಈಗ ಕೊಳ್ಳುವ ಶಕ್ತಿ ಇರುವವರು, ನಗರ ಪ್ರದೇಶದಿಂದ ದೂರ ಹೋಗಿ ಬಾಳಬೇಕು ಎನ್ನುವವರು ಕೂಡ ತೋಟದ ಮನೆಗಳನ್ನು ಕೊಳ್ಳುತ್ತಿದ್ದಾರೆ. ಜೊತೆಗೆ ಕೃಷಿ ಪ್ರದೇಶಗಳಲ್ಲಿ ವಾಸಿಸುವ ಪ್ರಯೋಜನಗಳ ಬಗ್ಗೆ ತಿಳಿದ ಜನರು ಹೆಚ್ಚು ಜಾಗೃತರಾಗಿದ್ದಾರೆ.

ಒಂಟಿ ಮನೆಗಳು
ಒಂಟಿ ಮನೆಗಳನ್ನು ಬಹುತೇಕ ಎಲ್ಲೆಡೆಯೂ ಕಾಣಬಹುದು. ದೇಶದ ಬಹುಸಂಖ್ಯಾತ ಜನರು ಆಶ್ರಯ ಪಡೆದಿರುವದೇ ಇಂತಹ ಮನೆಗಳಲ್ಲಿ. ನಗರ ಪ್ರದೇಶಗಳಲ್ಲಾದರೆ ಒಂದು ನಿವೇಶನದಲ್ಲಿಯೇ ಹಲವು ಮನೆಗಳನ್ನು ನಿರ್ಮಿಸಿ ಬಾಡಿಗೆ ಕೊಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಾದರೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.

ಗುಡಿಸಲು
ಗುಡಿಸಲುಗಳು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಂಡು ಬರುತ್ತವೆ. ಮರ, ಕಲ್ಲು, ಹುಲ್ಲು, ತಾಳೆ ಎಲೆಗಳು, ಕೊಂಬೆಗಳು ಅಥವಾ ಮಣ್ಣಿನಂತಹ ಸ್ಥಳೀಯ ವಸ್ತುಗಳಿಂದ ಮಾಡಲ್ಪಟ್ಟ ಸಣ್ಣ, ಸರಳ ರೀತಿಯ ಮನೆಯಾಗಿದೆ . ಕೆಲವು ಗುಡಿಸಲುಗಳು ತಲೆಮಾರುಗಳ ಮೂಲಕ ಹಾದುಹೋಗುವ ತಂತ್ರಗಳನ್ನು ಬಳಸಿ ನಿರ್ಮಿಸಲಾಗಿದೆ. ಇತ್ತಿಚೆಗೆ ಇವುಗಳ ಸಂಖ್ಯೆ ಕಡಿಮೆಯಾದರೂ ಕೂಡ, ಆಕರ್ಷಣೆಯ ಕೇಂದ್ರವಾಗಿ ಗುಡಿಸಲುಗಳನ್ನು ನಿರ್ಮಿಸಲಾಗುತ್ತಿದೆ.

Related News

spot_img

Revenue Alerts

spot_img

News

spot_img